Advertisement
9:54 AM Sunday 3-December 2023

*ಎಸ್‍ಬಿಐ ಜೂನಿಯರ್ ಅಸೋಷಿಯೇಟ್ ಹುದ್ದೆಗೆ ಅರ್ಜಿ ಆಹ್ವಾನ*

17/11/2023

ಮಡಿಕೇರಿ ನ.17 : 8000 ಕ್ಕೂ ಹೆಚ್ಚು ಎಸ್‍ಬಿಐ ಜೂನಿಯರ್ ಅಸೋಷಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಹ ವಿದ್ಯಾರ್ಥಿಗಳು ಡಿಸೆಂಬರ್, 07 ರೊಳಗೆ ವೆಬ್‍ಸೈಟ್ ವಿಳಾಸhttps://bank.sbi/web/careers/current-openings ಅಥವಾ https://ibpsonline.ibps.in/sbijaoct23/ ಕ್ಕೆ ಭೇಟಿ ನೀಡಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಕೃಷಿಕ್ ಸರ್ವೋದಯ ಫ಼ೌಂಡೇಶನ್(ರಿ) ಹಾಸನ ಶಾಖೆಯಲ್ಲಿ ನುರಿತ ವಿಷಯ ತಜ್ಞರಿಂದ ಬ್ಯಾಂಕ್ ನೇಮಕಾತಿ ಪರೀಕ್ಷೆಗಳಿಗೆ ರಿಯಾಯಿತಿ ದರದಲ್ಲಿ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 8660217739 / 08172245135 ಸಂಖ್ಯೆಗೆ ಕರೆ ಅಥವಾ ವಾಟ್ಸಾಪ್ ಮಾಡಬಹುದಾಗಿದೆ ಎಂದು ಶಾಖೆಯ ಗೌರವ ಕಾರ್ಯದರ್ಶಿ ಎಚ್.ಪಿ.ಮೋಹನ್  ತಿಳಿಸಿದ್ದಾರೆ.