
ಮಡಿಕೇರಿ ಮೇ 28 NEWS DESK : ಕೊಡಗು ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ವಿದ್ಯುತ್ ಮಾರ್ಗಗಳು, ಕಂಬಗಳು ಹಾಗೂ ಪರಿವರ್ತಕಗಳು ಹಾನಿಗೊಳಗಾಗಿದ್ದು, ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 594 ಸಂಖ್ಯೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುತ್ತದೆ. ನಿಗಮದ ನಿರ್ವಹಣಾ ಸಿಬ್ಬಂದಿಗಳು ಹಗಲಿರುಳು ವಿದ್ಯುತ್ ಮಾರ್ಗದ ದುರಸ್ಥಿ ಕಾರ್ಯವನ್ನು ನಿರ್ವಹಿಸಲು ಶ್ರಮಿಸುತ್ತಿದ್ದು, ಅತೀ ಹೆಚ್ಚಿನ ಗಾಳಿ ಮಳೆಯಿಂದಾಗಿ ದುರಸ್ಥಿ ಕಾರ್ಯಕ್ಕೆ ತೊಂದರೆ ಉಂಟಾಗುತ್ತಿದೆ. ಸಿಬ್ಬಂದಿಗಳ ಕೊರತೆಯ ನಡುವೆಯೂ ನಿರಂತರವಾಗಿ ವಿದ್ಯುತ್ ಮಾರ್ಗದ ದುರಸ್ಥಿ ಕಾರ್ಯವನ್ನು ನಿರ್ವಹಿಸುತ್ತಿದ್ದು. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸುವಂತೆ ಈ ಮೂಲಕ ಕೋರಲಾಗಿದೆ.









