Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಜಪಾನ್ ನಲ್ಲಿ ನಡೆಯುತ್ತಿರುವ ಆದಿವಾಸಿಗಳ ಪಾರಂಪರಿಕ ಜ್ಞಾನ ಅಧ್ಯಯನ ಪ್ರವಾಸಕ್ಕೆ ಡಾ.ಕಾವೇರಿ ಹೆಚ್.ಎಂ ಆಯ್ಕೆ*
  • *ಕೊಡಗಿನ ಕಾಫಿ ತೋಟದಲ್ಲಿ ರಾಜಾರೋಷವಾಗಿ ಸಂಚರಿಸುತ್ತಿರುವ ಹುಲಿ : ಗ್ರಾಮಸ್ಥರಲ್ಲಿ ಆತಂಕ*
  • *ನಿಧನ ಸುದ್ದಿ*
  • *ಬಡವರ ಸೂರಿಗಾಗಿ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಡಾ.ಮಂತರ್ ಗೌಡ*
  • *ಮರಾಟಿ ಪ್ರೀಮಿಯರ್ ಲೀಗ್-2 : ಗೂಗ್ಲಿಬಾಯ್ಸ್ ಕಾನೂರು ತಂಡ ಚಾಂಪಿಯನ್*
  • *ಕೊಡಗಿನಲ್ಲಿ 100 ದಿನಗಳ ಕಾಲ ಕ್ಷಯರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಅಭಿಯಾನ*
  • *ಮಹಿಳೋದಯ ಮಹಿಳಾ ಒಕ್ಕೂಟದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ : ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ : 1ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಜಿ.ಸುರೇಂದ್ರ*
  • *ತೊರೆನೂರಿನಲ್ಲಿ ಸಂಜೀವಿನಿ ಸಂತೆ ಮೇಳ : ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಂತೆ ಮೇಳ ಸಹಕಾರಿ : ರೂಪ ಮಹೇಶ್*
  • *ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ : ಐಮುಡಿಯಂಡ ಶೈಲಾ ಕುಶಾಲಪ್ಪಗೆ ಚಿನ್ನ*
  • *ಸಂಸದ ಯದುವೀರ್ ಒಡೆಯರ್ ಜನ್ಮದಿನಾಚರಣೆ : ಕೊಡಗು ಜಿಲ್ಲಾ ಬಿಜೆಪಿಯಿಂದ ವಿಶೇಷ ಪೂಜೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*‘ಹಾರ್ಟ್ ಲ್ಯಾಂಪ್’ ಆದ ‘ಹೃದಯ ದೀಪ’ : ಅನುವಾದಕಿ ಕೊಡಗಿನ ದೀಪಾ ಭಸ್ತಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*‘ಹಾರ್ಟ್ ಲ್ಯಾಂಪ್’ ಆದ ‘ಹೃದಯ ದೀಪ’ : ಅನುವಾದಕಿ ಕೊಡಗಿನ ದೀಪಾ ಭಸ್ತಿ*

ಮೇ 22, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 22 NEWS DESK : ಕನ್ನಡದ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರು ಬರೆದಿರುವ ಸಣ್ಣ ಕಥೆಗಳ ಸಂಗ್ರಹದ ‘ಹೃದಯ ದೀಪ’ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ‘ಹೃದಯ ದೀಪ’ದ ಅನುವಾದ ಕೃತಿ “ಹಾರ್ಟ್ ಲ್ಯಾಂಪ್’ ಗೆ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ‘ಬುಕ್ಕರ್ ಪ್ರಶಸ್ತಿ’ ಲಭಿಸಿದ್ದು, ಇದರ ಅನುವಾದಕರು ಕೊಡಗು ಜಿಲ್ಲೆಯ ದೀಪಾ ಭಸ್ತಿ ಎನ್ನುವುದು ವಿಶೇಷ. ಬಾನು ಮುಷ್ತಾಕ್ ಅವರ ಕಥಾ ಸಂಕಲನ ‘ಹೃದಯ ದೀಪ’ವನ್ನು ದೀಪಾ ಭಸ್ತಿ ಅವರು ಸತತ 4 ತಿಂಗಳ ಪರಿಶ್ರಮದ ಮೂಲಕ ಇಂಗ್ಲೀಷ್ ಗೆ ಅನುವಾದ ಮಾಡಿದ್ದಾರೆ. ಮಡಿಕೇರಿ ನಗರದ ರೈಫಲ್ ರೇಂಜ್ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲೇ ಈ ಕಾರ್ಯ ಪೂರ್ಣಗೊಳಿಸಿದ್ದಾರೆ. ಬಾನು ಮುಷ್ಲಾಕ್ ಅವರೊಂದಿಗೆ ದೀಪ ಬಾಸ್ತಿ ಅವರು ಇಂಗ್ಲೆಂಡ್‍ನಲ್ಲಿ ಮಂಗಳವಾರ ತಡ ರಾತ್ರಿ ‘ಬುಕ್ಕರ್ ಪ್ರಶಸ್ತಿ’ಯನ್ನು ಸ್ವೀಕರಿಸಿದರು. ಪ್ರತಿಷ್ಠಿತ ಪ್ರಶಸ್ತಿ ಲಭಿಸಿದ ಕುರಿತು ಹರ್ಷ ವ್ಯಕ್ತಪಡಿಸಿದ ದೀಪಾ ಭಸ್ತಿ ಅವರ ತಂದೆ ಬಿ.ಎನ್.ಪ್ರಕಾಶ್ ತಮ್ಮ ಪುತ್ರಿಯ ಸಾಹಿತ್ಯ ಸೇವೆಯ ಆಸಕ್ತಿಯನ್ನು ವಿವರಿಸಿದರು. ಇಂಗ್ಲೀಷ್ ನಲ್ಲೆ ವ್ಯಾಸಂಗ ಮಾಡಿದ್ದ ದೀಪಾ, ಬಾನು ಮುಷ್ತಾಕ್ ಅವರ ಕಥಾ ಸಂಗ್ರಹವನ್ನು ಇಂಗ್ಲೀಷ್‍ಗೆ ಅನುವಾದಿಸುವ ಸಂದರ್ಭ ಮುಂಬೈನಲ್ಲಿ ನೆಲೆಸಿರುವ ಕನ್ನಡದ ಹಿರಿಯ ವಿದ್ವಾಂಸ ಡಾ.ತಾಳ್ತಜೆ ವಸಂತ ಕುಮಾರ್ ಅವರ ಮಾರ್ಗದರ್ಶನವನ್ನು ಪಡೆದುಕೊಂಡಿದ್ದರು. ಕನ್ನಡಕ್ಕೆ ಸರಿಸಮಾನವಾದ ಇಂಗ್ಲೀಷ್ ಪದಗಳ ಹುಡುಕಾಟದಲ್ಲಿ ತೊಡಗುತ್ತಿದ್ದರು. ತಡರಾತ್ರಿ 2-3 ಗಂಟೆಗಳವರೆಗೂ ಅನುವಾದದಲ್ಲಿ ಮುಳುಗಿ ಹೋಗುತ್ತಿದ್ದ ಪುತ್ರಿಯ ಶ್ರಮಕ್ಕೆ ಫಲ ಸಿಕ್ಕಿದೆ ಎಂದರು. ಚೆನ್ನೈನಲ್ಲಿ ಮೂರು ವರ್ಷಗಳ ಕಾಲ ಪ್ರಾಥಮಿಕ ವಿದ್ಯಾಭ್ಯಾಸ, ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ಎಸ್‍ಎಸ್‍ಎಲ್‍ಸಿ, ವಿಜ್ಞಾನ ವಿಷಯದಲ್ಲಿ ಪಿಯುಸಿ ವ್ಯಾಸಂಗ ಮಾಡಿದ ದೀಪಾ ಭಸ್ತಿ, ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ವಿಜ್ಞಾನದ ವಿಷಯದಿಂದ ಹೊರ ಬಂದು ಬಿ.ಕಾಂ. ಪದವಿಯನ್ನು ಪಡೆದರು, ನಂತರ ಪತ್ರಿಕೋದ್ಯಮದತ್ತ ಆಸಕ್ತರಾದರು. ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮದಡಿ ಸ್ನಾತಕೋತ್ತರ ಪದವಿಯನ್ನು ಪಡೆದು ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ದೀಪಾ ಭಸ್ತಿ, ಮುಂದೆ ಕನ್ನಡ ಭಾಷಾ ಸಾಹಿತ್ಯ ಕೃತಿಗಳನ್ನು ಇಂಗ್ಲೀಷ್‍ಗೆ ಅನುವಾದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.
ಮಡಿಕೇರಿಯ ರೈಫಲ್ ರೇಂಜ್ ನಿವಾಸಿಗಳಾದ ಬಿ.ಎನ್.ಪ್ರಕಾಶ್ ಹಾಗೂ ಸುಧಾ ದಂಪತಿಯ ಪುತ್ರಿ, ಕೊಡಗಿನ ಖ್ಯಾತ ವೈದ್ಯರಾಗಿದ್ದ ಡಾ.ನಂಜುಂಡೇಶ್ವರ ಅವರ ಮೊಮ್ಮಗಳು, ಸಿ.ಆರ್. ನಾಣಯ್ಯ ಅವರ ಪತ್ನಿ ದೀಪ ಭಸ್ತಿ ಅವರು ಅನುವಾದ ಕೃತಿಗಳ ಮೂಲಕ ಹೆಸರಾಗಿದ್ದಾರೆ. ಕನ್ನಡ ಸಾಹಿತ್ಯದ ಹಿರಿಯ ಚೇತನ ಡಾ.ಶಿವರಾಮ ಕಾರಂತ್, ಸಣ್ಣ ಕಥೆಗಳ ಮೂಲಕ ಸಾಹಿತ್ಯ ವಲಯವನ್ನು ಪ್ರಭಾವಿಸಿದ್ದ ಕೊಡಗಿನ ಗೌರಮ್ಮ ಅವರ ಕೃತಿಗಳನ್ನು ಇಂಗ್ಲೀಷ್‍ಗೆ ಅನುವಾದ ಮಾಡಿದ್ದಾರೆ. ಬಾನು ಮುಷ್ತಾಕ್ ಅವರ “ಹೃದಯ ದೀಪ” ಕಥಾ ಸಂಗ್ರಹದ ಅನುವಾದ ಕೃತಿ ‘ಹಾರ್ಟ್ ಲ್ಯಾಂಪ್’ ಅಂತರಾಷ್ಟ್ರೀಯ ಮನ್ನಣೆಯ ಬುಕ್ಕರ್ ಪ್ರಶಸ್ತಿಗೆ ಪಾತ್ರವಾಗುವ ಮೂಲಕ, ಕನ್ನಡ ಸಾಹಿತ್ಯ ಕ್ಷೇತ್ರದ ಶ್ರೀಮಂತಿಕೆಯನ್ನು ವಿಶ್ವದ ಮುಂದೆ ತೆರೆದಿಟ್ಟಿದೆ. ಕೃತಿಯನ್ನು ಅನುವಾದಿಸಿದವರು ಕೊಡಗಿನವರು ಎನ್ನುವ ಹೆಮ್ಮೆ ಸಾಹಿತ್ಯಾಸಕ್ತರಲ್ಲಿ ಮೂಡಿದೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಜಪಾನ್ ನಲ್ಲಿ ನಡೆಯುತ್ತಿರುವ ಆದಿವಾಸಿಗಳ ಪಾರಂಪರಿಕ ಜ್ಞಾನ ಅಧ್ಯಯನ ಪ್ರವಾಸಕ್ಕೆ ಡಾ.ಕಾವೇರಿ ಹೆಚ್.ಎಂ ಆಯ್ಕೆ*

ಮಾರ್ಚ್ 25, 2026

*ಕೊಡಗಿನ ಕಾಫಿ ತೋಟದಲ್ಲಿ ರಾಜಾರೋಷವಾಗಿ ಸಂಚರಿಸುತ್ತಿರುವ ಹುಲಿ : ಗ್ರಾಮಸ್ಥರಲ್ಲಿ ಆತಂಕ*

ಮಾರ್ಚ್ 25, 2026

*ನಿಧನ ಸುದ್ದಿ*

ಮಾರ್ಚ್ 25, 2026

*ಕೊಡಗಿನ ಕಾಫಿ ತೋಟದಲ್ಲಿ ರಾಜಾರೋಷವಾಗಿ ಸಂಚರಿಸುತ್ತಿರುವ ಹುಲಿ : ಗ್ರಾಮಸ್ಥರಲ್ಲಿ ಆತಂಕ*

ಮಾರ್ಚ್ 25, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.25 : ಮಡಿಕೇರಿ ನಗರದ ಹೊರವಲಯದ ಇಬ್ಬನಿವಳವಾಡಿ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿದೆ. ಕಾಫಿ ತೋಟವೊಂದರಲ್ಲಿ ಹುಲಿ…

*ನಿಧನ ಸುದ್ದಿ*

ಮಾರ್ಚ್ 25, 2026

*ಬಡವರ ಸೂರಿಗಾಗಿ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಡಾ.ಮಂತರ್ ಗೌಡ*

ಮಾರ್ಚ್ 25, 2026

*ಮರಾಟಿ ಪ್ರೀಮಿಯರ್ ಲೀಗ್-2 : ಗೂಗ್ಲಿಬಾಯ್ಸ್ ಕಾನೂರು ತಂಡ ಚಾಂಪಿಯನ್*

ಮಾರ್ಚ್ 24, 2026

*ಕೊಡಗಿನಲ್ಲಿ 100 ದಿನಗಳ ಕಾಲ ಕ್ಷಯರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಅಭಿಯಾನ*

ಮಾರ್ಚ್ 24, 2026

*ಮಹಿಳೋದಯ ಮಹಿಳಾ ಒಕ್ಕೂಟದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ : ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ : 1ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಜಿ.ಸುರೇಂದ್ರ*

ಮಾರ್ಚ್ 24, 2026

*ತೊರೆನೂರಿನಲ್ಲಿ ಸಂಜೀವಿನಿ ಸಂತೆ ಮೇಳ : ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಂತೆ ಮೇಳ ಸಹಕಾರಿ : ರೂಪ ಮಹೇಶ್*

ಮಾರ್ಚ್ 24, 2026

*ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ : ಐಮುಡಿಯಂಡ ಶೈಲಾ ಕುಶಾಲಪ್ಪಗೆ ಚಿನ್ನ*

ಮಾರ್ಚ್ 24, 2026

*ಸಂಸದ ಯದುವೀರ್ ಒಡೆಯರ್ ಜನ್ಮದಿನಾಚರಣೆ : ಕೊಡಗು ಜಿಲ್ಲಾ ಬಿಜೆಪಿಯಿಂದ ವಿಶೇಷ ಪೂಜೆ*

ಮಾರ್ಚ್ 24, 2026

*ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನೆ : ನೀರನ್ನು ಮಿತವಾಗಿ ಬಳಸಲು ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ ಸಲಹೆ*

ಮಾರ್ಚ್ 24, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.