
ಸುಂಟಿಕೊಪ್ಪ ಮೇ 19 NEWS DESK : 7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರುಗಳಾಗಿ ಸೇವೆಸಲ್ಲಿಸುತ್ತಿದ್ದ ರೆ.ಫಾ.ಸಬಾಸ್ಟಿನ್ ಪೂವತ್ತಗಲ್ (ಸುನಿಲ್) ಅವರನ್ನು 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರು ಬೋಳ್ಕೊಟ್ಟರು. ಕಳೆದ 11 ವರ್ಷಗಳಿಂದ ಸಂತ ಸೆಬಾಸ್ಟೀನ್ ದೇವಾಲಯದ ಧರ್ಮಗುರುಗಳಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುವ ಮೂಲಕ ಗ್ರಾಮಸ್ಥರೊಂದಿಗೆ ಉತ್ತಮ ಒಡನಾಟ ಹಾಗೂ ಬಾಂಧವ್ಯ ಹೊಂದಿದ್ದ ರೆ.ಫಾ.ಸಬಾಸ್ಟಿನ್ ಪೂವತ್ತಗಲ್ (ಸುನಿಲ್) ಇದೀಗ ವರ್ಗಾವಣೆಗೊಂಡೊದ್ದರಿಂದ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು 7ನೇ ಹೊಸಕೋಟೆ ದೇವಾಲಯದಲ್ಲಿ ಧರ್ಮಗುರುವನ್ನು ಸನ್ಮಾನಿಸಿ ಗೌರವಿಸಿ, ಬೋಳ್ಕೊಟ್ಟರು. ಈ ಸಂದರ್ಭ 7ನೇ ಹೊಸಕೋಟೆ ಗ್ರಾ.ಪಂ ಅಧ್ಯಕ್ಷ ಇ.ಬಿ.ಜೋಸೆಫ್, ಸದಸ್ಯರುಗಳಾದ ಮುಸ್ತಾಫ, ಸಿದ್ಧಿಕ್, ಮಾಜಿ ಅಧ್ಯಕ್ಷ ರಮೇಶ್, ಸೌಮ್ಯಶ್ರೀ, ಚಂದ್ರವತಿ, ಮಾಜಿ ಸದಸ್ಯ ರಮೇಶ್, ಸಂಜಿವಿನಿ ಒಕ್ಕೂಟದ ಅಧ್ಯಕ್ಷೆ ಲತಾ ಬಸವರಾಜ್, ಒಕ್ಕೂಟದ ಎಲ್‍ಸಿಆರ್‍ಪಿ ಉಷಾ, 7ನೇ ಹೊಸಕೋಟೆ ಎಸ್.ಹೆಚ್. ಕನ್ಯಾಸ್ತ್ರೀ ಮಠದ ಮದರ್ ಟೆಸ್ಸಿ ಮ್ಯಾನುವೆಲ್, ಸಿಸ್ಟರ್‍ಗಳಾದ ಸೂಪಿರಿಯರ್ ಲೀಸಾ ಟೋಮ್, ಅ್ಯನ್ಸಿ, ಜಿನ್ಸಿ, ಜುಮ್ಮ ಮಸೀದಿಯ ಅಧ್ಯಕ್ಷ ಉಮ್ಮರ್, 7ನೇ ಹೊಸಕೋಟೆ ಮಹಾಗಣಪತಿ ದೇವಾಲಯದ ಪದಾಧಿಕಾರಿಗಳು ಇದ್ದರು.









