Advertisement
1:11 PM Monday 4-December 2023

ಮೀನು ಹಿಡಿಯಲು ಹೋದ ಇಬ್ಬರು ಬಾಲಕರು ನೀರುಪಾಲು

12/02/2023

ಮಡಿಕೇರಿ ಫೆ.12 : ಕಾವೇರಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕುಶಾಲನಗರ ಬಳಿಯ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ಬಾಲಕರಾದ ಪ್ರಥ್ವಿ(7) ಹಾಗೂ ಪ್ರಜ್ವಲ್(4) ಮೃತ ದುರ್ದೈವಿಗಳಾಗಿದ್ದಾರೆ.
ಗ್ರಾಮದ ಮಾವಿನತೋಪು ಸಮೀಪ ಕಾವೇರಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಸಂದರ್ಭ ಇಬ್ಬರು ಆಕಸ್ಮಿಕವಾಗಿ ಮುಳುಗಿದ್ದಾರೆ. ಕೂಡ್ಲೂರು ನಿವಾಸಿ, ಕೂಲಿ ಕಾರ್ಮಿಕ ನಾಗರಾಜ್ ಎಂಬುವವರ ಪುತ್ರ ಪೃಥ್ವಿ ಹಾಗೂ ಆಟೋ ಚಾಲಕ ಸತೀಶ್ ಎಂಬುವವರ ಪುತ್ರ ಪ್ರಜ್ವಲ್ ಇಬ್ಬರು ಸಂಬoಧದಲ್ಲಿ ಸಹೋದರರಾಗಿದ್ದಾರೆ.
ಘಟನೆ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಗ್ನಿ ಶಾಮಕ ದಳದ ನುರಿತ ಈಜುಗಾರರ ತಂಡ ಮೃತದೇಹಗಳನ್ನು ನದಿಯಿಂದ ಮೇಲೆತ್ತಿದರು.