Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • ಮಡಿಕೇರಿಯಲ್ಲಿ  ಶ್ರೀ ಆದಿ ಶಂಕರಾಚಾರ್ಯರ ಜಯಂತಿ ಆಚರಣೆ :  ಶಂಕರಾಚಾರ್ಯರ ಸಂದೇಶ, ತತ್ವಗಳು ಸಮಾಜಕ್ಕೆ ಮಾರ್ಗದರ್ಶನ : ಅನಂತ ಶಯನ
  • *ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಭೆ*
  • *ಕೊಡಗು : ಏ.23 ರಿಂದ 9 ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನ*
  • *ಪಿರಿಯಾಪಟ್ಟಣ : ರೂ 419.78 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರತಿಷ್ಠಾ ವರ್ಧಂತಿ ಮಹೋತ್ಸವ*
  • *ಕುಶಾಲನಗರ ತಾಲ್ಲೂಕು ಪತ್ರಕತ೯ರ ಸಂಘದಿಂದ ನೇಗಿಲ ಯೋಗಿ ಪ್ರಶಸ್ತಿ ಪ್ರದಾನ : ಕೊಡಗಿನಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ : ಆರ್.ಕೆ.ಬಾಲಚಂದ್ರ*
  • *ಮೇ 6 ರಿಂದ 10ರವರೆಗೆ “ಕೊಡಗು ಕಪ್” ಜಮಾಅತ್ ಮಟ್ಟದ ಕ್ರಿಕೆಟ್ ಪಂದ್ಯಾವಳಿ*
  • *ಎಡಮ್ಯಾರ್ ಮಾಸಿಕ ಸ್ಮರಣಾರ್ಥ ದೇವಟ್ ಪರಂಬುವಿನಲ್ಲಿ ಸಿಎನ್‍ಸಿ ಪುಷ್ಪನಮನ*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.22 ರಂದು ನಡೆಯುವ ಪಂದ್ಯಗಳು*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.21 ರ ವಿಜೇತ ತಂಡಗಳು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು : ಮತದಾನ ಜಾಗೃತಿ ರಾಯಭಾರಿಗಳಿಗೆ ಸನ್ಮಾನ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು : ಮತದಾನ ಜಾಗೃತಿ ರಾಯಭಾರಿಗಳಿಗೆ ಸನ್ಮಾನ*

ಏಪ್ರಿಲ್ 6, 20233 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಏ.6 : ಕೊಡಗು ಜಿಲ್ಲಾ ಮತದಾರರ ಜಾಗೃತಿ ಸಮಿತಿ ಮತ್ತು ಜಿಲ್ಲಾಡಳಿತವು ಈ ಬಾರಿ ಮತದಾರ ಜಾಗೃತಿ ರಾಯಭಾರಿಗಳನ್ನಾಗಿ ಸಾಮಾನ್ಯರನ್ನೇ ಆಯ್ಕೆ ಮಾಡುವ ಮೂಲಕ ಗಮನ ಸೆಳೆದಿದೆ.
ಮೇಕೇರಿ ಗ್ರಾಮದ ಎಸ್.ಕೆ.ಈಶ್ವರಿ, ಏಳನೇ ಹೊಸಕೋಟೆ ಸರ್ಕಾರಿ ಪ್ರೌಢ ಶಾಲೆ ಚಿತ್ರಕಲಾ ಶಿಕ್ಷಕರಾದ ಬಸವರಾಜ ಬಡಿಗೇರ್ ಹಾಗೂ ಚೇರಂಬಾಣೆ ಬಳಿಯ ಐವತ್ತೋಕ್ಲು ಗ್ರಾಮದ ಕೆ.ರವಿ ಮುತ್ತಪ್ಪ ಇವರು ರಾಯಬಾರಿಯಾಗಿ ಆಯ್ಕೆಯಾಗಿದ್ದು, ಇವರನ್ನು ಸ್ವೀಪ್ ಸಮಿತಿ ವತಿಯಿಂದ ಶಾಲೂ, ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸ್ವೀಪ್ ಸಮಿತಿಯಿಂದ ಹೊರತಂದಿರುವ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಲಾಯಿತು.
ಮೇಕೇರಿಯ ವಿಶೇಷ ಚೇತನ ಮಹಿಳೆ ಮೇಕೆರಿ ಗ್ರಾಮದ ಈಶ್ವರಿ, ಕುಶಾಲನಗರದ ಶಿಕ್ಷಕ ಬಸವರಾಜ ಬಡಿಗೇರ್, ಗೃಹರಕ್ಷಕ ದಳದ ಸಿಬ್ಬಂದಿ ರವಿಮುತ್ತಪ್ಪ ಅವರನ್ನು ಮೇ 10 ರಂದು ನಡೆಯುವ ಕರ್ನಾಟಕ ವಿಧಾನಸಭೆಯ ಮತದಾರರ ಜಾಗೃತಿ ರಾಯಭಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ.
ಮೇಕೇರಿ ಗ್ರಾಮದಲ್ಲಿ ನೆಲಸಿರುವ ಎಸ್.ಕೆ.ಈಶ್ವರಿ ಬಾಲ್ಯದಲ್ಲಿಯೇ ವಿಶೇಷಚೇತನರಾಗಿದ್ದು ಛಲಬಿಡದೇ ಹಂತಹಂತವಾಗಿ ಸಾಧನೆಯ ಹಾದಿಯಲ್ಲಿ ಸಾಗಿ 35 ರೀತಿಯ ಕರಕುಶಲ ಕಾರ್ಯಗಳಲ್ಲಿ ಪರಿಣತಿ ಹೊಂದಿದ್ದಾರೆ.
ದೈಹಿಕವಾಗಿ ಅದೆಷ್ಟೇ ಕಷ್ಟಗಳಿದ್ದರೂ ಅವನ್ನೆಲ್ಲ ಮೆಟ್ಟಿ ನಿಂತು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಈಶ್ವರಿ ತನ್ನ ಸಾಧನೆಗಳ ಮೂಲಕ ಸಮಾಜದಲ್ಲಿ ಮಾದರಿ ಮಹಿಳೆ ಎನಿಕೊಂಡಿದ್ದಾರೆ.
ಸ್ವಂತ ಉದ್ಯೋಗವಾಗಿ ಹೊಲಿಗೆ, ಫಿನಾಯಿಲ್ ತಯಾರಿಕೆಯಲ್ಲಿ ಈಶ್ವರಿ ನಿರತರಾಗಿದ್ದಾರೆ. ಕ್ರೀಡೆಯಲ್ಲಿಯೂ ಉತ್ಸಾಹಿಯಾಗಿರುವ ಈಶ್ವರಿ ವೀಲ್ ಚೇರ್ ಓಟ, ಈಜು, ಜಾವಲಿನ್ ಎಸೆತದಲ್ಲಿ ಪಾಲ್ಗೊಂಡಿದ್ದರು. ಓದು ಬರಹವನ್ನು ಮನೆಯಲ್ಲಿದ್ದುಕೊಂಡೇ ಕಲಿತ ಈಶ್ವರಿ ಕಥೆ, ಕವನ ಬರೆಯುತ್ತಾರೆ, ನಾಟಕವನ್ನು ಕೂಡ ರಚನೆ ಮಾಡಿರುವ ಈಶ್ವರಿ ರಾಜ್ಯ ಮಟ್ಟದಲ್ಲಿ ಕಾವ್ಯ ರಚನೆಗಾಗಿ ಬಹುಮಾನ ಪಡೆದಿದ್ದಾರೆ.
ತರಕಾರಿ ಕೆತ್ತನೆ, ಹಾಡುಗಾರಿಕೆ, ಕಾವ್ಯ ವಾಚನ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಈಶ್ವರಿ ಸಕ್ರಿಯರು. ಕಸದಿಂದ ರಸ, ಸ್ವಚ್ಚ ಭಾರತ, ಪ್ಲಾಸ್ಟಿಕ್ ಮುಕ್ತ ಕರ್ನಾಟಕ ಸಂದೇಶ ಸಾರುವ ಕೃತಿಯನ್ನು ಕೂಡ ಈಶ್ವರಿ ರೂಪಿಸಿ ಗಮನ ಸೆಳೆದಿದ್ದಾರೆ. ಕುವೆಂಪು ಕಾವ್ಯ ಪುರಸ್ಕಾರ, ಬಹುಮುಖ ಪ್ರತಿಭಾ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿ, ಸನ್ಮಾನಗಳೂ ಈಶ್ವರಿ ಅವರಿಗೆ ದೊರಕಿದೆ.
ಬಸವರಾಜ ಬಡಿಗೇರ್ ಅವರು ಮೂಲತ ಪಟ್ಟದಕಲ್ಲು ಗ್ರಾಮದವರಾಗಿದ್ದು, ಚಿತ್ರಕಲಾ ಶಿಕ್ಷಕರಾಗಿ 16 ವರ್ಷಗಳಿಂದ ಕೊಡಗು ಜಿಲ್ಲೆಯ 7 ನೇ ಹೊಸಕೋಟೆ ಸರ್ಕಾರಿ ಪ್ರೌಡಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಏಕವ್ಯಕ್ತಿ ಚಿತ್ರಕಲೆಗೆ ಹೆಸರಾಗಿರುವ ಬಸವರಾಜ ಬಡಿಗೇರ್ ಪಟ್ಟದಕಲ್ಲು ಉತ್ಸವ, ಬಾದಾಮಿ ಉತ್ಸವ ಸೇರಿದಂತೆ ರಾಜ್ಯದ ಅನೇಕ ಕಡೆ ತಮ್ಮ ಚಿತ್ರಕಲೆಗಳ ಪ್ರದರ್ಶನ ನೀಡಿದ್ದಾರೆ.
ತಾಲ್ಲೂಕು ಮಟ್ಟದ ಅತ್ಯುತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿ, ಶಿಕ್ಷಕರ ಸಹಪಠ್ಯ ಚಟುವಟಿಕೆಗಾಗಿ ರಾಜ್ಯ ಮಟ್ಟದ ಪ್ರಥಮ ಬಹುಮಾನ ದೊರಕಿದೆ. ಜೀ ಟಿವಿ ವಾಹಿನಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಸರಿಗಮ ಲಿಟಲ್ ಚಾಂಪ್ಸ್‍ನಲ್ಲಿ ಬಸವರಾಜ ಬಡಿಗೇರ್ ಅವರ ಪುತ್ರಿ ಪ್ರಗತಿ ಬಡಿಗೇರ್ ವಿಜೇತೆಯಾಗಿದ್ದರು. ಈ ಸಂದರ್ಭ ಬಸವರಾಜ ಬಡಿಗೇರ್ ಕೂಡ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ಹಾಡಿನ ಮೂಲಕ ಗಮನ ಸೆಳೆದಿದ್ದರು.
ಬಡಿಗೇರ್ ಅವರ ಪತ್ನಿ ಚಂದ್ರಕಲಾ ಬಡಿಗೇರ್ ಪುತ್ರಿಯರಾದ ಪ್ರಗತಿ ಬಡಿಗೇರ್, ಪ್ರತಿಕ್ಷಾ ಬಡಿಗೇರ್, ತ್ರಿವೇಣಿ ಬಡಿಗೇರ್ ಕೂಡ ಹಾಡುಗಾರರಾಗಿರುವುದು ಈ ಕುಟುಂಬವನ್ನೇ ಗಾಯಕರ ಕುಟುಂಬ ಎಂಬ ಹಿರಿಮೆಗೆ ಪಾತ್ರವಾಗಿಸಿದೆ.
ಕೊಡಗು ಜಿಲ್ಲಾ ಗೃಹರಕ್ಷಕ ದಳದಲ್ಲಿ ಕಳೆದ 13 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಚೇರಂಬಾಣೆ ಬಳಿಯ ಐವತ್ತೋಕ್ಲು ಗ್ರಾಮದ ಕೆ.ರವಿಮುತ್ತಪ್ಪ ಅವರು ಪ್ರಸ್ತುತ ಮಡಿಕೇರಿ ಕಾರಾಗೃಹದಲ್ಲಿ ಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಸ್ವಾರ್ಥ ರಹಿತ ಸಮಾಜ ಸೇವೆ ಮಾಡುತ್ತಿರುವ ಮುತ್ತಪ್ಪ, ಕಣ್ಣೀರ ಕಡಲಲ್ಲಿ ಮುಳುಗಿದ್ದ ಅನೇಕ ಕುಟುಂಬಗಳ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಸಕಾಲದಲ್ಲಿ ನೆರವು ನೀಡಿದ್ದಾರೆ.
ಕೊಡಗು ಜಿಲ್ಲೆಯ ನದಿ, ಕೆರೆ, ತೊರೆಯಲ್ಲಿ ಯಾರೇ ಜಾರಿಬಿದ್ದು ಸಾವನ್ನಪ್ಪಿದ ಸಂದರ್ಭ ನೀರಿನಾಳದಿಂದ ಮೃತದೇಹಗಳನ್ನು ಮೇಲೆತ್ತುವಲ್ಲಿ ರವಿಮುತ್ತಪ್ಪ ಅವರ ಸೇವೆ ಗಮನಾರ್ಹವಾಗಿದೆ. 20 ವರ್ಷಗಳಲ್ಲಿ ಜಿಲ್ಲೆಯಾದ್ಯಂತ ನದಿ, ತೊರೆಗಳಿಂದ ರವಿಮುತ್ತಪ್ಪ 39 ಮೃತ ಶರೀರಗಳನ್ನು ಹೊರತೆಗೆದಿದ್ದಾರೆ.
ನೀರಿನಾಳಕ್ಕೆ ಮುಳುಗಿ ಅಲ್ಲಿ ಕಲ್ಲುಬಂಡೆ, ಮರಗಳ ಮಧ್ಯೆ ಸಿಲುಕಿಕೊಂಡಿರುವ ಮೃತ ದೇಹಗಳನ್ನು ಹೊರತೆಗೆಯುವ ಸಾಹಸದ ವೃತ್ತಿಯಲ್ಲಿ ಮುತ್ತಪ್ಪ ತೃಪ್ತಿ ಕಂಡಿದ್ದಾರೆ. ಕೊಡಗು ಜಿಲ್ಲೆಯ ಅಬ್ಬಿಫಾಲ್ಸ್, ಆವಂಡಿ ಜಲಪಾತ, ತಾಳತ್ತಮನೆ, ಅಪ್ಪಂಗಾಲ, ನಾಂಗಾಲ, ಶ್ರೀಮಂಗಲ, ಚೇಲಾವರ ಫಾಲ್ಸ್ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಂಭವಿಸಿದ ಜಲದುರಂತಗಳಲ್ಲಿ ಮುತ್ತಪ್ಪ ಮೃತ ಪರಿವಾರದ ನೆರವಿಗೆ ಧಾವಿಸಿದ್ದಾರೆ.
ಮೃತಪಟ್ಟವರ ಕುಟುಂಬ ವರ್ಗದವರು ತಮ್ಮವರನ್ನು ಕಳೆದುಕೊಂಡ ಸಂದರ್ಭ ಶೋಕಸಾಗರದಲ್ಲಿರುತ್ತಾರೆ. ಇಂತಹ ಸಂದರ್ಭ ಮೃತಶರೀರವನ್ನು ವಿಳಂಭವಿಲ್ಲದೇ ಹೊರ ತೆಗೆಯುವ ಅನಿವಾರ್ಯತೆ ಇರುತ್ತದೆ. ಎಷ್ಟೇ ಕಷ್ಟವಾದರೂ ತಾನು ಮೃತದೇಹಗಳನ್ನು ನೀರಿನಿಂದ ಹೊರತೆಗೆದು ಕೊಟ್ಟ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿರುವೆ ಎಂದು ರವಿಮುತ್ತಪ್ಪ ಹೇಳುತ್ತಾರೆ. ತನ್ನ 7 ನೇ ವರ್ಷದಲ್ಲಿಯೇ ಈಜು ಕಲಿತದ್ದು ತನಗೆ ಜೀವನದಲ್ಲಿ ಸಹಕಾರಿಯಾಯಿತು ಎಂದು ಮುತ್ತಪ್ಪ ಸ್ಮರಿಸುತ್ತಾರೆ.
2019 ರಲ್ಲಿ ಕೋರಂಗಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆಯೊಳಗಿದ್ದ 5 ಮಂದಿ ಭೂಸಮಾಧಿಯಾದ ಸಂದರ್ಭ ಮಹಾಮಳೆಯ ಅಪಾಯ ಲೆಕ್ಕಿಸದೇ ಮುತ್ತಪ್ಪ ಸ್ಥಳಕ್ಕೆ ತೆರಳಿ ಐವರ ಪಾರ್ಥಿವ ಶರೀರಗಳನ್ನು ಮಣ್ಣಿನ ಗುಡ್ಡೆಯಿಂದ ಹೊರತೆಗೆದಿದ್ದರು. ಕನ್ನಡ ಸಾಹಿತ್ಯ ಪರಿಷತ್‍ನಿಂದ ಜೀವರಕ್ಷಕ ಪ್ರಶಸ್ತಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ಮುತ್ತಪ್ಪ ಅವರನ್ನು ಗೌರವಿಸಿ ಸನ್ಮಾನಿಸಿದೆ.
ಮೃತದೇಹಗಳನ್ನು ನೀರಿನಾಳದಿಂದ ಹೊರತೆಗೆಯುವ ಸವಾಲಿನ ಕೆಲಸದಲ್ಲಿ ತೃಪ್ತಿ ಕಂಡುಕೊಂಡಿದ್ದೇನೆ. ಇದಕ್ಕಾಗಿ ಹಣ ಪಡೆಯದೇ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಮುತ್ತಪ್ಪ ಹೇಳುತ್ತಾರೆ. ಬಹಳ ದೊಡ್ಡ ಮೀಸೆಯನ್ನು ಹೊಂದಿರುವ ರವಿಮುತ್ತಪ್ಪ ಇದೇ ಕಾರಣಕ್ಕೂ ಆಕರ್ಷಣೆ ಗಳಿಸಿ ಮೀಸೆ ಮುತ್ತಪ್ಪ ಎಂದೂ ಆತ್ಮೀಯರಿಂದ ಹೇಳಿಸಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಕಾರಾಗೃಹ ಅಧೀಕ್ಷಕರು ಮೀಸೆ ನಿರ್ವಹಣೆಗಾಗಿಯೇ ಮುತ್ತಪ್ಪ ಅವರಿಗೆ ಶಾಂಪು ಖರೀದಿಗೆ ದಿನಕ್ಕೆ 10 ರೂ ನೀಡುತ್ತಿದ್ದರು.
ಈ ಮೂವರ ಕೌಶಲ್ಯಯುತ ಸಾಧನೆ ಗುರುತಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಮತ್ತು ತಂಡವು ಮತದಾರರ ಜಾಗೃತಿ ಅಭಿಯಾನದ ರಾಯಭಾರಿಗಳನ್ನಾಗಿ ಇವರನ್ನು ಆಯ್ಕೆ ಮಾಡಿದ್ದಾರೆ.
ಮೇ, 10 ರಂದು ಕೊಡಗು ಜಿಲ್ಲೆಯ ಮತಗಟ್ಟೆಗಳಿಗೆ ಪ್ರತೀಯೋರ್ವ ಮತದಾರರೂ ತೆರಳಿ ತಪ್ಪದೇ ತಮ್ಮ ಹಕ್ಕು ಚಲಾಯಿಸಿ, ಮತ ಚಲಾವಣೆ ಪ್ರತೀ ಪ್ರಜೆಯ ಹಕ್ಕಾಗಿದ್ದು ಈ ಹಕ್ಕನ್ನು ತಪ್ಪದೇ, ನಿರ್ಭೀತಿಯಿಂದ ಚಲಾಯಿಸಿ ಎಂಬ ಸಂದೇಶವನ್ನು ಈ ಮೂವರು ರಾಯಭಾರಿಗಳು ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಾದ್ಯಂತ ಸಾರಲಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

ಮಡಿಕೇರಿಯಲ್ಲಿ  ಶ್ರೀ ಆದಿ ಶಂಕರಾಚಾರ್ಯರ ಜಯಂತಿ ಆಚರಣೆ :  ಶಂಕರಾಚಾರ್ಯರ ಸಂದೇಶ, ತತ್ವಗಳು ಸಮಾಜಕ್ಕೆ ಮಾರ್ಗದರ್ಶನ : ಅನಂತ ಶಯನ

ಏಪ್ರಿಲ್ 21, 2026

*ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಭೆ*

ಏಪ್ರಿಲ್ 21, 2026

*ಕೊಡಗು : ಏ.23 ರಿಂದ 9 ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನ*

ಏಪ್ರಿಲ್ 21, 2026

*ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಭೆ*

ಏಪ್ರಿಲ್ 21, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಏ.21 NEWS DESK : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಭೆಯು ಶನಿವಾರ ನಗರದ ಪತ್ರಿಕಾಭವನದಲ್ಲಿ…

*ಕೊಡಗು : ಏ.23 ರಿಂದ 9 ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನ*

ಏಪ್ರಿಲ್ 21, 2026

*ಪಿರಿಯಾಪಟ್ಟಣ : ರೂ 419.78 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ*

ಏಪ್ರಿಲ್ 21, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರತಿಷ್ಠಾ ವರ್ಧಂತಿ ಮಹೋತ್ಸವ*

ಏಪ್ರಿಲ್ 21, 2026

*ಕುಶಾಲನಗರ ತಾಲ್ಲೂಕು ಪತ್ರಕತ೯ರ ಸಂಘದಿಂದ ನೇಗಿಲ ಯೋಗಿ ಪ್ರಶಸ್ತಿ ಪ್ರದಾನ : ಕೊಡಗಿನಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ : ಆರ್.ಕೆ.ಬಾಲಚಂದ್ರ*

ಏಪ್ರಿಲ್ 21, 2026

*ಮೇ 6 ರಿಂದ 10ರವರೆಗೆ “ಕೊಡಗು ಕಪ್” ಜಮಾಅತ್ ಮಟ್ಟದ ಕ್ರಿಕೆಟ್ ಪಂದ್ಯಾವಳಿ*

ಏಪ್ರಿಲ್ 21, 2026

*ಎಡಮ್ಯಾರ್ ಮಾಸಿಕ ಸ್ಮರಣಾರ್ಥ ದೇವಟ್ ಪರಂಬುವಿನಲ್ಲಿ ಸಿಎನ್‍ಸಿ ಪುಷ್ಪನಮನ*

ಏಪ್ರಿಲ್ 21, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.22 ರಂದು ನಡೆಯುವ ಪಂದ್ಯಗಳು*

ಏಪ್ರಿಲ್ 21, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.21 ರ ವಿಜೇತ ತಂಡಗಳು*

ಏಪ್ರಿಲ್ 21, 2026

*ಶ್ರೀ ಓಂಕಾರೇಶ್ವರ ದೇವಾಲಯ ಹಾಗೂ ಶ್ರೀ ಆಂಜನೇಯ ದೇವಾಲಯದಲ್ಲಿ ವಾರ್ಷಿಕ ಪ್ರತಿಷ್ಠಾ ದಿನಾಚರಣೆ : ನೂತನವಾಗಿ ನವಗ್ರಹ ಪ್ರತಿಷ್ಠಾಪನೆ*

ಏಪ್ರಿಲ್ 21, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.