
ಸುಂಟಿಕೊಪ್ಪ NEWS DESK ನ.10 : ಸುಂಟಿಕೊಪ್ಪ ಮಲಯಾಳಿ ಸಮಾಜದ ವತಿಯಿಂದ 17ನೇ ವರ್ಷದ ಓಣಂ ಆಚರಣೆಯ ಪ್ರಯುಕ್ತ ಸ್ಥಳೀಯ ಜಿಯಂಪಿ ಶಾಲಾ ಮೈದಾನದಲ್ಲಿ ಭಾನುವಾರ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಾಡಿಸಲಾಗಿತ್ತು. ಗ್ರಾಮೀಣಾ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಬೆಲೂನ್ ಹೊಡೆಯುವುದು, ಬೆಲೂನ್ ಕಾಲಿನಲ್ಲಿ ಕಟ್ಟಿ ಓಟದ ಸ್ಪರ್ಧೆ, ಕಾಳು ಹೆಕ್ಕುವುದು, ಓಟದ ಸ್ಪರ್ದೆಗಳು, ಪುರುಷರ ಮತ್ತು ಮಹಿಳೆಯರಿಗಾಗಿ ಹಗ್ಗಾಜಗ್ಗಾಟ ಸ್ಪರ್ದೆಗಳು ನಡೆದವು. ಮದ್ಯಾಹ್ನದ ನಂತರ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ದೆಗಳನ್ನು ಏರ್ಪಾಡಿಸಲಾಗಿತ್ತು. ಮಹಿಳೆಯರಿಗೆ ವಿವಿಧ ರೀತಿಯ ಮನೋರಂಜನ ಆಟೋಟ ಸ್ಪರ್ದೆಗಳು ನಡೆದವು. ವಿಜೇತರಿಗೆ ನ.18 ರಂದು ನಡೆಯುವ ಓಣಂ ಆಚರಣೆಯ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಅಧ್ಯಕ್ಷ ಶಶಿಕುಮಾರ್ ತಿಳಿಸಿದರು. ಸಂಘದ ಅಧ್ಯಕ್ಷ ಶಶಿಕುಮಾರ್, ಪದಾಧಿಕಾರಿಗಳಾದ ವಾಸುದೇವ, ಕನೀಸ್, ಶಿವಮಣಿ, ಅನಿಲ್ ಕುಮಾರ್ ಸೇರಿದಂತೆ ಪದಾಧಿಕಾರಿಗಳು ಇದ್ದರು.








