
ಪೊನ್ನಂಪೇಟೆ ಜೂ.27 NEWS DESK : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧೀನದ ‘ಕೆ.ಎಂ.ಎ. ದಫ್ ರಾತೀಬ್’ ತಂಡದ ವತಿಯಿಂದ ಅದರ ಖಲ್ಫರಾದ ಕೂತಂಬಟ್ಟೀರ ಹುಸೈನ್ ಅವರ ನೇತೃತ್ವದಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಜೂ.10ರಂದು ಪ್ರಸ್ತುತಪಡಿಸಿದ ‘ದಫ್ ಮುಟ್ಟ್’ ಪ್ರದರ್ಶನವು ಜೂ.28 ರಂದು ಚಂದನ ವಾಹಿನಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಸಾರವಾಗಲಿದೆ. ಅಲ್ಲದೆ ಇದೇ ಕಾರ್ಯಕ್ರಮ ಜು.5ರ0ದು ಮಧ್ಯಾಹ್ನ 2 ಗಂಟೆಗೆ ಮರು ಪ್ರಸಾರವಾಗಲಿದೆ ಎಂದು ಕೆ.ಎಂ.ಎ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.









