
ಮಡಿಕೇರಿ ಮೇ 23 NEWS DESK : ಪ್ರಸಕ್ತ (2025-26) ಸಾಲಿಗೆ ಮಡಿಕೇರಿ ತಾಲ್ಲೂಕು ಪರಿಶಿಷ್ಟ ಪಂಗಡದ ಮಹರ್ಷಿ ವಾಲ್ಮೀಕಿ ಬುಡಕಟ್ಟು ವಸತಿ ಶಾಲೆ, ಕರಿಕೆ ಮತ್ತು ಕಟ್ಟಪಳ್ಳಿ ಇಲ್ಲಿಗೆ 1 ರಿಂದ 5ನೇ ತರಗತಿ ವರೆಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಉಚಿತ ಸಮವಸ್ತ್ರ, ಬ್ಯಾಗ್, ದಾಖಲಾತಿ(ಶುಲ್ಕ ರಹಿತ), ಲೇಖನ ಸಾಮಾಗ್ರಿ, ಹಾಸ್ಟೇಲ್ ಸೌಲಭ್ಯ, ಮೆನು ಚಾರ್ಟ್ ಪ್ರಕಾರ ಪೌಷ್ಠಿಕ ಆಹಾರ ಪೂರೈಕೆ, ನುರಿತ ಶಿಕ್ಷಕರಿಂದ ಬೋಧನೆ, ತಿಂಗಳಿಗೆ ಉಚಿತ “ಶುಚಿ ಸಂಭ್ರಮ ಕಿಟ್” (ಸೋಪು, ಪೇಸ್ಟ್, ಬ್ರಷ್, ತೆಂಗಿನಎಣ್ಣೆ), ಉಚಿತ ಆರೋಗ್ಯ ತಪಾಸಣೆ ಸೌಲಭ್ಯ ಇರುತ್ತದೆ. ಆಸಕ್ತ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರು, ಪರಿಶಿಷ್ಟ ಪಂಗಡದ ಮಹರ್ಷಿ ವಾಲ್ಮೀಕಿ ಬುಡಕಟ್ಟು ವಸತಿ ಶಾಲೆ ಕರಿಕೆ, ಕಟ್ಟಪಳ್ಳಿ ಇಲ್ಲಿಂದ ಅರ್ಜಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ಅರ್ಜಿಸಲ್ಲಿಸುವಾಗ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ವಾಸಸ್ಥಳ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿ ಹಾಗೂ ಹಿಂದಿನ ತರಗತಿ ಅಂಕಪಟ್ಟಿ ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ಮುಖ್ಯ ಶಿಕ್ಷಕರು, ಪರಿಶಿಷ್ಟ ಪಂಗಡದ ಮಹರ್ಷಿ ವಾಲ್ಮೀಕಿ ಬುಡಕಟ್ಟು ವಸತಿ ಶಾಲೆ ಕರಿಕೆ : 8618546009, ಮುಖ್ಯ ಶಿಕ್ಷಕರು, ಪರಿಶಿಷ್ಟ ಪಂಗಡದ ಮಹರ್ಷಿ ವಾಲ್ಮೀಕಿ ಬುಡಕಟ್ಟು ವಸತಿ ಶಾಲೆ, ಕಟ್ಟಪಳ್ಳಿ: 9483447583 ಹಾಗೂ ಸಹಾಯಕ ನಿರ್ದೇಶಕರು (ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ ಇಲ್ಲಿನ ಕಚೇರಿ ದೂರವಾಣಿ ಸಂಖ್ಯೆ 9480843155 ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.









