Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಆನೆ ಮಾನವ ಸಂಘರ್ಷ ನಿವಾರಣೆಗೆ ಅಗತ್ಯ ಕ್ರಮ : ಕೇಂದ್ರ ಸರಕಾರ ಭರವಸೆ : ಸಂಸದ ಯದುವೀರ್ ಮನವಿಗೆ ಸ್ಪಂದನೆ*
  • *ಮಂಗಳೂರಿನ ಸೆಂಟ್ ಅಲೋಶಿಯಸ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದಲ್ಲಿ ಎಂ.ಎ ಬಿಸಿನೆಸ್ ಎಕನಾಮಿಕ್ಸ್ ಸ್ನಾತಕೋತ್ತರ ಕೋರ್ಸ್ ಗೆ ಪ್ರವೇಶಾತಿ ಆರಂಭ*
  • *ವಿರಾಜಪೇಟೆ : ವಿದ್ಯಾರ್ಥಿಗಳಿಂದ ಎಸ್.ಐ.ಆರ್ ಜಾಗೃತಿ ಜಾಥಾ*
  • *ವಚನ ಸಾಹಿತ್ಯಕ್ಕೆ ಡಾ.ಫ.ಗು.ಹಳಕಟ್ಟಿ ಅವರ ಕಾರ್ಯ ಅವಿಸ್ಮರಣೀಯ : ಕೆ.ಎಸ್.ಮೂರ್ತಿ*
  • *ಕೊಡಗು : ರಸಗೊಬ್ಬರ ಮಾರಾಟದಲ್ಲಿ ರೈತರಿಗೆ ಮೋಸವಾಗದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
  • *ಸುಂಟಿಕೊಪ್ಪ : ರಸ್ತೆಗುರುಳಿದ ಬೃಹತ್ ಮರ*
  • *ರಸ ಗೊಬ್ಬರ ಪೂರೈಕೆಯಲ್ಲಿ ರಾಜ್ಯದ ರೈತರಿಗೆ ಅನ್ಯಾಯ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆರೋಪ*
  • *ಯುನೈಟೆಡ್ ಅರಬ್ ನಲ್ಲಿ ಕೊಡಗಿನ ರಿಯಾಝ್ “ಇತ್ತಿಹಾದ್” ರೈಲು ಸೇವೆಯ ಲೋಕೋ ಪೈಲಟ್*
  • *ಬಾಡಗರಕೇರಿ ಶ್ರೀ ಮೃತ್ಯುಂಜಯ ಕ್ಷೇತ್ರದಲ್ಲಿ ಜು.6 ರಿಂದ 9 ರವರೆಗೆ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ*
  • ಬೈಲುಕುಪ್ಪೆಯಲ್ಲಿ ನಟ, ನಟಿಯರ ಆಯ್ಕೆ
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿರಾಜಪೇಟೆ : ಪ್ರತಿಯೊಬ್ಬರೂ ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಿ : ಜೆ.ಸಿ.ಜಯಂತಿ ಸಲಹೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿರಾಜಪೇಟೆ : ಪ್ರತಿಯೊಬ್ಬರೂ ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಿ : ಜೆ.ಸಿ.ಜಯಂತಿ ಸಲಹೆ*

ಜನವರಿ 4, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ವಿರಾಜಪೇಟೆ ಜ.4 : ಕನ್ನಡ ಭಾಷೆಯನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಸರಕಾರಿ ಪ್ರೌಢಶಾಲೆಯ ಮುಖ್ಯೋಪಧ್ಯಾಯರಾದ ಜೆ.ಸಿ.ಜಯಂತಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೊಂಡಂಗೇರಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಶ್ರೀಮತಿ ವಿಜಯ ವಿಷ್ಣುಭಟ್ ದತ್ತಿನಿಧಿಯ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳ ಅಗತ್ಯವಿದೆ. ಅಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾಹಿತ್ಯ ಪರಿಷತ್ ಉತ್ತಮ ಕಾರ್ಯ ಮಾಡುತ್ತಿದೆ. ಪ್ರತಿಯೊಬ್ಬರು ಸಾಹಿತ್ಯದ ಅಭಿರುಚಿ ಮೂಡಿಸಿಕೊಂಡು ಸಾಹಿತ್ಯವನ್ನು ಉಳಿಸಲು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಕೊಡಗಿನ ಮಹಿಳಾ ಸಾಹಿತಿಗಳು ಎಂಬ ವಿಷಯದ ಕುರಿತು ಸೋಮೆಯಂಡ ಕೌಶಲ್ಯ ಸತೀಶ್ ಉಪನ್ಯಾಸ ನೀಡಿ ಮಾತನಾಡಿ, ಶತಮಾನಗಳಿಂದ ನಮ್ಮ ಕವಿಗಳು ಕನ್ನಡ ಭಾಷೆಯನ್ನು ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಆ ಕಾಲದ ಕವಿಗಳು ಕೇವಲ ಕವಿತೆ ಬರೆಯುವುದು ಮಾತ್ರವಲ್ಲದೇ ತಮ್ಮ ರಾಜ್ಯವನ್ನು ಕಾಪಾಡುವ ಕಾರ್ಯ ಮಾಡುತ್ತಿದ್ದರು ಎಂದರು.
ಮಹಿಳೆಯರ ಪ್ರತಿಭೆ ಅನಾವರಣಗೊಳ್ಳಲು ಪುರುಷರ ಸಹಕಾರ ಅತ್ಯಗತ್ಯ. ಮಹಿಳೆ ಕುಟುಂಬದ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಮಕ್ಕಳ ಭವಿಷ್ಯ ರೂಪಿಸಿ ಪರಿಪೂರ್ಣ ವ್ಯಕ್ತಿತ್ವ ಬೆಳೆಸಿದವಳು. ಮಹಿಳೆಯರ ಪಾತ್ರ ಅಪರೂಪ. ಮಹಿಳೆಯರು ಇಂದು ಶಿಕ್ಷಣದಲ್ಲಿ ಉತ್ತಮ ಸ್ಥಾನ ಪಡೆದಿರುವಳು. ವೈದ್ಯಕೀಯ, ಸೈನಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾಳೆ. ಮಹಿಳೆಯರ ಸಬಲೀಕರಣಕ್ಕೆ ಶಿಕ್ಷಣವೇ ಬುನಾದಿ. ಮಹಿಳೆ ಸದಾ ಸಾಮಾಜಿಕ ವ್ಯವಸ್ಥೆಯ ಭದ್ರತೆಗೆ ಶ್ರಮಿಸುತ್ತಾಳೆ. ಅವಳು ತನ್ನೊಳಗಿನ ನೋವನ್ನು ಸಾಹಿತ್ಯದ ಸಾಧನೆ ಮೂಲಕ ಸಂಭ್ರಮಿಸಲು ಮುಂದಾದರು. ಈ ನಿಟ್ಟಿನಲ್ಲಿ ಅವಳ ಅಂತರಾಳದಿಂದ ಹೊರ ಹೊಮ್ಮಿದ ಸಾಹಿತ್ಯಕ್ಕೆ ನಾವೆಲ್ಲ ಪ್ರೋತ್ಸಾಹ ನೀಡಿ ಬೆಳೆಸಬೇಕಾದ ಅವಶ್ಯಕತೆ ಇದೆ ಎಂದರಲ್ಲದೆ ಕೊಡಗಿನ ಹಿಂದಿನ ಹಾಗೂ ಪ್ರಸ್ತುತ ಮಹಿಳಾ ಸಾಹಿತಿಗಳ ಬಗ್ಗೆ ಪಕ್ಷಿನೋಟ ಬೀರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ರಾಜೇಶ್ ಪದ್ಮನಾಭ ಮಾತನಾಡಿ, ಸುಲಭವಾಗಿ ಸುಲಲಿತವಾಗಿ ಅರ್ಥವಾಗುವ ಭಾಷೆ ಕನ್ನಡ. ಬದುಕು ರೂಪಿಸಿಕೊಳ್ಳಲು ಹಲವು ಭಾಷೆಯ ಅಗತ್ಯವಿದೆ. ಅವುಗಳ ಜತೆಗೆ ಕನ್ನಡವನ್ನು ಪ್ರೀತಿಸಿ ಗೌರವಿಸುವ ಕಾರ್ಯವಾಗಲಿ. ಹಿಂದಿನ ಕಾಲದಲ್ಲಿದ್ದ ಕನ್ನಡದ ಸಂಪತ್ತು ಇಂದು ಕಡಿಮೆಯಾಗಿದೆ. ಕನ್ನಡಿಗರು ತಮ್ಮ ಸಂಕುಚಿತ ಮನೊಭಾವನೆಯನ್ನು ಬಿಟ್ಟು, ಸಾಂಸ್ಕೃತಿಕ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಕನ್ನಡ ಮಾತನಾಡುವುದು ಅಪವಾದ ಎಂಬ ಭಾವನೆ ಬಿಟ್ಟು ಕನ್ನಡಕ್ಕಾಗಿ ಕೈ ಎತ್ತುವ ಕಾರ್ಯ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಮ್ಮತ್ತಿ ಹೋಬಳಿ ಘಟಕದ ಟಿ.ಹೆಚ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಸಾಪ ವತಿಯಿಂದ ಉಪನ್ಯಾಸ ನೀಡಿದ ಸೋಮೆಯಂಡ ಕೌಶಲ್ಯ ಹಾಗೂ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕೊಂಡಂಗೇರಿ ಶಾಲೆಯ ವಿದ್ಯಾರ್ಥಿ ಸಲ್ಮಾನ್ ಪ್ಯಾರೀಸ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ಹೆಚ್.ಜಿ.ಸಾವಿತ್ರಿ, ಸಾಹಿತಿಗಳಾದ ರಜಿತ ಕಾರ್ಯಪ್ಪ, ಶಿಕ್ಷಕಿ ಲವಿನಾ, ಸರಕಾರಿ ಪ್ರೌಢಶಾಲೆ ಅಧ್ಯಕ್ಷ ಅಬ್ದುಲ್ ಖಾದರ್ ಇದ್ದರು.
ಕಾರ್ಯಕ್ರಮದಲ್ಲಿ ಕೊಂಡಂಗೇರಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಆನೆ ಮಾನವ ಸಂಘರ್ಷ ನಿವಾರಣೆಗೆ ಅಗತ್ಯ ಕ್ರಮ : ಕೇಂದ್ರ ಸರಕಾರ ಭರವಸೆ : ಸಂಸದ ಯದುವೀರ್ ಮನವಿಗೆ ಸ್ಪಂದನೆ*

ಜುಲೈ 3, 2026

*ಮಂಗಳೂರಿನ ಸೆಂಟ್ ಅಲೋಶಿಯಸ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದಲ್ಲಿ ಎಂ.ಎ ಬಿಸಿನೆಸ್ ಎಕನಾಮಿಕ್ಸ್ ಸ್ನಾತಕೋತ್ತರ ಕೋರ್ಸ್ ಗೆ ಪ್ರವೇಶಾತಿ ಆರಂಭ*

ಜುಲೈ 3, 2026

*ವಿರಾಜಪೇಟೆ : ವಿದ್ಯಾರ್ಥಿಗಳಿಂದ ಎಸ್.ಐ.ಆರ್ ಜಾಗೃತಿ ಜಾಥಾ*

ಜುಲೈ 2, 2026

*ಮಂಗಳೂರಿನ ಸೆಂಟ್ ಅಲೋಶಿಯಸ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದಲ್ಲಿ ಎಂ.ಎ ಬಿಸಿನೆಸ್ ಎಕನಾಮಿಕ್ಸ್ ಸ್ನಾತಕೋತ್ತರ ಕೋರ್ಸ್ ಗೆ ಪ್ರವೇಶಾತಿ ಆರಂಭ*

ಜುಲೈ 3, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಂಗಳೂರು NEWS DESK ಜು.3 : ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಸೆಂಟ್ ಅಲೋಶಿಯಸ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದಲ್ಲಿ ಎಂ.…

*ವಿರಾಜಪೇಟೆ : ವಿದ್ಯಾರ್ಥಿಗಳಿಂದ ಎಸ್.ಐ.ಆರ್ ಜಾಗೃತಿ ಜಾಥಾ*

ಜುಲೈ 2, 2026

*ವಚನ ಸಾಹಿತ್ಯಕ್ಕೆ ಡಾ.ಫ.ಗು.ಹಳಕಟ್ಟಿ ಅವರ ಕಾರ್ಯ ಅವಿಸ್ಮರಣೀಯ : ಕೆ.ಎಸ್.ಮೂರ್ತಿ*

ಜುಲೈ 2, 2026

*ಕೊಡಗು : ರಸಗೊಬ್ಬರ ಮಾರಾಟದಲ್ಲಿ ರೈತರಿಗೆ ಮೋಸವಾಗದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಜುಲೈ 2, 2026

*ಸುಂಟಿಕೊಪ್ಪ : ರಸ್ತೆಗುರುಳಿದ ಬೃಹತ್ ಮರ*

ಜುಲೈ 2, 2026

*ರಸ ಗೊಬ್ಬರ ಪೂರೈಕೆಯಲ್ಲಿ ರಾಜ್ಯದ ರೈತರಿಗೆ ಅನ್ಯಾಯ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆರೋಪ*

ಜುಲೈ 2, 2026

*ಯುನೈಟೆಡ್ ಅರಬ್ ನಲ್ಲಿ ಕೊಡಗಿನ ರಿಯಾಝ್ “ಇತ್ತಿಹಾದ್” ರೈಲು ಸೇವೆಯ ಲೋಕೋ ಪೈಲಟ್*

ಜುಲೈ 2, 2026

*ಬಾಡಗರಕೇರಿ ಶ್ರೀ ಮೃತ್ಯುಂಜಯ ಕ್ಷೇತ್ರದಲ್ಲಿ ಜು.6 ರಿಂದ 9 ರವರೆಗೆ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ*

ಜುಲೈ 2, 2026

ಬೈಲುಕುಪ್ಪೆಯಲ್ಲಿ ನಟ, ನಟಿಯರ ಆಯ್ಕೆ

ಜುಲೈ 2, 2026

*ಜು.6 ರಂದು ಮಡಿಕೇರಿಯಲ್ಲಿ ಬಿಜೆಪಿಯಿಂದ ಬೃಹತ್ ವಾಹನ ಜಾಥಾ ಹಾಗೂ ಪ್ರತಿಭಟನಾ ಸಭೆ*

ಜುಲೈ 2, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.