
ಸೋಮವಾರಪೇಟೆ ಜು.4 NEWS DESK : ಜೆಸಿಐ ವಲಯ 14 ರ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಘಟಕ ಹಲವು ಪ್ರಶಸ್ತಿಗಳನ್ನು ಗಳಿಸಿದೆ.
ಇತ್ತೀಚೆಗೆ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. ಔಟ್ ಸ್ಟ್ಯಾಂಡಿಗ್ ಪ್ರೋಗ್ರಾಮ್ ವಿನ್ನರ್ ಅವಾರ್ಡ್ ಮತ್ತು ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ಪುರಸ್ಕಾರವನ್ನು ಜೆಸಿಐ ಸೋಮವಾರಪೇಟೆ ಘಟಕದ ಅಧ್ಯಕ್ಷ ಎಸ್.ಆರ್.ವಸಂತ್ ಪಡೆದುಕೊಂಡಿದ್ದಾರೆ.
ವಲಯ 14 ರ ಅಧ್ಯಕ್ಷೆ ಆಶಾ ಜೈನ್, ಉಪಾಧ್ಯಕ್ಷ ರಾಕೇಶ್, ಕಾರ್ಯದರ್ಶಿ ಮಾಯಾ ಗಿರೀಶ್, ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಘಟಕದ ಜೆಎಸಿ ಉಪಾಧ್ಯಕ್ಷರಾದ ಮಮತಾ, ರಾಷ್ಟ್ರೀಯ ಅಧಿಕಾರಿ ನೆಲ್ಸನ್ ಡಿಸೋಜ, ಸೋಮವಾರಪೇಟೆ ಘಟಕದ ಕಾರ್ಯದರ್ಶಿ ಜಗದಾಂಭ ಗುರುಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷೆ ವಿನುತ ಸುದೀಪ್, ಸದಸ್ಯರಾದ ಪುಷ್ಪಕ್, ನಿಕಟಪೂರ್ವ ವಲಯ ಅಧಿಕಾರಿ ಗಿರೀಶ್, ಪ್ರಮುಖರಾದ ಗುರುಪ್ರಸಾದ್, ಜೂನಿಯರ್ ಜೇಸಿ ವಲಯ ಅಧ್ಯಕ್ಷ ದಿಶಾಗಿರೀಶ್ ಇದ್ದರು.








