Advertisement
4:57 AM Friday 8-December 2023

ಹುಲಿ ದಾಳಿಗೆ ಬಾಲಕ ಬಲಿ : ದಕ್ಷಿಣ ಕೊಡಗಿನಲ್ಲಿ ಘಟನೆ

12/02/2023

ಮಡಿಕೇರಿ ಫೆ.12 : ಹುಲಿ ದಾಳಿಗೆ ಬಾಲಕನೋರ್ವ ಮೃತಪಟ್ಟಿರುವ ಘಟನೆ ದಕ್ಷಿಣ ಕೊಡಗಿನ ಕುಟ್ಟದ ಪಾಲೇರಿ ಎಂಬಲ್ಲಿ ನಡೆದಿದೆ.
ಪಂಚವಳ್ಳಿ ಮೂಲದ ಚೇತನ್ (12) ಎಂಬಾತನೇ ಮೃತ ದುರ್ದೈವಿ. ಕಾಫಿ ತೋಟದಲ್ಲಿದ್ದಾಗ ಹುಲಿ ದಾಳಿ ಮಾಡಿದೆ. ತೋಟದ ಕೆಲಸಕ್ಕೆಂದು ಬಂದಿದ್ದ ಪೋಷಕರೊಂದಿಗೆ ಬಾಲಕ ಬಂದಿದ್ದ ಎಂದು ಹೇಳಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.