
ಸುಂಟಿಕೊಪ್ಪ ಮೇ 19 NEWS DESK : ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‍ಬಾಲ್ ಟೂರ್ನಿಯ 3ನೇ ದಿನ ನಡೆದ ಪಂದ್ಯಾವಳಿಯಲ್ಲಿ ಮೊಗ್ರಲ್ ಎಫ್.ಸಿ. ಕುಂಬ್ಳೆ ತಂಡ ಮುಂದಿನ ಸುತ್ತಿಗೆ ಪ್ರವೇಶಿಸಿತ್ತು. ಜಿಯಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ 39ನೇ ವರ್ಷದ ಆಯೋಜಿಸಲಾಗಿರುವ ಪುಟ್ಬಾಲ್ ಮೊದಲನೇ ಪಂದ್ಯಾವಳಿಯು ಮೊಗ್ರಲ್ ಎಫ್.ಸಿ ಕುಂಬ್ಳೆ ಹಾಗೂ ಸ್ವರ್ಣ ಎಫ್.ಸಿ.ಮಂಡ್ಯ ತಂಡಗಳ ನಡುವೆ ನಡೆದ ಮೊಗ್ರಲ್ ಎಫ್.ಸಿ ಕುಂಬ್ಳೆ ತಂಡವು ಮೊದಲಾರ್ಧದಲ್ಲಿ 13ನೇ ನಿಮೀಷದಲ್ಲಿ ಅಬಿದ್ ಒಂದು ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ದ್ವಿತೀಯಾರ್ಧದಲ್ಲಿ 2ನೇ ನಿಮಿಷದಲ್ಲಿ ಮೊಗ್ರಲ್ ಎಫ್.ಸಿ ಕುಂಬ್ಳೆ ಅಭೀದ್ ಮತ್ತೊಂದು ಗೋಲುಗಳಿಸುವ ಎದುರಾಳಿ ತಂಡಕ್ಕೆ ಒತ್ತಡವನ್ನು ಹೆಚ್ಚಿಸಿದರು. ಮತ್ತೇ ಮೊಗ್ರಲ್ ಎಫ್.ಸಿ ಕುಂಬ್ಳೆ ತಂಡದ ಆಟಗಾರ 13ನೇ ನಿಮಿಷದಲ್ಲಿ ನಿಶಾದ್ ಮತ್ತೊಂದು ಗೋಲುಗಳಿಸುವ ಮೂಲಕ ಎದುರಾಳಿ ತಂಡಕ್ಕೆ ಒತ್ತಡವನ್ನು ನೀಡಿದರು. 17ನೇ ನಿಮಿಷದಲ್ಲಿ ರಶೀದ್ 1 ಗೋಲುಗಳಿಸುವ ಮೂಲಕ ಎದುರಾಳಿ ತಂಡವನ್ನು 4-0 ಗೋಲುಗಳಿಂದ ಮಂಡ್ಯ ತಂಡವನ್ನು ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ದ್ವಿತೀಯ ಪಂದ್ಯಾವಳಿಯು ಇಂಡಿಪೆಂಡೆಟ್ ಎಫ್.ಸಿ ಬೆಂಗಳೂರು ಹಾಗೂ ಮಂಗಳೂರು ಎಫ್.ಸಿ.ಮಂಗಳೂರು 2 ತಂಡಗಳು ಬಾರದ ಹಿನ್ನಲೆಯಲ್ಲಿ ಪಂದ್ಯಾವಳಿಯನ್ನು ರದ್ದುಗೊಳಿಸಲಾಯಿತು. ನಿವೃತ್ತ ಯೋಧ ಮಧುಸೂಧನ್ ಚೆಂಡು ಒದೆಯುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಶಾರ್ಜದ ಉದ್ಯಮಿ ಅಬ್ಬಾಸ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಸೋಮನಾಥ್ ಇದ್ದರು. ಇಂದಿನ (19.03.25) ಪಂದ್ಯಾವಳಿಗಳು :: ಮೊದಲ ಪಂದ್ಯ 3 ಗಂಟೆಗೆ ಅತಿಥೇಯ ಬ್ಲೂಬಾಯ್ಸ್ ಯೂತ್ ಕ್ಲಬ್ v/s ನೇತಾಜಿ ಕೊಡಗರಹಳ್ಳಿ, ದ್ವಿತೀಯ ಪಂದ್ಯಾವಳಿ 4 ಗಂಟೆಗೆ ಶೀತಲ್ ಎಫ್.ಸಿ ಮೈಸೂರು v/s ಇಕೆಎನ್ ಎಫ್.ಸಿ.ಕೋಳಿಕಡಾವು, ಇರಿಟಿ ಕಣ್ಣೂರು









