
ಮಡಿಕೇರಿ ಜೂ.21 NEWS DESK : ಭಾಗಮಂಡಲ ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬೆಂಗಳೂರು ಭಾರತ್ ಬೆಂಜ್ ಮೋಟಾರ್ ಲಿಮಿಟೆಡ್ ವತಿಯಿಂದ ಮೆಕ್ಯಾನಿಕ್ ಮೋಟಾರ್ ವೆಹಿಕಲ್ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ನಡೆಯಿತು. ಕ್ಯಾಂಪಸ್ ಸಂದರ್ಶನವನ್ನು ಕಂಪನಿಯ ಹೆಚ್.ಆರ್ ಕಮಲಾಕರ್ ಮತ್ತು ಮೈಸೂರು ಬ್ರಾಂಚಿನ ಮ್ಯಾನೇಜರ್ ನವನೀತ್ ನಡೆಸಿದರು. ಭಾರತ್ ಬೆಂಜಿನ ಕರ್ನಾಟಕದ ವಿವಿಧ ಶೋರೂಮ್ ಮತ್ತು ಸರ್ವಿಸ್ ಸೆಂಟರ್ ಗಳಿಗೆ ಆಯ್ಕೆ ನಡೆಯಿತು. ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದರು.










