
ಮಡಿಕೇರಿ ನ.16 NEWS DESK : ಕೆದಮುಳ್ಳೂರು ಗ್ರಾ.ಪಂ ವ್ಯಾಪ್ತಿಯಲ್ಲಿರುವ ಕಲ್ಲುಮೊಟ್ಟೆ ಕ್ರಿಶ್ಚಿಯನ್ ಕಾಲೋನಿಯ ಅಂಗನವಾಡಿಯಲ್ಲಿ ಮಕ್ಕಳ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕೆದಮುಳ್ಳೂರು ಗ್ರಾ.ಪಂ ಸದಸ್ಯ ಸಾಬಾ ಮುತ್ತಪ್ಪ, ಅಂಗನವಾಡಿ ಕಾರ್ಯಕರ್ತೆ ಕೆ.ಎಂ.ಉಷಾ ಕುಮಾರಿ, ಸಹಾಯಕಿ ರೊಶಿನಿ ವಿಲ್ಮಾ, ಮಕ್ಕಳು ಹಾಗೂ ಪೋಷಕರು ಹಾಜರಿದ್ದರು.









