Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿ ತಾಲ್ಲೂಕು ಮಟ್ಟದ ಬಾಲಕಾರ್ಮಿಕ ನಿರ್ಮೂಲನೆ ಮತ್ತು ಪುನರ್ವಸತಿ ಸಮಿತಿ ಸಭೆ*
  • *ನಾಪೋಕ್ಲುವಿನಲ್ಲಿ ಜಾಗೃತಿಗಾಗಿ ಪೊಲೀಸರ ಪಥ ಸಂಚಲನ*
  • *ಮಡಿಕೇರಿ : ಗ್ಯಾರಂಟಿ ಯೋಜನೆ ಮತ್ತಷ್ಟು ಪ್ರಗತಿ ಸಾಧಿಸಿ : ಮಂದ್ರೀರ ಮೋಹನ್ ದಾಸ್*
  • ಮಡಿಕೇರಿ : ರಾಜಾಸೀಟು ಉದ್ಯಾನವನಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್  ಭೇಟಿ : ಪರಿಶೀಲನೆ 
  • *ಎಲ್ಲರನ್ನೂ ಎಲ್ಲರ ಮನಸ್ಸನ್ನು ಒಗ್ಗೂಡಿಸುವ ಕೆಲಸ ಮಾಡುವುದು ರಂಗಭೂಮಿ : ಮಂಜಪ್ಪ ಮಾಲ್ದಾರೆ ಅಭಿಮತ*
  • *ಬಿ.ಎನ್.ಚರಿಷ್ಮಾಗೆ 5ನೇ ರ‍್ಯಾಂಕ್*
  • *ಕೂಡಿಗೆ : ವೃತ್ತಿಪರ ಮಾರ್ಗದರ್ಶನ ಪಡೆಯಲು ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಕರೆ*
  • *ರಂಗಭೂಮಿಯು ಸಮಾಜದ ಜೀವಂತ ದರ್ಪಣ : ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅಭಿಪ್ರಾಯ*
  • *ಕತ್ತಲೆಕಾಡುವಿನಲ್ಲಿ ಮನಸೂರೆಗೊಂಡ ಶ್ರೀ ರಾಮನವಮಿ : ರಾಮ, ಸೀತೆಯಾಗಿ ಕಂಗೊಳಿಸಿದ ಪುಟಾಣಿಗಳು*
  • *ಗೋಣಿಕೊಪ್ಪ : ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ರಾಮನವಮಿ ಆಚರಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸಾಫ್ಟ್ ಮನಿ ಚಲಾವಣೆ : ಆಂಧ್ರ ಪ್ರದೇಶದ ಮುಖ್ಯಮಂತ್ರಿಗೆ ಪತ್ರ ಬರೆದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸಾಫ್ಟ್ ಮನಿ ಚಲಾವಣೆ : ಆಂಧ್ರ ಪ್ರದೇಶದ ಮುಖ್ಯಮಂತ್ರಿಗೆ ಪತ್ರ ಬರೆದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ*

ಜುಲೈ 4, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.4 NEWS DESK : ತಿರುಮಲ ತಿರುಪತಿ ದೇವಸ್ಥಾನಂ ಬೋರ್ಡ್ ಮತ್ತು ಆಂಧ್ರದ “ಸಾಫ್ಟ್ ಮನಿ” ಫಲಾನುಭವಿಗಳು ಸರ್ಕಾರ ನೀಡುತ್ತಿರುವ ಬಡ್ಡಿ ರಹಿತ ಸಾಲದ ಮೊತ್ತವನ್ನು ಕೊಡವ ಲ್ಯಾಂಡ್ ನ ಕೃಷಿ ಭೂಮಿ ಖರೀದಿಗಾಗಿ ಬಳಕೆ ಮಾಡುತ್ತಿದ್ದು, ಕೊಡವರ ಹಿತದೃಷ್ಟಿಯಿಂದ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.
“ಸಾಫ್ಟ್ ಮನಿ” ಫಲಾನುಭವಿಗಳು ವಾಣಿಜ್ಯ ದುಸ್ಸಾಹಸಕ್ಕಾಗಿ ಕೊಡಗಿನ ಕೃಷಿ ಭೂಮಿಯನ್ನು ಯುದ್ಧೋಪಾದಿಯಲ್ಲಿ ಖರೀದಿಸುತ್ತಿದ್ದಾರೆ ಮತ್ತು ನಮ್ಮ ಪರ್ವತಗಳು, ಅರಣ್ಯ ಪ್ರದೇಶಗಳು, ಸಸ್ಯ ಸಂಕುಲ ಮತ್ತು ಜಲಮೂಲಗಳನ್ನು ನಾಶಪಡಿಸಲಾಗುತ್ತಿದೆ. ಇದು ಕಾವೇರಿ ಜಲಾನಯನ ಪ್ರದೇಶದ ನರ ಕೇಂದ್ರ ಮತ್ತು ನೀರಿನ ತಳಹದಿಯ ಜಲ ಗರ್ಭಕ್ಕೆ ಹಾನಿಯುಂಟುಮಾಡುತ್ತಿದೆ.
ಪವಿತ್ರ ನದಿ ಕಾವೇರಿಯು ದುಃಖದಿಂದ ಬಳಲುತ್ತಿರುವುದನ್ನು ಭಗವಾನ್ ವೆಂಕಟೇಶನು ಸಹಿಸುವುದಿಲ್ಲ. ತಿರುಪತಿ ದೇವಸ್ಥಾನಂ ಮಂಡಳಿಯ ಸಾವಿರಾರು ಕೋಟಿ ಹಣವನ್ನು ಕೊಡವ ಲ್ಯಾಂಡ್‍ನಲ್ಲಿ ಭೂಮಿಯನ್ನು ಖರೀದಿಸಲು ಬಡ್ಡಿರಹಿತ “ಸಾಫ್ಟ್ ಮನಿ” ಎಂದು ತೆಲುಗು ಜನರಿಗೆ ನೀಡಲಾಗುತ್ತಿದೆ. ಬಹಳಷ್ಟು ತೆಲುಗು ಜನರು ಕೊಡವರ ಪ್ರಾಚೀನ ಭೂಮಿಯನ್ನು ಅಸಹಜ ಬೆಲೆಗಳನ್ನು ಪಾವತಿಸಿ ಖರೀದಿಸಲು ಪ್ರಾರಂಭಿಸಿದ್ದಾರೆ. ಕೊಡವ ಲ್ಯಾಂಡ್ ನ ವಿಹಂಗಮ ಬೆಟ್ಟಗಳನ್ನು ಅಗೆದು ನಮ್ಮ ಜೀವನಾಡಿ, ದೈವಿಕ ಮಾತೃ ನದಿ ಕಾವೇರಿಯ ದೀರ್ಘಕಾಲಿಕ ನೀರಿನ ಮೂಲಗಳನ್ನು ನಾಶಪಡಿಸುತ್ತಿದ್ದಾರೆ.
ಕೊಡವರು ಅತೀ ಸಣ್ಣ, ಆದಿಮಸಂಜಾತ ಸಮರ ಕಲೆಯ ಜನಾಂಗದವರಾಗಿದ್ದು, ಪವಿತ್ರ ಕೊಡವ ಭೂಮಿಯನ್ನು ಕಳೆದುಕೊಳ್ಳುವ ಆತಂಕವಿದೆ. ಇದು ನಮ್ಮ ಗುರುತು ಮತ್ತು ಭೌಗೋಳಿಕ ಸಮತೋಲನಕ್ಕೆ ಧಕ್ಕೆ ತರುತ್ತದೆ.
ಕೊಡವಲ್ಯಾಂಡ್ ಯೋಧರ ತೂಗು ತೊಟ್ಟಿಲು, ಕೊಡವರು ಅತಿ ದೇಶಭಕ್ತರು ಮತ್ತು ಅಪ್ರತಿಮ ರಾಷ್ಟ್ರೀಯತೆಯ ಸಮುದಾಯದವರು. ರಾಷ್ಟ್ರದ ಹಿತದೃಷ್ಟಿಯಿಂದ ನಿಮ್ಮ ಹಸ್ತಕ್ಷೇಪದ ಮೂಲಕ ಕೊಡವರ ಅಸ್ತಿತ್ವವನ್ನು ಸಾಂಪ್ರದಾಯಿಕ ಕೊಡವ ತಾಯ್ನಾಡಿನಲ್ಲಿ ಶಾಶ್ವತವಾಗಿ ಮುಂದುವರಿಸಲು ಅನುಮೋದಿಸಬೇಕು.
ಕೊಡವಲ್ಯಾಂಡ್ ಪಶ್ಚಿಮ ಘಟ್ಟಗಳ ವಲಯದ ಪರ್ವತ ಪ್ರದೇಶಗಳಲ್ಲಿ ನೆಲೆಗೊಂಡಿದೆ, ಇದು ಪ್ರಪಂಚದ ಜೈವಿಕ ವೈವಿಧ್ಯತೆಯ ಹಾಟ್‍ಸ್ಪಾಟ್ ಆಗಿದೆ. 1956 ರವರೆಗೆ ಕೂರ್ಗ್ ಭಾರತದ ಪ್ರತ್ಯೇಕ, ಉತ್ತಮ ಆಡಳಿತ ಮತ್ತು ಅತ್ಯಂತ ಸಮಚಿತ್ತದಿಂದ ಆಳ್ವಿಕೆ ನಡೆಸಿದ ರಾಜ್ಯವಾಗಿತ್ತು. ಇಡೀ ಕೊಡವ ಪ್ರದೇಶವು ಕುಲದೇವತೆಗಳು, ಗ್ರಾಮ ದೇವತೆಗಳು ಮತ್ತು ನಾಡ್‍ಗಳ ದೇವತೆಗಳ (ಗ್ರಾಮಗಳ ಸಮೂಹ) ದೈವತ್ವದಿಂದ ತುಂಬಿದೆ. ಇದನ್ನು ಕಳೆದುಕೊಳ್ಳಲು ಕೊಡವರಾದ ನಾವುಗಳು ತಯಾರಿಲ್ಲ.
ಆದ್ದರಿಂದ ತಿರುಮಲ ತಿರುಪತಿ ದೇವಸ್ಥಾನಂ ಸಮಿತಿಯ (ಟಿಟಿಡಿ) ನಿಧಿಯನ್ನು ಇಂದಿನ ದಿನಮಾನದ ಅಗತ್ಯವಾಗಿರುವ ಕಾಶ್ಮೀರದಲ್ಲಿ ಜಮೀನುಗಳನ್ನು ಖರೀದಿಸಲು ಬಳಕೆ ಮಾಡಬೇಕೆಂದು ವಿನಂತಿಸುತ್ತೇವೆ.
ಈಗಾಗಲೇ, ಎನ್‍ಡಿಎ ಸರ್ಕಾರವು ಆರ್ಟಿಕಲ್ 370 ಅನ್ನು ರದ್ದುಗೊಳಿಸಿದೆ, ಇದನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಭಾರತದ ಸುಪ್ರೀಂ ಕೋರ್ಟ್‍ನ ಸಂವಿಧಾನ ಪೀಠವು ಡಿಸೆಂಬರ್ 11, 2023 ರಂದು ನೀಡಿದ ತನ್ನ ಮಹತ್ವದ ತೀರ್ಪಿನಲ್ಲಿ ಎತ್ತಿ ಹಿಡಿದಿದೆ. ಈಗ ಯಾರು ಬೇಕಾದರೂ ಅಲ್ಲಿ ಭೂಮಿ ಖರೀದಿಸಬಹುದಾಗಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಹೊರತಾಗಿಯೂ, ಭಯೋತ್ಪಾದನಾ ಚಟುವಟಿಕೆಗಳು ಇನ್ನೂ ದೊಡ್ಡದಾಗಿ ಮುಂದುವರೆಯುತ್ತಲೇ ಇದೆ. ಕೊಡವ ಲ್ಯಾಂಡ್‍ನಲ್ಲಿ/ಕೂರ್ಗ್‍ನಲ್ಲಿ ಭೂಮಿಯನ್ನು ಖರೀದಿಸಿ ಈಗಾಗಲೇ ಅಸ್ತಿತ್ವದಲ್ಲಿರುವ ನೆಮ್ಮದಿಗೆ ಭಂಗ ತರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ತೆಲುಗು ಜನರು ಕಾಶ್ಮೀರದಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯವಾಗಿದೆ. ಕಾಶ್ಮೀರದಲ್ಲಿ ಭೂಮಿಯನ್ನು ಖರೀದಿಸಲು, ನಮ್ಮ ರಾಷ್ಟ್ರದ ಸಾರ್ವಭೌಮತ್ವ, ಭದ್ರತೆಗೆ ಉತ್ತಮ ಕೊಡುಗೆ ನೀಡಲು ಮತ್ತು ಪ್ರಶಾಂತ ಸ್ಥಳವಾಗಿ ಪರಿವರ್ತಿಸಲು ಇದು ಸಕಾಲವಾಗಿದೆ.
ಇದರಿಂದ ವೆಂಕಟೇಶ್ವರ ದೇವರಿಗೂ ಸಂತೋಷವಾಗಬಹುದು. ಆದರೆ ಕೊಡವ ಲ್ಯಾಂಡ್ ನಲ್ಲಿ ಭೂಮಿ ಖರೀದಿಸಿದರೆ ಕಾವೇರಿ ತಾಯಿಯ ಪ್ರಶಾಂತತೆಗೆ ಭಂಗ ಬರಬಹುದು ಮತ್ತು ತಿರುಮಲ ತಿರುಪತಿ ದೇವಸ್ಥಾನದ ಬಡ್ಡಿ ರಹಿತ ಹಣವು ದುರ್ವಿನಿಯೋಗವಾಗಬಹುದು.
ಕಾವೇರಿ ಮಾತೆ ನದಿ ರೂಪದಲ್ಲಿ ತಮಿಳುನಾಡು, ಕೇರಳ, ಪಾಂಡಿಚೇರಿ ಮತ್ತು ಕರ್ನಾಟಕ ಎಂಬ ನಾಲ್ಕು ದಕ್ಷಿಣ ಭಾರತದ ರಾಜ್ಯಗಳಿಗೆ ನೀರನ್ನು ಪೂರೈಸುತ್ತದೆ. ದಕ್ಷಿಣ ಭಾರತದ ಎಲ್ಲಾ ಜೀವಿಗಳ ಜಲದಾಹವನ್ನು ನೀಗಿಸುತ್ತದೆ. ನಮ್ಮ ವೇದಗಳ ಕಾಲದ (ಸಿಂಧು, ಗಂಗಾ, ಯಮುನಾ, ನರ್ಮದಾ, ಅದೃಶ್ಯ ಸರಸ್ವತಿ, ಗೋದಾವರಿ ಮತ್ತು ಕಾವೇರಿ) ಏಳು ಪವಿತ್ರ ನದಿಗಳಲ್ಲಿ ಕಾವೇರಿಯೂ ಒಂದಾಗಿದೆ.
ಆದ್ದರಿಂದ, ಟಿಟಿಡಿಯ ಸಾಫ್ಟ್ ಮನಿ ಸಾಲವನ್ನು ಬೇರೆಡೆಗೆ ವಿನಿಯೋಗಿಸಿ, ಕಾಶ್ಮೀರದಲ್ಲಿ ಹೂಡಿಕೆ ಮಾಡಿ ಮತ್ತು ಆಂಧ್ರದ ನಿಮ್ಮ ಜನರಿಗೆ ಕಾಶ್ಮೀರದಲ್ಲಿ ಭೂಮಿಯನ್ನು ಖರೀದಿಸಲು ಸಲಹೆ ನೀಡಿ ಎಂದು ಚಂದ್ರಬಾಬು ನಾಯ್ಡು ಅವರಲ್ಲಿ ಎನ್.ಯು.ನಾಚಪ್ಪ ಅವರು ಮನವಿ ಮಾಡಿದ್ದಾರೆ.
ನಿಮ್ಮ ರಾಷ್ಟ್ರೀಯ ರಾಜಕೀಯ ಪಾಲುದಾರ, ಪ್ರಧಾನಿ ಮೋದಿ ಅವರು ನಮ್ಮ ಜೀವನ ರೇಖೆ ಜಲಧಾರೆ ಕಾವೇರಿಯನ್ನು ಕಾನೂನುಬದ್ಧ ವ್ಯಕ್ತಿ ಸ್ಥಾನಮಾನದೊಂದಿಗೆ ಜೀವಂತ ಘಟಕವಾಗಿ ಪರಿಗಣಿಸಲು ಮತ್ತು ಶಾಸನಬದ್ಧಗೊಳಿಸಲು ಅಗತ್ಯವಿರುವ ಕ್ರಮ ಕೈಗೊಳ್ಳಲು ತಾವು ಕೈಜೋಡಿಸಬೇಕು.
ಕರ್ನಾಟಕ ರಾಜ್ಯದೊಳಗೆ ಕೊಡವಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯನ್ನು ಸೃಷ್ಟಿಸುವ ಮೂಲಕ ಸ್ಥಳೀಯ ಸೂಕ್ಷ್ಮ ಕೊಡವರನ್ನು ರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಬೇಕು. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ನಿಮ್ಮ ವಿಶೇಷ ಸಾಮೀಪ್ಯವನ್ನು ಬಳಸಿಕೊಂಡು ನಮ್ಮ ಸುದೀರ್ಘ ಹಕ್ಕೊತ್ತಾಯವನ್ನು ಪರಿಗಣಿಸುವ ಪ್ರಕ್ರಿಯೆಗೆ ಸಹಕಾರ ನೀಡಬೇಕು.
ನ್ಯಾಯ ಮತ್ತು ಸಮಾನತೆಯ ಹಿತಾಸಕ್ತಿಯಲ್ಲಿ ಆರ್ಟಿಕಲ್ 371(ಕೆ) ಅಡಿಯಲ್ಲಿ ಆಂತರಿಕ-ರಾಜಕೀಯ ಸ್ವಯಂ ನಿರ್ಣಯ ಹಕ್ಕುಗಳು ಮತ್ತು ಬುಡಕಟ್ಟು ಸ್ಥಾನಮಾನದ ಹಕ್ಕನ್ನು ಕೊಡವರಿಗೆ ಕಲ್ಪಿಸುವ ಮೂಲಕ ಅವರ ತಾಯಿ ನೆಲದಲ್ಲಿ ಕೊಡವ ಸ್ವಯಂ ನಿರ್ಣಯದ ಹಕ್ಕು ದೊರಕಬೇಕೆಂದು ನಾವು ಹಂಬಲಿಸುತ್ತಿದ್ದೇವೆ.
ನಿಮ್ಮ ಆಂಧ್ರ ರಾಜ್ಯದ ಪೂರ್ವ ಘಟ್ಟಗಳ ಅರಕು ಕಣಿವೆಯ ಭಗತ್ ಬುಡಕಟ್ಟು ಮತ್ತು ಇತರ ವಿವಿಧ ಬುಡಕಟ್ಟುಗಳಿಗೆ “ವಿಶಾಕಪಟ್ಟಣಂ ಹಿಲ್‍ಟ್ರಾಕ್ಟ್ ಏಜೆನ್ಸಿ” ಅರೆ ಸ್ವಾಯತ್ತ ಘಟಕವಾಗಿ 1839 XX V1 ಕಾಯ್ದೆಯಲ್ಲಿ ಭದ್ರತೆ ನೀಡಲಾಗಿದೆ. ಗಂಜಾಂ ಹಿಲ್ ಟ್ರ್ಯಾಕ್ಟ್ ಏಜೆನ್ಸಿಯನ್ನು “ಮಲಿಯಾಸ್” ಅಥವಾ “ಹೈಲ್ಯಾಂಡ್ಸ್” ನಿಂದ 1839 XX1V ರ ಕಾಯಿದೆಯಿಂದ ರಚಿಸಲಾಗಿದೆ. ಇದೇ ಮಾದರಿಯಲ್ಲಿ ಆದಿಮಸಂಜಾತ ಕೊಡವರ ಕೊಡವಲ್ಯಾಂಡ್ ಬೇಡಿಕೆ ಈಡೇರಿಕೆಗೆ ನಿಮ್ಮ ಬೆಂಬಲ ಬೇಕು.
ವಿಶ್ವಪ್ರಸಿದ್ಧ ಅರ್ಥಶಾಸ್ತ್ರಜ್ಞ, ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಕೊಡವ ಲ್ಯಾಂಡ್ ಸ್ವಾಯತ್ತತೆಯ ಪರವಾಗಿ ಶಾಸನ ಬದ್ಧ ಪರಿಹಾರಕ್ಕಾಗಿ ಕಾನೂನು ಹೋರಾಟವನ್ನು ಕರ್ನಾಟಕ ಹೈಕೋರ್ಟ್‍ನಲ್ಲಿ ನಡೆಸುತ್ತಿದ್ದಾರೆ ಎನ್ನುವುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ ಎಂದು ಎಂದು ಎನ್.ಯು.ನಾಚಪ್ಪ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿ ತಾಲ್ಲೂಕು ಮಟ್ಟದ ಬಾಲಕಾರ್ಮಿಕ ನಿರ್ಮೂಲನೆ ಮತ್ತು ಪುನರ್ವಸತಿ ಸಮಿತಿ ಸಭೆ*

ಮಾರ್ಚ್ 27, 2026

*ನಾಪೋಕ್ಲುವಿನಲ್ಲಿ ಜಾಗೃತಿಗಾಗಿ ಪೊಲೀಸರ ಪಥ ಸಂಚಲನ*

ಮಾರ್ಚ್ 27, 2026

*ಮಡಿಕೇರಿ : ಗ್ಯಾರಂಟಿ ಯೋಜನೆ ಮತ್ತಷ್ಟು ಪ್ರಗತಿ ಸಾಧಿಸಿ : ಮಂದ್ರೀರ ಮೋಹನ್ ದಾಸ್*

ಮಾರ್ಚ್ 27, 2026

*ನಾಪೋಕ್ಲುವಿನಲ್ಲಿ ಜಾಗೃತಿಗಾಗಿ ಪೊಲೀಸರ ಪಥ ಸಂಚಲನ*

ಮಾರ್ಚ್ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ ಮಾ.27 NEWS DESK : ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ನಾಗರಿಕರಲ್ಲಿ ಭಯಮುಕ್ತ ವಾತಾವರಣ ಮೂಡಿಸುವ ಸಲುವಾಗಿ  ನಾಪೋಕ್ಲು…

*ಮಡಿಕೇರಿ : ಗ್ಯಾರಂಟಿ ಯೋಜನೆ ಮತ್ತಷ್ಟು ಪ್ರಗತಿ ಸಾಧಿಸಿ : ಮಂದ್ರೀರ ಮೋಹನ್ ದಾಸ್*

ಮಾರ್ಚ್ 27, 2026

ಮಡಿಕೇರಿ : ರಾಜಾಸೀಟು ಉದ್ಯಾನವನಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್  ಭೇಟಿ : ಪರಿಶೀಲನೆ 

ಮಾರ್ಚ್ 27, 2026

*ಎಲ್ಲರನ್ನೂ ಎಲ್ಲರ ಮನಸ್ಸನ್ನು ಒಗ್ಗೂಡಿಸುವ ಕೆಲಸ ಮಾಡುವುದು ರಂಗಭೂಮಿ : ಮಂಜಪ್ಪ ಮಾಲ್ದಾರೆ ಅಭಿಮತ*

ಮಾರ್ಚ್ 27, 2026

*ಬಿ.ಎನ್.ಚರಿಷ್ಮಾಗೆ 5ನೇ ರ‍್ಯಾಂಕ್*

ಮಾರ್ಚ್ 27, 2026

*ಕೂಡಿಗೆ : ವೃತ್ತಿಪರ ಮಾರ್ಗದರ್ಶನ ಪಡೆಯಲು ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಕರೆ*

ಮಾರ್ಚ್ 27, 2026

*ರಂಗಭೂಮಿಯು ಸಮಾಜದ ಜೀವಂತ ದರ್ಪಣ : ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅಭಿಪ್ರಾಯ*

ಮಾರ್ಚ್ 27, 2026

*ಕತ್ತಲೆಕಾಡುವಿನಲ್ಲಿ ಮನಸೂರೆಗೊಂಡ ಶ್ರೀ ರಾಮನವಮಿ : ರಾಮ, ಸೀತೆಯಾಗಿ ಕಂಗೊಳಿಸಿದ ಪುಟಾಣಿಗಳು*

ಮಾರ್ಚ್ 27, 2026

*ಗೋಣಿಕೊಪ್ಪ : ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ರಾಮನವಮಿ ಆಚರಣೆ*

ಮಾರ್ಚ್ 27, 2026

*ಕಣಿವೆ ಶ್ರೀ ರಾಮಲಿಂಗೇಶ್ವರನ ವೈಭವದ ಬ್ರಹ್ಮ ರಥೋತ್ಸವ*

ಮಾರ್ಚ್ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.