Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಜಿಲ್ಲೆಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಪ್ರಬಂಧ ಸ್ಪರ್ಧೆ*
  • *ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ದಾಳಿ ರಾಜಕೀಯ ಪ್ರೇರಿತ: ಮಾನವ ಬಂಧುತ್ವ ವೇದಿಕೆ ಆರೋಪ*
  • *ಮಡಿಕೇರಿ : ಅಧಿಕಾರಿಗಳು ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ; ಸಾರ್ವಜನಿಕ ಅಹವಾಲು ಆಲಿಸಿದ ಲೋಕಾಯುಕ್ತ*
  • *ಕ.ಸಾ.ಪ. ವತಿಯಿಂದ ತ್ರಿಭಾಷಾ ಸಾಹಿತಿ ವಿ.ಎಸ್. ರಾಮಕೃಷ್ಣ ದತ್ತಿ ಉಪನ್ಯಾಸ ಕಾರ್ಯಕ್ರಮ; ವಿ.ಎಸ್. ರಾಮಕೃಷ್ಣ ಕೊಡಗಿನ ಮೇರು ಸಾಹಿತಿ: ಟಿ.ಜಿ. ಪ್ರೇಮಕುಮಾರ್ ಬಣ್ಣನೆ*
  • *ಬೇಟೋಳಿ : ರೈತರೊಂದಿಗೆ ಕಂಪನಿಗಳು ಕೈಜೋಡಿಸಿದರೆ ಕೃಷಿಯಲ್ಲಿ ಅಭಿವೃದ್ಧಿ ಸಾಧ್ಯ: ಪೂಜಾ ಸಜೇಶ್*
  • *ಅಭಿಮನ್ಯುವಿಗೆ ಅಕ್ಷರತೇರಿನ ಬೀಳ್ಕೊಡುಗೆ; ಹಿರಿಯ ಪತ್ರಕರ್ತ ಐತಿಚಂಡ ರಮೇಶ್‌ ಉತ್ತಪ್ಪರ ಅಭಿಮನ್ಯು ಕುರಿತ ಎರಡು ಕೃತಿಗಳ ಬಿಡುಗಡೆ; `ಮೌನದ ಮಹಾ ಪಯಣ’ ‘ಅಭಿಮನ್ಯುವಿಗೆ ಕಾವ್ಯಾರತಿ’ ಕೃತಿ*
  •  *ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ; ಗಮನಸೆಳೆದ ಮೊಸರು ಕುಡಿಕೆ ಹಾಗೂ ಮಕ್ಕಳ ಛದ್ಮವೇಷ ಸ್ಪರ್ಧೆ*
  • *ಜೇನುಕಲ್ಲು ಹಾಲು ಉತ್ಪಾದಕರ ಸಂಘಕ್ಕೆ ರೂ.6.78 ಲಕ್ಷ ಲಾಭ*
  • **ಕೈಲ್ ಪೊವ್ದ್ ಹಬ್ಬದ ಪ್ರಯುಕ್ತ ಸಿಎನ್‌ಸಿಯಿಂದ ದೇವಟ್ ಪರಂಬ್ ಸ್ಮಾರಕ, ಮಡಿಕೇರಿ ಕೋಟೆಯಲ್ಲಿ ಪುಷ್ಪ ನಮನ**
  • *ಕೈಲ್ ಪೊವ್ದ್ ಹಬ್ಬದ ಪ್ರಯುಕ್ತ ಸಿಎನ್‌ಸಿಯಿಂದ ದೇವಟ್ ಪರಂಬ್ ಸ್ಮಾರಕ, ಮಡಿಕೇರಿ ಕೋಟೆಯಲ್ಲಿ ಪುಷ್ಪ ನಮನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಬೆಂಗಳೂರಿನಲ್ಲಿ ರಾಜ್ಯಮಟ್ಟದ ನಾಲ್ಕನೇ ವೈಜ್ಞಾನಿಕ ಸಮ್ಮೇಳನ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಬೆಂಗಳೂರಿನಲ್ಲಿ ರಾಜ್ಯಮಟ್ಟದ ನಾಲ್ಕನೇ ವೈಜ್ಞಾನಿಕ ಸಮ್ಮೇಳನ*

ಅಕ್ಟೋಬರ್ 30, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಕುಶಾಲನಗರ ಅ.30 NEWS DESK : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ ಹಾಗೂ ಬೆಂಗಳೂರು ಶೈಕ್ಷಣಿಕ ಜಿಲ್ಲೆ ಮತ್ತು ಕರ್ನಾಟಕ ರಾಜ್ಯ ಖಾಸಗಿ ಶಾಲಾ ಕಾಲೇಜುಗಳ ಒಕ್ಕೂಟ, ಕರ್ನಾಟಕ ರಾಜ್ಯ ಮಾನವ ಬಂಧುತ್ವ ವೇದಿಕೆ, ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಇವುಗಳ ಸಹಯೋಗದೊಂದಿಗೆ ಡಿಸೆಂಬರ್ 28 ಮತ್ತು 29ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ನಾಲ್ಕನೇ ವೈಜ್ಞಾನಿಕ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಹೇಳಿದರು. ಕುಶಾಲನಗರದ ವೀರಭೂಮಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪರಿಷತ್ತು ಆರಂಭವಾಗಿ ಯಶಸ್ವಿಯಾಗಿ ನಾಲ್ಕು ವರ್ಷಗಳನ್ನು ದಾಟಿದ್ದು ಜಸ್ಟಿಸ್ ನಾಗಮೋಹನ್ ದಾಸ್ ಹಾಗೂ ಇಸ್ರೋದ ಮಾಜಿ ಅಧ್ಯಕ್ಷರು ಖ್ಯಾತ ವಿಜ್ಞಾನಿಗಳಾದ ಎ.ಎಸ್. ಕಿರಣ್ ಕುಮಾರ್ ಮಾರ್ಗದರ್ಶನದಲ್ಲಿ ಹಾಗೂ ಅನೇಕ ಚಿಂತಕರ ಸಲಹೆ ಮೇರೆಗೆ ರಾಜ್ಯಮಟ್ಟದಲ್ಲಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಪರಿಷತ್ತು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಹಂತದಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು ಜನಪರವಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಸದಸ್ಯರನ್ನು ಹೊಂದಿದ ಹೆಗ್ಗಳಿಕೆ ಪರಿಷತ್ತಿಗೆ ಇದೆ. ಈಗಾಗಲೇ ಶಿವಮೊಗ್ಗ, ತುಮಕೂರು, ಲಿಂಗಸಗೂರು ನಲ್ಲಿ ಯಶಸ್ವಿಯಾಗಿ ವಾರ್ಷಿಕ ಸಮ್ಮೇಳನಗಳನ್ನು ನಡೆಸಿದ್ದು, ರಾಜ್ಯ ಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನವನ್ನು ಐತಿಹಾಸಿಕವಾಗಿ ನಡೆಸಲು ಸಕಲ ಸಿದ್ಧತೆಯನ್ನು ನಡೆಸಲಾಗಿದೆ. ನಾಡಿನ ಹೆಸರಾಂತ ರಂಗಭೂಮಿ ಕಲಾವಿದೆ, ಚಲನಚಿತ್ರ ನಟಿ, ಸಾಮಾಜಿಕ ಕಳಕಳಿಯುಳ್ಳ ಸಾಂಸ್ಕೃತಿಕ ರಾಯಭಾರಿ ವ್ಯಕ್ತಿತ್ವದ ಉಮಾಶ್ರೀ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷ ರನ್ನಾಗಿ ಆಯ್ಕೆ ಮಾಡಲಾಗಿದೆ. ಸಮ್ಮೇಳನವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು. ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ಮಂತ್ರಿಗಳು, ಕೇಂದ್ರ ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಸಂಸದರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ರಾಜ್ಯಮಟ್ಟದ ಅಧಿಕಾರಿಗಳು, ವಿಜ್ಞಾನಿಗಳು ಅನೇಕ ಚಿಂತಕರು ಭಾಗವಹಿಸಲಿದ್ದಾರೆ ಸಚಿವರಾದ ಸತೀಶ್ ಜಾರಕಿಹೊಳಿಯವರ ನೇತೃತ್ವದಲ್ಲಿ ನಡೆಯುವ ಸಮ್ಮೇಳನಕ್ಕೆ ರಾಜ್ಯದ ಉದ್ದಗಲಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ 30 ಸಾವಿರಕ್ಕೂ ಅಧಿಕ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸುವರು. ವಿಜ್ಞಾನ ವಸ್ತು ಪ್ರದರ್ಶನ, ವೈವಿಧ್ಯಮಯವಾದ ಆಹಾರಮೇಳ, ಕರಕುಶಲ ವಸ್ತು ಪ್ರದರ್ಶನ ಮೊದಲಾದ ವಸ್ತು ಪ್ರದರ್ಶನಗಳ ಆಯೋಜಿಸಿದೆ. ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಬುದ್ಧನ ಬೆಳಕು ಹಾಗೂ ಕೆಂಪೇಗೌಡ ನಾಟಕ ಪ್ರದರ್ಶನವಾಗಲಿವೆ. ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಗಳನ್ನು ಆಯೋಜಿಸಿದೆ. ನಾಲ್ಕು ವಿಚಾರಗೋಷ್ಠಿಗಳು ನಡೆಯಲಿವೆ. ವಿಶೇಷವಾಗಿ ಪರಿಷತ್ತಿನ ಮಹಾ ಅಧಿವೇಶನ ಆಯೋಜಿಸಿದೆ. ರಾಜ್ಯಮಟ್ಟದ ಜೀವಮಾನ ಸಾಧನ ಪ್ರಶಸ್ತಿಯನ್ನು ಹಾಗೂ ಪ್ರತಿ ಶೈಕ್ಷಣಿಕ ಜಿಲ್ಲೆಗೆ ಒಬ್ಬರಂತೆ ಸುಮಾರು 37 ಸಾಧಕರಿಗೆ ಡಾ ಎಚ್ ನರಸಿಂಹಯ್ಯ ಪ್ರಶಸ್ತಿ , ಜೀವಮಾನ ಶ್ರೇಷ್ಠ ಸಾಧನ ಪ್ರಶಸ್ತಿಯನ್ನು 10 ಜನರಿಗೆ ನೀಡಲಾಗುತ್ತಿದ್ದು 10 ಸಾವಿರ ರು. ನಗದು, ತಾಮ್ರ ಫಲಕ ಗೌರವ ಸಮರ್ಪಣೆ ನೀಡಿ ಗೌರವಿಸಲಾಗುವುದು ಪ್ರಮುಖವಾಗಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಸಾಧಕರನ್ನು ಗುರುತಿಸಲಾಗಿದ್ದು ಜ್ಞಾನ ಪ್ರಕಾಶ ಸ್ವಾಮೀಜಿ ಮೈಸೂರು, ಬಿ ಆರ್ ಪಾಟೀಲ್, ಮೋಹನ್ ಆಳ್ವ, ಮಹಾಂತೇಶ್ ಗೌಡ ಪಾಟೀಲ್, ಲೀಲಾದೇವಿ ಆರ್ ಪ್ರಸಾದ್, ಶಿವ ಚಿತ್ತಪ್ಪ, ಡಾ. ಎಚ್. ಎಸ್. ಅನುಪಮಾ, ಕೆ ಶರೀಫ, ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಎಂ. ಎನ್. ಆಶಾದೇವಿ ಇವರಿಗೆ ನೀಡಲು ಪರಿಷತ್ತಿನ ರಾಜ್ಯಮಟ್ಟದ ಕಾರ್ಯಕಾರಿ ಸಮಿತಿಯಲ್ಲಿ ನಿರ್ಣಯಿಸಲಾಗಿದೆ. ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ಮಹಿಳಾ ಕೇಂದ್ರಿತವಾಗಿ ವಿಭಿನ್ನವಾಗಿ ಆಯೋಜಿಸಲಾಗುತ್ತಿದ್ದು ಈ ಸಮ್ಮೇಳನಕ್ಕೆ ಹೊರ ಜಿಲ್ಲೆಯಿಂದ ಬರುವವರಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗಿದ್ದು ಭಾಗವಹಿಸಿದ ಎಲ್ಲರಿಗೂ ಎರಡು ದಿನಗಳ ಕಾಲ ಊಟ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುವುದು. ಸಾರ್ವಜನಿಕರು ವಿವಿಧ ಕ್ಷೇತ್ರಗಳ ಆಸಕ್ತರು ವಿದ್ಯಾರ್ಥಿಗಳು ಶಿಕ್ಷಕರು, ಉಪನ್ಯಾಸಕರು ನೌಕರರು,ಯುವಕರು, ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದೆ. ಈ ಸಂದರ್ಭದಲ್ಲಿ ಪರಿಷತ್ತಿನ ಪ್ರಮುಖರಾದ ಡಾ. ಆಂಜನಪ್ಪ,ವೈ.ಎನ್. ಶಂಕರೇಗೌಡ, ಡಾ.ಶ್ರೀರಾಮಚಂದ್ರಪ್ಪ, ಗೌರಿ ಪ್ರಸನ್ನ, ಸುಧಾಚಣ್ಣನವರ್, ಡಾ.ಉಶಾದೇವಿ, ಡಾ.ಚಿಕ್ಕಹನುಮಂತೇ ಗೌಡ, ಎಸ್. ವೈ. ಹೊಂಬಾಳ್, ವಿ.ಟಿ.ಸ್ವಾಮಿ, ಕೊಡಗು ಜಿಲ್ಲೆಯ ಅಧ್ಯಕ್ಷೆ ವನಿತಾ ಚಂದ್ರಮೋಹನ್ ಹಾಗೂ ಪಿ.ವಿ. ಸಿದ್ದಲಿಂಗಮ್ಮ, ಶರಣಬಸವ ಕಲ್ಲ, ಕೆ.ಎಸ್. ವಿಶ್ವನಾಥ್ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ಅಧ್ಯಕ್ಷರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಜಿಲ್ಲೆಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಪ್ರಬಂಧ ಸ್ಪರ್ಧೆ*

ಸೆಪ್ಟೆಂಬರ್ 9, 2026

*ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ದಾಳಿ ರಾಜಕೀಯ ಪ್ರೇರಿತ: ಮಾನವ ಬಂಧುತ್ವ ವೇದಿಕೆ ಆರೋಪ*

ಸೆಪ್ಟೆಂಬರ್ 9, 2026

*ಮಡಿಕೇರಿ : ಅಧಿಕಾರಿಗಳು ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ; ಸಾರ್ವಜನಿಕ ಅಹವಾಲು ಆಲಿಸಿದ ಲೋಕಾಯುಕ್ತ*

ಸೆಪ್ಟೆಂಬರ್ 9, 2026

*ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ದಾಳಿ ರಾಜಕೀಯ ಪ್ರೇರಿತ: ಮಾನವ ಬಂಧುತ್ವ ವೇದಿಕೆ ಆರೋಪ*

ಸೆಪ್ಟೆಂಬರ್ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಸೆ.9: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿರುವ…

*ಮಡಿಕೇರಿ : ಅಧಿಕಾರಿಗಳು ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ; ಸಾರ್ವಜನಿಕ ಅಹವಾಲು ಆಲಿಸಿದ ಲೋಕಾಯುಕ್ತ*

ಸೆಪ್ಟೆಂಬರ್ 9, 2026

*ಕ.ಸಾ.ಪ. ವತಿಯಿಂದ ತ್ರಿಭಾಷಾ ಸಾಹಿತಿ ವಿ.ಎಸ್. ರಾಮಕೃಷ್ಣ ದತ್ತಿ ಉಪನ್ಯಾಸ ಕಾರ್ಯಕ್ರಮ; ವಿ.ಎಸ್. ರಾಮಕೃಷ್ಣ ಕೊಡಗಿನ ಮೇರು ಸಾಹಿತಿ: ಟಿ.ಜಿ. ಪ್ರೇಮಕುಮಾರ್ ಬಣ್ಣನೆ*

ಸೆಪ್ಟೆಂಬರ್ 9, 2026

*ಬೇಟೋಳಿ : ರೈತರೊಂದಿಗೆ ಕಂಪನಿಗಳು ಕೈಜೋಡಿಸಿದರೆ ಕೃಷಿಯಲ್ಲಿ ಅಭಿವೃದ್ಧಿ ಸಾಧ್ಯ: ಪೂಜಾ ಸಜೇಶ್*

ಸೆಪ್ಟೆಂಬರ್ 9, 2026

*ಅಭಿಮನ್ಯುವಿಗೆ ಅಕ್ಷರತೇರಿನ ಬೀಳ್ಕೊಡುಗೆ; ಹಿರಿಯ ಪತ್ರಕರ್ತ ಐತಿಚಂಡ ರಮೇಶ್‌ ಉತ್ತಪ್ಪರ ಅಭಿಮನ್ಯು ಕುರಿತ ಎರಡು ಕೃತಿಗಳ ಬಿಡುಗಡೆ; `ಮೌನದ ಮಹಾ ಪಯಣ’ ‘ಅಭಿಮನ್ಯುವಿಗೆ ಕಾವ್ಯಾರತಿ’ ಕೃತಿ*

ಸೆಪ್ಟೆಂಬರ್ 9, 2026

 *ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ; ಗಮನಸೆಳೆದ ಮೊಸರು ಕುಡಿಕೆ ಹಾಗೂ ಮಕ್ಕಳ ಛದ್ಮವೇಷ ಸ್ಪರ್ಧೆ*

ಸೆಪ್ಟೆಂಬರ್ 9, 2026

*ಜೇನುಕಲ್ಲು ಹಾಲು ಉತ್ಪಾದಕರ ಸಂಘಕ್ಕೆ ರೂ.6.78 ಲಕ್ಷ ಲಾಭ*

ಸೆಪ್ಟೆಂಬರ್ 9, 2026

**ಕೈಲ್ ಪೊವ್ದ್ ಹಬ್ಬದ ಪ್ರಯುಕ್ತ ಸಿಎನ್‌ಸಿಯಿಂದ ದೇವಟ್ ಪರಂಬ್ ಸ್ಮಾರಕ, ಮಡಿಕೇರಿ ಕೋಟೆಯಲ್ಲಿ ಪುಷ್ಪ ನಮನ**

ಸೆಪ್ಟೆಂಬರ್ 9, 2026

*ಕೈಲ್ ಪೊವ್ದ್ ಹಬ್ಬದ ಪ್ರಯುಕ್ತ ಸಿಎನ್‌ಸಿಯಿಂದ ದೇವಟ್ ಪರಂಬ್ ಸ್ಮಾರಕ, ಮಡಿಕೇರಿ ಕೋಟೆಯಲ್ಲಿ ಪುಷ್ಪ ನಮನ*

ಸೆಪ್ಟೆಂಬರ್ 9, 2026

*ದೇವಸ್ಥಾನಗಳ ಅಭಿವೃದ್ಧಿಗೆ 50 ಲಕ್ಷ ಅನುದಾನಕ್ಕೆ ಶಾಸಕ ಡಾ. ಮಂತರ್ ಗೌಡ ಮನವಿ*

ಸೆಪ್ಟೆಂಬರ್ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.