
ಮಡಿಕೇರಿ ಮೇ 22 NEWS DESK : ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್, ಮಡಿಕೇರಿ (ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು ಇದರ ಅಂಗ ಸಂಸ್ಥೆ) ದೂರಶಿಕ್ಷಣ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. (ಸಹಕಾರ ಸಂಘ, ಸಂಸ್ಥೆ, ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಮಾತ್ರ). ಇತ್ತೀಚಿನ ಕಾಯಿದೆ ತಿದ್ದುಪಡಿ ಅನ್ವಯ ಕೆಸಿಎಸ್ ನಿಯಮ 17(ಎ)(ಬಿ) ಪ್ರಕಾರ ಪದೋನ್ನತಿ ಹೊಂದಬೇಕಾದರೆ ಕಡ್ಡಾಯವಾಗಿ ಡಿಸಿಎಂ ಕೋರ್ಸ್ ಪಡೆಯಬೇಕಾಗುತ್ತದೆ. ಕೋರ್ಸ್ ಅವಧಿ 6 ತಿಂಗಳು ಪ್ರತಿ ವರ್ಷ ಜನವರಿ-ಜೂನ್ ಮತ್ತು ಜುಲೈ-ಡಿಸೆಂಬರ್‍ರವರೆಗೆ ಎರಡು ಅಧಿವೇಶನಗಳು ಪದೋನ್ನತಿ ಮತ್ತು ವಾರ್ಷಿಕ ಬಡ್ತಿಗೆ ಉಪಯುಕ್ತ ಅಧ್ಯಯನ ಸಾಹಿತ್ಯ ನೀಡಲಾಗುವುದು. 6 ತಿಂಗಳ ಅವಧಿಯಲ್ಲಿ (5+5=10) 2 ಸಂಪರ್ಕ ತರಗತಿಗಳು ಹೈಬ್ರಿಡ್ ಮಾದರಿಯಲ್ಲಿ ಆಫ್‍ಲೈನ್, ಆನ್‍ಲೈನ್ ತರಗತಿಗಳು ಸಹಕಾರ ವಾರಪತ್ರಿಕೆಯನ್ನು ನೀಡಲಾಗುವುದು. ಈಗಾಗಲೇ ರಾಜ್ಯದಲ್ಲಿ ಸುಮಾರು 30,000 ಸಹಕಾರಿ ಉದ್ಯೋಗಿಗಳು ತರಬೇತಿ ಪಡೆದಿದ್ದಾರೆ. ಸಹಕಾರ ಕ್ಷೇತ್ರದ ಅರಿವಿಗೆ ನಿಮಗೀಗ ಸುವರ್ಣಾವಕಾಶ. ಅರ್ಜಿ ಫಾರಂ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್, ಮಡಿಕೇರಿ ಮುತ್ತಪ್ಪ ದೇವಸ್ಥಾನದ ಹತ್ತಿರ, ಅಬ್ಬಿಫಾಲ್ಸ್ ರಸ್ತೆ, ಮಡಿಕೇರಿ ಕೊಡಗು ಜಿಲ್ಲೆ-571201 ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ, ಮಡಿಕೇರಿ, ಹಾಸನ, ಮೈಸೂರು, ಚಿಕ್ಕಮಗಳೂರು ಜಿಲ್ಲಾ ಸಹಕಾರ ಯೂನಿಯನ್ ಇಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ 9845318364, 9663153922 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಪ್ರಕಟಣೆ ತಿಳಿಸಿದೆ.









