Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಬಾಳೆಯಡ ಕಿಶನ್ ಪೂವಯ್ಯ ಅವರ ‘ರಾಜಕೀಯ ಮತ್ತು ಪ್ರಕೃತಿ’ ಕೃತಿಗೆ ಬಿ.ಎಸ್.ಗೋಪಾಲಕೃಷ್ಣ ದತ್ತಿ ಪ್ರಶಸ್ತಿ*
  • *ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಬಂಪರ್ ಆಫರ್: ಸರ್ಕಾರದಿಂದ ಉಚಿತ ಆನ್‌ಲೈನ್ ಕೋಚಿಂಗ್*
  • *ಬೆಂಗಳೂರಿನಲ್ಲಿ ಕೊಡಗು ಗೌಡ ಸಮಾಜದ ಕೈಲ್ ಮುಹೂರ್ತ ಜಂಬರ : ಸಿಎಂ ಡಿ.ಕೆ.ಶಿವಕುಮಾರ್ ಭಾಗಿ*
  • *ಮಡಿಕೇರಿ ಸರಕಾರಿ ಮಹಿಳಾ ಕಾಲೇಜಿನಲ್ಲಿ ರೋಟರೆಕ್ಟ್ ಕ್ಲಬ್ ಪದಗ್ರಹಣ*
  • *ದಸರಾ ಸುವರ್ಣ ಮಹೋತ್ಸವ ಸಂಭ್ರಮ : ಶ್ರೀ ಕೋಟೆ ಮಹಾಗಣಪತಿ ಸಮಿತಿಯಿಂದ ಸ್ವಚ್ಛತಾ ಶ್ರಮದಾನ : ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ*
  • *ಸೂಪರ್ ಎಲ್‌ನಿನೊ ಪರಿಣಾಮ : ನೀರನ್ನು ಮಿತವಾಗಿ ಬಳಸಿ ಸಹಕರಿಸಿ : ಸಚಿವ ಪಿ.ಎಂ. ನರೇಂದ್ರಸ್ವಾಮಿ*
  • *ನಿಯಮಗಳಡಿಯಲ್ಲೇ ಜವಾಬ್ದಾರಿಯಿಂದ ದಸರಾ ಆಚರಿಸಿ : ಸಚಿವ ಪಿ.ಎಂ.ನರೇಂದ್ರಸ್ವಾಮಿ*
  • *ಮಕ್ಕಳ ಸುರಕ್ಷತೆಗಾಗಿ ವಿವಿಧೆಡೆ ಜಾಗೃತಿ ಅಭಿಯಾನ*
  • *ಡಾ. ಕೆ.ಪಿ. ಲಲಿತ ಅವರ ‘ಕೊಡಗಿನ ಜಾನಪದ ಕಥೆಗಳು’ ಕೃತಿಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ*
  • *ಮಕ್ಕಂದೂರು-ಮುಕ್ಕೋಡ್ಲು ಗೌಡ ಸಮಾಜದಿಂದ ಕೈಲ್ ಮುಹೂರ್ತ ಸಂತೋಷಕೂಟ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕುಶಾಲನಗರ- ಶ್ರೀರಂಗಪಟ್ಟಣ ರಸ್ತೆ ಕಾಮಗಾರಿ ಶೀಘ್ರ ಪೂರ್ಣ : ಸಂಸದ ಯದುವೀರ್ ಭರವಸೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕುಶಾಲನಗರ- ಶ್ರೀರಂಗಪಟ್ಟಣ ರಸ್ತೆ ಕಾಮಗಾರಿ ಶೀಘ್ರ ಪೂರ್ಣ : ಸಂಸದ ಯದುವೀರ್ ಭರವಸೆ*

ನವೆಂಬರ್ 15, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ನ.15 NEWS DESK : ಕುಶಾಲನಗರ- ಶ್ರೀರಂಗಪಟ್ಟಣ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದ್ದು, ಕೊಡಗಿನ ಜನರಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಭರವಸೆ ನೀಡಿದ್ದಾರೆ. ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕೊಡಗು ಜಿಲ್ಲೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸದಾ ಶ್ರಮಿಸುವುದಾಗಿ ತಿಳಿಸಿದರು. ಕುಶಾಲನಗರದವರೆಗಿನ ರೈಲು ಮಾರ್ಗದ ಕಾಮಗಾರಿ ಕೂಡ ಸಧ್ಯದಲ್ಲೇ ಆರಂಭಗೊಳ್ಳಲಿದೆ. ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಮಸ್ಯೆಯ ಕುರಿತು ದೂರುಗಳು ಕೇಳಿ ಬಂದಿದೆ. ಜಿಲ್ಲೆಯಾದ್ಯಂತ ಟವರ್ ಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ, ಶೀಘ್ರ ನೆಟ್‍ವರ್ಕ್ ಸಮಸ್ಯೆ ಬಗೆಹರಿಯಲಿದೆ. ಗ್ರಾಮೀಣ ಭಾಗಕ್ಕೆ ಕುಡಿಯುವ ನೀರು, ರಸ್ತೆ, ತಡೆಗೋಡೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಬದ್ಧನಾಗಿರುವುದಾಗಿ ತಿಳಿಸಿದರು.
::: ಮಾವುತರ ಸಮಸ್ಯೆಗೆ ಸ್ಪಂದನೆ :::
ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿದ್ದ ಸಂಸದ ಯದುವೀರ್ ಅವರು ಮಾವುತರು ಹಾಗೂ ಕಾವಡಿಗರ ಸಮಸ್ಯೆಗಳನ್ನು ಆಲಿಸಿದರು. ಮನವಿಯನ್ನು ಸ್ವೀಕರಿಸಿದ ಅವರು ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಂತರ ಸಂಸದರು ಸಾಕಾನೆಗಳಿಗೆ ಆಹಾರ ನೀಡಿದರು.
::: ಸಂಘಟನಾ ಪರ್ವ :::
ಬಿಜೆಪಿಯ ಮಡಿಕೇರಿ ಗ್ರಾಮಾಂತರ ಮಂಡಲದ ವತಿಯಿಂದ ನಡೆದ ಸಂಘಟನಾ ಪರ್ವ ಕಾರ್ಯಕ್ರಮಕ್ಕೆ ಗೋಪೂಜೆ ಮಾಡುವ ಮೂಲಕ ಸಂಸದರು ಚಾಲನೆ ನೀಡಿದರು. ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಹಾಗೂ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಬಿಜೆಪಿ ಸಂಘಟನಾ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಪಕ್ಷ ಕಟ್ಟುವ ಮೂಲಕ ಸಶಕ್ತ ಭಾರತ ನಿರ್ಮಾಣ ಮಾಡಲು ಕಾರ್ಯಕರ್ತರಿಗೆ ಕರೆ ನೀಡಿದರು. ನಂತರ ಗ್ರಾಮಸ್ಥರ ಬೇಡಿಕೆಗಳನ್ನು ಆಲಿಸಿ ಅಹವಾಲು ಸ್ವೀಕರಿಸಿದರು. ನಂಜರಾಯಪಟ್ಟಣದ ಪುರಾತನ ವೀರಭದ್ರ ದೇವಾಲಯಕ್ಕೆ ಭೇಟಿ ನೀಡಿದ ಯದುವೀರ್ ವಿಶೇಷ ಪೂಜೆ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಮಹಿಳಾ ಬಿಜೆಪಿ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಎಸ್‍ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ, ವಿವಿಧ ಮೋರ್ಚಾ, ಮಂಡಲಗಳ ಪದಾಧಿಕಾರಿಗಳು, ನಗರ ಮತ್ತು ಗ್ರಾಮಾಂತರ ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

*ಬಾಳೆಯಡ ಕಿಶನ್ ಪೂವಯ್ಯ ಅವರ ‘ರಾಜಕೀಯ ಮತ್ತು ಪ್ರಕೃತಿ’ ಕೃತಿಗೆ ಬಿ.ಎಸ್.ಗೋಪಾಲಕೃಷ್ಣ ದತ್ತಿ ಪ್ರಶಸ್ತಿ*

ಅಕ್ಟೋಬರ್ 4, 2026

*ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಬಂಪರ್ ಆಫರ್: ಸರ್ಕಾರದಿಂದ ಉಚಿತ ಆನ್‌ಲೈನ್ ಕೋಚಿಂಗ್*

ಅಕ್ಟೋಬರ್ 4, 2026

*ಬೆಂಗಳೂರಿನಲ್ಲಿ ಕೊಡಗು ಗೌಡ ಸಮಾಜದ ಕೈಲ್ ಮುಹೂರ್ತ ಜಂಬರ : ಸಿಎಂ ಡಿ.ಕೆ.ಶಿವಕುಮಾರ್ ಭಾಗಿ*

ಅಕ್ಟೋಬರ್ 4, 2026

*ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಬಂಪರ್ ಆಫರ್: ಸರ್ಕಾರದಿಂದ ಉಚಿತ ಆನ್‌ಲೈನ್ ಕೋಚಿಂಗ್*

ಅಕ್ಟೋಬರ್ 4, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ

ಸರ್ಕಾರಿ ಉದ್ಯೋಗ ಪಡೆಯುವ ಕನಸು ಕಾಣುತ್ತಿರುವ ಕರ್ನಾಟಕದ ನಿರುದ್ಯೋಗಿ ಯುವಜನರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ‘ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ…

*ಬೆಂಗಳೂರಿನಲ್ಲಿ ಕೊಡಗು ಗೌಡ ಸಮಾಜದ ಕೈಲ್ ಮುಹೂರ್ತ ಜಂಬರ : ಸಿಎಂ ಡಿ.ಕೆ.ಶಿವಕುಮಾರ್ ಭಾಗಿ*

ಅಕ್ಟೋಬರ್ 4, 2026

*ಮಡಿಕೇರಿ ಸರಕಾರಿ ಮಹಿಳಾ ಕಾಲೇಜಿನಲ್ಲಿ ರೋಟರೆಕ್ಟ್ ಕ್ಲಬ್ ಪದಗ್ರಹಣ*

ಅಕ್ಟೋಬರ್ 4, 2026

*ದಸರಾ ಸುವರ್ಣ ಮಹೋತ್ಸವ ಸಂಭ್ರಮ : ಶ್ರೀ ಕೋಟೆ ಮಹಾಗಣಪತಿ ಸಮಿತಿಯಿಂದ ಸ್ವಚ್ಛತಾ ಶ್ರಮದಾನ : ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ*

ಅಕ್ಟೋಬರ್ 4, 2026

*ಸೂಪರ್ ಎಲ್‌ನಿನೊ ಪರಿಣಾಮ : ನೀರನ್ನು ಮಿತವಾಗಿ ಬಳಸಿ ಸಹಕರಿಸಿ : ಸಚಿವ ಪಿ.ಎಂ. ನರೇಂದ್ರಸ್ವಾಮಿ*

ಅಕ್ಟೋಬರ್ 3, 2026

*ನಿಯಮಗಳಡಿಯಲ್ಲೇ ಜವಾಬ್ದಾರಿಯಿಂದ ದಸರಾ ಆಚರಿಸಿ : ಸಚಿವ ಪಿ.ಎಂ.ನರೇಂದ್ರಸ್ವಾಮಿ*

ಅಕ್ಟೋಬರ್ 3, 2026

*ಮಕ್ಕಳ ಸುರಕ್ಷತೆಗಾಗಿ ವಿವಿಧೆಡೆ ಜಾಗೃತಿ ಅಭಿಯಾನ*

ಅಕ್ಟೋಬರ್ 3, 2026

*ಡಾ. ಕೆ.ಪಿ. ಲಲಿತ ಅವರ ‘ಕೊಡಗಿನ ಜಾನಪದ ಕಥೆಗಳು’ ಕೃತಿಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ*

ಅಕ್ಟೋಬರ್ 3, 2026

*ಮಕ್ಕಂದೂರು-ಮುಕ್ಕೋಡ್ಲು ಗೌಡ ಸಮಾಜದಿಂದ ಕೈಲ್ ಮುಹೂರ್ತ ಸಂತೋಷಕೂಟ*

ಅಕ್ಟೋಬರ್ 3, 2026

*ನಶಾ ಮುಕ್ತ ಭಾರತ ಜಾಗೃತಿ ಕಾರ್ಯಕ್ರಮ*

ಅಕ್ಟೋಬರ್ 3, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.