ನಾಪೋಕ್ಲು ಫೆ.16 NEWS DESK : ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ‘”ಕಾಲತ್ ರ ಕಳಿ” ಎಂಬ ನೂತನ ಕೊಡವ ಚಲನಚಿತ್ರಕ್ಕೆ ಮುಹೂರ್ತ ಪೂಜೆ ನಡೆಯಿತು.
ಪಿ ಅಂಡ್ ಜಿ ಕ್ರಿಯೇಶನ್ಸ್ ಅಡಿಯಲ್ಲಿ ಬಾಳೆಯಡ ಪ್ರತಿಷ್ ಪೂವಯ್ಯ ಹಾಗೂ ಆಚೆಯಡ ಗಗನ್ ಗಣಪತಿ ನಿರ್ದೇಶನದ ನಾಲ್ಕನೇ ಕೊಡವ ಚಲನಚಿತ್ರ ಇದಾಗಿದ್ದು, ಸೋಮೆಂಡ ಬೋಸ್ ಬೆಳ್ಳಿಯಪ್ಪ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುದ್ದಾರೆ.
ದೇವಾಲಯದ ಪಾರು ಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ ಚಿತ್ರತಂಡದ ಪರವಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಯಾವುದೇ ವಿಘ್ನ ಕುಂದುಕೊರತೆಗಳಾಗದಂತೆ ಸುಸೂತ್ರವಾಗಿ ಪೂರ್ಣಗೊಳ್ಳಲಿ ಪ್ರಾರ್ಥಿಸಿದರು.
ಚಲನಚಿತ್ರದ ನಿರ್ದೇಶಕರಾಗಿ ಆಚೆಯಡ ಗಗನ್ ಗಣಪತಿ ಮಾತನಾಡಿ, ಕೊಡವ ಭಾಷೆಯ ನೂತನ ಸಿನಿಮಾ ಉತ್ತಮ ಚಿತ್ರಕಥೆಯನ್ನು ಹೊಂದಿದೆ. ಈಗಿನ ಕಾಲಘಟ್ಟದಲ್ಲಿ ನಡೆಯುವ ಸಾಮಾಜಿಕ ದುಷ್ಪರಿಣಾಮಗಳ ಕುರಿತ ಸಿನಿಮಾ ಇದಾಗಿದ್ದು, ಸಾಮಾಜಿಕ ಕಳಕಳಿಯನ್ನು ಹೊಂದಿದೆ ಎಲ್ಲರೂ ವೀಕ್ಷಿಸಿ, ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು.
ಸೋಮೆಂಡ ಬೋಸ್ ಬೆಳ್ಳಿಯಪ್ಪ ಮಾತನಾಡಿ, ಹಲವು ಕಿರು ಚಿತ್ರಗಳನ್ನು ಈಗಾಗಲೇ ನಿರ್ಮಿಸಿದ್ದು, ನೂತನ ಸಿನಿಮಾ ಉತ್ತಮ ಚಿತ್ರಕಥೆಯನ್ನು ಹೊಂದಿದೆ ಎಂದರು.
ಕಾಲತ್ ರ ಕಳಿ ಚಿತ್ರ ತಾರಾ ಗಣದಲ್ಲಿ ತಾತಂಡ ಪ್ರಭ, ಗೋಪುಡ ದೇಸ್ನ ದೇಚಮ್ಮ, ಮಾಚೇಟಿರ ವಿಕಾಸ್, ಚೇನಂಡ ಗಿರೀಶ್, ಸಪ್ನಾ, ಪಾಲೆಯಡ ಸುಚಿತ್ರ ಸುಬ್ಬಯ್ಯ, ಸುಮಿತ್ರ, ಶ್ಯಾಮಲ ಸೇರಿದಂತೆ 50ಕ್ಕೂ ಹೆಚ್ಚು ಕಲಾವಿದರನ್ನು ಒಳಗೊಂಡಿದೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಚಂದ್ರಶೇಖರ್ (ಪಾಪು)ನಿರ್ವಹಿಸುತ್ತಿದ್ದಾರೆ ಎಂದು ಬಾಳೆಯಡ ಪ್ರತಿಷ್ ಪೂವಯ್ಯ ಮಾಹಿತಿ ನೀಡಿದರು.
ಈ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷ ಹಾಗೂ ದೇವ ತಕ್ಕರಾದ ಪರದಂಡ ಸುಬ್ರಮಣಿ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ, ಲೆಫ್ಟಿನಲ್ ಬಿದ್ದಂಡ ನಾಣ್ಣಯ್ಯ, ಅಲ್ಲರಂಡ ವಿಠಲ ಹಾಗೂ ಚಿತ್ರತಂಡ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ





































