ಹೊಟೇಲ್ ನಲ್ಲಿ ಗಾಂಜಾ ಮಾರಾಟ : ಇಬ್ಬರನ್ನು ವಶಕ್ಕೆ ಪಡೆದ ಕುಶಾಲನಗರ, ಸುಂಟಿಕೊಪ್ಪ ಪೊಲೀಸರು
03/03/2023
ಮಡಿಕೇರಿ ಮಾ.3 : ಸುಂಟಿಕೊಪ್ಪದ ಬಿ.ಎಂ ರಸ್ತೆಯ ಹೊಟೇಲ್ ವೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಕುಶಾಲನಗರ ಹಾಗೂ ಸುಂಟಿಕೊಪ್ಪ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಂಟಿಕೊಪ್ಪದ ನಿವಾಸಿಗಳಾದ ಅಹಮ್ಮದ್ ಶರೀಫ್ (34) ಹಾಗೂ ಫಯಾಜ್ ಎಂ.ಎಸ್ (34) ಬಂಧಿತ ಆರೋಪಿಗಳು. ಬಂಧಿತರಿoದ 400 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಕುಶಾಲನಗರ ವೃತ್ತದ ಡಿವೈಎಸ್‌ಪಿ ಗಂಗಾಧರಪ್ಪ ಆರ್.ವಿ ಹಾಗೂ ಸಿಪಿಐ ಬಿ.ಜಿ.ಮಹೇಶ್, ಸುಂಟಿಕೊಪ್ಪ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಧರ್ ಅವರುಗಳನ್ನೊಳಗೊಂಡ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸಿಬ್ಬಂದಿಗಳ ಕಾರ್ಯ ದಕ್ಷತೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
