
ಸುಂಟಿಕೊಪ್ಪ ಏ.30 NEWS DESK : ಐಗೂರು ಗ್ರಾಮದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಮುತ್ತಪ್ಪ ದೇವರ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಬೆಳಿಗ್ಗೆ ಗಣಪತಿ ಹೋಮ ನಡೆಯಿತು. ಸಂಜೆ ಮಲಯರಕಲ್ ಮತ್ತು ಮುತ್ತಪ್ಪನ್ ವೆಳ್ಳಾಟಂ, ಗುಳಿಗಪ್ಪನ ದೇವಾಲಯದಿಂದ ಚಂಡೆ ಮೇಳದೊಂದಿಗೆ ದೈವ ನರ್ತನ ನಡೆಯಿತು. ನಂತರ ತಿರುವಪ್ಪನ್ ವೆಳ್ಳಾಟಂ ಮತ್ತು ಕಳಸ ಆಗಮನದ ನಂತರ ರಾತ್ರಿ ಅನ್ನದಾನ ನೆರವೇರಿತು. ಮರುದಿನ ಮುಂಜಾನೆಯಿಂದಲೇ ಗುಳಿಗನ ಕೋಲ, ಮುತ್ತಪ್ಪ ದೇವರ ಕೋಲ, ಕುಟ್ಟಿಚಾತನ್ ಕೋಲ, ಪೋದಿ ಕೋಲ, ಗುರು ಶ್ರೀ ತರ್ಪಣ ನಡೆಯಿತು. ಗ್ರಾಮದ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಸಮಿತಿ ಅಧ್ಯಕ್ಷರು ಸದಸ್ಯರು ಹಾಜರಿದ್ದರು.









