Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸರಣಿ ಅಪಘಾತಗಳಿಗೆ ಬ್ರೇಕ್: ರಸ್ತೆಗಿಳಿದ ಕರವೇ ಸ್ವಾಭಿಮಾನಿ ಸೇನೆ; ಕುಶಾಲನಗರ: ರಾಜ್ಯ ಹೆದ್ದಾರಿಯ ಹಂಪ್‌ಗಳಿಗೆ ಸ್ವತಃ ಬಣ್ಣ ಬಳಿದು ರಸ್ತೆ ಸುರಕ್ಷತೆಗೆ ಮುಂದಾದ ಕಾರ್ಯಕರ್ತರು*
  • *ಅಭಿಮನ್ಯುವಿಗೆ ಅಕ್ಷರ ತೇರಿನಲ್ಲಿ ಬೀಳ್ಕೊಡುಗೆ ಹಾಗೂ ಐತಿಚಂಡ ರಮೇಶ್ ಉತ್ತಪ್ಪ ಅವರ ಎರಡು ಕೃತಿಗಳ ಬಿಡುಗಡೆ*
  • *ಉಡೋತ್ ಮೊಟ್ಟೆಯಲ್ಲಿ ಕೈಲ್ ಪೊಳ್ದ್ ಸಂಭ್ರಮ*
  • *ಕಸ್ತೂರಿ ರಂಗನ್ ವರದಿ : ಜನವಸತಿ ಗ್ರಾಮಗಳನ್ನು ಸಂಪೂರ್ಣ ಹೊರಗಿಡಲು ಆಗ್ರಹ*
  • *ಭಾರತ್ ಜೋಡೋ : ಲಾಂಛನ ಅನಾವರಣ*
  • *ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟ*
  • *ರಾಷ್ಟ್ರೀಯ ಜೂನಿಯರ್ ಬಾಲಕಿಯರ ಹಾಕಿ ಪಂದ್ಯಾವಳಿ : ಹೈದರಾಬಾದ್ ವಲಯಕ್ಕೆ ರನ್ನರ್ ಅಪ್ ಪ್ರಶಸ್ತಿ*
  • *ಮಹಿಳೆಯರು ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು: ಶಾಸಕ ಡಾ. ಮಂತರ್ ಗೌಡ*
  • *ಒಂಟಿ ಸಲಗ ದಾಳಿ: ಕೂಲಿ ಕಾರ್ಮಿಕನಿಗೆ ಗಂಭೀರ ಗಾಯ*
  • *ಅಮೆರಿಕ ಪ್ರವಾಸದಲ್ಲಿದ್ದರೂ ಕಸ್ತೂರಿರಂಗನ್ ವರದಿ ಕುರಿತ ಸಭೆಯಲ್ಲಿ ಭಾಗವಹಿಸಲಿರುವ ಸಂಸದ ಯದುವೀರ್ ಒಡೆಯರ್; ಕೊಡಗು ಹಾಗೂ ಪಶ್ಚಿಮ ಘಟ್ಟಗಳ ಹಿತಾಸಕ್ತಿಗೆ ಬದ್ಧತೆ ಪುನರುಚ್ಚಾರ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು : ಮನೆಯ ಸುತ್ತಮುತ್ತ ಪರಿಸರ ಶುಚಿತ್ವಕ್ಕೆ ಒತ್ತು ನೀಡಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು : ಮನೆಯ ಸುತ್ತಮುತ್ತ ಪರಿಸರ ಶುಚಿತ್ವಕ್ಕೆ ಒತ್ತು ನೀಡಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ*

ಏಪ್ರಿಲ್ 22, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಏ.22 NEWS DESK : ಜಿಲ್ಲೆಯಲ್ಲಿ ಆಗಾಗ ಮಳೆಯಾಗುತ್ತಿರುವ ಹಿನ್ನೆಲೆ ಮನೆಯ ಸುತ್ತಮುತ್ತ ತೆಂಗಿನ ಚಿಪ್ಪು, ಟೈರು, ಹೂಕುಂದಗಳಲ್ಲಿ ನೀರು ನಿಲ್ಲದಂತೆ ಗಮನಹರಿಸಬೇಕು. ಪರಿಸರ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ `ಜಿಲ್ಲಾ ಆರೋಗ್ಯ ಅಭಿಯಾನ’ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮನೆಯ ಸುತ್ತಮುತ್ತ ಪರಿಸರ ಶುಚಿತ್ವವಾಗಿದ್ದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಸೊಳ್ಳೆಗಳು ಹರಡದಂತೆ ಗಮನಹರಿಸುವುದು ಅತ್ಯಗತ್ಯವಾಗಿದೆ. ನಿಂತ ನೀರಿನಿಂದ ಲಾರ್ವ ಕಂಡುಬಂದಲ್ಲಿ ಅದನ್ನು ನಾಶ ಪಡಿಸುವಂತಾಗಬೇಕು. ಆ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಅಗತ್ಯ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು. ಶಿಶು ಮತ್ತು ತಾಯಂದಿರ ಆರೋಗ್ಯ ಕ್ಷೇಮ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಶಿಶು ಆರೋಗ್ಯ ಕಾಪಾಡುವುದು ಅತಿಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಜೊತೆಗೆ ಪ್ರತೀ ತಿಂಗಳು ತಾಯಂದಿರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಮಾರ್ಚ್ ತಿಂಗಳಲ್ಲಿ 515 ಹೆರಿಗೆ ಆಗಿದ್ದು, ಪ್ರಸಕ್ತ ವರ್ಷದಲ್ಲಿ 5702 ಹೆರಿಗೆ ಆಗಿದೆ ಎಂದು ಮಾಹಿತಿ ನೀಡಿದರು.
ಮಾರ್ಚ್ ತಿಂಗಳಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 450, ಖಾಸಗಿ ಆಸ್ಪತ್ರೆಯಲ್ಲಿ 65 ಹೆರಿಗೆ ಆಗಿದ್ದು, ಇಲ್ಲಿಯವರೆಗೆ ಸರ್ಕಾರಿ ಆಸ್ಪತ್ರೆಯಲ್ಲಿ 4,969 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 733 ಹೆರಿಗೆ ಆಗಿದೆ ಎಂದು ಡಾ.ಸತೀಶ್ ಕುಮಾರ್ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಒಟ್ಟು 7 ಪುರುಷರು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಸ್ತ್ರೀಸಂತಾನಹರಣ ಶಸ್ತ್ರ ಚಿಕಿತ್ಸೆಯನ್ನು 37 ಮಂದಿ ಮಾಡಿಸಿಕೊಂಡಿದ್ದಾರೆ. ಇದುವರೆಗೆ 1339 ಸ್ತ್ರೀಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಆರ್‍ಸಿಎಚ್ ಅಧಿಕಾರಿ ಡಾ.ಮಧುಸೂದನ್ ಮಾತನಾಡಿ ಮಾರ್ಚ್ ತಿಂಗಳಲ್ಲಿ 636 ಮಗುವಿಗೆ ಪೂರ್ಣ ಲಸಿಕೆ ನೀಡಲಾಗಿದೆ. ಇದುವರೆಗೆ 6874 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, ಶೇ.95 ರಷ್ಟು ಸಾಧನೆ ಮಾಡಲಾಗಿದೆ ಎಂದರು. ಮಲೇರಿಯಾ ಪ್ರಕರಣ ಸಂಬಂಧಿಸಿದಂತೆ ಡಿಸೆಂಬರ್ ಅಂತ್ಯಕ್ಕೆ 3 ಪ್ರಕರಣ ಕಂಡುಬಂದಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಶ್ರೀನಿವಾಸ್ ತಿಳಿಸಿದರು. ಕಳೆದ ಮಾರ್ಚ್ ತಿಂಗಳು 4,501 ಮಂದಿಗೆ ಎಚ್‍ಐವಿ ಪರೀಕ್ಷೆ ನಡೆಸಿದ್ದು, ಇಲ್ಲಿಯವರೆಗೆ 57,945 ಪರೀಕ್ಷೆ ನಡೆಸಲಾಗಿದೆ. ಇವರಲ್ಲಿ 862 ಗರ್ಭಿಣಿಯರಿಗೆ ಹಾಗೂ ಇಲ್ಲಿಯವರೆಗೆ 10,299 ಮಂದಿ ಗರ್ಭಿಣಿಯರಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ಮಾತನಾಡಿ ಡಿಐಎಂಸಿ ತಂಡವು ಇಲ್ಲಿಯವರೆಗೆ ಚಾಲ್ತಿಯಲ್ಲಿರುವ 28 ಕೇಂದ್ರಗಳನ್ನು ಪರಿಶೀಲಿಸಿದೆ ಎಂದರು.
ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರ ಕುಶಾಲನಗರ ಹೊರತುಪಡಿಸಿ ಉಳಿದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಅದರಲ್ಲಿ ಅರಿವಳಿಕೆ ತಜ್ಞರು, ಸ್ತ್ರೀರೋಗ ತಜ್ಞರು ಹಾಗೂ ಮಕ್ಕಳ ತಜ್ಞರ ಕೊರತೆ ಇರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾಹಿತಿ ನೀಡಿದರು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವೈದ್ಯಾಧಿಕಾರಿಗಳು ಇತರರು ಇದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸರಣಿ ಅಪಘಾತಗಳಿಗೆ ಬ್ರೇಕ್: ರಸ್ತೆಗಿಳಿದ ಕರವೇ ಸ್ವಾಭಿಮಾನಿ ಸೇನೆ; ಕುಶಾಲನಗರ: ರಾಜ್ಯ ಹೆದ್ದಾರಿಯ ಹಂಪ್‌ಗಳಿಗೆ ಸ್ವತಃ ಬಣ್ಣ ಬಳಿದು ರಸ್ತೆ ಸುರಕ್ಷತೆಗೆ ಮುಂದಾದ ಕಾರ್ಯಕರ್ತರು*

ಸೆಪ್ಟೆಂಬರ್ 5, 2026

*ಅಭಿಮನ್ಯುವಿಗೆ ಅಕ್ಷರ ತೇರಿನಲ್ಲಿ ಬೀಳ್ಕೊಡುಗೆ ಹಾಗೂ ಐತಿಚಂಡ ರಮೇಶ್ ಉತ್ತಪ್ಪ ಅವರ ಎರಡು ಕೃತಿಗಳ ಬಿಡುಗಡೆ*

ಸೆಪ್ಟೆಂಬರ್ 5, 2026

*ಉಡೋತ್ ಮೊಟ್ಟೆಯಲ್ಲಿ ಕೈಲ್ ಪೊಳ್ದ್ ಸಂಭ್ರಮ*

ಸೆಪ್ಟೆಂಬರ್ 4, 2026

*ಅಭಿಮನ್ಯುವಿಗೆ ಅಕ್ಷರ ತೇರಿನಲ್ಲಿ ಬೀಳ್ಕೊಡುಗೆ ಹಾಗೂ ಐತಿಚಂಡ ರಮೇಶ್ ಉತ್ತಪ್ಪ ಅವರ ಎರಡು ಕೃತಿಗಳ ಬಿಡುಗಡೆ*

ಸೆಪ್ಟೆಂಬರ್ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮೈಸೂರು, NEWS DESK ಸೆ.05: ಅಂಬಾರಿ ಆನೆ ಅಭಿಮನ್ಯುವಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆತನಿಗೆ ಅಕ್ಷರ ತೇರಿನಲ್ಲಿ ಭಾವ…

*ಉಡೋತ್ ಮೊಟ್ಟೆಯಲ್ಲಿ ಕೈಲ್ ಪೊಳ್ದ್ ಸಂಭ್ರಮ*

ಸೆಪ್ಟೆಂಬರ್ 4, 2026

*ಕಸ್ತೂರಿ ರಂಗನ್ ವರದಿ : ಜನವಸತಿ ಗ್ರಾಮಗಳನ್ನು ಸಂಪೂರ್ಣ ಹೊರಗಿಡಲು ಆಗ್ರಹ*

ಸೆಪ್ಟೆಂಬರ್ 4, 2026

*ಭಾರತ್ ಜೋಡೋ : ಲಾಂಛನ ಅನಾವರಣ*

ಸೆಪ್ಟೆಂಬರ್ 4, 2026

*ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟ*

ಸೆಪ್ಟೆಂಬರ್ 4, 2026

*ರಾಷ್ಟ್ರೀಯ ಜೂನಿಯರ್ ಬಾಲಕಿಯರ ಹಾಕಿ ಪಂದ್ಯಾವಳಿ : ಹೈದರಾಬಾದ್ ವಲಯಕ್ಕೆ ರನ್ನರ್ ಅಪ್ ಪ್ರಶಸ್ತಿ*

ಸೆಪ್ಟೆಂಬರ್ 4, 2026

*ಮಹಿಳೆಯರು ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು: ಶಾಸಕ ಡಾ. ಮಂತರ್ ಗೌಡ*

ಸೆಪ್ಟೆಂಬರ್ 4, 2026

*ಒಂಟಿ ಸಲಗ ದಾಳಿ: ಕೂಲಿ ಕಾರ್ಮಿಕನಿಗೆ ಗಂಭೀರ ಗಾಯ*

ಸೆಪ್ಟೆಂಬರ್ 4, 2026

*ಅಮೆರಿಕ ಪ್ರವಾಸದಲ್ಲಿದ್ದರೂ ಕಸ್ತೂರಿರಂಗನ್ ವರದಿ ಕುರಿತ ಸಭೆಯಲ್ಲಿ ಭಾಗವಹಿಸಲಿರುವ ಸಂಸದ ಯದುವೀರ್ ಒಡೆಯರ್; ಕೊಡಗು ಹಾಗೂ ಪಶ್ಚಿಮ ಘಟ್ಟಗಳ ಹಿತಾಸಕ್ತಿಗೆ ಬದ್ಧತೆ ಪುನರುಚ್ಚಾರ*

ಸೆಪ್ಟೆಂಬರ್ 4, 2026

*ಕ.ಸಾ.ಪ. ವತಿಯಿಂದ ಸೆ.8ರಂದು ಕುಶಾಲನಗರದಲ್ಲಿ ಸಾಹಿತಿ ದಿ. ವಿ.ಎಸ್. ರಾಮಕೃಷ್ಣ ದತ್ತಿ ಕಾರ್ಯಕ್ರಮ*

ಸೆಪ್ಟೆಂಬರ್ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.