Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸಮಾಜಮುಖಿ ಸೇವೆ ಪರಿಗಣಿಸಿ ಕೇಳೇಟಿರ ದೀಪು ದೇವಯ್ಯ ಸನ್ಮಾನ*
  • *ನಾಪೋಕ್ಲು: ‘ಕ್ಲೀನ್ ಅಪ್’ ವತಿಯಿಂದ ಯಶಸ್ವಿ ಸ್ವಚ್ಛತಾ ಅಭಿಯಾನ*
  • *ಅಕ್ಟೋಬರ್ 20ರಂದು ವಿರಾಜಪೇಟೆಯಲ್ಲಿ 19ನೇ ವರ್ಷದ ಅದ್ದೂರಿ ಆಯುಧಪೂಜೆ ಹಾಗೂ ಸಂಗೀತ ರಸಮಂಜರಿ*
  • *ಅ.1ರಂದು ಸಿದ್ದಾಪುರದಲ್ಲಿ ಸಿಎನ್‌ಸಿಯಿಂದ ಕೊಡವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ*
  • *ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ*
  • *ಮಹಿಳಾ ಸಬಲೀಕರಣಕ್ಕೆ ಜ್ಞಾನ ವಿಕಾಸ ಕಾರ್ಯಕ್ರಮಗಳು ಪೂರಕ: ಆನಂದ್ ಸುವರ್ಣ*
  • *ಮಡಿಕೇರಿಯಲ್ಲಿ ಕಾಫಿ ದಸರಾ: ಮಳಿಗೆ ತೆರೆಯಲು ಅವಕಾಶ*
  • *ಮಡಿಕೇರಿಯಲ್ಲಿ ಕೂರ್ಗ್ ವಿಂಗ್ಸ್ ಆಫ್ ಪ್ಯಾಶನ್ ಫಿಟ್ನೆಸ್ ತರಬೇತಿ : 7 ವರ್ಷಗಳ ಅನುಭವ : ತಕ್ಷಣ ಹೆಸರು ನೋಂದಾಯಿಸಿ*
  • *ಕಂಬಿರಂಡ ರಾಖಿ ಪೂವಣ್ಣ ಅವರಿಗೆ ‘ಅಧ್ಯಾಪಕ ಭೂಷಣ’ ಪ್ರಶಸ್ತಿ*
  • *ವಿರಾಜಪೇಟೆಯಲ್ಲಿ ಕಾವೇರಿ ಗಣೇಶೋತ್ಸವ: ಒಗ್ಗಟ್ಟಿನಿಂದ ಹಿಂದೂ ಸಮಾಜ ಬಲಪಡಿಸಲು ಕರೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಾಂಡರರ್ಸ್ ಬೇಸಿಗೆ ಶಿಬಿರದ ಸಮಾರೋಪ : ಯೋಗ- ಕ್ರೀಡೆಯಿಂದ ಮನಸಿಗೆ ನೆಮ್ಮದಿ : ಒಲಂಪಿಯನ್ ಚೆಪ್ಪುಡಿರ ಪೂಣಚ್ಚ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಾಂಡರರ್ಸ್ ಬೇಸಿಗೆ ಶಿಬಿರದ ಸಮಾರೋಪ : ಯೋಗ- ಕ್ರೀಡೆಯಿಂದ ಮನಸಿಗೆ ನೆಮ್ಮದಿ : ಒಲಂಪಿಯನ್ ಚೆಪ್ಪುಡಿರ ಪೂಣಚ್ಚ

ಮೇ 6, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ, ಮೇ 6 NEWS DESK : ಮನಸ್ಸಿಗೆ ಒತ್ತಡ ಉಂಟಾದಾಗ ಕ್ರೀಡೆ ಹಾಗೂ ಯೋಗಾಭ್ಯಾಸಗಳಿಂದ ನೆಮ್ಮದಿ ದೊರಕುತ್ತದೆ ಎಂದು ಒಲಂಪಿಯನ್ ಚೆಪ್ಪುಡಿರ ಪೂಣಚ್ಚ ಹೇಳಿದರು. ವಾಂಡರರ್ಸ್ ಸ್ಟೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ. ಶಂಕರ್ ಅವರ ಸ್ಮರಣಾರ್ಥ  ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಒಂದು ತಿಂಗಳುಗಳ ಕಾಲ ನಡೆದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡಗು ಜಿಲ್ಲೆ ಸೇನೆ ಹಾಗೂ ಕ್ರೀಡೆಗೆ ಹೆಸರುವಾಸಿ, ಅದರಲ್ಲೂ ಹಾಕಿ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ. ತಾನು ಕೂಡ ಇದೇ ಮೈದಾನದಲ್ಲಿ ಆಡಿ ಬೆಳೆದು ಕ್ರೀಡಾ ಶಾಲೆಗೆ ಸೇರಿ ಈ ರೀತಿಯ ಸಾಧನೆ ಮಾಡಲು ಸಹಕಾರಿಯಾಗಿದೆ. ಗುರುಗಳಾದ ಸಿ.ವಿ. ಶಂಕರ್ ಅವರು ೧೨೦ಕ್ಕೂ ಅಧಿಕ ಮಂದಿ ಅಂತರರಾಷ್ಟ್ರೀಯ ಅಟಗಾರರನ್ನು ತಯಾರು ಮಾಡಿದ್ದು ಅವರಿಗೆ ನಾವೆಲ್ಲರೂ ಋಣಿಯಾಗಿರಬೇಕೆಂದರು. ಇದೀಗ ವಾಂಡರ‍್ಸ್ ಕ್ಲಬ್‌ನವರು, ಹಿರಿಯರು ಸೇರಿಕೊಂಡು ಸ್ವಯಂಪ್ರೇರಿತರಾಗಿ ಮಕ್ಕಳಿಗೆ ಯೋಗ, ಕ್ರೀಡಾ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಮಕ್ಕಳು ಸದುಪಯೋಗಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಒಲಂಪಿಕ್‌ಗೆ ಅಡಬೇಕು ::  ಅತಿಥಿಯಾಗಿದ್ದ ಕ್ರೀಡಾ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್ ಮಾತನಾಡಿ ವಾಂಡರ‍್ಸ್ ಸಂಸ್ಥೆ ದೊಡ್ಡ ಸಂಸ್ಥೆಯಾಗಿದ್ದು, ಅದರಲ್ಲಿ ಆಡಲು ಅವಕಾಶ ಸಿಗುವುದೇ ಕಷ್ಟವಾಗಿತ್ತು. ಅದರೂ ತಮಗೆ ಒಂದು ಬಾರಿ ಅಡಲು ಅವಕಾಶ ಸಿಕ್ಕಿದ್ದನ್ನು ನೆನಪಿಸಿಕೊಂಡರಲ್ಲದೆ. ಈಗಿನ ಪದಾಧಿಕಾರಿಗಳು, ಹಿರಿಯರ ಸಹಕಾರ, ಮಾರ್ಗದರ್ಶನದೊಂದಿಗೆ ಮತ್ತೆ ವಾಂಡರ‍್ಸ್ ಕ್ಲಬ್ ಅನ್ನು ಬೆಳೆಸಲು ಪ್ರಯತ್ನಿಸಬೇಕು. ಹಳೆಯ ವೈಭವ ಪುನರಾವರ್ತನೆಯಾಗುವದರೊಂದಿಗೆ ಕ್ಲಬ್ ಮುಂದುವರಿಯಬೇಕೆಂದು ಆಶಿಸಿದರು. ಮಕ್ಕಳು ಶಿಬಿರಕ್ಕೆ ಮಾತ್ರ ಸೀಮಿತವಾಗಿರದೆ ಶಿಬಿರ ಮುಗಿದ ನಂತರವೂ ಅಭ್ಯಾಸ ಮುಂದುವರಿಸಬೇಕು. ಪೋಷಕರು ಮಕ್ಕಳಿಗೆ ಮೊಬೈಲ್ ಕೊಡದೆ ಮೈದಾನಕ್ಕೆ ಕಳುಹಿಸಬೇಕು. ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ಶಾಲೆಯಿಂದ ಮರಳುವ ಮಕ್ಕಳ ಬ್ಯಾಗ್‌ಗಳನ್ನು ಪರಿಶೀಲಿಸುವ ಕಾರ್ಯ ಮಾಡಬೇಕೆಂದು ಸಲಹೆಮಾಡಿದರು. ಮಕ್ಕಳು ಶಿಬಿರದಲ್ಲಿ ಕಲಿತದ್ದನ್ನು ಮುಂದುವರಿಸಬೇಕು. ತರಬೇತಿ ಪಡೆದು ಮುಂದಿನ ದಿನಗಳಲ್ಲಿ ಜಾತಿ, ಮತ, ಬೇಧವಿಲ್ಲದೆ ಕನಿಷ್ಟ ನಾಲ್ಕು ಮಂದಿಯಾದರೂ ಕೊಡಗು ಜಿಲ್ಲೆಯಿಂದ ಒಲಂಪಿಕ್‌ಗೆ ಅಡುವಂತಾಗಬೇಕೆಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ವಾಂಡರ‍್ಸ್ ಕ್ಲಬ್ ಅಧ್ಯಕ್ಷ ಕೋಟೇರ ಮುದ್ದಯ್ಯ ಮಾತನಾಡಿ ಶಬಿರದಲ್ಲಿ ಕಲಿತದ್ದನ್ನು ಮಕ್ಕಳು ಪ್ರತಿದಿನ ಪ್ರಯತ್ನ ಮಾಡಬೇಕು. ಕಲಿಕೆಯನ್ನು ಮುಂದುವರಿಸಬೇಕು. ವ್ಯಾಯಾಮ ನಿರಂತರವಾಗಿರಬೇಕೆಂದು ಕಿವಿ ಮಾತು ಹೇಳೀದರು. ಸನ್ಮಾನ – ಗೌರವ ::  ಇದೇ ಸಂದರ್ಭದಲ್ಲಿ ಶಿಬಿರದಲ್ಲಿ ಮಕ್ಕಳಿಗೆ ಯೋಗಾಭ್ಯಾಸ ಹೇಳಿಕೊಟ್ಟ ಯೋಗ ಶಿಕ್ಷಕ ಕೆ.ಕೆ. ಮಹೇಶ್‌ಕುಮಾರ್ ಅವರನ್ನು ವಿದ್ಯಾರ್ಥಿಗಳ ಪೋಷಕರು ಸನ್ಮಾನಿಸಿ ಗೌರವಿಸಿದರು. ಯೋಗದಲ್ಲಿ ರಾಷ್ಟ್ರೀಯ ದಾಖಲೆ ಮಾಡಿದ ಮದೆನಾಡಿನ ಸಿಂಚನಾಳನ್ನು ಗೌರವಿಸಿ ಅಭಿನಂದಿಸಲಾಯಿತು. ಇದರೊಂದಿಗೆ ಸ್ವಯಂ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ ನಿವೃತ್ತ ದೈಹಿಕ ಶಿಕ್ಷಕ ಎಸ್.ಟಿ. ವೆಂಕಟೇಶ್, ಬೊಪ್ಪಂಡ ಶ್ಯಾಂ ಪೂಣಚ್ಚ, ಗಣೇಶ್, ಕುಡೆಕಲ್ ಸಂತೋಷ್, ಕೋಟೇರ ನಾಣಯ್ಯ, ನಾಟೋಳಂಡ ಸುರೇಶ್, ಕಿರಣ್, ತಿಲಕ್ ಹಾಗೂ ಶಿಬಿರದ ಸಂಚಾಲಕ ಬಾಬು ಸೋಮಯ್ಯ ಅವರುಗಳನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಬಹುಮಾನ ವಿತರಣೆ ::  ಶಿಬಿರಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಆಟೋಟ ಸ್ಪರ್ಧೆ ಹಾಗೂ ಪಂದ್ಯಾವಳಿಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಿಬಿರದಲ್ಲಿ ಉತ್ತಮವಾಗಿ ಯೋಗ ಮಾಡಿದ ಶಿಬಿರಾರ್ಥಿಗಳು ಹಾಗೂ ಪೋಷಕರುಗಳನ್ನು ಗುರುತಿಸಿ ಅವರುಗಳಿಗೂ ಬಹುಮಾನ ನೀಡಲಾಯಿತು. ನೆರೆದಿದ್ದವರಿಗೆಲ್ಲರಿಗೂ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ವೇದಿಕೆಯಲ್ಲಿ ವಾಂಡರ‍್ಸ್ ಉಪಾಧ್ಯಕ್ಷ ಪಾರ್ಥ ಚಂಗಪ್ಪ, ಶಂಕರ್ ಸ್ವಾಮಿ ಅವರ ಪುತ್ರ ಗುರುದತ್, ವಾಂಡರ‍್ಸ್ ಖಜಾಂಚಿ ನಂದ ಇದ್ದರು. ವೆಂಕಟೇಶ್ ಕಾರ್ಯಕ್ರಮ ನಿರ್ವಹಿಸಿದರು.

Follow us Follow us
Share. WhatsApp Facebook Twitter Email Telegram Copy Link

Related Posts

*ಸಮಾಜಮುಖಿ ಸೇವೆ ಪರಿಗಣಿಸಿ ಕೇಳೇಟಿರ ದೀಪು ದೇವಯ್ಯ ಸನ್ಮಾನ*

ಸೆಪ್ಟೆಂಬರ್ 28, 2026

*ನಾಪೋಕ್ಲು: ‘ಕ್ಲೀನ್ ಅಪ್’ ವತಿಯಿಂದ ಯಶಸ್ವಿ ಸ್ವಚ್ಛತಾ ಅಭಿಯಾನ*

ಸೆಪ್ಟೆಂಬರ್ 28, 2026

*ಅಕ್ಟೋಬರ್ 20ರಂದು ವಿರಾಜಪೇಟೆಯಲ್ಲಿ 19ನೇ ವರ್ಷದ ಅದ್ದೂರಿ ಆಯುಧಪೂಜೆ ಹಾಗೂ ಸಂಗೀತ ರಸಮಂಜರಿ*

ಸೆಪ್ಟೆಂಬರ್ 28, 2026

*ನಾಪೋಕ್ಲು: ‘ಕ್ಲೀನ್ ಅಪ್’ ವತಿಯಿಂದ ಯಶಸ್ವಿ ಸ್ವಚ್ಛತಾ ಅಭಿಯಾನ*

ಸೆಪ್ಟೆಂಬರ್ 28, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ನಾಪೋಕ್ಲು, NEWS DESK ಸೆ.28: ಸ್ಥಳೀಯ ‘ನಾಪೋಕ್ಲು ಕ್ಲೀನ್ ಅಪ್’ ಸಂಸ್ಥೆಯ ವತಿಯಿಂದ ನಾಪೋಕ್ಲು–ಹಳೆ ತಾಲೂಕು ರಸ್ತೆಯ ಬದಿಯಲ್ಲಿ ಸಂಗ್ರಹವಾಗಿದ್ದ…

*ಅಕ್ಟೋಬರ್ 20ರಂದು ವಿರಾಜಪೇಟೆಯಲ್ಲಿ 19ನೇ ವರ್ಷದ ಅದ್ದೂರಿ ಆಯುಧಪೂಜೆ ಹಾಗೂ ಸಂಗೀತ ರಸಮಂಜರಿ*

ಸೆಪ್ಟೆಂಬರ್ 28, 2026

*ಅ.1ರಂದು ಸಿದ್ದಾಪುರದಲ್ಲಿ ಸಿಎನ್‌ಸಿಯಿಂದ ಕೊಡವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ*

ಸೆಪ್ಟೆಂಬರ್ 28, 2026

*ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ*

ಸೆಪ್ಟೆಂಬರ್ 28, 2026

*ಮಹಿಳಾ ಸಬಲೀಕರಣಕ್ಕೆ ಜ್ಞಾನ ವಿಕಾಸ ಕಾರ್ಯಕ್ರಮಗಳು ಪೂರಕ: ಆನಂದ್ ಸುವರ್ಣ*

ಸೆಪ್ಟೆಂಬರ್ 28, 2026

*ಮಡಿಕೇರಿಯಲ್ಲಿ ಕಾಫಿ ದಸರಾ: ಮಳಿಗೆ ತೆರೆಯಲು ಅವಕಾಶ*

ಸೆಪ್ಟೆಂಬರ್ 28, 2026

*ಮಡಿಕೇರಿಯಲ್ಲಿ ಕೂರ್ಗ್ ವಿಂಗ್ಸ್ ಆಫ್ ಪ್ಯಾಶನ್ ಫಿಟ್ನೆಸ್ ತರಬೇತಿ : 7 ವರ್ಷಗಳ ಅನುಭವ : ತಕ್ಷಣ ಹೆಸರು ನೋಂದಾಯಿಸಿ*

ಸೆಪ್ಟೆಂಬರ್ 28, 2026

*ಕಂಬಿರಂಡ ರಾಖಿ ಪೂವಣ್ಣ ಅವರಿಗೆ ‘ಅಧ್ಯಾಪಕ ಭೂಷಣ’ ಪ್ರಶಸ್ತಿ*

ಸೆಪ್ಟೆಂಬರ್ 27, 2026

*ವಿರಾಜಪೇಟೆಯಲ್ಲಿ ಕಾವೇರಿ ಗಣೇಶೋತ್ಸವ: ಒಗ್ಗಟ್ಟಿನಿಂದ ಹಿಂದೂ ಸಮಾಜ ಬಲಪಡಿಸಲು ಕರೆ*

ಸೆಪ್ಟೆಂಬರ್ 27, 2026

*ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕಾವೇರಿ ಶಾಲೆಯ ವಾಲಿಬಾಲ್ ತಂಡ*

ಸೆಪ್ಟೆಂಬರ್ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.