
ಮಡಿಕೇರಿ ಜು 3 NEWS DESK : ಕರ್ನಾಟಕ ಔಷಧಿ ವ್ಯಾಪಾರಿಗಳ ಸಂಘದ 2024 -27 ನೇ ಸಾಲಿಗೆ ಅಧ್ಯಕ್ಷರಾಗಿ ಬೆಂಗಳೂರಿನ ರಘುನಾಥ ರೆಡ್ಡಿ ಮತ್ತು ಗೌರವ ಕಾಯ೯ದಶಿ೯ಯಾಗಿ ಮಡಿಕೇರಿಯ ಅಂಬೆಕಲ್ ಜೀವನ್ ಕುಶಾಲಪ್ಪ ಪುನರಾಯ್ಕೆಯಾಗಿದ್ದಾರೆ. ಮಡಿಕೇರಿಯಲ್ಲಿ ನಡೆದ ಕನಾ೯ಟಕ ಔಷಧಿ ವ್ಯಾಪಾರಿಗಳ ಸಂಘದ 66 ನೇ ವಾಷಿ೯ಕ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಗೆ ಆಯ್ಕೆ ಪ್ರಕ್ರಿಯೆ ನಡೆದ ಸಂದಭ೯ ರಘುನಾಥ ರೆಡ್ಡಿ ಮತ್ತು ಜೀವನ್ ಅವಿರೋಧವಾಗಿ ಪುನರಾಯ್ಕೆಯಾದರು, ನೂತನ ಆಡಳಿತ ಮಂಡಳಿಯ ಖಜಾಂಚಿಯಾಗಿ ಬಿ. ಉಮೇಶ್, ಉಪಾಧ್ಯಕ್ಷರಾಗಿ ಬಿ. ಕೆ. ಪ್ರಸನ್ನ ಕುಮಾರ್, ಶಿವರಾಜ್ ಪಾಟೀಲ್, ಜಂಟಿ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಕೇಲ್ಗರ್ , ಸಂಘಟನಾ ಕಾರ್ಯದರ್ಶಿಯಾಗಿ ವಿಜಯ್ ಕುಮಾರ್ ಎಸ್. ಬುರಲಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.










