

ಗೋಣಿಕೊಪ್ಪ ಜೂ.21 NEWS DESK : ಗೋಣಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾವೇರಿ ಮಹಿಳಾ ಸಮಾಜದ ವತಿಯಿಂದ 11ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕ ಮಹೇಶ್ ಯೋಗದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಯೋಗ ತರಬೇತುದಾರ ಮಧು ಮಾಚಯ್ಯ ಮಕ್ಕಳಿಗೆ ಯೋಗ ತರಬೇತಿ ನೀಡಿದರು. ವಿದ್ಯಾರ್ಥಿಗಳಿಗೆ 40ಕ್ಕೂ ಹೆಚ್ಚು ಯೋಗ ಮ್ಯಾಟ್‍ಗಳನ್ನು ಗೋಣಿಕೊಪ್ಪ ನಗರ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಸುರೇಶ್ ರೈ ನೇತೃತ್ವದಲ್ಲಿ ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಿ.ಎನ್.ಪ್ರಕಾಶ್, ರಾಜಶೇಖರ್ ಕೆ, ಗೀತಾ, ಶಿಕ್ಷಕರುಗಳಾದ ಚಂದನ ಮಂಜುನಾಥ್, ಪಾಣತಲೆ ಹರಿಣಿ, ರೇವತಿ, ವಿದ್ಯಾ ಮಂಜುಳಾ, ಚೇತನ್, ಆಗ್ನೇಶ್, ಕರಿಯಪ್ಪ, ಸುಮಿ ಮತ್ತು ಅನಿಲ್, ಕಾರ್ತಿಕ್ ಹಾಜರಿದ್ದರು.









