Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*
  • *ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*
  • *ಕೊಡಗಿನ ಶಿಕ್ಷಕರಿಗೆ ಪ್ರತಿಷ್ಠಿತ ‘ವಿದ್ಯಾರತ್ನ’ ರಾಜ್ಯ ಪ್ರಶಸ್ತಿ*
  • *ಶಿಕ್ಷಕರು ನೈತಿಕತೆ, ಮಾನವೀಯ ಮೌಲ್ಯ ಬೆಳೆಸಬೇಕು: ಮದನ್ ಮಾದಯ್ಯ; ಸುಂಟಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ; ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ದಂಪತಿಗೆ ಸನ್ಮಾನ*
  • *ಕ್ರೀಡಾ ಕ್ಷೇತ್ರದಲ್ಲಿ ಆಂಜೆಲಾ ವಿದ್ಯಾನಿಕೇತನದ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ; ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ*
  • *2030ಕ್ಕೆ ಭಾರತವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ: ಕೊಡಗಿಗೆ ಕೇಂದ್ರ ತನಿಖಾ ತಂಡ ಭೇಟಿ*
  • *ಶ್ರೀಮಂಗಲ-ನಾಲ್ಕೇರಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ*
  • *ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ 2026ರಲ್ಲಿ ಕೊಡಗಿನ ಕ್ರೀಡಾಪಟುಗಳ ಮಿಂಚಿನ ಸಾಧನೆ*
  • *ಮಹಿಳಾ ಸ್ವಾವಲಂಬನೆಗೆ ‘ಆತ್ಮ’ ಯೋಜನೆ ಆಸರೆ: ನಾಪೋಕ್ಲು ಮಹಿಳಾ ಸಮಾಜದಿಂದ ಅಣಬೆ ಕಟಾವು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರಾಫೆಲ್ಸ್ ಇಂಟರ್ ನ್ಯಾಷನಲ್ ಪಿಯು ಕಾಲೇಜಿನ ವಾರ್ಷಿಕೋತ್ಸವ : ಕಲಿತ ವಿದ್ಯೆ ಶಾಶ್ವತ : ಸಾಹಿತಿ ನಾಗೇಶ್ ಕಾಲೂರು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರಾಫೆಲ್ಸ್ ಇಂಟರ್ ನ್ಯಾಷನಲ್ ಪಿಯು ಕಾಲೇಜಿನ ವಾರ್ಷಿಕೋತ್ಸವ : ಕಲಿತ ವಿದ್ಯೆ ಶಾಶ್ವತ : ಸಾಹಿತಿ ನಾಗೇಶ್ ಕಾಲೂರು*

ಜನವರಿ 1, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ನಾಪೋಕ್ಲು ಜ.1 : ಪರಿಸರ, ಅನುಭ, ನಮ್ಮ ಸಹವಾಸಗಳಿಂದ, ಕಲಿತವಿದ್ಯೆ ಮಾತ್ರ ನಮಗೆ ಜೀವನ ಪರ್ಯಂತ ಉಪಯೋಗಕ್ಕೆ ಬರುತ್ತದೆ ಎಂದು ಲೇಖಕ, ಸಾಹಿತಿ ನಾಗೇಶ್ ಕಾಲೂರು ಹೇಳಿದರು.
ಹೊದವಾಡ ಗ್ರಾಮದ ರಾಫೆಲ್ಸ್ ಇಂಟರ್ ನ್ಯಾಷನಲ್ ಪಿಯು ಕಾಲೇಜ್ ವತಿಯಿಂದ ಕಾಲೇಜ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯಲ್ಲಿರುವ ಗಾಳಿ ,ನೀರು, ಬೆಳಕು ವಾತಾವರಣ ಎಲ್ಲವೂ ಜೀವಿಗಳ ಬದುಕಿಗೆ ಅತ್ಯವಶ್ಯಕ. ಪ್ರಕೃತಿಯ ಪಾಠಗಳನ್ನು ಮಕ್ಕಳಿಗೆ ಹೇಳಿಕೊಡುವುದು ಶಿಕ್ಷಣದ ಒಂದು ಭಾಗವಾಗಿರಬೇಕು. ಇನ್ನೊಬ್ಬರನ್ನು ನಾವು ನೋಯಿಸದೆ ಇರುವಂತಹ ಗುಣಗಳನ್ನು ಮಕ್ಕಳಿಗೆ ಹೇಳಿಕೊಡಬೇಕು ಎಂದ ಅವರು ಕಲಿಕೆ ಎನ್ನುವುದು ನಿರಂತರ. ಪೋಷಕರಿಗೆ ಅಧ್ಯಾಪಕರಿಗೆ ಗೌರವ ಕೊಡುವಂತಹ ತಿಳುವಳಿಕೆಯನ್ನು ಮಕ್ಕಳಿಗೆ ಕೊಡಬೇಕು, ಭಾಷೆ, ಜಾತಿ, ಜನಾಂಗವನ್ನು ಮೀರಿ ತಾಯಂದಿರಲು ಗೌರವಿಸುವಂತಹ ಕೆಲಸ ಮಕ್ಕಳಿಂದ ಆಗಬೇಬೇಕಾಗಿದೆ, ನಮ್ಮ ಶರೀರ ಇರುವುದೇ ಇನ್ನೊಬ್ಬರಿಗೆ ಉಪಕಾರ ಮಾಡಲು ಎಂಬ ಅಂಶವನ್ನು ಮನವರಿಕೆ ಮಾಡಿಕೊಡಬೇಕೆಂದು ಕಿವಿಮಾತು ಹೇಳಿದರು.
ಮಂಗಳೂರಿನ ಮೋಟಿವೇಶನ್ ಸ್ಪೀಕರ್ ರಫೀಕ್ ಮಾಸ್ಟರ್ ಮಾತನಾಡಿ, ಈ ದೇಶಕ್ಕೆ ಶಕ್ತಿ ಆಗಬೇಕಾದ ಮಕ್ಕಳು ದಾರಿತಪ್ಪುತ್ತಿದ್ದಾರೆ. ಮೊಬೈಲ್ ಸಂಸ್ಕೃತಿಗೆ ಮಾರುಹೋಗಿ ಓದುವುದರಿಂದ ವಿಮುಖರಾಗುತ್ತಿದ್ದಾರೆ ಎಂದ ಅವರು ಮನೆಯಲ್ಲಿ, ಶಾಲೆಯಲ್ಲಿ, ಸಮಾಜದ ಸಂಘ-ಸಂಸ್ಥೆಗಳು ಮಕ್ಕಳು ಸಮಾಜಕ್ಕೆ ದಾರಿ ದೀಪ ವಾಗುವಂತೆ ಮಾರ್ಗದರ್ಶಕರಾಗ ಬೇಕೆಂದರು.
ಮಕ್ಕಳು ಮನೆಗೆ ಬೆಳಕಾಗಬೇಕು. ಪುಸ್ತಕದ ಬಗ್ಗೆ ನಿಷ್ಠೆ ಇರಿಸಿ ಜ್ಞಾನ ಸಂಪಾದಿಸುವತ್ತ ಮಕ್ಕಳನ್ನುಪೋಷಕರು, ಶಿಕ್ಷಕರು, ಗುರುಹಿರಿಯರು ಪ್ರೇರೇಪಿಸಬೇಕು ಎಂದು ಕೆಲವು ಪ್ರತ್ಯಕ್ಷತೆಯೊಂದಿಗೆ ಉಪನ್ಯಾಸ ನೀಡಿದರು.

ಈ ಸಂದರ್ಭ ಪಂಚಾಯತ್ ಪರಿಷತ್ ಅತ್ಯುತ್ತಮ ಪಿಡಿಒ ಪ್ರಶಸ್ತಿ ವಿಜೇತ ಹೊದ್ದೂರು ಪಿಡಿಒ ಎ.ಎ.ಅಬ್ದುಲ್ಲ ಅವರನ್ನು ಸಂಸ್ಥೆಯ ಪರವಾಗಿ ಗಣ್ಯರು ಗೌರವಿಸಿ ಸನ್ಮಾನಿಸಿದರು.

ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳ ಜ್ಞಾನ ಹೊರಹೊಮ್ಮಲು ಅವಕಾಶ ಕಲ್ಪಿಸಬೇಕು. ಪ್ರತಿಭೆ ಇರುವವರು ಯಾವುದೇ ಮೀಸಲಾತಿ ಇಲ್ಲದೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಲ್ಲರು. ಪ್ರತಿಭೆಗಳ ವಿಕಸನಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಜನೆ ಹಾಗೂ ಕ್ರೀಡಾಕೂಟದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಪ್ರೌಢಶಾಲಾ ಸಹ ಶಿಕ್ಷಕರಸಂಘದ ಉಪಾಧ್ಯಕ್ಷ ಮೆಹಬೂಬ್ ಸಾಬ್ ವಹಿಸಿದ್ದ ವೇದಿಕೆಯಲ್ಲಿ ನಾಪೋಕ್ಲು ಜುಮ್ಮಾ ಮಸೀದಿಯ ಅಧ್ಯಕ್ಷ ಎಂ.ಎಚ್ ಅಬ್ದುಲ್ ರೆಹಮಾನ್, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಹುಸೇನಾರ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಶಿಕ್ಷಕಿ ಸೌಜನ್ಯ ಸ್ವಾಗತಿಸಿ ಸಂಸ್ಥೆಯ ಪ್ರಾಂಶುಪಾಲರಾದ ತನ್ವೀರ್ ಶಾಲಾ ವರದಿವಾಚಿಸಿದರು. ಶಿಕ್ಷಕಿ ರೇಖಾ ಅವರು ಅತಿಥಿ ನಾಗೇಶ್ ಅವರನ್ನು ಹಾಗೂ ಶಿಕ್ಷಕಿ ಸಮೀರ ಸನ್ಮಾನಿಸಲ್ಪಟ್ಟ ಹೊದ್ದೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಬ್ದುಲ್ ಅವರ ಪರಿಚಯ ಮಾಡಿದರು.
ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ವೇಷ ಭೂಷಣಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವರದಿ : ದುಗ್ಗಳ ಸದಾನಂದ 

Follow us Follow us
Share. WhatsApp Facebook Twitter Email Telegram Copy Link

Related Posts

*ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*

ಸೆಪ್ಟೆಂಬರ್ 26, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಸೆಪ್ಟೆಂಬರ್ 26, 2026

*ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*

ಸೆಪ್ಟೆಂಬರ್ 26, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಸೆಪ್ಟೆಂಬರ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಸೆ.26: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್…

*ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*

ಸೆಪ್ಟೆಂಬರ್ 26, 2026

*ಕೊಡಗಿನ ಶಿಕ್ಷಕರಿಗೆ ಪ್ರತಿಷ್ಠಿತ ‘ವಿದ್ಯಾರತ್ನ’ ರಾಜ್ಯ ಪ್ರಶಸ್ತಿ*

ಸೆಪ್ಟೆಂಬರ್ 26, 2026

*ಶಿಕ್ಷಕರು ನೈತಿಕತೆ, ಮಾನವೀಯ ಮೌಲ್ಯ ಬೆಳೆಸಬೇಕು: ಮದನ್ ಮಾದಯ್ಯ; ಸುಂಟಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ; ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ದಂಪತಿಗೆ ಸನ್ಮಾನ*

ಸೆಪ್ಟೆಂಬರ್ 26, 2026

*ಕ್ರೀಡಾ ಕ್ಷೇತ್ರದಲ್ಲಿ ಆಂಜೆಲಾ ವಿದ್ಯಾನಿಕೇತನದ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ; ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ*

ಸೆಪ್ಟೆಂಬರ್ 26, 2026

*2030ಕ್ಕೆ ಭಾರತವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ: ಕೊಡಗಿಗೆ ಕೇಂದ್ರ ತನಿಖಾ ತಂಡ ಭೇಟಿ*

ಸೆಪ್ಟೆಂಬರ್ 26, 2026

*ಶ್ರೀಮಂಗಲ-ನಾಲ್ಕೇರಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ*

ಸೆಪ್ಟೆಂಬರ್ 26, 2026

*ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ 2026ರಲ್ಲಿ ಕೊಡಗಿನ ಕ್ರೀಡಾಪಟುಗಳ ಮಿಂಚಿನ ಸಾಧನೆ*

ಸೆಪ್ಟೆಂಬರ್ 26, 2026

*ಮಹಿಳಾ ಸ್ವಾವಲಂಬನೆಗೆ ‘ಆತ್ಮ’ ಯೋಜನೆ ಆಸರೆ: ನಾಪೋಕ್ಲು ಮಹಿಳಾ ಸಮಾಜದಿಂದ ಅಣಬೆ ಕಟಾವು*

ಸೆಪ್ಟೆಂಬರ್ 26, 2026

*36 ವರ್ಷ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆ ದೇವಮಾಜಿ, ಶಿಕ್ಷಕಿ ಭೋಜಮ್ಮಗೆ ಆತ್ಮೀಯ ಬೀಳ್ಕೊಡುಗೆ*

ಸೆಪ್ಟೆಂಬರ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.