Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕೊಡಗಿನಲ್ಲಿ ಪ್ರಪ್ರಥಮ ಬಾರಿಗೆ ಅತಿರುದ್ರ ಜಪಯಜ್ಞ* 
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕೊಡಗಿನಲ್ಲಿ ಪ್ರಪ್ರಥಮ ಬಾರಿಗೆ ಅತಿರುದ್ರ ಜಪಯಜ್ಞ* 

ಏಪ್ರಿಲ್ 23, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ NEWS DESK ಏ.23 : ಕಾವೇರಿ ಮಾತೆಯ ಉಗಮ ಸ್ಥಾನ ತಲಕಾವೇರಿಯಲ್ಲಿ ಪ್ರಪ್ರಥಮ ಬಾರಿಗೆ ಅತಿರುದ್ರ ಜಪಯಜ್ಞ ಹಮ್ಮಿಕೊಳ್ಳಲಾಗಿದೆ ಎಂದು ಜಪಯಜ್ಞ ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಸ್.ರಮೇಶ್ ಹೊಳ್ಳ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೇ 11ರಿಂದ 21ರವರೆಗೆ ನಡೆಯುವ ಜಪಯಜ್ಞಕ್ಕೆ ರಾಜ್ಯಾದ್ಯಾಂತದಿಂದ 50ಕ್ಕೂ ಅಧಿಕ ಋತ್ವಿಜರು ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಅವಧೂತರಾದ ಶ್ರೀ ಶ್ರೀ ಶ್ರೀ ಕಾಂತಾನಂದ ಸರಸ್ವತಿ ಮಹಾರಾಜರು ಸಂಕಲ್ಪಿಸಿರುವ ಕೋಟ್ಯಧಿಕ ಶ್ರೀ ರುದ್ರ ಜಪ ಕೈಂಕರ್ಯವು ಕಳೆದ ಐದು ವರ್ಷಗಳಿಂದ ರಾಜ್ಯದ ಎಲ್ಲೆಡೆ ನಡೆಯುತ್ತಿದ್ದು, 50ಲಕ್ಷ ರುದ್ರ ಜಪ ಪೂರ್ಣವಾಗಿದೆ. 2030ರ ಜನವರಿ 18ಕ್ಕೆ ಶಿವಮೊಗ್ಗದಲ್ಲಿ ಜಪಯಜ್ಞ ಸಾಂಗತವಾಗಲಿದೆ. ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ಈ ಜಪಯಜ್ಞಕ್ಕೆ ಜಿಲ್ಲೆಯ ಆಸ್ತಿಕ ಬಂಧುಗಳು ಮುಕ್ತ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಮೇ 11ರಿಂದ 19ರವರೆಗೆ ತಲಕಾವೇರಿ ಸನ್ನಿಧಿಯಲ್ಲಿ 9ದಿನಗಳು ಪ್ರತಿದಿನ ಮೂರು ಆವರ್ತ ಶ್ರೀ ರುದ್ರ ಜಪ ಜರುಗಲಿದೆ. ಋತ್ವಿಜರಿಗೆ ಊಟೋಪಹಾರ ಹಾಗೂ ಉಳಿದುಕೊಳ್ಳುವ ವ್ಯವಸ್ಥೆಯನ್ನು ಕೈಲಾಸಾಶ್ರಮದಲ್ಲಿ ಮಾಡಲಾಗಿದೆ. ಮೇ 20ರಂದು ಮಡಿಕೇರಿಯ ಶ್ರೀ ಲಕ್ಷಿö್ಮÃ ನರಸಿಂಹ ಕಲ್ಯಾಣ ಮಂಟಪದಲ್ಲಿ ಶ್ರೀ ರುದ್ರ ಹೋಮ ಹಾಗೂ ಮೂರು ಆವರ್ತ ಶ್ರೀ ರುದ್ರ ಜಪ ನಡೆಯಲಿದೆ. ಮೇ 21ರಂದು ಕಾವೇರಿ ತೀರದಲ್ಲಿರುವ ಕಣಿವೆಯ ಶ್ರೀರಾಮಲಿಂಗೇಶ್ವರ ಸನ್ನಿಧಿಯಲ್ಲಿ ಶ್ರೀ ಚಂಡಿಕಾ ಹೋಮ ಎರಡು ಆವರ್ತ ಶ್ರೀರುದ್ರ ಜಪ ಹಾಗೂ ಮಹಾಪ್ರಸಾದ ವಿನಿಯೋಗವಾಗಲಿದೆ. ಜಪಯಜ್ಞದಲ್ಲಿ ಪಾಲ್ಗೊಂಡು ಸಹಕಾರ ನೀಡಲು ಇಚ್ಛಿಸುವವರು ಮೊಬೈಲ್ 99458 53543 ಹಾಗೂ 94486 47183 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ರಮೇಶ್ ಹೊಳ್ಳ ತಿಳಿಸಿದ್ದಾರೆ. *ಜಪಯಜ್ಞ ಸಮಿತಿ ಅಸ್ತಿತ್ವಕ್ಕೆ* ಕೊಡಗು ಅತಿರುದ್ರ ಜಪಯಜ್ಞ ಸಮಿತಿಯನ್ನು ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಮಿತ್ತೂರು ಈಶ್ವರ ಭಟ್, ಕಾರ್ಯಾಧ್ಯಕ್ಷರಾಗಿ ಕೆ.ಎಸ್.ರಮೇಶ್ ಹೊಳ್ಳ, ಉಪಾಧ್ಯಕ್ಷರಾಗಿ ಮೂಗೂರು ರಾಮಚಂದ್ರ ರಾಜಶೇಖರ್, ಸಂಪತ್ ಕುಮಾರ್ ಸರಳಾಯ, ಶ್ರೀ ಭಗಂಡೇಶ್ವರ ದೇವಾಲಯದ ಪ್ರಧಾನ ಅರ್ಚಕ ವೇ.ಬ್ರ.ಹರೀಶ್ ಭಟ್ ಹಾಗೂ ಪೋಷಕರಾಗಿ ಅನಂತ ಸುಬ್ಬರಾವ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಂಚಾಲನ ಸಮಿತಿಯಲ್ಲಿ ಮಡಿಕೇರಿ ವಿಭಾಗದಲ್ಲಿ ಸುಬ್ರಹ್ಮಣ್ಯ ಹೊಳ್ಳ, ಕುಶಾಲನಗರ ನಾಗೇಂದ್ರ ಬಾಬು, ಸೋಮವಾರಪೇಟೆ ಎಸ್.ಡಿ.ವಿಜೇತ್, ವಿರಾಜಪೇಟೆಯಲ್ಲಿ ಶ್ರೀಧರ ನೆಲ್ಲಿತ್ತಾಯ ಕಾರ್ಯನಿರ್ವಹಿಸಲಿದ್ದಾರೆ. ಪತ್ರಿಕಾ ಸಂಪರ್ಕಕ್ಕೆ ಬಿ.ಸಿ.ದಿನೇಶ್ ಹಾಗೂ ಜಪಯಜ್ಞ ಪ್ರತಿನಿಧಿಯಾಗಿ ಎಸಳೂರು ಉದಯಕುಮಾರ್ ನೇಮಕಗೊಂಡಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

31 ವರ್ಷಗಳಿಂದ ಮನೆಮನೆಗೆ ಕಾವೇರಿ ತೀರ್ಥ ವಿತರಣೆ: ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಧಾರ್ಮಿಕ ಸೇವೆ

ಅಕ್ಟೋಬರ್ 20, 2026

ಮೈಸೂರು ಕೊಡಗು ಗೌಡ ಸಮಾಜದಿಂದ ಭಕ್ತಿಭಾವದ ಕಾವೇರಿ ತೀರ್ಥ ವಿತರಣೆ

ಅಕ್ಟೋಬರ್ 20, 2026

ವಿರಾಜಪೇಟೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಾರದಾ, ಲಕ್ಷ್ಮಿ ಪೂಜೆ

ಅಕ್ಟೋಬರ್ 19, 2026

ಮೈಸೂರು ಕೊಡಗು ಗೌಡ ಸಮಾಜದಿಂದ ಭಕ್ತಿಭಾವದ ಕಾವೇರಿ ತೀರ್ಥ ವಿತರಣೆ

ಅಕ್ಟೋಬರ್ 20, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ನಾಪೋಕ್ಲು, NEWS DESK ಅ.20: ಮೈಸೂರು ಕೊಡಗು ಗೌಡ ಸಮಾಜದ ವತಿಯಿಂದ ಸಮುದಾಯದ ಬಾಂಧವರಿಗೆ ಕಾವೇರಿ ತೀರ್ಥ ವಿತರಣೆ ಕಾರ್ಯಕ್ರಮವು…

ವಿರಾಜಪೇಟೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಾರದಾ, ಲಕ್ಷ್ಮಿ ಪೂಜೆ

ಅಕ್ಟೋಬರ್ 19, 2026

ವಿರಾಜಪೇಟೆ ಮಹಿಳಾ ಸಹಕಾರ ಸಂಘದಿಂದ ಶಾರದಾ ಪೂಜೆ

ಅಕ್ಟೋಬರ್ 19, 2026

ಗೋಣಿಕೊಪ್ಪ ದಸರಾದಲ್ಲಿ ಗಮನ ಸೆಳೆದ ಗೀತೆಗಳ ಗಾನಸುಧೆ, ಮಕ್ಕಳ ನೃತ್ಯ ವೈಭವ

ಅಕ್ಟೋಬರ್ 19, 2026

ಟಿ. ಶೆಟ್ಟಿಗೇರಿಯಲ್ಲಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಆಟೋ ತಂಗುದಾಣ ಲೋಕಾರ್ಪಣೆ

ಅಕ್ಟೋಬರ್ 19, 2026

ಮಾದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರಕ್ಕೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಚಾಲನೆ

ಅಕ್ಟೋಬರ್ 19, 2026

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಹೊರ ತರಲು ಪ್ರತಿಭಾ ದಿನಾಚರಣೆಯು ವೇದಿಕೆ

ಅಕ್ಟೋಬರ್ 19, 2026

ಮಡಿಕೇರಿಯಲ್ಲಿ ಸಂಭ್ರಮದ 9ನೇ ವರ್ಷದ ಮಹಿಳಾ ದಸರಾ; ಮಹಿಳೆಯರ ಸಾಧನೆಗೆ ಶಿಕ್ಷಣ ಅತ್ಯವಶ್ಯ: ವಿಜಯಲಕ್ಷ್ಮಿ ಸಿಂಗ್

ಅಕ್ಟೋಬರ್ 19, 2026

ಕಾವೇರಿ ತುಲಾ ಸಂಕ್ರಮಣದ ಹಿನ್ನೆಲೆ : ದೇವಟ್ ಪರಂಬ್ ನಲ್ಲಿ ಬೊತ್ತ್ ಬಳ್ಳಿ ಸುತ್ತಿದ ಕೋಲಿನ ಮೇಲೆ ದೋಸೆ ಮತ್ತು ಪುಟ್ಟ್ ಇಟ್ಟು ಸಿಎನ್‌ಸಿ ಸ್ಮರಣೆ

ಅಕ್ಟೋಬರ್ 19, 2026

ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ನ ನೂತನ ಅಧ್ಯಕ್ಷ ಪೀಟು ಕಾರ್ಯಪ್ಪ ಅವರನ್ನು ಅಭಿನಂದಿಸಿದ ಕೊಡವ ವ್ಯಾಪಾರೋದ್ಯಮಿಗಳ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಲಿಮಿಟೆಡ್

ಅಕ್ಟೋಬರ್ 19, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.