Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮುಂಗಾರು ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರ ವಹಿಸಿ : ಡಾ.ಎನ್.ವಿ.ಪ್ರಸಾದ್ ಸೂಚನೆ*
  • *ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ : ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಶಾಸಕ ಡಾ.ಮಂತರ್ ಗೌಡ*
  • *AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವ : ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್*
  • *ಪ್ರವಾಸೋದ್ಯಮ  ಸಂಘ-ಸಂಸ್ಥೆಗಳ ಸಭೆ : ಕೊಡಗಿನ ಆತಿಥ್ಯ ಪ್ರವಾಸೋದ್ಯಮದ ಬಗ್ಗೆ ಆದಾರರಹಿತ ಟೀಕೆಗಳಿಗೆ ಕಡಿವಾಣ ಅಗತ್ಯ : ದಿನೇಶ್ ಕಾಯ೯ಪ್ಪ*
  • *ಫೀ.ಮಾ.ಕಾರ್ಯಪ್ಪ ಕಾಲೇಜಿನ ವಾರ್ಷಿಕೋತ್ಸವ : 77 ವರ್ಷಗಳ ಸುದೀರ್ಘ ಸೇವೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ನೀಡಿದೆ : ಪ್ರೊ. ಅಶೋಕ್ ಸಂಗಪ್ಪ ಆಲೂರ ಮೆಚ್ಚುಗೆ*
  • *ಮೇ 29 ಮತ್ತು 30 ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ*
  • *ಮಡಿಕೇರಿ ನಗರಸಭೆಯ ಬಿಜೆಪಿ ಆಡಳಿತ ಮಂಡಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ* 
  • *ನಮ್ಮೂರ ಶಾಲೆ ನಮ್ಮದು, ನಮ್ಮೂರಲ್ಲೆ ಉಳಿಯಲಿ : ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ಹಾಗೂ ಗ್ರಾಮಸ್ಥರ ಆಗ್ರಹ*
  • *ನಿವೇಶನಕ್ಕಾಗಿ ಆಗ್ರಹಿಸಿ ಮೇ 29 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ*
  • *ದೇವಟ್ ಪರಂಬ್ ನಲ್ಲಿ ಹಿರಿಯರಿಗೆ ಗೌರವ ಅರ್ಪಿಸಿದ ಸಿಎನ್‌ಸಿ : ಅಂತರಾಷ್ಟ್ರೀಯ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗಿನ ಜಾಕಿ ಚಿಮ್ಮಣಮಾಡ ಪಿ.ಬೋಪಣ್ಣ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗಿನ ಜಾಕಿ ಚಿಮ್ಮಣಮಾಡ ಪಿ.ಬೋಪಣ್ಣ*

ಅಕ್ಟೋಬರ್ 15, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಅ.15 NEWS DESK : ಕೊಡಗಿನ ಕ್ರೀಡಾ ಲೋಕದ ಎಲ್ಲಾ ಕ್ರೀಡೆಯಲ್ಲೂ ಕೊಡಗಿನ ಆಟಗಾರರು ಮೆಲುಗೈ ಸಾಧಿಸಿದ್ದಾರೆ. ಕರಾಟೆ, ಸ್ಕ್ವಾಷ್ , ಸೈಲಿಂಗ್, ಅಥ್ಲೆಟಿಕ್ಸ್, ಫುಟ್ಬಾಲ್, ಟೆನ್ನಿಸ್ ಹಾಗೂ ಕುದುರೆ ಸವಾರಿಯಲ್ಲೂ ಕೂಡ ಹೆಸರುವಾಸಿಯೇ ಸರಿ. ಜಾಕಿ ಎಂದರೆ ಸಮ ಮೈಕಟ್ಟು, ತೂಕ ಹಾಗೂ ಅಳತೆ ತೂಗುವಂತೆ ಕುದುರೆಯ ಮೇಲೆ ಕುಳಿತು ತನ್ನ ಹತೋಟಿಯಲ್ಲಿ ನಿಯಂತ್ರಿಸುವುದು, ಒಂದು ಕಲಾತ್ಮಕ ಆಟ ಹಾಗೂ ಒಂದು ರೋಚಕ ವಿದ್ಯೆ. ಕೊಡಗಿನ ಹೆಸರಾಂತ ಜಾಕಿ ಮನೆಯಪಂಡ ರಾಜು ನಿರಂತರವಾಗಿ 4 ದಶಕಗಳ ಕಾಲ ತನ್ನ ನೈಪುಣ್ಯವನ್ನು ಪಳಗಿಸಿ, ಆಮೇಲೆ ತರಬೇತುದಾರರಾಗಿ ಕೊಡಗಿಗೆ ಹೆಸರು ತಂದು ಜಾಕಿ ರಾಜು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಂತರ ಹೊಟ್ಟೇಂಗಡ ಪೂಣಚ್ಚ ಕೂಡ ಜಾಕಿಯಲ್ಲಿ ಹೆಸರು ಗಳಿಸಿದರು. ಇನ್ನೊಬ್ಬ ಯುವ ಪ್ರತಿಭೆ ಪಟ್ಟಡ ಮೋಹನ್ ಬೋಪಣ್ಣ, ಜನರಲ್ ಬಸ್ ಮಾಲೀಕ ಮೋಹನ್ ಅವರ ಮಗ ಜಪಾನಿನಲ್ಲಿ ಜಾಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅವರ ಪ್ರಕಾರ ದೇಹದ ತೂಕ 55ಕೆಜಿ ಮೀರದಂತೆ ನೋಡಿಕೊಳ್ಳಬೇಕು. ಕೊಡಗಿನ ಬೇರೆ ಜಾಕಿಗಳು ಹಾಗೂ ತರಬೇತುದಾರರು ಮುರುವಂಡ ಮಿಲನ್, ಕೇಕಡ ಮಂದಣ್ಣ, ಚೇರಂಡ ಪುನೀತ್, ನಡಿಕೇರಿಯಂಡ ಗಣೇಶ್, ಚೆಂದ್ರಿಮಾಡ ಕುಟ್ಟಪ್ಪ, ಚೆಂದ್ರಿಮಾಡ ಮೊಣ್ಣಪ್ಪ, ಮಂಗೇರೀರ ವಿಕ್ರಮ್, ಕೊಂಗಂಡ ಪ್ರದೀಪ್ ಹಾಗೂ ಅದೇಂಗಡ ನಳ ಇವರುಗಳು ಇದುವರೆಗೆ ಹೆಸರು ಮಾಡಿದವರು. ಇವರ ಪ್ರಕಾರ ಜಾಕಿಯ ದೇಹದ ತೂಕ 40ಕೆಜಿ ಇದ್ದರೆ ಕುದುರೆಯ ಮೇಲೆ ಸವಾರಿ ಮಾಡಲು ಸೂಕ್ತ. ಪೊನ್ನಂಪೇಟೆ ತಾಲ್ಲೂಕು ಚಿಕ್ಕಮುಂಡೂರು ಗ್ರಾಮದ ಚಿಮ್ಮಣಮಾಡ ಪೆಮ್ಮಯ್ಯ(ಬೊಗ್ಗ) ಹಾಗೂ ರೋಹಿಣಿ(ತಾಮನೆ ಬಲ್ಯಮೀದೇರಿರ) ದಂಪತಿಯ ಹಿರಿಯ ಪುತ್ರ ಚಿಮ್ಮಣಮಾಡ ಬೋಪಣ್ಣ, ಬಾಲ್ಯದಲ್ಲಿ ಅಪ್ಪಚ್ಚುಕವಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಹೈದರಾಬಾದಿನಲ್ಲಿ 6 ವರ್ಷ ಜಾಕಿಯಾಗಿ, ಅನೇಕ ಬಾರಿ ವಿಜಯ ಸಾಧಿಸಿದರು. 6 ವರ್ಷ ಎಂ.ಎ.ಎಂ ರಾಮಸ್ವಾಮಿಯವರ ಜೊತೆ ಷರತ್ತಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. 2017ರಲ್ಲಿ”magical skill” ಎಂಬ ಕುದುರೆಯನ್ನು ಮೊದಲು ತರುವುದರಲ್ಲಿ ಯಶಸ್ವಿಯಾದರು.  ಮುರುವಂಡ ಅಚ್ಚಯ್ಯ ಅವರು 1960 ರ ದಶಕದಲ್ಲಿ ಮದ್ರಾಸ್‌ನಲ್ಲಿ ಗಿಂಡಿ ರೇಸ್ ಕೋರ್ಸ್‌ನ ಕಾರ್ಯದರ್ಶಿಯಾದ ಮೊದಲ ಕೊಡವರಾಗಿದ್ದರು, ಅವರು ಅನೇಕ ಕೊಡವ ಜಾಕಿಗಳು ಮತ್ತು ತರಬೇತುದಾರರನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಎಂ.ಎ.ಎಂ ರಾಮಸ್ವಾಮಿ ::  ರಾಮಸ್ವಾಮಿಯವರು 1975ರ ವಿಶ್ವಕಪ್ ಹಾಕಿಯ ವಿಜೇತರಾದಾಗ ಐ.ಹೆಚ್.ಎಫ್ ಅಧ್ಯಕ್ಷರಾಗಿದ್ದರು. ಇವರಿಗೆ ಹಾಕಿಯಲ್ಲಿ ಬಹಳಷ್ಟು ಒಲವಿತ್ತು. ಕೊಡಗಿನ ಹಾಕಿ ಆಟಗಾರರು ಬಹಳಷ್ಟು ಪ್ರಿಯರಾಗಿದ್ದರು. ಆದ್ದರಿಂದಲೇ ಬೋಪಣ್ಣ ಅವರನ್ನು ತಮ್ಮ ಗರಡಿಯಲ್ಲಿ 6 ವರ್ಷಗಳ ಕಾಲ ಪಳಗಿಸಿದರು.
ಬೋಪಣ್ಣ ಅವರ ವಿಶೇಷತೆ ::  ಹೈದ್ರಾಬಾದ್ ನಲ್ಲಿ ನಡೆದ ವಿಂಟರ್ ರೇಸ್ 2016-17 ರ ಮೆಹಬೂಬಾಬಾದ್ ಪ್ಲೇಟ್ I-ಡಿವಿಜನ್ 1100 ಮೀಟರ್, III-ವರ್ಗದಲ್ಲಿ, 1ನಿಮಿಷ 06:76 ಸೆಕೆಂಡ್ ನಲ್ಲಿ 13/4ಐ, 1/4L HDಯಲ್ಲಿ ವಿಜೇತರಾದರು.
ಕೊಡಗು ಎಜುಕೇಶನಲ್ ಅಂಡ್ ಸೋಶಿಯಲ್ ಸರ್ವಿಸ್ ಟ್ರಸ್ಟ್ ::  K.E.S.S.T ಗೆ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರು ಬೋಪಣ್ಣ ಅವರನ್ನು ಕಳುಹಿಸಿಕೊಡುತ್ತಾರೆ. ಮಾರ್ಚಂಡ ಗಣೇಶ್ ಅವರು ಬೋಪಣ್ಣ ಅವರನ್ನು ಹೈದರಾಬಾದ್ ನಲ್ಲಿದ್ದ ಜಾಕಿ ಸ್ಕೂಲ್ ಗೆ ಕೇಕಡ ಮಂದಣ್ಣ ಅವರ ಮಾರ್ಗದರ್ಶನದಲ್ಲಿ ಸೇರಿಸುತ್ತಾರೆ. ಇವರ ಜಾಕಿ ತರಬೇತಿದಾರರಾದ ಸತೀಶ್ ಇವರನ್ನು ದಕ್ಷಿಣ ಕೊರಿಯಾಗೆ ಹೋಗಲು ಅವಕಾಶ ಮಾಡಿಕೊಟ್ಟರು. ಪ್ರಸ್ತುತ ಐರ್ಲೆಂಡ್ ನಲ್ಲಿ ಜಾಕಿ ತರಬೇತಿದಾರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೈದರಾಬಾದ್ ಗೆ ಹಿಂದಿರುಗಿ ಜಾಕಿ ವೃತ್ತಿಯಲ್ಲಿ ಮುಂದುವರಿಯಲಿದ್ದಾರೆ. ಕೇವಲ 29 ವರ್ಷದ ತರುಣ ಇಂದು ಭಾರತದ ಬಹು ಬೇಡಿಕೆಯ ಜಾಕಿ ಆಗಿದ್ದಾರೆ.  ಅವರ ಇಬ್ಬರು ತಮ್ಮಂದಿರಾದ ಬಬಿನ್ ಹಾಗು ಜೀವನ್ ಅವರು ತಮ್ಮ ಅಣ್ಣನ ಯಶಸ್ಸನ್ನು ಸದಾ ನೆನೆಯುತ್ತಾರೆ. ಸಂಸಾರದಲ್ಲಿ ಹಿರಿಯ ಮಗನಾದ ಬೋಪಣ್ಣ ಅವರು ಇವರಿಗೆ ಎಲ್ಲಾ ರೀತಿಯ ವಸತಿ ಸೌಲಭ್ಯಗಳನ್ನು ಮಾಡಿಕೊಟ್ಟಿರುತ್ತಾರೆ. ಇವರು ಹೀಗೆ ಕೊಡಗಿನ ಕೀರ್ತಿಯನ್ನು ಹೆಚ್ಚಿಸಲಿ.
ಯುವಕರಿಗೆ ಪ್ರೇರಣೆಯಾಗಲಿ :: ಕೊಡಗಿನಲ್ಲಿ ಹಲವು ಸಂಘಟನೆಗಳಿವೆ, ಕೊಡವ ಸಮಾಜ, ಫೆಡರೇಶನ್ ಆಫ್ ಕೊಡವ ಸಮಾಜ, ಅಖಿಲ ಕೊಡವ ಸಮಾಜವಿದೆ. ಇಂತಹ ಪ್ರತಿಭೆಗಳು ತೆರೆಯ ಮರೆಯಲ್ಲಿ ಇದ್ದರೂ ಅವರನ್ನು ಗುರುತಿಸಬೇಕು. ಗುರುತಿಸಿ ಮುಖ್ಯವಾಹಿನಿಗೆ ತರಬೇಕು. ಅವರ ಅನುಭವಗಳನ್ನು ಇಂದಿನ ಕೊಡಗಿನ ಮಕ್ಕಳಿಗೆ ತಿಳಿಯಪಡಿಸಬೇಕು. ಆದರೆ ಮಾತ್ರ ಕೊಡಗಿನ ಕ್ರೀಡಾ ಭವಿಷ್ಯ ಉಜ್ವಲವಾಗಲು ಸಾಧ್ಯ.
ಪ್ರಶಸ್ತಿ ಹಾಗೂ ಪುರಸ್ಕಾರಗಳು ::  ಇತ್ತೀಚಿನ ದಿನಗಳಲ್ಲಿ ನಾಡಹಬ್ಬ ದಸರಾ ಹಾಗೂ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ವೇದಿಕೆ ಕಾರ್ಯಕ್ರಮಗಳು ಕೂಡ ನಡೆಯುತ್ತಿವೆ. ಎಂದಾದರೂ ಜಿಲ್ಲಾಡಳಿತ ಹಾಗೂ ಸರ್ಕಾರದ ಪ್ರತಿನಿಧಿಗಳು ಕ್ರೀಡೆಯಲ್ಲಿ ಪದ್ಮಶ್ರೀ ಪುರಸ್ಕೃತರು, ವಿಶ್ವಕಪ್ ವಿಜೇತರು, ಒಲಂಪಿಕ್ಸ್ ನಲ್ಲಿ ಪದಕ ಗೆದ್ದವರು, ಅಂತರಾಷ್ಟ್ರೀಯ ಕ್ರೀಡಾಪಟುಗಳು ಹಾಗು ಇತರ ಕ್ರೀಡೆಗಳಿಗೆ ದುಡಿದ ಮಹನೀಯರನ್ನು ಸನ್ಮಾನಿಸಿ ಪರಿಚಯಿಸಿದ ಚರಿತ್ರೆಯಿದೆಯೇ? ಆಯಾ ಕ್ರೀಡಾ ಸಂಸ್ಥೆಗಳಾದರೂ ಈ ಕಾರ್ಯಕ್ಕೆ ಮುಂದಾಗಿ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಿ ಇಂತಹ ಮಹನೀಯರನ್ನು ಗುರುತಿಸಬೇಕು. ಕೊಡಗಿನ ಹವಾಗುಣ ಹಾಗೂ ಪ್ರಕೃತಿ ಕ್ರೀಡೆಗೆ ಪೂರಕವಾಗಿದೆ. ಆದ್ದರಿಂದ ಬೋಪಣ್ಣ ಅವರಂತೆ ಕೊಡಗಿನ ಎಲ್ಲ ಯುವಕರು ಅವರಿಗೆ ಇಷ್ಟವಾದ ಕ್ರೀಡೆಯಲ್ಲಿ ಮುಂದುವರಿಯಲಿ. ಇವರಿಗೆ ಕೊಡಗಿನ ದೇವತೆಗಳಾದ ಇಗ್ಗುತಪ್ಪ,ಕಾವೇರಮ್ಮ ಅವರ ಆಶೀರ್ವಾದದಿಂದ ಇನ್ನಷ್ಟು ಯಶಸ್ವಿ ಕಾಣಲಿ, ಎಂದು ಕೊಡಗಿನ ಜನರ ಆಶಯ.

ಕ್ರೀಡಾ ವಿಶ್ಲೇಷಣೆ ::  ಚೆಪ್ಪುಡೀರ ಕಾರ್ಯಪ್ಪ   

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮುಂಗಾರು ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರ ವಹಿಸಿ : ಡಾ.ಎನ್.ವಿ.ಪ್ರಸಾದ್ ಸೂಚನೆ*

ಮೇ 26, 2026

*ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ : ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಶಾಸಕ ಡಾ.ಮಂತರ್ ಗೌಡ*

ಮೇ 26, 2026

*AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವ : ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್*

ಮೇ 26, 2026

*ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ : ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಶಾಸಕ ಡಾ.ಮಂತರ್ ಗೌಡ*

ಮೇ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 26 NEWS DESK : ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳು ಗ್ರಾಮ ಮಟ್ಟಕ್ಕೂ ತಲುಪುತ್ತಿದ್ದು,…

*AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವ : ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್*

ಮೇ 26, 2026

*ಪ್ರವಾಸೋದ್ಯಮ  ಸಂಘ-ಸಂಸ್ಥೆಗಳ ಸಭೆ : ಕೊಡಗಿನ ಆತಿಥ್ಯ ಪ್ರವಾಸೋದ್ಯಮದ ಬಗ್ಗೆ ಆದಾರರಹಿತ ಟೀಕೆಗಳಿಗೆ ಕಡಿವಾಣ ಅಗತ್ಯ : ದಿನೇಶ್ ಕಾಯ೯ಪ್ಪ*

ಮೇ 26, 2026

*ಫೀ.ಮಾ.ಕಾರ್ಯಪ್ಪ ಕಾಲೇಜಿನ ವಾರ್ಷಿಕೋತ್ಸವ : 77 ವರ್ಷಗಳ ಸುದೀರ್ಘ ಸೇವೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ನೀಡಿದೆ : ಪ್ರೊ. ಅಶೋಕ್ ಸಂಗಪ್ಪ ಆಲೂರ ಮೆಚ್ಚುಗೆ*

ಮೇ 26, 2026

*ಮೇ 29 ಮತ್ತು 30 ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ*

ಮೇ 26, 2026

*ಮಡಿಕೇರಿ ನಗರಸಭೆಯ ಬಿಜೆಪಿ ಆಡಳಿತ ಮಂಡಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ* 

ಮೇ 26, 2026

*ನಮ್ಮೂರ ಶಾಲೆ ನಮ್ಮದು, ನಮ್ಮೂರಲ್ಲೆ ಉಳಿಯಲಿ : ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ಹಾಗೂ ಗ್ರಾಮಸ್ಥರ ಆಗ್ರಹ*

ಮೇ 26, 2026

*ನಿವೇಶನಕ್ಕಾಗಿ ಆಗ್ರಹಿಸಿ ಮೇ 29 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ*

ಮೇ 26, 2026

*ದೇವಟ್ ಪರಂಬ್ ನಲ್ಲಿ ಹಿರಿಯರಿಗೆ ಗೌರವ ಅರ್ಪಿಸಿದ ಸಿಎನ್‌ಸಿ : ಅಂತರಾಷ್ಟ್ರೀಯ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ*

ಮೇ 26, 2026

*ಸುಂಟಿಕೊಪ್ಪ : ಹಿರಿಯ ಪತ್ರಕರ್ತ ಬಿ.ಸಿ.ದಿನೇಶ್ ಅವರಿಗೆ ಸನ್ಮಾನ*

ಮೇ 25, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.