Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕೋಚನ ಚೇತನ್ ಆಯ್ಕೆ*
  • *ಕಾನಡ್ಕ ಕುಟುಂಬದಿoದ 12ನೇ ವರ್ಷದ ಯುಗಾದಿ ಕ್ರೀಡಾಕೂಟದ ಸಂಭ್ರಮ : ಕ್ರೀಡೆಗಳಿಂದ ಹಬ್ಬದ ಮೆರುಗು ಇಮ್ಮಡಿ*
  • *ಸಮೀರ್ ಗೆ “ರತ್ನ ಶ್ರೀ” ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ*
  • *ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಕಾಡಾನೆ ಸೆರೆ*
  • *ಹಾಕತ್ತೂರಿನ “ಯುವ ಸ್ಪಂದನ ಯೂತ್ ಫೌಂಡೇಶನ್” ಗೆ ನೂತನ ಪದಾಧಿಕಾರಿಗಳ ಆಯ್ಕೆ*
  • *ಕಾಡಾನೆ ಮಾನವ ಸಂಘರ್ಷ ತಡೆಗೆ ಕೇಂದ್ರ ಸರಕಾರ ಏನು ಕ್ರಮ ಕೈಗೊಂಡಿದೆ*
  • *ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಸಿಎನ್‌ಸಿ ವಿಚಾರಣ ಸಂಕಿರಣ : ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲು ಕೊಡವರು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿಲ್ಲ : ಕೆ.ಪಿ.ಬಾಲಸುಬ್ರಹ್ಮಣ್ಯ ಅಭಿಮತ*
  • *ಕಾರು ಮತ್ತು ಬೈಕ್ ಗಳ ನಡುವೆ ಡಿಕ್ಕಿ : ಇಬ್ಬರ ಸಾವು*
  • *ವಿರಾಜಪೇಟೆ : ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಮುತ್ತಪ್ಪ ತೆರೆ ಮಹೋತ್ಸವ*
  • *ಕೂಡಿಗೆ : ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ : ಶಿಕ್ಷಕರ ಸೇವೆ ಅನನ್ಯ : ಎಸ್.ಎ.ಯೋಗೇಶ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*‘ಸಿಂಗಲ್ ಆರ್‌ಟಿಸಿ’ ನಿಯಮಾವಳಿಯಿಂದ ರೈತರಿಗೆ ಸಂಕಷ್ಟ : ಸೂಕ್ತ ಕ್ರಮಕ್ಕೆ ಕೊಡಗು ಏಕೀಕರಣ ರಂಗ ಆಗ್ರಹ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*‘ಸಿಂಗಲ್ ಆರ್‌ಟಿಸಿ’ ನಿಯಮಾವಳಿಯಿಂದ ರೈತರಿಗೆ ಸಂಕಷ್ಟ : ಸೂಕ್ತ ಕ್ರಮಕ್ಕೆ ಕೊಡಗು ಏಕೀಕರಣ ರಂಗ ಆಗ್ರಹ*

ಜೂನ್ 26, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜೂ.26 NEWS DESK : ‘ಸಿಂಗಲ್ ಆರ್‌ಟಿಸಿ’ ನಿಯಮಾವಳಿಯಿಂದ ಕೊಡಗು ಜಿಲ್ಲೆಯ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಸರ್ಕಾರದ ‘ಶೂನ್ಯ ಬಡ್ಡಿ ದರದ ಸಾಲ’ ಯೋಜನೆಯ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಬಗೆಹರಿಸಲು ಸರ್ಕಾರ ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೊಡಗು ಏಕೀಕರಣ ರಂಗ ಆಗ್ರಹಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಏಕೀಕರಣ ರಂಗದ ಕಾರ್ಯದರ್ಶಿ ತೇಲಪಂಡ ಎಂ.ಸೋಮಯ್ಯ ಅವರು ಸಹಕಾರ ಸಂಘಗಳ ಮೂಲಕ ವಿತರಿಸುವ ಶೂನ್ಯ ಬಡ್ಡಿ ದರದ ಸಾಲದ ಪ್ರಯೋಜನ ಪಡೆಯಲು ಕೃಷಿಕರು ‘ಸಿಂಗಲ್ ಆರ್‌ಟಿಸಿ’ಯನ್ನು ನೀಡಬೇಕು, ಇಲ್ಲವೆ ಕುಟುಂಬದ ಇತರರ ಹೆಸರು ಇದ್ದಲ್ಲಿ, ಪಾಲು ಪಾರಿಕತ್ತು ಮಾಡಿಕೊಂಡು ಸಿಂಗಲ್ ಆರ್‍ಟಿಸಿ ಹೊಂದಬೇಕೆನ್ನುವ ನಿಯಮವನ್ನು ಸರ್ಕಾರ ರೂಪಿಸಿ ಕಡ್ಡಾಯಗೊಳಿಸಿದೆ. ಇದು ಕೃಷಿಕರು ಸಾಲ ಸೌಲಭ್ಯ ಪಡೆಯಲು ತೊಡಕನ್ನುಂಟುಮಾಡುತ್ತಿದೆ ಎಂದರು. ವಿಶಿಷ್ಟ ಭೂಹಿಡುವಳಿಗಳನ್ನು ಕೊಡಗು ಜಿಲ್ಲೆ ಹೊಂದಿದೆ. ಬಹಳಷ್ಟು ರೈತರು ಭೂಮಿಯನ್ನು ಹೊಂದಿದ್ದಾರಾದರು, ಅವರ ಆರ್‍ಟಿಸಿಯಲ್ಲಿ ಕುಟುಂಬದ ಹಲವರ ಹೆಸರು ದಾಖಲಾಗಿದೆ. ಮತ್ತೆ ಹಲವಷ್ಟು ಜಾಗಗಳಲ್ಲಿ ಕೃಷಿ ನಡೆದಿದ್ದರು ಜಂಟಿ ಆರ್‍ಟಿಸಿಯಿಂದಾಗಿ ಕಂದಾಯ ನಿಗದಿ ಇಲ್ಲಿಯವರೆಗು ಸಾಧ್ಯವಾಗಿಲ್ಲ. ಮೃತಪಟ್ಟ ಕುಟುಂಬಸ್ಥರ ಹೆಸರನ್ನು ಆರ್‍ಟಿಸಿಯಿಂದ ತೆಗೆದು ಹಾಕುವ ಪೌತಿ ಖಾತೆ ಮೊದಲಾದವುಗಳ ನೂರಾರು ಅರ್ಜಿಗಳು ಕಂದಾಯ ಇಲಾಖೆಯಲ್ಲಿ ಧೂಳು ತಿನ್ನುತ್ತಾ ಹಲವಾರು ವರ್ಷಗಳಿಂದ ಬಿದ್ದಿದೆ. ಇದರಿಂದ ಕೃಷಿಕರು ಸ್ವಂತ ಹಿಡುವಳಿ ಭೂಮಿಯನ್ನು ಹೊಂದಿದ್ದರು ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲವೆಂದು ಗಮನ ಸೆಳೆದರು. ಕಂದಾಯ ಇಲಾಖೆಯಲ್ಲಿನ ಕಾರ್ಯ ವಿಳಂಬ ಮತ್ತು ವೈಫಲ್ಯಗಳಿಗೆ ಜಿಲ್ಲೆಯ ಭೂ ಹಿಡುವಳಿದಾರರು ಯಾವುದೇ ಕಾರಣಕ್ಕೂ ಹೊಣೆಗಾರರಲ್ಲ. ಹೀಗಿದ್ದೂ ಕಂದಾಯ ಇಲಾಖೆಯ ವೈಫಲ್ಯಗಳಿಂದ ಭೂಹಿಡುವಳಿದಾರರು ಸಂಕಷ್ಟ ಎದುರಿಸುವಂತಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಭೂಮಿಯ ಸಮಸ್ಯೆಗಳು ಬಗೆಹರಿಯುವವರೆಗೆ ಈ ನಿಯಮಗಳನ್ನು ತಡೆ ಹಿಡಿಯುವಂತೆ ತೇಲಪಂಡ ಎಂ.ಸೋಮಯ್ಯ ಒತ್ತಾಯಿಸಿದರು. ಕಂದಾಯ ಇಲಾಖೆಯಿಂದ ನಡೆಯಬೇಕಾದ ಕೆಲಸಗಳು ಸಮರ್ಪಕವಾಗಿ ನಡೆಯದಿರುವ ಬಗ್ಗೆ ಮಾಹಿತಿ ಇದ್ದರೂ, ಸಹಕಾರ ಸಂಘಗಳು, ಸಾಲ ಪಡೆದ ಎರಡು ತಿಂಗಳಲ್ಲಿ ಆರ್‍ಟಿಸಿಯಲ್ಲಿನ ಜಾಗದ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಬೆಳೆಗಾರರಿಂದ ಮುಚ್ಚಳಿಕೆ ಪಡೆಯುತ್ತಿವೆ. ಆದರೆ, ಈ ಅಲ್ಪಾವಧಿಯಲ್ಲಿ ಯಾವುದೇ ಕಾರಣಕ್ಕೂ ಆರ್‍ಟಿಸಿಯನ್ನು ಸರಿಪಡಿಸಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಈ ರೀತಿ ಮುಚ್ಚಳಿಕೆ ಪಡೆದ ಬಳಿಕ ಬೆಳೆಗಾರರಿಂದ ಪಡೆದ ಸಾಲಕ್ಕೆ ವರ್ಷ ಕಳೆದ ಬಳಿಕ ಬಡ್ಡಿಯನ್ನು ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಕೊಡಗು ಏಕೀಕರಣ ರಂಗದ ಸದಸ್ಯ ಅಜ್ಜಿನಂಡ ತಮ್ಮು ಪೂವಯ್ಯ ಮಾತನಾಡಿ, ಜಿಲ್ಲೆಯ ಹಿಡುವಳಿದಾರರ ಭೂಮಿಗೆ ಕಂದಾಯ ನಿಗದಿ, ಪಾಲು ಪಾರಿಕತ್ತು, ಪಟ್ಟೆದಾರರ ಹೆಸರನ್ನು ತೆಗೆಯುವ ಕಾರ್ಯಗಳಿಗೆ ಕಾಲಮಿತಿಯ ಯೋಜನೆಯನ್ನು ಕಂದಾಯ ಸಚಿವರು ರೂಪಿಸಬೇಕೆಂದು ಒತ್ತಾಯಿಸಿದರು. ಕಂದಾಯ ಇಲಾಖೆಯ ಮೂಲಕ ಜಿಲ್ಲೆಯ ಭೂ ಹಿಡುವಳಿಗಳಲ್ಲಿನ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕೊಡಗಿಗೆ ವಿಶೇಷ ಡಿಸಿ ಅಥವಾ ಉಪ ವಿಭಾಗಾಧಿಕಾರಿಗಳನ್ನು ನೇಮಿಸಬೇಕು ಎಂದರು. ಮತ್ತೊಬ್ಬ ಸದಸ್ಯ ಮಂದಪಂಡ ಕೆ.ಅಪ್ಪಚ್ಚು ಸತೀಶ್ ಮಾತನಾಡಿ, ಕೆಲವು ವರ್ಷಗಳ ಹಿಂದೆ ಜಿಲ್ಲೆಯ ಭೂ ಹಿಡುವಳಿಗಳಲ್ಲಿನ ಸಮಸ್ಯೆ ಬಗೆಹರಿಕೆಗೆ ‘ಪೈಲಟ್ ಪ್ರಾಜೆಕ್ಟ್’ನಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಾಯೋಗಿಕವಾಗಿ ಮಡಿಕೇರಿ ತಾಲ್ಲೂಕಿನ ಬೇಂಗೂರು, ವಿರಾಜಪೇಟೆ ತಾಲ್ಲೂಕಿನ ಕುಂದ ಮತ್ತು ಅಮ್ಮತ್ತಿ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಜಾಗದ ಸರ್ವೇ ಕಾರ್ಯಗಳನ್ನು ನಡೆಸಲಾಗಿದೆ. ಆದರೆ, ಬಳಿಕ ಈ ಪ್ರಕ್ರಿಯೆ ಸ್ಥಗಿತವಾಗಿದೆಯೆಂದು ತಿಳಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕೋಚನ ಚೇತನ್ ಆಯ್ಕೆ*

ಮಾರ್ಚ್ 23, 2026

*ಕಾನಡ್ಕ ಕುಟುಂಬದಿoದ 12ನೇ ವರ್ಷದ ಯುಗಾದಿ ಕ್ರೀಡಾಕೂಟದ ಸಂಭ್ರಮ : ಕ್ರೀಡೆಗಳಿಂದ ಹಬ್ಬದ ಮೆರುಗು ಇಮ್ಮಡಿ*

ಮಾರ್ಚ್ 22, 2026

*ಸಮೀರ್ ಗೆ “ರತ್ನ ಶ್ರೀ” ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ*

ಮಾರ್ಚ್ 22, 2026

*ಕಾನಡ್ಕ ಕುಟುಂಬದಿoದ 12ನೇ ವರ್ಷದ ಯುಗಾದಿ ಕ್ರೀಡಾಕೂಟದ ಸಂಭ್ರಮ : ಕ್ರೀಡೆಗಳಿಂದ ಹಬ್ಬದ ಮೆರುಗು ಇಮ್ಮಡಿ*

ಮಾರ್ಚ್ 22, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.22 : ಕಾನಡ್ಕ ಕುಟುಂಬದ ವತಿಯಿಂದ 12ನೇ ವರ್ಷದ ಯುಗಾದಿ ಕ್ರೀಡಾಕೂಟ ಸಂಭ್ರಮದಿoದ ನಡೆಯಿತು. ಮರಗೋಡಿನ…

*ಸಮೀರ್ ಗೆ “ರತ್ನ ಶ್ರೀ” ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ*

ಮಾರ್ಚ್ 22, 2026

*ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಕಾಡಾನೆ ಸೆರೆ*

ಮಾರ್ಚ್ 22, 2026

*ಹಾಕತ್ತೂರಿನ “ಯುವ ಸ್ಪಂದನ ಯೂತ್ ಫೌಂಡೇಶನ್” ಗೆ ನೂತನ ಪದಾಧಿಕಾರಿಗಳ ಆಯ್ಕೆ*

ಮಾರ್ಚ್ 22, 2026

*ಕಾಡಾನೆ ಮಾನವ ಸಂಘರ್ಷ ತಡೆಗೆ ಕೇಂದ್ರ ಸರಕಾರ ಏನು ಕ್ರಮ ಕೈಗೊಂಡಿದೆ*

ಮಾರ್ಚ್ 21, 2026

*ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಸಿಎನ್‌ಸಿ ವಿಚಾರಣ ಸಂಕಿರಣ : ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲು ಕೊಡವರು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿಲ್ಲ : ಕೆ.ಪಿ.ಬಾಲಸುಬ್ರಹ್ಮಣ್ಯ ಅಭಿಮತ*

ಮಾರ್ಚ್ 21, 2026

*ಕಾರು ಮತ್ತು ಬೈಕ್ ಗಳ ನಡುವೆ ಡಿಕ್ಕಿ : ಇಬ್ಬರ ಸಾವು*

ಮಾರ್ಚ್ 21, 2026

*ವಿರಾಜಪೇಟೆ : ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಮುತ್ತಪ್ಪ ತೆರೆ ಮಹೋತ್ಸವ*

ಮಾರ್ಚ್ 21, 2026

*ಕೂಡಿಗೆ : ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ : ಶಿಕ್ಷಕರ ಸೇವೆ ಅನನ್ಯ : ಎಸ್.ಎ.ಯೋಗೇಶ್*

ಮಾರ್ಚ್ 21, 2026

*ಭಾಗಮಂಡಲದಲ್ಲಿ ಜನಸ್ಪಂದನ ಸಭೆ : ಸಾರ್ವಜನಿಕರಿಂದ 85 ಅರ್ಜಿ ಸಲ್ಲಿಕೆ*

ಮಾರ್ಚ್ 21, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.