Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»“ಕೆಲಸಗಾರರು ಬೇಕಾಗಿದ್ದಾರೆ” : ಬೆಳೆಗಾರರ ಅಸಹಾಯಕ ಪರಿಸ್ಥಿತಿಗೆ ಸಾಕ್ಷಿಯಾದ ಫೋಟೋ ವ್ಯಾಪಕ ವೈರಲ್
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

“ಕೆಲಸಗಾರರು ಬೇಕಾಗಿದ್ದಾರೆ” : ಬೆಳೆಗಾರರ ಅಸಹಾಯಕ ಪರಿಸ್ಥಿತಿಗೆ ಸಾಕ್ಷಿಯಾದ ಫೋಟೋ ವ್ಯಾಪಕ ವೈರಲ್

ಜನವರಿ 5, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜ.5 : ಕಾಫಿ ಕೊಯ್ಲಿನ ಹಂತದಲ್ಲಿನ ಕಾರ್ಮಿಕರ ಕೊರತೆ, ಕಾರ್ಮಿಕರ ವೇತನಗಳಿಂದ ಕಂಗಾಲಾಗಿರುವ ಕೊಡಗಿನ ಬೆಳೆಗಾರ, ತನ್ನ ಆರ್ಥಿಕ ಪರಿಸ್ಥಿತಿಗಳಿಗೆ ತಕ್ಕಂತೆ ಕೆಲಸಗಾರರನ್ನು ಹೊಂದಿಸಿಕೊಳ್ಳಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ. ಇಲ್ಲೊಬ್ಬ ಬೆಳೆಗಾರರು ತಾವು ನೀಡಬಹುದಾದ ಕಾರ್ಮಿಕರ ದಿನಗೂಲಿಯ ವಿವರ ಬರೆದು “ಕೆಲಸಗಾರರು ಬೇಕಾಗಿದ್ದಾರೆ” ಎನ್ನುವ ಫಲಕದೊಂದಿಗೆ ರಸ್ತೆಗಿಳಿದು ತಮ್ಮ ಅಸಹಾಯಕ ಸ್ಥಿತಿಯನ್ನು ಸಾಕ್ಷೀಕರಿಸಿದ್ದಾರೆ.
ವರ್ಷಾವಧಿ ತೋಟದ ನಿರ್ವಹಣೆಗಾಗಿ, ಅದರ ಕೆಲಸ ಕಾರ್ಯಗಳಿಗಾಗಿ ಶ್ರಮಿಸಿದ ಬೆಳೆಗಾರ, ತನ್ನ ಶ್ರಮಕ್ಕೆ ಯಶಸ್ಸು ಪಡೆಯುವುದು ಕಾಫಿ ಫಸಲನ್ನು ಜಾಗೃತೆಯಿಂದ ಕೊಯ್ಲು ಮಾಡಿ, ಉತ್ತಮ ಧಾರಣೆಗೆ ಮಾರಾಟ ಮಾಡುವುದರಿಂದ ಮಾತ್ರ.
ಇತ್ತೀಚಿನ ವರ್ಷಗಳಲ್ಲಿ ಕಾಫಿ ಕೊಯ್ಲು ಸಮಯ ಬಂತೆಂದರೆ ಬೆಳೆಗಾರ ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರ ವೇತನ ಜಿಲ್ಲೆಯ ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಇದೆ. ಕಾಫಿ ಹಣ್ಣನ್ನು ಕೊಯ್ಯುವ ಕಾರ್ಮಿಕನಿಗೆ ಪ್ರತಿ ಕೆ.ಜಿ.ಗೆ ಕಳೆದ ಸಾಲಿನವರೆಗೆ 3.50 ರೂ.ಗಳಿಂದ 7 ರೂ.ಗಳವರೆಗೆ ನೀಡಿರುವ ಉದಾಹರಣೆಗಳು ಇದೆ. ಕಾಫಿ ಫಸಲು ಹೆಚ್ಚಾಗಿರುವ ತೋಟಗಳಲ್ಲಿ ಪ್ರತಿ ಕೆ.ಜಿ. ಕಾಫಿ ಕೊಯ್ಲಿಗೆ 3 ರಿಂದ 4 ರೂ. ಒಳಗೆ ದರವನ್ನು ಸಂದರ್ಭಕ್ಕೆ ತಕ್ಕಂತೆ ಕಾರ್ಮಿಕರನ್ನು ಕರೆ ತರುವ ಮಂದಿ ನಿರ್ಧರಿಸುತ್ತಾರೆ. ಅದೇ ಫಸಲು ಕಡಿಮೆ ಇರುವ ತೋಟಗಳಲ್ಲಿ ಪ್ರತಿ ಕೆ.ಜಿ. ಕೊಯ್ಲಿನ ದರ 5 ರೂ.ಗಳಿಗೂ ಹೆಚ್ಚಿಗೆ ನಿಗದಿ ಪಡಿಸುತ್ತಾರೆ.
ಇಂತಹ ಇಕ್ಕಟ್ಟಿನ ಸಂದರ್ಭಗಳಲ್ಲಿ ಬೆಳೆಗಾರ ಆಕ್ಷರಶಃ ಅಡಕತ್ತರಿಯಲ್ಲಿ ಸಿಲುಕಿಕೊಳ್ಳುತ್ತಾನೆ. ಕಾಫಿ ಕೊಯ್ಲು ಮಾಡದೆ ಇರುವಂತೆಯೂ ಇಲ್ಲ, ಮಾಡುವುದಾದಲ್ಲಿ ದುಪ್ಪಟ್ಟು ದರ ತೆರಬೇಕು. ಇದರಿಂದ ಹೆಚ್ಚಿನ ನಷ್ಟವನ್ನು ಅನುಭವಿಸುವ ಮೂಲಕ, ತೋಟ ನಿರ್ವಹಣೆ ಎನ್ನುವುದು ಸಾಧ್ಯವೇ ಇಲ್ಲ ಎನ್ನುವಂತಾಗಿ ಹೋಗುತ್ತದೆ.
ಕಾಫಿ ಕೊಯ್ಯುವ ಧಾರಣೆಯ ಫಲಕ ಹಿಡಿದು ರಸ್ತೆ ನಡುವೆ ನಿಂತ ಬೆಳೆಗಾರ ಬೀಟೆಕಾಡ್ ಎಸ್ಟೇಟ್ (9910162289) ನವರು. ಇವರು ತಮ್ಮ ಪಟ್ಟಿಯಲ್ಲಿ ಪ್ರತಿ ಕೆ.ಜಿ ಕಾಫಿಗೆ 4.45 ರೂ., ದಿನಕ್ಕೆ ಪುರುಷ ಕೆಲಸಗಾರರಿಗೆ 615 ರೂ., ಮಹಿಳಾ ಕೆಲಸಗಾರರಿಗೆ 415 ರೂ. ನಮೂದಿಸಿ ರಸ್ತೆಯಲ್ಲಿ ನಿಂತಿರುವ ಫೋಟೋ ವ್ಯಾಪಕ ವೈರಲ್ ಆಗಿದೆ. ಇದು ಈ ಬೆಳೆಗಾರರೊಬ್ಬರದ್ದೇ ಸಮಸ್ಯೆಯಲ್ಲ, ಜಿಲ್ಲೆಯ ಎಲ್ಲಾ ಬೆಳೆಗಾರರು ಒಂದಿಲ್ಲ ಒಂದು ರೀತಿಯಲ್ಲಿ ಸಮಸ್ಯೆಯೊಂದಿಗೆ ಹೊಂದಿಕೊಂಡು ಮುಂದೆ ಸಾಗುತ್ತಿದ್ದಾರೆ.
ಹೊರ ಜಿಲ್ಲೆ, ರಾಜ್ಯಗಳಿಂದ ಸಾಕಷ್ಟು ಕಾರ್ಮಿಕರು ಜಿಲ್ಲೆಗೆ ಬಂದಿದ್ದರು, ಕಾಫಿ ಕೊಯ್ಲಿನ ಧಾರಣೆ ಬೆಳೆಗಾರರನ್ನು ಹೈರಾಣಾಗಿಸುತ್ತಿದೆ. ಇದಕ್ಕೆ ಪರಿಹಾರವಂತು ಸಧ್ಯದ ಪರಿಸ್ಥಿತಿಯಲ್ಲಿ ದೊರಕುವಂತೆ ಕಾಣುತ್ತಿಲ್ಲ ಎನ್ನುವುದು ಬೆಳೆಗಾರರ ಅಸಹಾಯಕ ನುಡಿಯಾಗಿದೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ದಸರಾ ಪ್ರಯುಕ್ತ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ದುರ್ಗಾಪೂಜೆ

ಅಕ್ಟೋಬರ್ 19, 2026

ಕೊಡಗಿನಲ್ಲಿ ಪರಿಶಿಷ್ಟ ಜಾತಿಯ ಫಲಾನುಭವಿಗೆ ಮೊಬೈಲ್ ಕ್ಯಾಂಟೀನ್ ವಾಹನ ಹಸ್ತಾಂತರ

ಅಕ್ಟೋಬರ್ 19, 2026

ಸೈನಿಕ ಶಾಲೆ ಕೊಡಗಿನಲ್ಲಿ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಗುಂಪು (ಹೆಚ್) ಕ್ರೀಡಾಕೂಟ-2026ರ ಸಮಾರೋಪ ಸಮಾರಂಭ

ಅಕ್ಟೋಬರ್ 19, 2026

ಕೊಡಗಿನಲ್ಲಿ ಪರಿಶಿಷ್ಟ ಜಾತಿಯ ಫಲಾನುಭವಿಗೆ ಮೊಬೈಲ್ ಕ್ಯಾಂಟೀನ್ ವಾಹನ ಹಸ್ತಾಂತರ

ಅಕ್ಟೋಬರ್ 19, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, ಅ.19: ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಕೊಡಗು ಜಿಲ್ಲೆ ವತಿಯಿಂದ 2024-25ನೇ ಸಾಲಿನ ಎಸ್.ಸಿ.ಎಸ್.ಪಿ. (SCSP) ಯೋಜನೆಯಡಿ ಪರಿಶಿಷ್ಟ…

ಸೈನಿಕ ಶಾಲೆ ಕೊಡಗಿನಲ್ಲಿ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಗುಂಪು (ಹೆಚ್) ಕ್ರೀಡಾಕೂಟ-2026ರ ಸಮಾರೋಪ ಸಮಾರಂಭ

ಅಕ್ಟೋಬರ್ 19, 2026

ನಾಪೋಕ್ಲು: ಬಲಮುರಿ ಶ್ರೀ ಅಗಸ್ತೇಶ್ವರ ದೇವಾಲಯದಲ್ಲಿ ಸಂಭ್ರಮದ ಪುಣ್ಯ ತೀರ್ಥಸ್ನಾನ ಜಾತ್ರಾ ಮಹೋತ್ಸವ

ಅಕ್ಟೋಬರ್ 19, 2026

ನಾಪೋಕ್ಲು ಸುತ್ತಮುತ್ತ ಬಿರುಸಿನ ಮಳೆ: ರಸ್ತೆಗಳು ಜಲಾವೃತ, ವಾಹನ ಸಂಚಾರಕ್ಕೆ ಅಡಚಣೆ

ಅಕ್ಟೋಬರ್ 19, 2026

ಮಡಿಕೇರಿ ದಸರಾ : ಮದ್ಯ ಮಾರಾಟ ನಿಷೇಧ

ಅಕ್ಟೋಬರ್ 19, 2026

ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ: ವಾಹನ ಸಂಚಾರದಲ್ಲಿ ಮಾರ್ಗ ಬದಲಾವಣೆ

ಅಕ್ಟೋಬರ್ 19, 2026

ಚೆಟ್ಟಳ್ಳಿಯಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ

ಅಕ್ಟೋಬರ್ 19, 2026

ಅಕ್ಟೋಬರ್ 23 ರಂದು ಪಾಲಿಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಅಕ್ಟೋಬರ್ 19, 2026

ವಿರಾಜಪೇಟೆಯಿಂದ ತಲಕಾವೇರಿವರೆಗೆ 58 ಕಿ.ಮೀ. ಪಾದಯಾತ್ರೆ; 6ನೇ ವರ್ಷದ ಯಾತ್ರೆಯಲ್ಲಿ 15 ಮಂದಿ ಭಾಗಿ – 58 ಕಿ.ಮೀ. ಭಕ್ತಿಯ ನಡಿಗೆ

ಅಕ್ಟೋಬರ್ 19, 2026

ರಗ್ಬಿ ಇಂಡಿಯಾ ಮಂಡಳಿಗೆ ಕೊಡಗಿನ ತಿಮ್ಮಯ್ಯ ಮಾದಂಡ ಆಯ್ಕೆ; SOM ಚುನಾವಣೆಯಲ್ಲಿ ಮಹತ್ವದ ಗೆಲುವು; ಭಾರತೀಯ ರಗ್ಬಿ ಕ್ರೀಡೆಯ ಅಭಿವೃದ್ಧಿಗೆ ಹೊಸ ಜವಾಬ್ದಾರಿ

ಅಕ್ಟೋಬರ್ 19, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.