
ವಿರಾಜಪೇಟೆ ಜೂ.19 NEWS DESK : ವಿರಾಜಪೇಟೆ ಕೊಡವ ಸಮಾಜ ಹಾಗೂ ಗೋಣಿಕೊಪ್ಪ ಲೋಪಾಮುದ್ರಾ ದೃಷ್ಟಿ ಕಣ್ಣಿನ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಜೂ.23 ರಂದು ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಲಿದೆ. ಅಂದು ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 4.30 ಗಂಟೆ ತನಕ ವಿರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಶಿಬಿರ ನಡೆಯಲಿದೆ. ಸಾರ್ವಜನಿಕರು ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಶಿಬಿರದ ಆಯೋಜಕರು ವಿನಂತಿಸಿಕೊಂಡಿದ್ದಾರೆ. ಹೆಚ್ಚಿನ ವಿವರಕ್ಕೆ ವಿರಾಜಪೇಟೆ ಕೊಡವ ಸಮಾಜ ವ್ಯವಸ್ಥಾಪಕ ತಾತಂಡ ದಿಲೀಪ್-9740620915, ಆಡಳಿತಾಧಿಕಾರಿ ಹರ್ಷಿತ್ ಕರುಂಬಯ್ಯ, ಲೋಪಾಮುದ್ರಾ ದೃಷ್ಟಿ ಕಣ್ಣಿನ ಆಸ್ಪತ್ರೆ ಗೋಣಿಕೊಪ್ಪ-9481920056 ಇವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.









