Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿ ತಾಲ್ಲೂಕು ಮಟ್ಟದ ಬಾಲಕಾರ್ಮಿಕ ನಿರ್ಮೂಲನೆ ಮತ್ತು ಪುನರ್ವಸತಿ ಸಮಿತಿ ಸಭೆ*
  • *ನಾಪೋಕ್ಲುವಿನಲ್ಲಿ ಜಾಗೃತಿಗಾಗಿ ಪೊಲೀಸರ ಪಥ ಸಂಚಲನ*
  • *ಮಡಿಕೇರಿ : ಗ್ಯಾರಂಟಿ ಯೋಜನೆ ಮತ್ತಷ್ಟು ಪ್ರಗತಿ ಸಾಧಿಸಿ : ಮಂದ್ರೀರ ಮೋಹನ್ ದಾಸ್*
  • ಮಡಿಕೇರಿ : ರಾಜಾಸೀಟು ಉದ್ಯಾನವನಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್  ಭೇಟಿ : ಪರಿಶೀಲನೆ 
  • *ಎಲ್ಲರನ್ನೂ ಎಲ್ಲರ ಮನಸ್ಸನ್ನು ಒಗ್ಗೂಡಿಸುವ ಕೆಲಸ ಮಾಡುವುದು ರಂಗಭೂಮಿ : ಮಂಜಪ್ಪ ಮಾಲ್ದಾರೆ ಅಭಿಮತ*
  • *ಬಿ.ಎನ್.ಚರಿಷ್ಮಾಗೆ 5ನೇ ರ‍್ಯಾಂಕ್*
  • *ಕೂಡಿಗೆ : ವೃತ್ತಿಪರ ಮಾರ್ಗದರ್ಶನ ಪಡೆಯಲು ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಕರೆ*
  • *ರಂಗಭೂಮಿಯು ಸಮಾಜದ ಜೀವಂತ ದರ್ಪಣ : ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅಭಿಪ್ರಾಯ*
  • *ಕತ್ತಲೆಕಾಡುವಿನಲ್ಲಿ ಮನಸೂರೆಗೊಂಡ ಶ್ರೀ ರಾಮನವಮಿ : ರಾಮ, ಸೀತೆಯಾಗಿ ಕಂಗೊಳಿಸಿದ ಪುಟಾಣಿಗಳು*
  • *ಗೋಣಿಕೊಪ್ಪ : ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ರಾಮನವಮಿ ಆಚರಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿಯಲ್ಲಿ ಕನಾ೯ಟಕ ಔಷಧಿ ವ್ಯಾಪಾರಿಗಳ ಸಂಘದ 66ನೇ ವಾಷಿ೯ಕ ಮಹಾಸಭೆ : ಮಾದಕ ವ್ಯಸನಿಗಳಾಗುವುದನ್ನು ತಪ್ಪಿಸುವಲ್ಲಿ ಔಷಧಿ ವ್ಯಾಪಾರಿಗಳ ಪಾತ್ರ ಮಹತ್ವದ್ದು : ಶಿಂಧೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿಯಲ್ಲಿ ಕನಾ೯ಟಕ ಔಷಧಿ ವ್ಯಾಪಾರಿಗಳ ಸಂಘದ 66ನೇ ವಾಷಿ೯ಕ ಮಹಾಸಭೆ : ಮಾದಕ ವ್ಯಸನಿಗಳಾಗುವುದನ್ನು ತಪ್ಪಿಸುವಲ್ಲಿ ಔಷಧಿ ವ್ಯಾಪಾರಿಗಳ ಪಾತ್ರ ಮಹತ್ವದ್ದು : ಶಿಂಧೆ*

ಜುಲೈ 1, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.1 NEWS DESK : ಮಾದಕ ವ್ಯಸನಿಗಳಾಗುವುದನ್ನು ತಪ್ಪಿಸುವಲ್ಲಿ ಔಷಧಿ ವ್ಯಾಪಾರಸ್ಥರ ಪಾತ್ರ ಮಹತ್ವದ್ದಾಗಿದೆ, ಮಕ್ಕಳು, ಯುವಪೀಳಿಗೆ ಭಾರತದ ಜನಸಂಖ್ಯೆಯಲ್ಲಿ ಹೆಚ್ಚಾಗಿದ್ದಾರೆ ಎಂಬುದನ್ನು ಪರಿಗಣಿಸಿ ಈ ಸಮುದಾಯವು ಮಾದಕ ವ್ಯಸನಿಗಳಾಗದಂತೆ ತಡೆಗಟ್ಟುವಲ್ಲಿ ವ್ಯಾಪಾರಸ್ಥರು ಜಾಗ್ರತಿ ಮೂಡಿಸಬೇಕೆಂದು  ಅಖಿಲ ಭಾರತ  ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ್  ಎಸ್.ಶಿಂಧೆ  ಕರೆ ನೀಡಿದ್ದಾರೆ.

ನಗರದ ಗೌಡ ಸಮಾಜದ  ಸಭಾಂಗಣದಲ್ಲಿ ಆಯೋಜಿತ ಕನಾ೯ಟಕ ಔಷಧಿ ವ್ಯಾಪಾರಿಗಳ  ಸಂಘದ 66 ನೇ ವಾಷಿ೯ಕ ಮಹಾಸಭೆ ಮತ್ತು ನಿರಂತರ ಕಲಿಕಾ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಸಮಾಜ ನಿಮಾ೯ಣದಲ್ಲಿ ಔಷಧಿ ವ್ಯಾಪಾರಸ್ಥರ ಹೊಣೆಗಾರಿಕೆ ಹಿಂದೆಂದಿಗಿಂತಲೂ ಇಂದಿನ ದಿನಗಳಲ್ಲಿ ಹೆಚ್ಚಾಗಿದೆ. ಮಕ್ಕಳು, ಯುವಪೀಳಿಗೆಯಲ್ಲಿ ಮಾದಕ ವ್ಯಸನ ಆತಂಕಕಾರಿ ರೀತಿಯಲ್ಲಿ ಹೆಚ್ಚಾಗುತ್ತಿರುವ ಕಾಲಘಟ್ಟದಲ್ಲಿ ಇಂಥ ಅಂಶಗಳುಳ್ಳ ಔಷಧಿಗಳನ್ನು ಯುವಜನಾಂಗಕ್ಕೆ ನೀಡಬಾರದು. ಮುಖ್ಯವಾಗಿ ಮಕ್ಕಳು ಬೇರೆ ಬೇರೆ ರೀತಿಯಲ್ಲಿ ಮಾದಕ ಚಟವನ್ನು ಹೊಂದುತ್ತಿದ್ದು ಇದಕ್ಕಾಗಿ ಔಷಧಿ ವ್ಯಾಪಾರಿಗಳ  ಬಳಿ ಬಂದಾಗ ಅವರನ್ನು ಉತ್ತೇಜಿಸದೇ ದುಷ್ಟಟಗಳಿಂದ ದೂರವಿರುವಂತೆ ತಿಳುವಳಿಕೆ ನೀಡುವ ಕೆಲಸವೂ ಔಷಧಿ ವ್ಯಾಪಾರಿಗಳಿಂದ ಆಗಬೇಕಾಗಿದ ಎಂದು ಕರೆ ನೀಡಿದರು.

ಭಾರತದಾದ್ಯಂತ 50 ಲಕ್ಷ ಔಷಧಿ ವ್ಯಾಪಾರಸ್ಥರಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಎದುರಾಗುವ ಸವಾಲನ್ನು ಎದುರಿಸಲು ಭಾರತೀಯ ಔಷಧಿ ವ್ಯಾಪಾರಿಗಳು ಸಜ್ಜಾಗುವಂತೆ ಹೇಳಿದ ಶಿಂಧೆ, ಬ್ರಿಟಿಷರು ಕೂಡ ಭಾರತಕ್ಕೆ ವ್ಯಾಪಾರದ ಉದ್ದೇಶದಿಂದಲೇ ಬಂದು ನಂತರ ಇಡೀ ಭಾರತವನ್ನೇ ಅತಿಕ್ರಮಿಸಿದ್ದರು, ಅಂತೆಯೇ ಜಿ.20, ಗ್ಯಾಟ್ ಒಪ್ಪಂದದ ಅವಕಾಶ ಬಳಸಿಕೊಂಡು ಮುಂದಿನ ದಿನಗಳಲ್ಲಿ  187 ದೇಶಗಳಿಗೆ ಸೇರಿದ ಅಂತರರಾಷ್ಟ್ರೀಯ ಔಷಧಿ ಉದ್ಯಮಿಗಳು ಭಾರತದಲ್ಲಿ ನೆಲೆಯೂರಲು ಮುಂದಾಗುತ್ತಾರೆ, ಇಂಥ ಸಂದಭ೯ ಭಾರತೀಯತೆ, ಭಾರತದ ಸಂಸ್ಕೃತಿಯ ಸಂರಕ್ಷಣೆ ನಿಟ್ಟಿನಲ್ಲಿ ಭಾರತೀಯ ಔಷಧಿ ವ್ಯಾಪಾರಿಗಳ ಮಹತ್ವವನ್ನು ಸಮಾಜಕ್ಕೆ ತಿಳಿಸುವುದರೊಂದಿಗೆ, ಸಮಾಜದ ಹಿತಕಾಯಲೂ ಔಷಧಿ ವ್ಯಾಪಾರಿಗಳು ಬದ್ದರಾಗಿರಬೇಕೆಂದೂ ಜಗನ್ನಾಥ್ ಶಿಂಧೆ ಸಲಹೆ ನೀಡಿದರು.

ತಾಂತ್ರಿಕವಾಗಿಯೂ ಭಾರತ ಈಗ ನಾಗಲೋಟದಲ್ಲಿದೆ, ಔಷಧೀಯ ಕ್ಷೇತ್ರ ಕೂಡ ಭವಿಷ್ಯದಲ್ಲಿ ನವತಾಂತ್ರೀಕತೆಯ ಸಹಾಯದಿಂದ ಹೊಸ ಆವಿಷ್ಕಾರಗಳಿಗೆ ಒಳಪಟ್ಟಾಗ  ಸಮಾಜದ ಸವ೯ ಜನತೆಗೂ ಆರೋಗ್ಯ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರಯೋಜನವಾಗುತ್ತದೆ ಎಂದು ಶಿಂಧೆ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಔಷಧಿ ವ್ಯಾಪಾರಿಗಳ ಸಂಘದ ಪ್ರಧಾನ ಕಾಯ೯ದಶಿ೯ ರಾಜೀವ್ ಸಿಂಘಾಲ್ ಮಾತನಾಡಿ, ಕೋವಿಡ್ ಲಾಕ್ ಡೌನ್ ಸಂದಭ೯ ದೇಶವ್ಯಾಪಿ ಔಷಧಿ ವ್ಯಾಪಾರಿಗಳು ನೀಡಿದ ಸೇವೆಯನ್ನು ಸಮಾಜದ ಜನತೆ ಸದಾ ಸ್ಮರಿಸಿಕೊಳ್ಳಬೇಕು, ದೇಶದ ಗ್ರಾಮ ಗ್ರಾಮಗಳಲ್ಲಿಯೂ ಜನರ ಆರೋಗ್ಯ ಹಿತರಕ್ಷಣೆ ಉದ್ದೇಶದಿಂದ ಔಷಧಿ ವ್ಯಾಪಾರಿಗಳು ಸಮಯದ ಪರಿವೇ ಇಲ್ಲದೇ ಕಾಯ೯ನಿವ೯ಹಿಸುತ್ತಿದ್ದಾರೆ. ಯಾವುದೇ ರೀತಿಯಲ್ಲಿಯೂ ಔಷಧಿ ವ್ಯಾಪಾರಿಗಳಿಗೆ ಜಾಗತಿಕ ಮಟ್ಟದಲ್ಲಿ ಸ್ಪಧೆ೯ ಎದುರಾದರೂ ಜನರು ಭಾರತೀಯ ಮೂಲದ ಔಷಧಿ ವ್ಯಾಪಾರಿಗಳಿಗೆ ಬೆಂಬಲವಾಗಿ ನಿಲ್ಲಬೇಕೆಂದು ಮನವಿ ಮಾಡಿದರು.

ಕನಾ೯ಟಕ ಔಷಧ ನಿಯಂತ್ರಣಾಧಿಕಾರಿ ಬಿ.ಟಿ.ಖಾನಾಪುರೆ ಮಾತನಾಡಿ, ಸದ್ಯದಲ್ಲಿಯೇ ಔಷಧೀಯ ಕಾಯಿದೆಗಳಿಗೆ ಕೆಲವು ಮಾಪಾ೯ಡು ಬರಲಿದೆ. ಈ ನಿಟ್ಟಿನಲ್ಲಿ ಸಕಾ೯ರದ ಮಟ್ಟದಲ್ಲಿ ಗಂಭೀರ ಚಚೆ೯ ನಡೆದಿದೆ ಎಂದರಲ್ಲದೇ ಔಷಧಿ ಅಂಗಡಿಗಳಲ್ಲಿ ಸಿಸಿ ಕ್ಯಾಮರಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಿದರು.

ರಾಜ್ಯ  ಔಷಧಿ ಉಪ ನಿಯಂತ್ರಣಾಧಿಕಾರಿ ಕೆಂಪಯ್ಯ ಸುರೇಶ್ ಮಾತನಾಡಿ, ಜೀವರಕ್ಷಕವಾದ ಕೆಲವೊಂದು  ಔಷಧಿಗಳಿಗೆ ರಿಯಾಯಿತಿ ನೀಡುವ ಫಲಕಗಳ ಪ್ರಚಾರ ಸರಿಯಲ್ಲ, ರಿಯಾಯಿತಿ ಫಲಕ ಅಳವಡಿಕೆಯೂ ಯಾವುದೇ ಔಷಧಿ ಅಂಗಡಿಗಳಲ್ಲಿಯೂ ಸಲ್ಲದು ಎಂದರಲ್ಲದೇ ಮಕ್ಕಳು, ಯುವಪೀಳಿಗೆ ಮಾದಕ ದ್ರವ್ಯಗಳಿಗಾಗಿ ಬೇರೆ ಬೇರೆ ರೀತಿಯಲ್ಲಿ ಔಷಧಿ ವ್ಯಾಪಾರಿಗಳನ್ನು ಸಂಪಕಿ೯ಸುತ್ತಿರುವ ಪ್ರಕರಣ ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ವ್ಯಾಪಾರಿಗಳು ಎಚ್ಚರಿಕೆ ವಹಿಸಿ ಸಮಾಜದ ಹಿತಚಿಂತನೆಗೇ ಆದ್ಯತೆ ನೀಡುವಂತೆ ಕೋರಿದರು.

ಕನಾ೯ಟಕ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ  ಆರ್.ರಘುನಾಥ ರೆಡ್ಡಿ ಮಾತನಾಡಿ, ಕನಾ೯ಟದಲ್ಲಿ ಔಷಧಿ ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಸಂಘವು ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ, ಹೊಸ ನೀತಿ ನಿಯಮಗಳ ಬಗ್ಗೆ ತಿಳುವಳಿಕೆ ನೀಡುತ್ತಿದೆ. ನಿರಂತರ  ಕಲಿಕಾ   ಕಾಯ೯ಕ್ರಮವನ್ನು ಔಷಧಿ ವ್ಯಾಪಾರಿಗಳ ಸಂಘ ಮತ್ತಷ್ಟು ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಅನುಷ್ಠಾನಗೊಳಿಸಲಿದೆ ಎಂದರು.

ಭಾರತೀಯ ಔಷಧಿ ವ್ಯಾಪಾರಸ್ಥರ ಸಂಘದ  ಸಂಘಟನಾ ಕಾಯ೯ದಶಿ೯, ಕನಾ೯ಟಕ ಔಷಧಿ ವ್ಯಾಪಾರಸ್ಥರ ಸಂಘದ  ಗೌರವ ಕಾಯ೯ದಶಿ೯  ಮತ್ತು ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ ಮಾತನಾಡಿ,  ಮಡಿಕೇರಿಯಲ್ಲಿ ಎರಡನೇ ಬಾರಿಗೆ ರಾಜ್ಯ ಸಂಘದ ಮಹಾಸಭೆ ಆಯೋಜಿಸಿರುವುದು ಹೆಮ್ಮೆ ತಂದಿದೆ, ಕೆಲವು ವಷ೯ಗಳಿಗೆ ಹೋಲಿಸಿದರೆ ರಾಜ್ಯದ ಔಷಧಿ ವ್ಯಾಪಾರಿಗಳು ಒಗ್ಗಟ್ಟಾಗಿದ್ದಾರೆ, ಎಲ್ಲರೂ ಸಮಾಜದ ಅಭ್ಯುದಯದ ನಿಟ್ಟಿನಲ್ಲಿ ಉದ್ಯಮ ಕೇಂದ್ರೀಕರಿಸುವಂತೆ ಮನವಿ ಮಾಡಿದರು.

ವೇದಿಕೆಯಲ್ಲಿ ಸಂಘಟನೆಯ ಪ್ರಮುಖರಾದ ಎ.ಎನ್.ಮೋಹನ್,  ಅರುಣ್, ಬಿ.ಉಮೇಶ್, ಬಿ.ಕೆ.ಪ್ರಸನ್ನ ಕುಮಾರ್,  ಶಿವರಾಜ್ ಪಾಟೀಲ್, ಸತ್ಯನಾರಾಯಣ್ ಕಲ್ಗಾರ್,  ವಿ.ಎಸ್.ಬುರ್ಲಿ ಉಪಸ್ಥಿತರಿದ್ದರು. ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಪ್ರಮುಖರಾದ  ಕೆ.ವಸಂತ್ ಕುಮಾರ್, ಎ.ಕೆ.ವಿನೋದ್, ಪ್ರಸಾದ್ ಗೌಡ, ಕಿರಣ್ ಕುಂದರ್, ತಿಲಕ್ ಚಂದ್ರಶೇಖರ್, ವಿವೇಕ್, ಧನಂಜಯ ಶಾಸ್ತ್ರೀ, ಶ್ರೀನಿವಾಸ್, ಪ್ರಕಾಶ್, ಮವಿ೯ನ್ ಫನಾ೯ಂಡೀಸ್  ಕಾಯ೯ಕ್ರಮ  ನಿವ೯ಹಿಸಿದರು.  ಚಂದ್ರಶೇಖರ್ ನಿರೂಪಿಸಿ, ಉನ್ನತಿ ಸುರೇಶ್ ಪ್ರಾಥಿ೯ಸಿದರು. ರಾಜ್ಯದ 32 ಜಿಲ್ಲೆಗಳಿಂದ 620 ಪ್ರತಿನಿಧಿಗಳು ಎರಡು ದಿನಗಳು ನಡೆದ ವಾಷಿ೯ಕ ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿ ತಾಲ್ಲೂಕು ಮಟ್ಟದ ಬಾಲಕಾರ್ಮಿಕ ನಿರ್ಮೂಲನೆ ಮತ್ತು ಪುನರ್ವಸತಿ ಸಮಿತಿ ಸಭೆ*

ಮಾರ್ಚ್ 27, 2026

*ನಾಪೋಕ್ಲುವಿನಲ್ಲಿ ಜಾಗೃತಿಗಾಗಿ ಪೊಲೀಸರ ಪಥ ಸಂಚಲನ*

ಮಾರ್ಚ್ 27, 2026

*ಮಡಿಕೇರಿ : ಗ್ಯಾರಂಟಿ ಯೋಜನೆ ಮತ್ತಷ್ಟು ಪ್ರಗತಿ ಸಾಧಿಸಿ : ಮಂದ್ರೀರ ಮೋಹನ್ ದಾಸ್*

ಮಾರ್ಚ್ 27, 2026

*ನಾಪೋಕ್ಲುವಿನಲ್ಲಿ ಜಾಗೃತಿಗಾಗಿ ಪೊಲೀಸರ ಪಥ ಸಂಚಲನ*

ಮಾರ್ಚ್ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ ಮಾ.27 NEWS DESK : ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ನಾಗರಿಕರಲ್ಲಿ ಭಯಮುಕ್ತ ವಾತಾವರಣ ಮೂಡಿಸುವ ಸಲುವಾಗಿ  ನಾಪೋಕ್ಲು…

*ಮಡಿಕೇರಿ : ಗ್ಯಾರಂಟಿ ಯೋಜನೆ ಮತ್ತಷ್ಟು ಪ್ರಗತಿ ಸಾಧಿಸಿ : ಮಂದ್ರೀರ ಮೋಹನ್ ದಾಸ್*

ಮಾರ್ಚ್ 27, 2026

ಮಡಿಕೇರಿ : ರಾಜಾಸೀಟು ಉದ್ಯಾನವನಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್  ಭೇಟಿ : ಪರಿಶೀಲನೆ 

ಮಾರ್ಚ್ 27, 2026

*ಎಲ್ಲರನ್ನೂ ಎಲ್ಲರ ಮನಸ್ಸನ್ನು ಒಗ್ಗೂಡಿಸುವ ಕೆಲಸ ಮಾಡುವುದು ರಂಗಭೂಮಿ : ಮಂಜಪ್ಪ ಮಾಲ್ದಾರೆ ಅಭಿಮತ*

ಮಾರ್ಚ್ 27, 2026

*ಬಿ.ಎನ್.ಚರಿಷ್ಮಾಗೆ 5ನೇ ರ‍್ಯಾಂಕ್*

ಮಾರ್ಚ್ 27, 2026

*ಕೂಡಿಗೆ : ವೃತ್ತಿಪರ ಮಾರ್ಗದರ್ಶನ ಪಡೆಯಲು ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಕರೆ*

ಮಾರ್ಚ್ 27, 2026

*ರಂಗಭೂಮಿಯು ಸಮಾಜದ ಜೀವಂತ ದರ್ಪಣ : ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅಭಿಪ್ರಾಯ*

ಮಾರ್ಚ್ 27, 2026

*ಕತ್ತಲೆಕಾಡುವಿನಲ್ಲಿ ಮನಸೂರೆಗೊಂಡ ಶ್ರೀ ರಾಮನವಮಿ : ರಾಮ, ಸೀತೆಯಾಗಿ ಕಂಗೊಳಿಸಿದ ಪುಟಾಣಿಗಳು*

ಮಾರ್ಚ್ 27, 2026

*ಗೋಣಿಕೊಪ್ಪ : ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ರಾಮನವಮಿ ಆಚರಣೆ*

ಮಾರ್ಚ್ 27, 2026

*ಕಣಿವೆ ಶ್ರೀ ರಾಮಲಿಂಗೇಶ್ವರನ ವೈಭವದ ಬ್ರಹ್ಮ ರಥೋತ್ಸವ*

ಮಾರ್ಚ್ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.