Advertisement
7:58 PM Saturday 9-December 2023

*ಬಾಯಲ್ಲಿ ನಿರೂರಿಸುವ ಏಡಿ ಸಾರು ಮಾಡುವ ವಿಧಾನ*

13/07/2023

ಏಡಿ ಕೇವಲ ರುಚಿಕರ ಮಾತ್ರವಲ್ಲ ಪ್ರೋಟೀನ್ ಸಮೃದ್ಧ ಆಹಾರವೂ ಆಗಿದೆ. ಜೊತೆಗೆ ಹಲವಾರು ಅಮೈನೋ ಆಮ್ಲಗಳಿದ್ದು ಇವು ಪ್ರೋಟೀನ್ ಉತ್ಪಾದನೆಗೆ ನೆರವಾಗುತ್ತವೆ. ವಿಶೇಷವಾಗಿ, ಕೊರೆಯುವ ಮಳೆ ಹಾಗೂ ಚಳಿಗೆ ಬಿಸಿ ಬಿಸಿ ಏಡಿ ಸಾಂಬಾರು ಸೂಪರ್ ಆಗಿರುತ್ತದೆ.

ಬೇಕಾಗುವ ಸಾಮಗ್ರಿಗಳು :  ಸಾಂಬಾರಿಗೆ ಬೇಕಾಗುವಷ್ಟು ಏಡಿ. (ಹಳ್ಳದ ಏಡಿ, ಸಮುದ್ರದ ಏಡಿ ಯಾವುದಾದರೂ),  ಟೊಮೋಟೊ 2,  ತೆಂಗಿನತುರಿ ಸ್ವಲ್ಪ, ಈರುಳ್ಳಿ-1 (ಕತ್ತರಿಸಿದ್ದು),   ಬೆಳ್ಳುಳ್ಳಿ-5 ಎಸಳು , ಶುಂಠಿ ಅಗತ್ಯಕ್ಕೆ ತಕ್ಕಷ್ಟು (ಕತ್ತರಿಸಿದ್ದು), ಹುಣಸೆಹಣ್ಣು-ಅಗತ್ಯಕ್ಕೆ ತಕ್ಕಷ್ಟು, ಜೀರಿಗೆ-ಅಗತ್ಯಕ್ಕೆ ತಕ್ಕಷ್ಟು,  ಕಾಳುಮೆಣಸು-ಅಗತ್ಯಕ್ಕೆ ತಕ್ಕಷ್ಟು,  ಬ್ಯಾಡಿಗೆ ಮೆಣಸಿನಕಾಯಿ-5, ಕೊತ್ತಂಬರಿ ಬೀಜ-ಅಗತ್ಯಕ್ಕೆ ತಕ್ಕಷ್ಟು, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು (ಕತ್ತರಿಸಿದ್ದು-ಸ್ವಲ್ಪ).

ಮಾಡುವ ವಿಧಾನ ::  ಮೊದಲಿಗೆ ಏಡಿಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು,  ನಂತರ ಬ್ಯಾಡಗಿ ಮೆಣಸಿನಕಾಯಿ ಕೊತ್ತಂಬರಿ ಮತ್ತು ಈರುಳ್ಳಿ, ಕೊತ್ತಂಬರಿಸೊಪ್ಪು ಮತ್ತು ಜೀರಿಗೆ ಬೆಳ್ಳುಳ್ಳಿ ಶುಂಠಿ ಎಲ್ಲವನ್ನೂ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.  ಟೊಮೊಟೊ ಮತ್ತು ತೆಂಗಿನ ತುರಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.

ಅದಾದ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕರಿಬೇವಿನ ಸೊಪ್ಪು ಮತ್ತು ರುಬ್ಬಿಕೊಂಡ ಮಸಾಲೆಯನ್ನು ಹಾಕಬೇಕು.  ಚೆನ್ನಾಗಿ ಫ್ರೈ ಆಗಿ, ಹಸಿ ವಾಸನೆ ಹೋಗುವವರೆಗೂ ಬಿಸಿ ಮಾಡಬೇಕು. ನಂತರ ಏಡಿಯನ್ನು ಹಾಕಬೇಕು.  ಅದಾದ ಮೇಲೆ ಟೊಮೆಟೊ ಮತ್ತು ತೆಂಗಿನತುರಿ ರುಬ್ಬಿಕೊಂಡು ರೆಡಿ ಮಾಡಿಟ್ಟುಕೊಂಡ ಮಸಾಲೆ ಹಾಕಬೇಕು. ನಂತರ ಚೆನ್ನಾಗಿ ಕುದಿಸಬೇಕು. ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಬೇಕು.