
ಸುಂಟಿಕೊಪ್ಪ NEWS DESK ನ.10 : ಅತ್ತೂರು ನಲ್ಲೂರು ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಧ್ಯ ರಾತ್ರಿ ಕಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ. ಕಂಬಿಬಾಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯಿಂದ ರೂ.2 ಸಾವಿರ ನಗದು ಕಳ್ಳತನವಾಗಿದೆ. ಕೊಠಡಿಯಿಂದ ಟೇಬಲ್ ಕ್ಲಾತ್ ನ್ನು ಹೊರತಂದಿರುವ ಚೋರರು ಮಲಗಿ ಹೋಗಿರುವ ಕುರುಹುಗಳು ಕಂಡು ಬಂದಿದೆ. ಶಾಲೆಯ ಅಕ್ಷರದಾಸೋಹ ಅಡುಗೆ ಕೋಣೆಯ ಬೀಗ ಮುರಿಯಲು ಪ್ರಯತ್ನಿಸಿದ್ದಾರೆ. ಕಂಬಿಬಾಣೆ ಶಾಲಾ ಮುಖ್ಯೋಪಾಧ್ಯಾಯಿನಿ ನೀಡಿದ ದೂರಿನನ್ವಯ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್, ಅಪರಾಧ ವಿಭಾಗದ ಭಾರತಿ, ಶ್ವಾನದಳ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.








