Advertisement
4:54 AM Friday 8-December 2023

ಕೊಡಗಿಗೆ ಅನ್ಯಾಯ ಮಾಡಲಾಗಿದೆ

17/02/2023

ಮಡಿಕೇರಿ ಫೆ.17 : ಕೊಡಗಿನ ಜನರ ಎಲ್ಲಾ ನಿರೀಕ್ಷೆಗಳನ್ನು ಹುಸಿ ಮಾಡಲಾಗಿದೆ, ಇತರ ಜಿಲ್ಲೆಗಳನ್ನು ಹೋಲಿಕೆ ಮಾಡಿದರೆ ಕೊಡಗು ಜಿಲ್ಲೆಗೆ ಭಿಕ್ಷೆ ನೀಡುವಂತೆ ಕೇವಲ 100 ಕೋಟಿ ರೂ. ನೀಡಲಾಗಿದೆ. ಜಿಲ್ಲೆಯ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ, ಇವುಗಳ ದುರಸ್ತಿಗೆ ಕನಿಷ್ಠ ಸಾವಿರ ಕೋಟಿ ರೂ.ಗಳನ್ನಾದರು ನೀಡಬೇಕಾಗಿತ್ತು. ಪ್ರತಿ ಮಳೆಗಾಲದಲ್ಲಿ ಕೊಡಗು ಅನೇಕ ಕಷ್ಟ, ನಷ್ಟಗಳನ್ನು ಅನುಭವಿಸುತ್ತದೆ. ಇಲ್ಲಿ ಹಲವು ಗಂಭೀರ ಸಮಸ್ಯೆಗಳಿದ್ದರೂ ಪರಿಹಾರೋಪಾಯಗಳನ್ನು ಸರ್ಕಾರ ಘೋಷಿಸಿಲ್ಲ. ವನ್ಯಜೀವಿ ದಾಳಿಯಿಂದ ಸಾಲು ಸಾಲು ಸಾವುಗಳಾಗುತ್ತಿದ್ದರೂ ಇದನ್ನು ನಿಯಂತ್ರಿಸಲು ಯೋಜನೆಯನ್ನು ರೂಪಿಸಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಯನ್ನು ಕಡೆಗಣಿಸಲಾಗಿದೆ. ಬಜೆಟ್ ರೂಪದಲ್ಲಿ ಚುನಾವಣಾ ಗಿಮಿಕ್ ಮಾಡುವಲ್ಲಿಯೂ ಸರ್ಕಾರ ವಿಫಲವಾಗಿದೆ. ಈ ರೀತಿಯ ನಿರ್ಲಕ್ಷö್ಯವನ್ನು ಗಮನಿಸಿದರೆ ಕೊಡಗು ಕರ್ನಾಟಕದೊಂದಿಗೆ ಇರಬೇಕೆ ಅಥವಾ ಬೇಡವೇ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ.
(ಪವನ್ ಪೆಮ್ಮಯ್ಯ, ಅಧ್ಯಕ್ಷರು, ಕೊಡಗು ರಕ್ಷಣಾ ವೇದಿಕೆ)