Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡಗಿನ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ*
  • *ಕೊಡಗಿನ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆ : ಮರ ಬಿದ್ದು ಸಂಚಾರ ವ್ಯತ್ಯಯ : ಹೊತ್ತಿ ಉರಿದ ತೆಂಗಿನ ಮರ*
  • *ಸಹಾಯ ಧನ ಮತ್ತು ವಸತಿಗಾಗಿ ಒತ್ತಾಯಿಸಿ ಎಸ್‌ಡಿಟಿಯು ಮನವಿ*
  • *ಮಂದಗತಿಯಲ್ಲಿ ಸಾಗುತ್ತಿರುವ ಅಮೃತ್ ಕಾಮಗಾರಿ : ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ*
  • *ಪೊಲೀಸ್ ವಸತಿ ಗೃಹ, ಸಮುದಾಯ ಭವನಗಳಿಗೆ ಕೊಡಗು ಎಸ್‌ಪಿ ಬಿಂದುಮಣಿ ಭೇಟಿ : ಪರಿಶೀಲನೆ*
  • *ಏ.1 ರಂದು ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಸಮಾವೇಶ*
  • *ಮಾ.31ರಂದು ಜನರಲ್ ಕೆ.ಎಸ್.ತಿಮ್ಮಯ್ಯ ಅವರ 120ನೇ ಜನ್ಮ ದಿನಾಚರಣೆ*
  • *ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಕೆ.ಪ್ರಶಾಂತ್ ಆಯ್ಕೆ*
  • *ಶ್ರೀ ತಿರುನೆಲ್ಲಿ ಪೆಮ್ಮಯ್ಯ ದೇವಾಲಯಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ವಿಶೇಷ ಪೂಜೆ ಸಲ್ಲಿಕೆ*
  • *ಸೋಮವಾರಪೇಟೆಯಲ್ಲಿ ಸಂಭ್ರಮದ ರಾಮೋತ್ಸವ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕಂಜಿತಂಡ ಮುತ್ತಪ್ಪ ಹಾಗೂ ಸುಲ್ಲಿವನ್ ಹಾಕಿ ಮೈದಾನ ಈಗ ನೆನಪು ಮಾತ್ರ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕಂಜಿತಂಡ ಮುತ್ತಪ್ಪ ಹಾಗೂ ಸುಲ್ಲಿವನ್ ಹಾಕಿ ಮೈದಾನ ಈಗ ನೆನಪು ಮಾತ್ರ*

ಜುಲೈ 16, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.16 NEWS DESK : ಅಂತರಾಷ್ಟ್ರೀಯ ಗುಣಮಟ್ಟದ ಬೆಂಗಳೂರಿನ ಹೃದಯ ಭಾಗದಲ್ಲಿರುವ, ಐದು ದಶಕಗಳ ಕಾಲ ಬಹಳಷ್ಟು ಆಟಗಾರರಿಗೆ ಜೀವನ ರೂಪಿಸಿ ಕೊಟ್ಟಂತಹ ಸುಲ್ಲಿವನ್ ಹಾಕಿ ಮೈದಾನವನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದ ಮಹಾನ್ ವ್ಯಕ್ತಿ K.S.R.P ಯ ಕಮಾಂಡೆಂಟ್ ಕಂಜಿತಂಡ ಮುತ್ತಪ್ಪ ಈಗ ನೆನಪು ಮಾತ್ರ.
ಕಂಜಿತಂಡ ಕಾರ್ಯಪ್ಪ ಹಾಗೂ ದೇಚಮ್ಮ (ತಾಮನೆ ಕೊಡಂದೇರ) ದಂಪತಿಯರ ಪುತ್ರನಾಗಿ ಕಂಜಿತಂಡ ಮುತ್ತಪ್ಪ (ರಾಮು)ಅವರು 12/04/1931 ರಂದು ದೇವರಪುರದಲ್ಲಿ ಜನಿಸಿದರು.
ಮುತ್ತಪ್ಪ ಅವರು ವಿದ್ಯಾಭ್ಯಾಸವನ್ನು ಪೊನ್ನಂಪೇಟೆಯ ಸರ್ಕಾರಿ ಶಾಲೆಯಲ್ಲಿ ಮುಗಿಸಿ, ತಮ್ಮ 18ನೇ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿದರು. 1951 ರಲ್ಲಿ ಎಚ್.ಎಸ್.ಆರ್.ಪಿ (ಹೈದರಾಬಾದ್ ರಾಜ್ಯ ಮೀಸಲು ಪೊಲೀಸ್)ಯ ಪೊಲೀಸ್ ಆಗಿ ಭರ್ತಿ ಹೊಂದಿದರು. ಇದು ನಂತರದ ದಿನಗಳಲ್ಲಿ ಎಂ.ಎಸ್.ಆರ್.ಪಿ(ಮೈಸೂರು ರಾಜ್ಯ ಮೀಸಲು ಪೊಲೀಸ್) ಯೊಂದಿಗೆ ವಿಲೀನಗೊಂಡಿತು. ಇವರು 1964ರಲ್ಲಿ ಇನ್ಸ್ಪೆಕ್ಟರ್ ಆಗಿ ಬಡ್ತಿ ಹೊಂದಿದರು. 1977ರಲ್ಲಿ ಕೆ.ಎಸ್.ಆರ್.ಪಿ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್)ಯ ಅಸಿಸ್ಟೆಂಟ್ ಕಮಾಂಡೆಂಟ್ ಹಾಗೂ 1982 ರಲ್ಲಿ ಕಮಾಂಡೆಂಟ್ ಆಗಿ ಬಡ್ತಿ ಹೊಂದಿದರು. ಕೆ.ಎಸ್.ಆರ್.ಪಿ ಯ ಕಮಾಂಡೆಂಟ್ ಹುದ್ದೆಯು ಪೊಲೀಸ್ ಅಧೀಕ್ಷಕರ ಸ್ಥಾನಕ್ಕೆ ಸಮನಾಗಿರುತ್ತದೆ. ಇವರು ತಮ್ಮ ಸುದೀರ್ಘ ಸೇವೆಯ ನಂತರ 1989 ರಲ್ಲಿ ನಿವೃತ್ತಿ ಪಡೆದರು.
E.H.ಸುಲ್ಲಿವನ್ 1941 – 43 ಬ್ರಿಟಿಷರ ಕಾಲದಲ್ಲಿ 1941ರಲ್ಲಿ E.H.ಸುಲ್ಲಿವನ್ ಎಂಬ ಬ್ರಿಟಿಷ್ ಪೊಲೀಸ್ ಅಧಿಕಾರಿ ಹಾಗು ಅದ್ಭುತ ಹಾಕಿ ಆಟಗಾರ ಇವರು ಮೈಸೂರು ಹಾಕಿ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದ್ದರಿಂದ ಈ ಮೈದಾನಕ್ಕೆ ಸುಲ್ಲಿವನ್ ಅಥವಾ ಸುಲೈವನ್ ಮೈದಾನ ಎಂಬ ಹೆಸರು ಬಂತು. ಆಗ ಬಹಳಷ್ಟು ಆಂಗ್ಲೋ ಇಂಡಿಯನ್ ಆಟಗಾರರು ಹೊರ ಹೊಮ್ಮಿದರು. ಇದರಲ್ಲಿ ಮ್ಯಾಕ್ ಬ್ರೈಡ್ ಕೂಡ ಒಬ್ಬರು. 1973 ರಲ್ಲಿ ರೆನ್ನಿ ಫ್ರಾಂಕ್ ಆಲ್ ಇಂಡಿಯಾ ಟೂರ್ನಮೆಂಟ್ ನಡೆಯಿತು. ಅಲ್ಲದೆ ಇಲ್ಲಿ ಹೆಸರಾಂತ ಪಂದ್ಯಾವಳಿಗಳಾದ ರಂಗಸ್ವಾಮಿ ಕಪ್ ಕೂಡ ನಡೆಯಿತು. ಈ ಗುಣಮಟ್ಟದ ಮೈದಾನವನ್ನು ವೀಕ್ಷಿಸಿದ ಅಂದಿನ F.I.H ನ ಸದಸ್ಯರಾದ ಡೌಗ್ಲಾಸ್ ಬ್ರೂಸ್ ಮುತ್ತಪ್ಪ ಅವರ ಕಾರ್ಯವೈಕರಿಯನ್ನು ಶ್ಲಾಗಿಸಿದ್ದರು. ಲೀಗ್ ಪಂದ್ಯಾವಳಿಗಳು, ಕ್ಲಾರ್ಕ್ ಟ್ರೋಫಿ, I.T.C, ಐಸಾಕ್ ಮೆಮೋರಿಯಲ್ ಹಾಗು ಮಹಾರಾಜ ಗೋಲ್ಡ್ ಕಪ್ ಮುಂತಾದ ಪಂದ್ಯಾವಳಿಗಳು ನಡೆದವು.
ಕೆ.ಎಸ್.ಆರ್.ಪಿ ಹಾಕಿ ತಂಡ :: ಮುತ್ತಪ್ಪನವರ ಗರಡಿಯಲ್ಲಿ ಪಳಗಿದ ಹಾಕಿ ತಂಡವು ಬಹಳಷ್ಟು ಬಲಿಷ್ಠವಾಗಿತ್ತು. ಹೆಸರಾಂತ ರಾಷ್ಟ್ರೀಯ ಆಟಗಾರ ಕೋಣೇರೀರ ಪೊನ್ನಪ್ಪ, ಅಂತರಾಷ್ಟ್ರೀಯ ಆಟಗಾರ ಬೋವೇರಂಡ ಕುಟ್ಟಪ್ಪ, ಅದ್ಭುತ ಗೋಲ್ ಕೀಪರ್ ಬಲ್ಟಿಕಾಳಂಡ ರಘು ಅಲ್ಲದೆ ಮೂರ್ನಾಡಿನ ಕುಟ್ಟ, ಸರ್ದಾರ್,ಕುಶಾಲಪ್ಪ, ಗೋಲ್ ಕೀಪರ್ ಕುಟ್ಟಪ್ಪ ಹಾಗೂ ದೇವಯ್ಯ ಇಂತಹ ಒಳ್ಳೆಯ ಆಟಗಾರರನ್ನು ಒಳಗೊಂಡಿದ್ದ ಈ ತಂಡವು ಬಹಳಷ್ಟು ಪಂದ್ಯಾವಳಿಗಳನ್ನು ಗೆದ್ದವು.
ಸುಲ್ಲಿವನ್ ಮೈದಾನದ ವಿಶೇಷತೆ ::  70-80ರ ದಶಕದಲ್ಲಿ ಹಾಕಿ ಪ್ರಿಯರು ಈ ಮೈದಾನದಲ್ಲಿ ಪಂದ್ಯವನ್ನು ನೋಡಲು ಎಂ.ಜಿ ರಸ್ತೆ ಹಾಗು ಬ್ರಿಗೇಡ್ ರಸ್ತೆಯ ಮೂಲಕ ಹಾದು ಬಂದು ಸುಲ್ಲಿವನ್ ಮೈದಾನಕ್ಕೆ ಸೇರುವುದು ಒಂದು ಅದ್ಭುತ ಕ್ಷಣ. ಮೈದಾನದದ ಸುತ್ತ ತಡೆಗೋಡೆ, ಹಿಂಬದಿಯಲ್ಲಿ ವಿಶಾಲವಾದ ಮರಗಳು, ಅಲ್ಲಿ ಕೂತು ಪಂದ್ಯಾವಳಿ ವೀಕ್ಷಿಸುವುದೇ ಒಂದು ಮರೆಯಲಾಗದ ಅನುಭವ.
ಕೂರ್ಗ್ – 11 ::  ಕೊಡಗಿನಿಂದ ಮೈದಾನದತ್ತ ಅಂದೊಂದು ದಿನ ಕೂರ್ಗ್-11 ತಂಡ ಸೆಮಿ ಫೈನಲ್ಸ್ ಆಡುತ್ತಿತ್ತು. ಯುವ ಆಟಗಾರರು ತಮ್ಮ ಜೀವನ ರೂಪಿಸಿಕೊಂಡು, ಅದ್ಭುತ ಪಂದ್ಯಾವಳಿಯನ್ನು ಆಡಿ ಬೆಂಗಳೂರಿನಲ್ಲಿ ಚರಿತ್ರೆ ನಿರ್ಮಿಸಿದ ಮೈದಾನವಿದು. ಇವರಲ್ಲಿ ಸುಭಾಷ್ ರೈ, ಮನೆಯಪಂಡ ದತ್ತ ಕರುಂಬಯ್ಯ, ನಡಿಕೇರಿಯಂಡ ದಿಲೀಪ್, ಕನ್ನಂಬೀರ ಚಿನ್ನು, ಇಟ್ಟೀರ ಕುಟ್ಟಪ್ಪ, ಪಟ್ಟಡ ವಿಜಿನ್, ಕುಪ್ಪಂಡ ನಾಚಪ್ಪ, ಕೊಡಂದೇರ ತಿಮ್ಮು, ಜಮ್ಮಡ ಭೀಮಯ್ಯ, ಕಲಿಯಂಡ ಮಧು, ಬುಟ್ಟಿಯಂಡ ಚಿಣ್ಣಪ್ಪ, ಬೆಳ್ಳಿಯಪ್ಪ, ದಿವಾಕರ್, ಮತ್ತು ದಯಾನಂದ್. ಇದನ್ನು ವೀಕ್ಷಿಸಲು ಹಾಕಿ ಪ್ರಿಯ ರಾಜು ಎಂಬ ಕೆ.ಎಸ್.ಆರ್.ಟಿ.ಸಿ ಚಾಲಕನ ಬಸ್ಸಿನಲ್ಲಿ ಬಹಳಷ್ಟು ಜನರು ಹಾಕಿ ಪಂದ್ಯಾವಳಿ ವೀಕ್ಷಿಸಲು ಕೊಡಗಿನಿಂದ ಬರುತ್ತಿದ್ದರು. ಪಂದ್ಯಾವಳಿ ಮುಗಿದ ನಂತರ ಜೈಕಾರ ಹಾಕುತ್ತಾ ಹಿಂದಿರುಗುತ್ತಿದ್ದರು. ಇದೆಲ್ಲಾ ಮರೆಯಲಾಗದ ಕ್ಷಣಗಳು.
ಒಮ್ಮೆ ಸೆಮಿ ಫೈನಲ್ ಟಾಟ ಬಾಂಬೆ ಹಾಗು ಆರ್ಮಿ-11 ನಡುವೆ ನಡೆಯಿತು. ಟೈ ಬ್ರೇಕರ್ ನ ಪೆನಾಲ್ಟಿ ಪುಷ್ ನಲ್ಲಿ ಟಾಟ ಬಾಂಬೆಯ ಗೋಲ್ ಕೀಪರ್ ಒಲಂಪಿಯೋ ಫರ್ನಾಂಡಿಸ್ 5 ಗೋಲುಗಳನ್ನು ಅದ್ಭುತವಾಗಿ ಬಚಾವು ಮಾಡಿದರು. ಇದು ಅಂದಿನ ಎಲ್ಲರ ಮನೆ ಮಾತಾಗಿತ್ತು.
ಅಂತರಾಷ್ಟ್ರೀಯ ತೀರ್ಪುಗಾರರು, ಅಂತಾರಾಷ್ಟ್ರೀಯ ಆಟಗಾರರು, ಅದ್ಭುತ ಗೋಲುಗಳು ಹಾಗೂ ರಕ್ಷಣಾತ್ಮಕ ಆಟಗಳು, ಹೀಗೆ ಅಂತಾರಾಷ್ಟ್ರೀಯ ಹಾಕಿ ಪಂದ್ಯಾಟದಲ್ಲಿ ನಡೆಯುವ ಎಲ್ಲಾ ಚಮತ್ಕಾರಗಳು ಈ ಮೈದಾನದಲ್ಲಿ ನಡೆದಿವೆ.
ಹಾಕಿಯ ಆಧಾರ ಸ್ತಂಭ ::  ಕೊಡಗಿನ ಆಟಗಾರರಿಗೆ ಅಂದು ಬೆನ್ನೆಲುಬಾಗಿ ನಿಂತವರು ಕಂಜಿತಂಡ ಮುತ್ತಪ್ಪ, ಮಾಲೆಟ್ಟೀರ ಶರಿ ಬೆಳ್ಳಿಯಪ್ಪ ಹಾಗು ಚಾರಿಮಂಡ ತಾರಾ ಸೋಮಯ್ಯ ಇವರ ಸೇವೆ ಮರೆಯಲಾಗದು.
ಕರ್ನಾಟಕ ಹಾಕಿ ಸಂಸ್ಥೆಯು ಸುಲೈವನ್ ಮೈದಾನದಿಂದ 1990ರಲ್ಲಿ ಈಗಿನ ಹಕ್ಕಿ ತಿಮ್ಮನ ಹಳ್ಳಿ”ಶಾಂತಿನಗರ”ಕ್ಕೆ ವರ್ಗಾವಣೆ ಆದ ನಂತರ ಈ ಮೈದಾನದಲ್ಲಿ ಪಂದ್ಯಾವಳಿಗಳನ್ನು ಆಡುವುದು ಕ್ಷೀಣಿಸತೊಡಗಿದವು.
ಮುತ್ತಪ್ಪನವರು ಕೆ.ಎಸ್.ಎಚ್.ಎ ಯ ಉಪಾಧ್ಯಕ್ಷರಾಗಿ, ಆಯ್ಕೆದಾರರಾಗಿ, ವ್ಯವಸ್ಥಾಪಕರಾಗಿ 15 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದರು. ಮುತ್ತಪ್ಪನವರು ಸೇವೆಯಲ್ಲಿರುವವರೆಗೂ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಹಾಕಿ ತಂಡವು ಎಲ್ಲಾ ಪಂದ್ಯಾವಳಿಗಳನ್ನು ಗೆದ್ದು ಗರ್ಜಿಸುತ್ತಿತ್ತು. ಹಲವಾರು ಕಲಾತ್ಮಕ ಆಟಗಾರರನ್ನೂ ಸೃಷ್ಟಿಸಿತು. ಇದೆಲ್ಲವೂ ಇಂದು ಕೇವಲ ನೆನಪುಗಳಷ್ಟೇ……
ಕಂಜಿತಂಡ ಮುತ್ತಪ್ಪನವರು 07/07/2018 ರಂದು ತಮ್ಮ ಪತ್ನಿ ಗಂಗಮ್ಮ(ತಾಮನೆ ಮಾತಂಡ), ಮಗ ಮಾದಪ್ಪ(ಜೀಸು), ಸೊಸೆ ಸವಿತಾ(ತಾಮನೆ ಅಜ್ಜನಿಕಂಡ), ಮೊಮ್ಮಗಳು ನಿಧಿ ಹಾಗು ಮಗಳು ಜ್ಯೋತಿ ಅವರನ್ನು ಬಿಟ್ಟು ಬಾರದ ಲೋಕಕ್ಕೆ ಅಗಲಿದರು. ಅಂದು ಕೆ.ಎಸ್.ಆರ್.ಪಿ ಯ ಆವರಣದಲ್ಲಿ ಕಾರ್ಮೋಡ ಕವಿದಿತ್ತು. ಇತ್ತ ಮಳೆರಾಯನ ಆರ್ಭಟ ಜೋರಾಗಿತ್ತು, ಮುತ್ತಪ್ಪನವರ ದಂತಕಥೆಗೆ ಅಂತಿಮ ದಿನವಾಗಿತ್ತು.
ಸುಲ್ಲಿವನ್ ಮೈದಾನಕ್ಕೆ ಆಸ್ಟ್ರೋ ಟರ್ಫ್
ಈ ಮೈದಾನಕ್ಕೆ ಅಸ್ಟ್ರೋ ಟರ್ಫನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು ಇದರ ಘತ ವೈಭವ ಮರುಕಳಿಸಲಿದೆ. ಈ ಕಾಲ ಆದಷ್ಟು ಬೇಗ ಕೂಡಿ ಬರಲಿ, ಎಲ್ಲಾ ಆಟಗಾರರು ಒಮ್ಮೆಯಾದರೂ ಬಂದು ಸುಲ್ಲಿವನ್ ಹಾಕಿ ಮೈದಾನದ ಹೊಸ ರೂಪವನ್ನು ನೋಡಲಿ. ಎಂದು ಶುಭ ಹಾರೈಸುತ್ತೇನೆ.

ಕ್ರೀಡಾ ವಿಶ್ಲೇಷಣೆ : ಚೆಪ್ಪುಡೀರ ಕಾರ್ಯಪ್ಪ 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡಗಿನ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ*

ಮಾರ್ಚ್ 28, 2026

*ಕೊಡಗಿನ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆ : ಮರ ಬಿದ್ದು ಸಂಚಾರ ವ್ಯತ್ಯಯ : ಹೊತ್ತಿ ಉರಿದ ತೆಂಗಿನ ಮರ*

ಮಾರ್ಚ್ 28, 2026

*ಸಹಾಯ ಧನ ಮತ್ತು ವಸತಿಗಾಗಿ ಒತ್ತಾಯಿಸಿ ಎಸ್‌ಡಿಟಿಯು ಮನವಿ*

ಮಾರ್ಚ್ 28, 2026

*ಕೊಡಗಿನ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆ : ಮರ ಬಿದ್ದು ಸಂಚಾರ ವ್ಯತ್ಯಯ : ಹೊತ್ತಿ ಉರಿದ ತೆಂಗಿನ ಮರ*

ಮಾರ್ಚ್ 28, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.28 : ಕೊಡಗು ಜಿಲ್ಲೆಯ ವಿವಿಧೆಡೆ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ. ಸಿಡಿಲಬ್ಬರ ಜನರಲ್ಲಿ…

*ಸಹಾಯ ಧನ ಮತ್ತು ವಸತಿಗಾಗಿ ಒತ್ತಾಯಿಸಿ ಎಸ್‌ಡಿಟಿಯು ಮನವಿ*

ಮಾರ್ಚ್ 28, 2026

*ಮಂದಗತಿಯಲ್ಲಿ ಸಾಗುತ್ತಿರುವ ಅಮೃತ್ ಕಾಮಗಾರಿ : ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ*

ಮಾರ್ಚ್ 28, 2026

*ಪೊಲೀಸ್ ವಸತಿ ಗೃಹ, ಸಮುದಾಯ ಭವನಗಳಿಗೆ ಕೊಡಗು ಎಸ್‌ಪಿ ಬಿಂದುಮಣಿ ಭೇಟಿ : ಪರಿಶೀಲನೆ*

ಮಾರ್ಚ್ 28, 2026

*ಏ.1 ರಂದು ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಸಮಾವೇಶ*

ಮಾರ್ಚ್ 28, 2026

*ಮಾ.31ರಂದು ಜನರಲ್ ಕೆ.ಎಸ್.ತಿಮ್ಮಯ್ಯ ಅವರ 120ನೇ ಜನ್ಮ ದಿನಾಚರಣೆ*

ಮಾರ್ಚ್ 28, 2026

*ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಕೆ.ಪ್ರಶಾಂತ್ ಆಯ್ಕೆ*

ಮಾರ್ಚ್ 28, 2026

*ಶ್ರೀ ತಿರುನೆಲ್ಲಿ ಪೆಮ್ಮಯ್ಯ ದೇವಾಲಯಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ವಿಶೇಷ ಪೂಜೆ ಸಲ್ಲಿಕೆ*

ಮಾರ್ಚ್ 28, 2026

*ಸೋಮವಾರಪೇಟೆಯಲ್ಲಿ ಸಂಭ್ರಮದ ರಾಮೋತ್ಸವ*

ಮಾರ್ಚ್ 28, 2026

*ಮೂರ್ನಾಡು : ಮಾ.29 ರಂದು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*

ಮಾರ್ಚ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.