Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಉಡೋತ್ ಮೊಟ್ಟೆಯಲ್ಲಿ ಕೈಲ್ ಪೊಳ್ದ್ ಸಂಭ್ರಮ*
  • *ಕಸ್ತೂರಿ ರಂಗನ್ ವರದಿ : ಜನವಸತಿ ಗ್ರಾಮಗಳನ್ನು ಸಂಪೂರ್ಣ ಹೊರಗಿಡಲು ಆಗ್ರಹ*
  • *ಭಾರತ್ ಜೋಡೋ : ಲಾಂಛನ ಅನಾವರಣ*
  • *ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟ*
  • *ರಾಷ್ಟ್ರೀಯ ಜೂನಿಯರ್ ಬಾಲಕಿಯರ ಹಾಕಿ ಪಂದ್ಯಾವಳಿ : ಹೈದರಾಬಾದ್ ವಲಯಕ್ಕೆ ರನ್ನರ್ ಅಪ್ ಪ್ರಶಸ್ತಿ*
  • *ಮಹಿಳೆಯರು ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು: ಶಾಸಕ ಡಾ. ಮಂತರ್ ಗೌಡ*
  • *ಒಂಟಿ ಸಲಗ ದಾಳಿ: ಕೂಲಿ ಕಾರ್ಮಿಕನಿಗೆ ಗಂಭೀರ ಗಾಯ*
  • *ಅಮೆರಿಕ ಪ್ರವಾಸದಲ್ಲಿದ್ದರೂ ಕಸ್ತೂರಿರಂಗನ್ ವರದಿ ಕುರಿತ ಸಭೆಯಲ್ಲಿ ಭಾಗವಹಿಸಲಿರುವ ಸಂಸದ ಯದುವೀರ್ ಒಡೆಯರ್; ಕೊಡಗು ಹಾಗೂ ಪಶ್ಚಿಮ ಘಟ್ಟಗಳ ಹಿತಾಸಕ್ತಿಗೆ ಬದ್ಧತೆ ಪುನರುಚ್ಚಾರ*
  • *ಕ.ಸಾ.ಪ. ವತಿಯಿಂದ ಸೆ.8ರಂದು ಕುಶಾಲನಗರದಲ್ಲಿ ಸಾಹಿತಿ ದಿ. ವಿ.ಎಸ್. ರಾಮಕೃಷ್ಣ ದತ್ತಿ ಕಾರ್ಯಕ್ರಮ*
  • *ಕನಿಷ್ಠ ವೇತನ ತಡೆ ವಿರೋಧಿಸಿ ಸೆ.8ರಂದು ‘ವಿಧಾನಸೌಧ ಚಲೋ’*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್ ಪಂದ್ಯಾವಳಿ : ನಾಲ್ಕು ತಂಡಗಳ ಮುನ್ನಡೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್ ಪಂದ್ಯಾವಳಿ : ನಾಲ್ಕು ತಂಡಗಳ ಮುನ್ನಡೆ*

ಮೇ 23, 20253 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಸುಂಟಿಕೊಪ್ಪ ಮೇ 23 NEWS DESK : ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‍ಬಾಲ್ ಪಂದ್ಯಾವಳಿಯ 6ನೇ ದಿನ ನಡೆದ ಫುಟ್ಬಾಲ್ ಪಂದ್ಯಾವಳಿಯ ಹಣಾಹಣಿಯಲ್ಲಿ ಟಿಡಿಎಲ್ ಎಫ್.ಸಿ ಬೈಲುಕೊಪ್ಪ, ವಾಲ್‍ಪರಿ ಎಫ್.ಸಿ ತಮಿಳುನಾಡು, ಕ್ಯಾಲಿಕೆಟ್ ಎಫ್.ಸಿ.ಕ್ಯಾಲಿಕೆಟ್ ಹಾಗೂ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಜಿಯಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ 39ನೇ ವರ್ಷದ ಆಯೋಜಿಸಲಾಗಿರುವ ಫುಟ್ಬಾಲ್ ಮೊದಲನೇ ಪಂದ್ಯಾವಳಿಯು ವಾಲ್‍ಪರಿ ಎಫ್.ಸಿ ತಮಿಳುನಾಡು ಹಾಗೂ ಮೊಗ್ರೆಲ್ ಎಫ್.ಸಿ ಕುಂಬ್ಳೆ. ತಂಡಗಳ ನಡುವೆ ನಡೆದ ಪಂದ್ಯಾವಳಿಯ ಮೊದಲಾರ್ಧದಲ್ಲಿ ವಾಲ್‍ಪರಿ ಎಫ್.ಸಿ ತಮಿಳುನಾಡು ತಂಡದ ಮುನ್ನಡೆ ಆಟಗಾರ 3ನೇ ನಿಮೀಷದಲ್ಲಿ ಸಿಬಿನ್ ತನ್ನಗೆ ದೊರೆತ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಎದುರಾಳಿ ತಂಡಕ್ಕೆ 1 ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆಯನ್ನು ಒದಗಿಸಿದರು. 10ನೇ ನಿಮೀಷದಲ್ಲಿ ವಾಲ್‍ಪರಿ ಎಫ್.ಸಿ ತಂಡದ ಮತೋರ್ವ ಮುನ್ನಡೆ ಆಟಗಾರ ನಿಖಿಲ್ ಅಯ್ಯಪ್ಪ ಮತ್ತೊಂದು ಗೋಲು ಬಾರಿಸುವ ಮೂಲಕ ತಂಡಕ್ಕೆ ಸ್ಥೈರ್ಯ ತುಂಬುವಲ್ಲಿ ಮುಂದಾದರು. ಆದರೆ ಎದುರಾಳಿ ಕುಂಬ್ಳೆ ತಂಡವು ಬಿರುಸಿನ ಆಟಕ್ಕೆ ಇಳಿದು 22ನೇ ನಿಮೀಷದಲ್ಲಿ ಕುಂಬ್ಳೆ ತಂಡದ ಮುನ್ನಡೆ ಆಟಗಾರ ನಿಷಾದ್ 1 ಗೋಲು ಬಾರಿಸುವ ಮೂಲಕ ಎದುರಾಳಿ ತಂಡಗಳಿಸಿದ ಗೋಲಿನ ಅಂತರವನ್ನು ಕಡಿಮೆಗೊಲೀಸಿದರು. ದ್ವಿತೀಯಾರ್ಧದ 8ನೇ ನಿಮೀಷದಲ್ಲಿ ವಾಲ್‍ಪರಿ ಎಫ್.ಸಿ ತಮಿಳುನಾಡು ತಂಡದ ಮಲ್ವಿನ್ ಅವರು 1 ಗೋಲು ಬಾರಿಸುವ ಮೂಲಕ ತಂಡಕ್ಕೆ ಮತ್ತಷ್ಟು ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಎರಡು ತಂಡಗಳು ಬಿರುಸಿನ ಆಟವನ್ನು ಪ್ರದರ್ಶಿಸುವ ಮೂಲಕ ಎದುರಾಳಿ ವಾಲ್‍ಪರಿ ಎಫ್.ಸಿ ತಮಿಳುನಾಡು 14ನೇ ನಿಮೀಷದಲ್ಲಿ ನಿಖಿಲ್ ಅಯ್ಯಪ್ಪ ಮತ್ತೊಂದು ಗೋಲು ಬಾರಿಸುವ ಮೂಲಕ ತಂಡವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿತ್ತು. 24 ನೇ ನಿಮೀಷದಲ್ಲಿ ನಿಖಿಲ್ ಅವರು ಮತ್ತೊಂದು ಗೋಲು ಬಾರಿಸುವ ಮೂಲಕ ಮೊಗ್ರೆಲ್ ಎಫ್.ಸಿ ಕುಂಬ್ಳೆ. ತಂಡವನ್ನು 5-1 ಗೋಲುಗಳಿಂದ ಸೋಲಿಸುವ ಮೂಲಕ ವಾಲ್‍ಪರಿ ಎಫ್.ಸಿ ತಮಿಳುನಾಡು ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಒಂದೇ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ 3 ಗೋಲುಗಳ ಸಾಧನೆಯನ್ನು ನಿಖಿಲ್ ಅಯ್ಯಪ್ಪ ಮಾಡಿರುವುದು ಮತ್ತೊಂದು ಸಾಧನೆಯಾಗಿದೆ. ದ್ವಿತೀಯ ಪಂದ್ಯಾವಳಿಯು ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ಹಾಗೂ ಅಶೋಕ ಎಫ್.ಸಿ ತಂಡಗಳ ನಡುವೆ ನಡೆದು ಮೊದಲಾರ್ಧದ 5ನೇ ನಿಮೀಷದಲ್ಲಿ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡದ ರಾಸುಲ್ 1 ಗೋಲು ಬಾರಿಸುವ ಮೂಲಕ ಎದುರಾಳಿ ತಂಡಕ್ಕೆ ಗೋಲಿನ ಖಾತೆಯನ್ನು ತರೆಯುತ್ತಿದ್ದಂತೆ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡದ 17 ನೇ ನಿಮೀಷದಲ್ಲಿ ಜಯ ಹಾಗೂ 24 ನೇ ನಿಮೀಷದಲ್ಲಿ ಶ್ಯಾಂ ಗೋಲುಗಳಿಸುವ ಮೂಲಕ ಪ್ರಥಮಾರ್ಧದಲ್ಲಿ ಎದುರಾಳಿ ತಂಡಕ್ಕೆ ಬಾರೀ ಸವಾಲನ್ನೇ ನೀಡಿದರು. ದ್ವಿತೀಯಾರ್ಧದಲ್ಲಿ ಎರಡು ತಂಡಗಳು ಸಮಬಲದ ಪ್ರದರ್ಶವನ್ನು ನೀಡುತ್ತಿದ್ದರೂ 17ನೇ ನಿಮೀಷದಲ್ಲಿ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡದ ದುಲ್ಯಾಶನ್ ತನ್ನಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು 1 ಗೋಲು ಬಾರಿಸುವ ಮೂಲಕ ಎದುರಾಳಿ ತಂಡವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿದರು. ಅಶೋಕ ಮೈಸೂರು ಆಟಗಾರರು ಬಿರುಸಿನ ಆಟಕ್ಕೆ ದುಮ್ಮುಕ್ಕಿದ್ದರು ಎದುರಾಳಿ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡಕ್ಕೆ 19ನೇ ಮತ್ತು 22ನೇ ನಿಮೀಷದಲ್ಲಿ ಪ್ರಶಾಂತ್ 2 ಗೋಲುಗಳಿಸುವ ಮೂಲಕ ಎದುರಾಳಿ ತಂಡದ ಗೋಲಿನ ಅಂತರವನ್ನು ಕಡಿಮೆಗೊಳಿಸಿದರು. 4-2 ಗೋಲುಗಳಿಂದ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡವು ಮೈಸೂರು ತಂಡವನ್ನು ಸೋಲಿಸುವ ಮೂಲಕ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. 3ನೇ ಪಂದ್ಯಾವಳಿಯು ಬ್ಲೂಮೌಂಟೆನ್ ಎಫ್.ಸಿ.ಊಟಿ ಹಾಗೂ ಕ್ಯಾಲಿಕೆಟ್ ಎಫ್.ಸಿ.ಕ್ಯಾಲಿಕೆಟ್ ತಂಡಗಳ ನಡುವೆ ನಡೆಯಬೇಕಿದ್ದು, ಬ್ಲೂಮೌಂಟೆನ್ ಎಫ್.ಸಿ.ಊಟಿ ತಂಡವು ಬಾರದ ಹಿನ್ನಲೆಯಲ್ಲಿ ಕ್ಯಾಲಿಕೆಟ್ ಎಫ್.ಸಿ.ಕ್ಯಾಲಿಕೆಟ್ ತಂಡಕ್ಕೆ ವಾಕ್‍ಓವರ್ ಮೂಲಕ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. 4ನೇ ಪಂದ್ಯಾವಳಿಯು ಯಂಗ್ ವಾರಿಯರ್ಸ್ ಎಫ್.ಸಿ.ಕೆಜಿಎಫ್ ಹಾಗೂ ಟಿಡಿಎಲ್ ಎಫ್.ಸಿ ಬೈಲುಕೊಪ್ಪ ನಡುವೆ ನಡೆಯಬೇಕಿದ್ದ ಪಂದ್ಯಾವಳಿಯಲ್ಲಿ ಯಂಗ್ ವಾರಿಯರ್ಸ್ ಎಫ್.ಸಿ.ಕೆಜಿಎಫ್ ಬಾರದ ಹಿನ್ನಲೆಯಲ್ಲಿ ಟಿಡಿಎಲ್ ಎಫ್.ಸಿ ಬೈಲುಕೊಪ್ಪ ತಂಡಕ್ಕೆ ವಾಕ್‍ಓವರ್ ನೀಡಿದ ಹಿನ್ನಲೆ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಇದೇ ಸಂದರ್ಭ ಪಂದ್ಯಾವಳಿಯನ್ನು ಬ್ಲೂಬಾಯ್ಸ್ ಯುವಕ ಸಂಘದ ಮಾಜಿ ಅಧ್ಯಕ್ಷ ಮೊಣ್ಣಪ್ಪ ಪೂಜಾರಿ ಉದ್ಘಾಟಿಸಿದರು ಪಂಚಾಯಿತಿ ಸದಸ್ಯರಾದ ಶಬ್ಬಿರ್ ಅಧ್ಯಕ್ಷ ಆಲಿಕುಟ್ಟಿ, ಗೌರವಧ್ಯಕ್ಷ ಟಿ.ಯು.ಪ್ರಸನ್ನ, ಅನಿಲ್, ಹಮೀದ್ ಸೇರಿದಂತೆ ಮತ್ತಿತರರು ಇದ್ದರು.

ಇಂದಿನ ಪಂದ್ಯಾವಳಿಗಳು ::  ಮೊದಲ ಪಂದ್ಯ ಮಧ್ಯಾಹ್ನ 1.30 ಗಂಟೆಗೆ ವಾಲ್‍ಪರಿ ಎಫ್.ಸಿ ತಮಿಳುನಾಡು v/s ಇಕೆಎನ್ ಎಫ್.ಸಿ.ಕೋಳಿಕಡಾವು ಇರಿಟಿ ಕಣ್ಣುನೂರು, ದ್ವಿತೀಯ ಪಂದ್ಯಾವಳಿ 2.30. ಗಂಟೆಗೆ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ v/s ಮಿಡ್‍ಸಿಟಿ ಸುಂಟಿಕೊಪ್ಪ, ಮೂರನೇ ಪಂದ್ಯಾವಳಿ 3.30 ಗಂಟೆಗೆ ಟಿಡಿಎಲ್ ಎಫ್.ಸಿ ಬೈಲುಕೊಪ್ಪ v/s ಎನ್‍ವೈಸಿ ಕೊಡಗರಹಳ್ಳಿ ನಾಲ್ಕನೇ ಪಂದ್ಯಾವಳಿ 4.30 ಗಂಟೆಗೆ ಬೆಟ್ಟಗೇರಿ ಎಫ್.ಸಿ ಸುಂಟಿಕೊಪ್ಪ v/s ಕ್ಯಾಲಿಕೆಟ್ ಎಫ್.ಸಿ.ಕ್ಯಾಲಿಕೆಟ್

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಉಡೋತ್ ಮೊಟ್ಟೆಯಲ್ಲಿ ಕೈಲ್ ಪೊಳ್ದ್ ಸಂಭ್ರಮ*

ಸೆಪ್ಟೆಂಬರ್ 4, 2026

*ಕಸ್ತೂರಿ ರಂಗನ್ ವರದಿ : ಜನವಸತಿ ಗ್ರಾಮಗಳನ್ನು ಸಂಪೂರ್ಣ ಹೊರಗಿಡಲು ಆಗ್ರಹ*

ಸೆಪ್ಟೆಂಬರ್ 4, 2026

*ಭಾರತ್ ಜೋಡೋ : ಲಾಂಛನ ಅನಾವರಣ*

ಸೆಪ್ಟೆಂಬರ್ 4, 2026

*ಕಸ್ತೂರಿ ರಂಗನ್ ವರದಿ : ಜನವಸತಿ ಗ್ರಾಮಗಳನ್ನು ಸಂಪೂರ್ಣ ಹೊರಗಿಡಲು ಆಗ್ರಹ*

ಸೆಪ್ಟೆಂಬರ್ 4, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, ಸೆ.4 NEWS DESK : ಕಸ್ತೂರಿ ರಂಗನ್ ಹೋರಾಟ ಸಮಿತಿ-ಕೊಡಗು ಜಿಲ್ಲೆ ವತಿಯಿಂದ ಮಡಿಕೇರಿಯಲ್ಲಿ ಕಸ್ತೂರಿರಂಗನ್ ವರದಿ ಕುರಿತು…

*ಭಾರತ್ ಜೋಡೋ : ಲಾಂಛನ ಅನಾವರಣ*

ಸೆಪ್ಟೆಂಬರ್ 4, 2026

*ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟ*

ಸೆಪ್ಟೆಂಬರ್ 4, 2026

*ರಾಷ್ಟ್ರೀಯ ಜೂನಿಯರ್ ಬಾಲಕಿಯರ ಹಾಕಿ ಪಂದ್ಯಾವಳಿ : ಹೈದರಾಬಾದ್ ವಲಯಕ್ಕೆ ರನ್ನರ್ ಅಪ್ ಪ್ರಶಸ್ತಿ*

ಸೆಪ್ಟೆಂಬರ್ 4, 2026

*ಮಹಿಳೆಯರು ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು: ಶಾಸಕ ಡಾ. ಮಂತರ್ ಗೌಡ*

ಸೆಪ್ಟೆಂಬರ್ 4, 2026

*ಒಂಟಿ ಸಲಗ ದಾಳಿ: ಕೂಲಿ ಕಾರ್ಮಿಕನಿಗೆ ಗಂಭೀರ ಗಾಯ*

ಸೆಪ್ಟೆಂಬರ್ 4, 2026

*ಅಮೆರಿಕ ಪ್ರವಾಸದಲ್ಲಿದ್ದರೂ ಕಸ್ತೂರಿರಂಗನ್ ವರದಿ ಕುರಿತ ಸಭೆಯಲ್ಲಿ ಭಾಗವಹಿಸಲಿರುವ ಸಂಸದ ಯದುವೀರ್ ಒಡೆಯರ್; ಕೊಡಗು ಹಾಗೂ ಪಶ್ಚಿಮ ಘಟ್ಟಗಳ ಹಿತಾಸಕ್ತಿಗೆ ಬದ್ಧತೆ ಪುನರುಚ್ಚಾರ*

ಸೆಪ್ಟೆಂಬರ್ 4, 2026

*ಕ.ಸಾ.ಪ. ವತಿಯಿಂದ ಸೆ.8ರಂದು ಕುಶಾಲನಗರದಲ್ಲಿ ಸಾಹಿತಿ ದಿ. ವಿ.ಎಸ್. ರಾಮಕೃಷ್ಣ ದತ್ತಿ ಕಾರ್ಯಕ್ರಮ*

ಸೆಪ್ಟೆಂಬರ್ 4, 2026

*ಕನಿಷ್ಠ ವೇತನ ತಡೆ ವಿರೋಧಿಸಿ ಸೆ.8ರಂದು ‘ವಿಧಾನಸೌಧ ಚಲೋ’*

ಸೆಪ್ಟೆಂಬರ್ 4, 2026

*7ನೇ ಹೊಸಕೋಟೆಯಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ*

ಸೆಪ್ಟೆಂಬರ್ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.