*ನೆಲ್ಯಹುದಿಕೇರಿಯಲ್ಲಿ ಕೃತಜ್ಞತಾ ಸಭೆ : ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ : ಶಾಸಕ ಡಾ. ಮಂತರ್ ಗೌಡ*

02/06/2023

ಸಿದ್ದಾಪುರ  ಜೂ.2 :  ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಹೊತ್ತು ನೀಡುವುದರ ಮೂಲಕ ಗಂಭೀರ ಸಮಸ್ಯೆಗಳನ್ನ ತಕ್ಷಣವೇ ಬಗೆಹರಿಸಲಾಗುವುದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಭರವಸೆ ನೀಡಿದರು.
ನೆಲ್ಯಹುದಿಕೇರಿಯ ಶಾದಿ ಮಹಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ಕ್ಷೇತ್ರದ ಮತದಾರರು ಬದಲಾವಣೆಯನ್ನು ಬಯಸಿ ಕಾಂಗ್ರೆಸ್ ನತ್ತ ಒಲವು ತೊರುವುದರ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳನ್ನ ನುಡಿದಂತೆ ನಡೆದುಕೊಂಡು ತಕ್ಷಣವೇ ಜಾರಿ ಮಾಡಲಿದ್ದು, ಪ್ರತಿ ಗ್ರಾಮದ ಎಲ್ಲಾ ಸಮಸ್ಯೆಗಳನ್ನು ಸದ್ಯದಲ್ಲೇ ಬಗೆಹರಿಸಲಿದೆ.
ಭ್ರಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆಗೆ ಮುಂದಾಗಿದ್ದು, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳಿದ್ದರೂ ತಕ್ಷಣವೇ ಗಮನಕ್ಕೆ ತನ್ನಿ ಎಂದರಲ್ಲದೆ ಸಾರ್ವಜನಿಕರ ಸೇವೆ ಮಾಡಲು ಅಧಿಕಾರಿಗಳು ಪ್ರಾಮಾಣಿಕ ಕರ್ತವ್ಯ ನಿಷ್ಠೆ ತೋರಬೇಕಾಗಿದೆ ಎಂದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕ್ಷೇತ್ರದ ಮತದಾರರು ಆಶೀರ್ವಾದದಿಂದ
ಹೆಚ್ಚಿನ ಬಹುಮತದೊಂದಿಗೆ ಮಂತರ್ ಗೌಡ ಅವರು ಗೆಲುವು ಸಾಧಿಸಲು ಸಾಧ್ಯವಾಗಿದ್ದು, ಎಲ್ಲಾ ಜನರ ಪ್ರೀತಿ ವಿಶ್ವಾಸಕ್ಕಾಗಿ ನಾವೆಲ್ಲರೂ ಪ್ರಾಮಾಣಿಕ ಸೇವೆ ಮಾಡಬೇಕಾಗಿದೆ. ಸರ್ಕಾರದ ಯೋಜನೆಗಳನ್ನು ಕಾರ್ಯಕರ್ತರು ಪ್ರತಿ ಮನೆಗಳಿಗೂ ತಲುಪಿಸುವ ಮೂಲಕ ಅವರ ಸೇವೆ ಮಾಡಬೇಕಾಗಿದೆ ಎಂದು ತಿಳಿಸಿದರು.

ನೆಲ್ಯಹುದಿಕೇರಿ ಗ್ರಾ.ಪಂ ಅಧ್ಯಕ್ಷ ಎ.ಕೆ.ಹಕೀಂ ಮಾತನಾಡಿ,  ಕುಶಾಲನಗರ ತಾಲೂಕಿನಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣದಿಂದ ನೆಲ್ಯಹುದಿಕೇರಿ ಗ್ರಾಮವನ್ನು ಹೋಬಳಿ ಮಾಡಬೇಕು.  ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಹೆಚ್ಚಾಗಿರುವ ಈ ಭಾಗದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಿಗ್ರಿ ಕಾಲೇಜ್ ನಿರ್ಮಾಣ ಮಾಡಬೇಕು ಎಂದರು.

ವಸತಿ, ನಿವೇಶನ ರಹಿತ ಕುಟುಂಬಗಳಿದ್ದು, ಶಾಶ್ವತ ಸೂರು ಸಿಗುವಂತಾಗಬೇಕು. ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ಹಲವು ಸಮಸ್ಯೆಗಳನ್ನ ಬಗೆಹರಿಸಬೇಕೆಂದರು.
ವಲಯ ಕಾಂಗ್ರೆಸ್ ಅಧ್ಯಕ್ಷ ಸಾಬು ವರ್ಗಿಸ್ ಮಾತನಾಡಿ,  ಗ್ರಾಮೀಣ ಕ್ರೀಡಾಪಟುಗಳು ಅಧಿಕವಾಗಿದ್ದು, ಸಾರ್ವಜನಿಕ ಆಟದ ಮೈದಾನದ ವ್ಯವಸ್ಥೆಯಾಗಬೇಕಾಗಿದೆ. ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ದೂರದ ಊರುಗಳಿಗೆ ತೆರಳಬೇಕಾದರೆ ಕೆಎಸ್‍ಆಟ್‍ಟಿಸಿ  ಬಸ್ ಸಮಸ್ಯೆ ಇದ್ದು ಕೂಡಲೇ ಬಗೆಹರಿಸಬೇಕೆಂದರು.

ಶಾಸಕರಾಗಿ ಆಯ್ಕೆಯಾದ ಡಾ. ಮಂತರ್ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಜಿ.ಪಂ ಮಾಜಿ ಸದಸ್ಯರಾದ ಲತೀಫ್ ಸುಂಟಿಕೊಪ್ಪ, ಸುನಿತಾ ಮಂಜುನಾಥ್,
ಕಾಂಗ್ರೆಸ್ ಮುಖಂಡರುಗಳಾದ ಮಂಜುನಾಥ್ ಗುಂಡರಾವ್ ,  ಜೋಸೆಫ್ ಸ್ಯಾಮ್, ಕೆ.ಎಂ.ಬಶೀರ್, ವಸಂತ್ ಕುಮಾರ್, ಮಾದಪ್ಪ, ಕೂಡಿಗೆ ಹಮೀದ್, ಕೆ.ಎಂ ಭಾವ, ಹನೀಫ, ಮುಸ್ತಫ, ಕೊಯ, ಶಿಯಬ್ ಸಪೀಯ, ಸುಹಾದ ಸೇರಿದಂತೆ ವಲಯ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ಗ್ರಾ.ಪಂ ಸದಸ್ಯರುಗಳು, ಬೂತ್ ಮಟ್ಟದ ಕಾರ್ಯಕರ್ತರು ಹಾಜರಿದ್ದರು.