
ಮಡಿಕೇರಿ ಮೇ 22 NEWS DESK : ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್, ಮಡಿಕೇರಿ (ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು ಇದರ ಅಂಗ ಸಂಸ್ಥೆ) ರೆಗ್ಯೂಲರ್ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೋರ್ಸ್ ಅವಧಿ 6 ತಿಂಗಳು. ಪ್ರತಿ ವರ್ಷ ಜನವರಿ-ಜೂನ್ ಮತ್ತು ಜುಲೈ-ಡಿಸೆಂಬರ್‍ವರೆಗೆ ಎರಡು ಅಧಿವೇಶನಗಳು. ಕನಿಷ್ಠ ಪ್ರವೇಶ ಶುಲ್ಕ. ಪ್ರವೇಶ ಪಡೆದ ಎಲ್ಲಾ ಅಭ್ಯರ್ಥಿಗಳಿಗೂ ಶಿಷ್ಯವೇತನ ನೀಡಲಾಗುವುದು. ರಿಯಾಯಿತಿ ದರದಲ್ಲಿ ಅಧ್ಯಯನ ಸಾಹಿತ್ಯ ನೀಡಲಾಗುವುದು. ಹೈಬ್ರಿಡ್ ಮಾದರಿಯಲ್ಲಿ ಆಫ್‍ಲೈನ್/ ಆನ್‍ಲೈನ್ ತರಗತಿಗಳನ್ನು ನಡೆಸಲಾಗುವುದು. ಸಹಕಾರ ಸಂಘ / ಬ್ಯಾಂಕ್ ನೇಮಕಾತಿ ಪರೀಕ್ಷೆಗೆ ಅನುಕೂಲಕರ. ಕೆ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲಕರ. ವಿದ್ಯಾರ್ಹತೆ; ಕನಿಷ್ಠ ಎಸ್‍ಎಸ್‍ಎಲ್‍ಸಿ, ಗರಿಷ್ಠ ಯಾವುದೇ ಪದವಿ/ಇತರೆ. ವಿಶೇಷವಾಗಿ ನಾಯಕತ್ವ (Leadership, Motivational Speech) ಬೆಳೆಸಿಕೊಳ್ಳಲು ಚರ್ಚಾ ಸ್ಪರ್ಧೆಯೊಂದಿಗೆ ಕಲಿಕೆ. ಕನಿಷ್ಠ ಶುಲ್ಕದೊಂದಿಗೆ ತ್ರೈಮಾಸಿಕ ಕಂಪ್ಯೂಟರ್ ಬೇಸಿಕ್ ತರಬೇತಿ ನೀಡಲಾಗುವುದು. 69 ವರ್ಷಗಳ ಶೈಕ್ಷಣಿಕ ಅನುಭವ, ಸುಸಜ್ಜಿತ ಗ್ರಂಥಾಲಯ, ನುರಿತ ಅನುಭವಿ ಬೋಧನಾ ವೃಂದ, ವಿಶಾಲವಾದ ಆಟದ ಮೈದಾನ ಮತ್ತು ಉತ್ತಮ ನೈಸರ್ಗಿಕ ಪರಿಸರ, ಕಾಲೇಜು ಆವರಣದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಉಚಿತ ವಸತಿ ವ್ಯವಸ್ಥೆ, ರ್ಯಾಂಕ್‍ಗಳೊಂದಿಗೆ ಉತ್ತಮ ಫಲಿತಾಂಶದ ದಾಖಲೆ. ಅರ್ಜಿ ಫಾರಂನ್ನು ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್, ಮಡಿಕೇರಿ ಮುತ್ತಪ್ಪ ದೇವಸ್ಥಾನದ ಹತ್ತಿರ, ಅಬ್ಬಿಫಾಲ್ಸ್ ರಸ್ತೆ, ಮಡಿಕೇರಿ ಕೊಡಗು ಜಿಲ್ಲೆ-571201, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮಡಿಕೇರಿ, ಹಾಸನ, ಮೈಸೂರು, ಚಿಕ್ಕಮಗಳೂರು ಜಿಲ್ಲಾ ಸಹಕಾರ ಯೂನಿಯನ್ ಇಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ 9845318364, 9663153922 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಪ್ರಕಟಣೆ ತಿಳಿಸಿದೆ.









