Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಬೊಳ್ಳುಮಾಡು – ಕಾಕೋಟುಪರಂಬು : ನೂತನ ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ*
  • *ಎಸ್‍ಐಆರ್ : ಡಿಜಟಲೀಕರಣ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
  • *ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ತರಬೇತಿ ಕಾರ್ಯಾಗಾರ : ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಗಮನಹರಿಸಿ : ಪ್ರಸನ್ನ ಕುಮಾರ್*
  • *ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ ಔಷಧಿ ದಾಸ್ತಾನು ಮಾಡಿ : ಜಿಲ್ಲಾಧಿಕಾರಿ*
  • *ಯುವ ಜನರ ಸಬಲೀಕರಣಕ್ಕೆ `ಮೈ ಭಾರತ್’ ವೇದಿಕೆ ಬಳಸಿಕೊಳ್ಳಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕರೆ*
  • *ಸೋಮವಾರಪೇಟೆ : ವಾಕರ್ಸ್ ವಿಂಗ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹರ್ಷ ಆಯ್ಕೆ*
  • ಜು.26 ರಂದು ಮಡಿಕೇರಿಯಲ್ಲಿ ಕಾಗಿ೯ಲ್ ವಿಜಯ್ ದಿವಸ್ : 125 ಸಂಘಟನೆಗಳಿಂದ ಯೋಧರಿಗೆ ಗೌರವ ನಮನ
  • *ಬಾಲಕರ ಟೇಬಲ್ ಟೆನ್ನಿಸ್ ಪಂದ್ಯಾವಳಿ – ಕೊಡಗು ವಿದ್ಯಾಲಯ ತಂಡಕ್ಕೆ ಕಂಚಿನ ಪದಕ*
  • *ಬಿಡದಿ ಹೋರಾಟಕ್ಕೆ ತೆರಳುತ್ತಿದ್ದ ರೈತ ಸಂಘದ ಪ್ರಮುಖರನ್ನು ವಶಕ್ಕೆ ಪಡೆದ ಪೊಲೀಸರು : ಮುಖಂಡರ ಅಸಮಾಧಾನ*
  • *”ನೀಟ್” ಕೇಂದ್ರದ ಧೋರಣೆ ಖಂಡಿಸಿ ವಿರಾಜಪೇಟೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ : ಕೇಂದ್ರದಿಂದ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟ : ಶಾಸಕ ಎ.ಎಸ್.ಪೊನ್ನಣ್ಣ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿಯಲ್ಲಿ ಪತ್ರಿಕಾ ದಿನಾಚರಣೆ : ಮಾಧ್ಯಮಗಳು ಜನಹಿತ ವಿಚಾರಗಳಿಗೆ ಆದ್ಯತೆ ನೀಡಬೇಕು : ಸಾಹಿತಿ ಡಾ. ನರೇಂದ್ರ ರೈ ದೇರ್ಲ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿಯಲ್ಲಿ ಪತ್ರಿಕಾ ದಿನಾಚರಣೆ : ಮಾಧ್ಯಮಗಳು ಜನಹಿತ ವಿಚಾರಗಳಿಗೆ ಆದ್ಯತೆ ನೀಡಬೇಕು : ಸಾಹಿತಿ ಡಾ. ನರೇಂದ್ರ ರೈ ದೇರ್ಲ*

ಜುಲೈ 1, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.1 NEWS DESK : ಪ್ರಸ್ತುತ ದಿನಮಾನಗಳಲ್ಲಿ ಸಮಾಜಕ್ಕೆ ಹಿತವಿಲ್ಲದ ವಿಚಾರಗಳ ಸುತ್ತಲೆ ಮಾಧ್ಯಮಗಳು ಸುತ್ತುತ್ತಿದ್ದು, ಇವುಗಳನ್ನು ಮೀರಿ ಜನ ಹಿತದ ವಿಚಾರಗಳು ಆದ್ಯತೆಯಾಗಿರಲೆಂದು ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಾಹಿತಿಗಳಾದ ಡಾ. ನರೇಂದ್ರ ರೈ ದೇರ್ಲ ಅಭಿಪ್ರಾಯಿಸಿದರು.
ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿತ ‘ಪತ್ರಿಕಾ ದಿನಾಚರಣೆ’ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ಕೆಲ ಸಮಯಗಳಿಂದ ದೃಶ್ಯ ವಾಹಿನಿಗಳು ಒಂದು ಸಾವಿಗೆ ಸಂಬಂಧಿಸಿದ ಸಣ್ಣ ಸಣ್ಣ ವಿಚಾರಗಳಿಗೆ ಗಂಟೆಗಟ್ಟಲೆ ಸಮಯವನ್ನು ವಿನಿಯೋಗಿಸುತ್ತಿವೆ. ಇವುಗಳನ್ನು ಮೀರಿ ನಮ್ಮ ಸುತ್ತಮುತ್ತಲ ಜನ ಸಾಮಾನ್ಯರ ದುಃಖ ದುಮ್ಮಾನಗಳಿಗೆ ಸ್ಪಂದಿಸುವ, ನಮ್ಮಲ್ಲಿನ ಕೃಷಿ ಚಟುವಟಿಕೆ, ಹಸಿವಿನ ವಿಚಾರಗಳಿಗೆ ನಾವೇಕೆ ಆದ್ಯತೆಯನ್ನು ನೀಡುತ್ತಿಲ್ಲವೆಂದು ಅವರು ಪ್ರಶ್ನಿಸಿದರು.
ಪತ್ರಿಕಾ ಕ್ಷೇತ ‘ದೀಪ’ದ ಕೆಲಸ ಮಾಡಲಿ- ಸಮಾಜ ಸರಿಯಾದ ಪಥದಲ್ಲಿ ಸಾಗುವುದಕ್ಕೆ ಪೂರಕವಾಗಿ ಪತ್ರಿಕಾ ಕ್ಷೇತ್ರವು ದಾರಿ ತೋರುವ ‘ದೀಪ’ದ ಕೆಲಸವನ್ನು, ಧ್ವನಿಯಿಲ್ಲದ ಮಂದಿಯ ಧ್ವನಿಯಾಗುವ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಮುಂದುವರೆಯಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದರು.
ಪತ್ರಿಕಾ ದಿನಾಚರಣೆಯ ಸಂದರ್ಭ ನಮ್ಮ ಆತ್ಮಾವಲೋಕನಕ್ಕೆ ಬದಲಾಗಿ ನಮ್ಮ ಆತ್ಮವಿಮಷೆರ್ ಮಾಡಿಕೊಳ್ಳಬೇಕಾದ ಸಮಯವಾಗಿದೆ. ಅತ್ಯಂತ ಅತಿರೇಕದ ಸಂದಿಗ್ಧ ಸಂದರ್ಭದಲ್ಲಿ ನಾವಿದ್ದೇವೆಂದು ಎಚ್ಚರಿಕೆಯ ನುಡಿಗಳನ್ನಾಡಿದ ಅವರು, ಇವುಗಳ ನಡುವೆಯೂ ಕೊಡಗಿನ ಪತ್ರಿಕೋದ್ಯಮ ಇಂದಿಗೂ ಪ್ರಾಮಾಣಿಕವಾಗಿ, ಜನಪರವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಡಾ. ನರೇಂದ್ರ ರೈ ದೇರ್ಲ ಮೆಚ್ಚುಗೆಯ ನುಡಿಗಳನ್ನಾಡಿದರು.
ಕೊರೋನಾ ಮಹಾಮಾರಿಯ ಅವಧಿ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದ್ದು, ಇಂದು ತರಗತಿಯಲ್ಲಿ ಮಕ್ಕಳು ಪಾಠ ಪ್ರವಚನಗಳನ್ನು ನಿಷ್ಠೆಯಿಂದ ಕೇಳುತ್ತಿಲ್ಲ. ಟಿವಿ ಮತ್ತು ಮೊಬೈಲ್‍ಗಳ ಪ್ರಭಾವಳಿಯಿಂದ ಮಕ್ಕಳನ್ನು ಹೊರ ತರುವ ಮೂಲಕ ಅವರನ್ನು ಮನುಷ್ಯರನ್ನಾಗಿ ಪರಿವರ್ತಿಸುವ ಅಗತ್ಯವಿದೆಯೆಂದು ಮಾರ್ಮಿಕವಾಗಿ ನುಡಿದರು.
ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವ ಕಾಮತ್ ಮಾತನಾಡಿ, ತಂತ್ರಜ್ಞಾನದ ಬೆಳವಣಿಗೆ ಪತ್ರಿಕಾ ಕ್ಷೇತ್ರದ ಮೇಲೆ ಗಾಢ ಪರಿಣಾಮವನ್ನು ಬೀರುತ್ತಿದೆ. ಪ್ರಸ್ತುತ ಆನ್ ಲೈನ್‍ಗಳಲ್ಲು ಸುದ್ದಿಗಳು ಜನರಿಗೆ ತಲುಪಬಲ್ಲುದಾದರು, ಪತ್ರಿಕೆಯ ಓದಿನ ಸಂತೋಷ ಮತ್ತು ಅನುಭವ ಬೇರೆಯೆ ತೆರನಾದದ್ದು ಎಂದು ತಿಳಿಸಿ, ಯಾವುದೇ ಸುದ್ದಿಗಳನ್ನು ಮಾಡುವ ಸಂದರ್ಭ ಪತ್ರಕರ್ತರು ‘ಫೈ ಡಬ್ಲ್ಯು ಒನ್ ಹೆಚ್’ ಅಂದರೆ ಯಾರು, ಯಾವಾಗ, ಏನು, ಏತಕ್ಕಾಗಿ, ಎಲ್ಲಿ ಮತ್ತು ಹೇಗೆ ಎನ್ನುವ ವಿಚಾರಗಳತ್ತ ಗಮನವನ್ನು ಕೇಂದ್ರೀಕರಿಸುವುದು ಅವಶ್ಯ ಈ ಅಂಶಗಳು ಸೇರಿದಾಗ ಮಾತ್ರ ಒಂದು ಸುದ್ದಿ ರಚನೆಯಾಗುತ್ತದೆಂದು ತಿಳಿಸಿದರು.
ಅತಿಥಿ ಸ್ಥಾನದಿಂದ ಮಾತನಾಡಿದ ಗಡಿನಾಡ ಸಂಚಾರಿ ಪತ್ರಿಕೆಯ ಸಂಪಾಕರಾದ ಟಿ.ಪಿ.ರಮೇಶ್ ಅವರು, ಪ್ರಜೆಗಳ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸುವುದು ಪತ್ರಿಕೆಗಳ ಧರ್ಮವಾಗಿದೆ. ಸಮಾಜ ಸರಿದಾರಿಯಲ್ಲಿ ಮುನ್ನಡೆಸಲು ಪತ್ರಿಕೆಗಳು ನೆರವಾಗಬೇಕೆಂದು ಅವರು ಅಭಿಪ್ರಾಯಿಸಿದರು.
ಪ್ರಸ್ತುತ ಬಂಡವಾಳಶಾಹಿಗಳು ಪತ್ರ್ರಿಕೆಗಳನ್ನು ನಡೆಸುವ ಹಂತವನ್ನು ಕಾಣುತ್ತಿದ್ದು, ಇದು ಅಪಾಯಕಾರಿಯಾದ ಬೆಳವಣಿಗೆಯಾಗಿದೆಯಲ್ಲದೆ ಪತ್ರಿಕಾ ಸ್ವಾತಂತ್ರ್ಯಕ್ಕೂ ಧಕ್ಕೆಯನ್ನುಂಟುಮಾಡುವ ಸಾಧ್ಯತೆ ಇರುವುದಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್.ಎ.ಮುರಳೀಧರ್ ಮಾತನಾಡಿ, ಸಂಘದ ವತಿತಯಿಂದ ಈ ಬಾರಿ ಮೂರನೇ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರ ಸಹಕಾರವನ್ನು ಸ್ಮರಿಸಿದರು.
ಹಿರಿಯ ಪತ್ರಕರ್ತರಿಗೆ ಸನ್ಮಾನ- ಸಮಾರಂಭದಲ್ಲಿ ಶಕ್ತಿ ಪತ್ರಿಕೆಯ ಸಂಪಾದಕರಾದ ಜಿ. ಚಿದ್ವಿಲಾಸ್, ಗಡಿನಾಡ ಸಂಚಾರಿ ಪತ್ರಿಕೆಯ ಸಂಪಾದಕ ಟಿ.ಪಿ. ರಮೇಶ್, ಸಂಯುಕ್ತ ಕರ್ನಾಟಕ ಪತ್ರಿಕೆಯ ಸುಂಟಿಕೊಪ್ಪ ವರದಿಗಾರರಾದ ಕೆ.ಹೆಚ್.ಶಿವಣ್ಣ, ಸುದ್ದಿ ಸಂಸ್ಥೆಯ ಸಂಪಾದಕರಾದ ಟಿ.ಎಲ್.ಶ್ರೀನಿವಾಸ್ ಮತ್ತು ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರರಾದ ತೇಲಪಂಡ ಕವನ್ ಕಾರ್ಯಪ್ಪ ಅವರನ್ನು ಅತಿಥಿ ಗಣ್ಯರು ಸನ್ಮಾನಿಸಿ ಗೌರವಿಸಿದರು.
ಸನ್ಮಾನಿತರ ಪರವಾಗಿ ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್, ಮಾತನಾಡಿ, ನಮ್ಮೊಳಗಿನ ಯಾವುದೇ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ ಪತ್ರಕರ್ತರು ಮುನ್ನಡೆಯುವ ಅಗತ್ಯತೆ ಇದೆ. ಒಟ್ಟಾಗಿದ್ದಾಗ ಮಾತ್ರ ಸಂತೋಷ ಮತ್ತು ಒಗ್ಗಟ್ಟು ಇರುತ್ತದೆಂದ ಅವರು, ಒಗ್ಗಟ್ಟಿದ್ದಾಗ ನಮ್ಮಲ್ಲಿನ ಯಾವುದೇ ದೌರ್ಬಲ್ಯಗಳ ಲಾಭವನ್ನು ಇತರರು ಪಡೆಯಲು ಸಾಧ್ಯವೆಲ್ಲವೆಂದು ತಿಳಿಸಿದರು.
ಸಂಘದ ಸದಸ್ಯ ರಜತ್ ರಾಜ್ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ, ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಸ್ವಾಗತಿಸಿದರು. ಸಂಘದ ಸಲಹೆಗಾರರಾದ ಅನಿಲ್ ಎಚ್.ಟಿ. ಕಾರ್ಯಕ್ರಮವನ್ನು ನಿರೂಪಿಸಿದರೆ, ಸನ್ಮಾನಿತರ ಪರಿಚಯವನ್ನು ಸಂಘದ ಸದಸ್ಯ ರಂಜಿತ್ ಕವಲಪಾರ, ಶಿವಪ್ಪ, ಉಪಾಧ್ಯಕ್ಷ ಜಿ.ವಿ.ರವಿ ಕುಮಾರ್, ಸಂಘಟನಾ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಕುಶಾಲನಗರ ಘಟಕದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಮಾಡಿಕೊಟ್ಟರು. ಮುಖ್ಯ ಭಾಷಣಕಾರರ ಪರಿಚಯವನ್ನು ಪಿ.ಎಂ.ರವಿ ಮಾಡಿದರು. ವಿರಾಜಪೇಟೆ ಘಟಕದ ಅಧ್ಯಕ್ಷ ಮಧೋಷ್ ಪೂವಯ್ಯ ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಬೊಳ್ಳುಮಾಡು – ಕಾಕೋಟುಪರಂಬು : ನೂತನ ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ*

ಜುಲೈ 24, 2026

*ಎಸ್‍ಐಆರ್ : ಡಿಜಟಲೀಕರಣ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಜುಲೈ 24, 2026

*ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ತರಬೇತಿ ಕಾರ್ಯಾಗಾರ : ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಗಮನಹರಿಸಿ : ಪ್ರಸನ್ನ ಕುಮಾರ್*

ಜುಲೈ 24, 2026

*ಎಸ್‍ಐಆರ್ : ಡಿಜಟಲೀಕರಣ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಜುಲೈ 24, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಜು.24 NEWS DESK : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಗಣತಿ ನಮೂನೆಯ ಡಿಜಿಟಲೀಕರಣವು ಶೇ.80…

*ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ತರಬೇತಿ ಕಾರ್ಯಾಗಾರ : ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಗಮನಹರಿಸಿ : ಪ್ರಸನ್ನ ಕುಮಾರ್*

ಜುಲೈ 24, 2026

*ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ ಔಷಧಿ ದಾಸ್ತಾನು ಮಾಡಿ : ಜಿಲ್ಲಾಧಿಕಾರಿ*

ಜುಲೈ 24, 2026

*ಯುವ ಜನರ ಸಬಲೀಕರಣಕ್ಕೆ `ಮೈ ಭಾರತ್’ ವೇದಿಕೆ ಬಳಸಿಕೊಳ್ಳಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕರೆ*

ಜುಲೈ 24, 2026

*ಸೋಮವಾರಪೇಟೆ : ವಾಕರ್ಸ್ ವಿಂಗ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹರ್ಷ ಆಯ್ಕೆ*

ಜುಲೈ 24, 2026

ಜು.26 ರಂದು ಮಡಿಕೇರಿಯಲ್ಲಿ ಕಾಗಿ೯ಲ್ ವಿಜಯ್ ದಿವಸ್ : 125 ಸಂಘಟನೆಗಳಿಂದ ಯೋಧರಿಗೆ ಗೌರವ ನಮನ

ಜುಲೈ 24, 2026

*ಬಾಲಕರ ಟೇಬಲ್ ಟೆನ್ನಿಸ್ ಪಂದ್ಯಾವಳಿ – ಕೊಡಗು ವಿದ್ಯಾಲಯ ತಂಡಕ್ಕೆ ಕಂಚಿನ ಪದಕ*

ಜುಲೈ 24, 2026

*ಬಿಡದಿ ಹೋರಾಟಕ್ಕೆ ತೆರಳುತ್ತಿದ್ದ ರೈತ ಸಂಘದ ಪ್ರಮುಖರನ್ನು ವಶಕ್ಕೆ ಪಡೆದ ಪೊಲೀಸರು : ಮುಖಂಡರ ಅಸಮಾಧಾನ*

ಜುಲೈ 24, 2026

*”ನೀಟ್” ಕೇಂದ್ರದ ಧೋರಣೆ ಖಂಡಿಸಿ ವಿರಾಜಪೇಟೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ : ಕೇಂದ್ರದಿಂದ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟ : ಶಾಸಕ ಎ.ಎಸ್.ಪೊನ್ನಣ್ಣ*

ಜುಲೈ 24, 2026

*ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ : ಪ್ರಮುಖರ ಬಂಧನ, ಬಿಡುಗಡೆ*

ಜುಲೈ 24, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.