Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • ಮಡಿಕೇರಿಯಲ್ಲಿ  ಶ್ರೀ ಆದಿ ಶಂಕರಾಚಾರ್ಯರ ಜಯಂತಿ ಆಚರಣೆ :  ಶಂಕರಾಚಾರ್ಯರ ಸಂದೇಶ, ತತ್ವಗಳು ಸಮಾಜಕ್ಕೆ ಮಾರ್ಗದರ್ಶನ : ಅನಂತ ಶಯನ
  • *ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಭೆ*
  • *ಕೊಡಗು : ಏ.23 ರಿಂದ 9 ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನ*
  • *ಪಿರಿಯಾಪಟ್ಟಣ : ರೂ 419.78 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರತಿಷ್ಠಾ ವರ್ಧಂತಿ ಮಹೋತ್ಸವ*
  • *ಕುಶಾಲನಗರ ತಾಲ್ಲೂಕು ಪತ್ರಕತ೯ರ ಸಂಘದಿಂದ ನೇಗಿಲ ಯೋಗಿ ಪ್ರಶಸ್ತಿ ಪ್ರದಾನ : ಕೊಡಗಿನಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ : ಆರ್.ಕೆ.ಬಾಲಚಂದ್ರ*
  • *ಮೇ 6 ರಿಂದ 10ರವರೆಗೆ “ಕೊಡಗು ಕಪ್” ಜಮಾಅತ್ ಮಟ್ಟದ ಕ್ರಿಕೆಟ್ ಪಂದ್ಯಾವಳಿ*
  • *ಎಡಮ್ಯಾರ್ ಮಾಸಿಕ ಸ್ಮರಣಾರ್ಥ ದೇವಟ್ ಪರಂಬುವಿನಲ್ಲಿ ಸಿಎನ್‍ಸಿ ಪುಷ್ಪನಮನ*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.22 ರಂದು ನಡೆಯುವ ಪಂದ್ಯಗಳು*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.21 ರ ವಿಜೇತ ತಂಡಗಳು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿಯಲ್ಲಿ ಅರ್ಥಪೂರ್ಣವಾಗಿ ಜರುಗಿದ ಕಾಯಕ ಶರಣರು, ಸವಿತಾ ಮಹರ್ಷಿ ಹಾಗೂ ಸಂತ ಸೇವಾಲಾಲ್ ಜಯಂತಿ : ಸಮಾಜದ ಅಭಿವೃದ್ಧಿಗೆ ಮಹನೀಯರ ಕೊಡುಗೆ ಅಪಾರ : ಅನಿತಾ ಪೂವಯ್ಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿಯಲ್ಲಿ ಅರ್ಥಪೂರ್ಣವಾಗಿ ಜರುಗಿದ ಕಾಯಕ ಶರಣರು, ಸವಿತಾ ಮಹರ್ಷಿ ಹಾಗೂ ಸಂತ ಸೇವಾಲಾಲ್ ಜಯಂತಿ : ಸಮಾಜದ ಅಭಿವೃದ್ಧಿಗೆ ಮಹನೀಯರ ಕೊಡುಗೆ ಅಪಾರ : ಅನಿತಾ ಪೂವಯ್ಯ*

ಫೆಬ್ರವರಿ 16, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಫೆ.16 NEWS DESK :  ಕಾಯಕ ಶರಣರು, ಸವಿತಾ ಮಹರ್ಷಿಯವರು ಹಾಗೂ ಸಂತ ಸೇವಾಲಾಲ್ ಅವರು ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ನಗರಸಭೆ ಅಧ್ಯಕ್ಷರಾದ ನೆರವಂಡ ಅನಿತಾ ಪೂವಯ್ಯ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ  ನಡೆದ ಕಾಯಕ ಶರಣರ, ಶ್ರೀ ಸಂತ ಸೇವಾಲಾಲ್ ಹಾಗೂ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತಾಡಿದರು.
ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಶರಣರು ಹಾಗೂ ಪವಾಡ ಪುರುಷರು ಶ್ರಮಿಸಿದ್ದು, ಈ ಮಹನೀಯರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ನಗರಸಭೆ ಅಧ್ಯಕ್ಷರು ನುಡಿದರು.
ಸವಿತಾ ಸಮಾಜವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದಾರೆ. ರಾಷ್ಟ್ರಕೂಟ, ವಿಜಯನಗರ ಚಾಲುಕ್ಯರ ಶಾಸನದಲ್ಲಿ ಸವಿತಾ ಸಮಾಜದವರ ಬಗ್ಗೆ ಉಲ್ಲೇಖವಿದೆ. ಅನೇಕ ಶಾಸನಗಳ ಮೇಲೆ ಸವಿತಾ ಸಮಾಜದ ಸಾದನಗಳಾದ ಕತ್ತಿ, ಕನ್ನಡಿ ಮತ್ತು ಕತ್ತರಿಗಳನ್ನು ಕೆತ್ತಲಾಗಿದೆ ಎಂದು ಅನಿತಾ ಪೂವಯ್ಯ ವಿವರಿಸಿದರು.
`ಕಾಯಕ ಶರಣರು 12ನೇ ಶತಮಾನದಲ್ಲಿ ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದಾರೆ. ಸಂತ ಸೇವಾಲಾಲ್ ಅವರು ಸಹ ಸಮಾಜದಲ್ಲಿ ಸಮಾನತೆ ನಿರ್ಮಾಣ ಮಾಡಿ, ಇತರರಂತೆ ಎಲ್ಲರೂ ಬದುಕು ಕಟ್ಟಿಕೊಳ್ಳಬೇಕು ಎಂಬುದನ್ನು ಸಾರಿದ್ದಾರೆ ಎಂದು ಅನಿತಾ ಪೂವಯ್ಯ ನುಡಿದರು.
ನಿವೃತ್ತ ಪ್ರಾಧ್ಯಾಪಕರಾದ ಬಿ.ಸಿ.ಶಂಕರಯ್ಯ ಮಾತನಾಡಿ, ಸವಿತಾ ಸಮಾಜವನ್ನು ಯಾವುದೇ ಮದುವೆ ಸೇರಿದಂತೆ ಶುಭ ಕಾರ್ಯಗಳಿಗೆ ಆಹ್ವಾನಿಸುತ್ತಾರೆ. ಸವಿತಾ ಸಮಾಜದವರು ಸಂಘಟಿತರಾಗಿ ಮುಖ್ಯವಾಹಿನಿಗೆ ಬರಬೇಕು ಎಂದರು.
ಸಂತ ಸೇವಾ ಅವರು ಈಗಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿ ಹೋಬಳಿಯ ಸೂರಗೊಂಡನ ಕೊಪ್ಪ ಎಂಬಲ್ಲಿ ಜನಿಸಿದ್ದಾರೆ ಎಂದರು. ಸೂರಗೊಂಡನ ಕೊಪ್ಪವನ್ನು ಭಾಯಗಢ ಎಂದು ಕರೆಯಲಾಗುತ್ತದೆ. ಸಂತ ಸೇವಾಲಾಲರು ತಮ್ಮ ಲೀಲೆಗಳ ಹಾಗೂ ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ಗುರುವಿನ ಸ್ಥಾನವನ್ನು ಪಡೆದಿದ್ದಾರೆ ಎಂದರು.
ಮಾದರ ಚನ್ನಯ್ಯ ಅವರು 12ನೇ ಶತಮಾನದ ಬಸವಾದಿ ಶರಣರ ಆಚಾರ ವಿಚಾರಗಳಿಂದ ಪ್ರಭಾವಿತರಾಗಿ ಕಲ್ಯಾಣಕ್ಕೆ ಬಂದು ಅಲ್ಲಿ ತನ್ನ ಕುಲ ಕಾಯಕವಾದ ಚರ್ಮಗಾರಿಕೆಯನ್ನು ಮುಂದುವರಿಸುತ್ತಾರೆ ಎಂದು ಬಿ.ಸಿ.ಶಂಕರಯ್ಯ ತಿಳಿಸಿದರು.
ಜಿಲ್ಲಾಧಿಕಾರಿ ವೆಂಕಟರಾಜ್ ಮಾತನಾಡಿ, ಸಮಾಜ ಸುಧಾರಣೆಗಾಗಿ ಶ್ರಮಿಸಿದ ಕಾಯಕ ಶರಣರು, ಸಂತ ಸೇವಾಲಾಲ್ ಹಾಗೂ ಸವಿತಾ ಮಹರ್ಷಿಗಳು ಹೀಗೆ ಹಲವು ಮಹನೀಯರ ವಿಚಾರಧಾರೆಗಳನ್ನು ತಿಳಿದುಕೊಂಡು ಅಭಿವೃದ್ಧಿಯತ್ತ ಸಾಗಬೇಕೆಂದು ಸಲಹೆ ಮಾಡಿದರು.
ಕಾಯಕ ಶರಣರು, ಸವಿತಾ ಮಹರ್ಷಿಗಳು ಹಾಗೂ ಸಂತ ಸೇವಾಲಾಲ್ ಅವರು ಕಾಯಕವೇ ಕೈಲಾಸ ಎಂಬುದನ್ನು ಸಾರಿದ್ದಾರೆ. ಬದುಕಿನ ಅವಧಿಯಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದರು.
ಸಂತ ಸೇವಾಲಾಲರು ಕಾಯಕ ಶರಣರು 12ನೇ ಶತಮಾನದಲ್ಲಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಶ್ರಮಿಸಿದ್ದಾರೆ ಎಂದರು.
ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಸ್.ದೊರೇಶ್, ತಾಲ್ಲೂಕು ಅಧ್ಯಕ್ಷ ಮಧು, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾದೇವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜ್ ಜಿಲ್ಲ್ಲಾ ಪಂಚಾಯತ್ ಎಂಜಿನಿಯರ್ ಮುತ್ತುರಾಜ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕಾರ್ಯಕ್ರಮ ಅಧಿಕಾರಿ ಕೃಷ್ಣಪ್ಪ, ವಿಕಲಚೇತನ ಅಧಿಕಾರಿ ನಿರ್ಮಲ, ಸವಿತಾ ಸಮಾಜದ ಪ್ರತಿನಿಧಿಗಳು ಇತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಾರಾದ ಚಿನ್ನಸ್ವಾಮಿ ಸ್ವಾಗತಿಸಿದರು. ಕಲಾವಿದರಾದ ಈ.ರಾಜು ಮತ್ತು ತಂಡದವರು ಪ್ರಾರ್ಥಿಸಿದರು, ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

ಮಡಿಕೇರಿಯಲ್ಲಿ  ಶ್ರೀ ಆದಿ ಶಂಕರಾಚಾರ್ಯರ ಜಯಂತಿ ಆಚರಣೆ :  ಶಂಕರಾಚಾರ್ಯರ ಸಂದೇಶ, ತತ್ವಗಳು ಸಮಾಜಕ್ಕೆ ಮಾರ್ಗದರ್ಶನ : ಅನಂತ ಶಯನ

ಏಪ್ರಿಲ್ 21, 2026

*ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಭೆ*

ಏಪ್ರಿಲ್ 21, 2026

*ಕೊಡಗು : ಏ.23 ರಿಂದ 9 ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನ*

ಏಪ್ರಿಲ್ 21, 2026

*ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಭೆ*

ಏಪ್ರಿಲ್ 21, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಏ.21 NEWS DESK : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಭೆಯು ಶನಿವಾರ ನಗರದ ಪತ್ರಿಕಾಭವನದಲ್ಲಿ…

*ಕೊಡಗು : ಏ.23 ರಿಂದ 9 ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನ*

ಏಪ್ರಿಲ್ 21, 2026

*ಪಿರಿಯಾಪಟ್ಟಣ : ರೂ 419.78 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ*

ಏಪ್ರಿಲ್ 21, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರತಿಷ್ಠಾ ವರ್ಧಂತಿ ಮಹೋತ್ಸವ*

ಏಪ್ರಿಲ್ 21, 2026

*ಕುಶಾಲನಗರ ತಾಲ್ಲೂಕು ಪತ್ರಕತ೯ರ ಸಂಘದಿಂದ ನೇಗಿಲ ಯೋಗಿ ಪ್ರಶಸ್ತಿ ಪ್ರದಾನ : ಕೊಡಗಿನಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ : ಆರ್.ಕೆ.ಬಾಲಚಂದ್ರ*

ಏಪ್ರಿಲ್ 21, 2026

*ಮೇ 6 ರಿಂದ 10ರವರೆಗೆ “ಕೊಡಗು ಕಪ್” ಜಮಾಅತ್ ಮಟ್ಟದ ಕ್ರಿಕೆಟ್ ಪಂದ್ಯಾವಳಿ*

ಏಪ್ರಿಲ್ 21, 2026

*ಎಡಮ್ಯಾರ್ ಮಾಸಿಕ ಸ್ಮರಣಾರ್ಥ ದೇವಟ್ ಪರಂಬುವಿನಲ್ಲಿ ಸಿಎನ್‍ಸಿ ಪುಷ್ಪನಮನ*

ಏಪ್ರಿಲ್ 21, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.22 ರಂದು ನಡೆಯುವ ಪಂದ್ಯಗಳು*

ಏಪ್ರಿಲ್ 21, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.21 ರ ವಿಜೇತ ತಂಡಗಳು*

ಏಪ್ರಿಲ್ 21, 2026

*ಶ್ರೀ ಓಂಕಾರೇಶ್ವರ ದೇವಾಲಯ ಹಾಗೂ ಶ್ರೀ ಆಂಜನೇಯ ದೇವಾಲಯದಲ್ಲಿ ವಾರ್ಷಿಕ ಪ್ರತಿಷ್ಠಾ ದಿನಾಚರಣೆ : ನೂತನವಾಗಿ ನವಗ್ರಹ ಪ್ರತಿಷ್ಠಾಪನೆ*

ಏಪ್ರಿಲ್ 21, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.