
ಮಡಿಕೇರಿ NEWS DESK ಮೇ 2 : ಕೊಡಗು ಜಿಲ್ಲೆಯಲ್ಲಿ ಈ ಬಾರಿಯ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶವನ್ನು ಒಟ್ಟು 26 ಶಾಲೆಗಳು ಪಡೆದುಕೊಂಡಿವೆ. ಅವುಗಳೆಂದರೆ, ಗಾಳಿಬೀಡು ಸರ್ಕಾರಿ ಪ್ರೌಢ ಶಾಲೆ, ಕಡಗದಾಳು ಸರ್ಕಾರಿ ಪ್ರೌಢ ಶಾಲೆ, ಮಕ್ಕಂದೂರು ಸರ್ಕಾರಿ ಪ್ರೌಢ ಶಾಲೆ, ಚೆಂಬು ಸರ್ಕಾರಿ ಪ್ರೌಢ ಶಾಲೆ, ಹಾಕತ್ತೂರು ಸರ್ಕಾರಿ ಪ್ರೌಢ ಶಾಲೆ, ಕಾನ್ ಬೈಲ್ ಸರ್ಕಾರಿ ಪ್ರೌಢ ಶಾಲೆ, ಕೊಂಡಂಗೇರಿ ಸರ್ಕಾರಿ ಪ್ರೌಢ ಶಾಲೆ, ನಾಪೋಕ್ಲುವಿನ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ, ಚೌಡ್ಲುವಿನ ಡಾ. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ತಿತಿಮತಿ ಮೊರಾರ್ಜಿ ದೇಸಾಯಿ ವಸತಿ ಶಾಲೆ. ಅನುದಾನ ರಹಿತ ಶಾಲೆಗಳಾದ ಮಡಿಕೇರಿಯ ಬ್ಲಾಸಂ ಸರ್ಕಾರಿ ಪ್ರೌಢ ಶಾಲೆ, ನಾಲೋಕ್ಲುವಿನ ಎಕ್ಸೆಲ್ ಸ್ಕೂಲ್ ಆಫ್ ಎಜ್ಯುಕೇಷನ್, ಸಿದ್ದಾಪುರದ ಇಕ್ರಾ ಪಬ್ಲಿಕ್ ಶಾಲೆ, ಭಾಗಮಂಡಲದ ಕೋರಂಗಾಲದ ಜ್ಞಾನೋದಯ ಸರ್ಕಾರಿ ಪ್ರೌಢ ಶಾಲೆ, ಚೇರಂಬಾಣೆಯ ಕೊಟ್ಟೂರು ಗ್ರಾಮದ ಶ್ರೀ ರಾಜರಾಜೇಶ್ವರಿ ಸರ್ಕಾರಿ ಪ್ರೌಢ ಶಾಲೆ, ಶನಿವಾರಸಂತೆಯ ಶ್ರೀ ವಿಘ್ನೇಶ್ವರ ಶಾಲೆ, ಶನಿವಾರಸಂತೆಯ ಸುಪ್ರಜಾ ಗುರುಕುಲ ಶಾಲೆ, ಕುಶಾಲನಗರದ ಗುಡ್ಡೆಹೊಸೂರಿನ ಉದಗಂ ಶಾಲೆ, ಕೂಡುಮಂಗಳೂರಿನ ಯೂನಿಕ್ ಅಕಾಡೆಮಿ ಸರ್ಕಾರಿ ಪ್ರೌಢ ಶಾಲೆ, ಶ್ರೀಮಂಗಲದ ಕುಮಟೂರಿನ ಜೇಸಿ ಶಾಲೆ, ಗೋಣಿಕೊಪ್ಪಲು ಕಳತ್ಮಾಡಿನ ಲಯನ್ಸ್ ಸರ್ಕಾರಿ ಪ್ರೌಢ ಶಾಲೆ, ಅಮ್ಮತ್ತಿ ಕಾರ್ಮಾಡಿನ ನೆೆÃತಾಜಿ ಶಾಲೆ, ಟಿ.ಶೆಟ್ಟಿಗೇರಿಯ ರೂಟ್ಸ್ ಶಾಲೆ, ಗೋಣಿಕೊಪ್ಪಲಿನ ಸರ್ವದೈವತಾ ಶಾಲೆ ಮತ್ತು ವಿರಾಜಪೇಟೆಯ ಶ್ರೀ ಕಾವೇರಿ ಸರ್ಕಾರಿ ಪ್ರೌಢ ಶಾಲೆಗಳು ಪ್ರತಿಶತ ಫಲಿತಾಂಶದ ಸಾಧನೆ ಮಾಡಿವೆ.








