Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಾನಡ್ಕ ಕುಟುಂಬದಿoದ 12ನೇ ವರ್ಷದ ಯುಗಾದಿ ಕ್ರೀಡಾಕೂಟದ ಸಂಭ್ರಮ : ಕ್ರೀಡೆಗಳಿಂದ ಹಬ್ಬದ ಮೆರುಗು ಇಮ್ಮಡಿ*
  • *ಸಮೀರ್ ಗೆ “ರತ್ನ ಶ್ರೀ” ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ*
  • *ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಕಾಡಾನೆ ಸೆರೆ*
  • *ಹಾಕತ್ತೂರಿನ “ಯುವ ಸ್ಪಂದನ ಯೂತ್ ಫೌಂಡೇಶನ್” ಗೆ ನೂತನ ಪದಾಧಿಕಾರಿಗಳ ಆಯ್ಕೆ*
  • *ಕಾಡಾನೆ ಮಾನವ ಸಂಘರ್ಷ ತಡೆಗೆ ಕೇಂದ್ರ ಸರಕಾರ ಏನು ಕ್ರಮ ಕೈಗೊಂಡಿದೆ*
  • *ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಸಿಎನ್‌ಸಿ ವಿಚಾರಣ ಸಂಕಿರಣ : ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲು ಕೊಡವರು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿಲ್ಲ : ಕೆ.ಪಿ.ಬಾಲಸುಬ್ರಹ್ಮಣ್ಯ ಅಭಿಮತ*
  • *ಕಾರು ಮತ್ತು ಬೈಕ್ ಗಳ ನಡುವೆ ಡಿಕ್ಕಿ : ಇಬ್ಬರ ಸಾವು*
  • *ವಿರಾಜಪೇಟೆ : ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಮುತ್ತಪ್ಪ ತೆರೆ ಮಹೋತ್ಸವ*
  • *ಕೂಡಿಗೆ : ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ : ಶಿಕ್ಷಕರ ಸೇವೆ ಅನನ್ಯ : ಎಸ್.ಎ.ಯೋಗೇಶ್*
  • *ಭಾಗಮಂಡಲದಲ್ಲಿ ಜನಸ್ಪಂದನ ಸಭೆ : ಸಾರ್ವಜನಿಕರಿಂದ 85 ಅರ್ಜಿ ಸಲ್ಲಿಕೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*10 ಪತ್ರಕತ೯ರಿಗೆ ಕೊಡಗು ಪತ್ರಕತ೯ರ ಸಂಘದ ವಾಷಿ೯ಕ ಪ್ರಶಸ್ತಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*10 ಪತ್ರಕತ೯ರಿಗೆ ಕೊಡಗು ಪತ್ರಕತ೯ರ ಸಂಘದ ವಾಷಿ೯ಕ ಪ್ರಶಸ್ತಿ*

ಜೂನ್ 28, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜೂ.28 NEWS DESK : ಕೊಡಗು ಪತ್ರಕರ್ತರ ಸಂಘ(ರಿ) ದಿಂದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟ ಮಾಡಲಾಗಿದ್ದು, ಜಿಲ್ಲೆಯ ಹತ್ತು ಮಂದಿ ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜು.1 ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪತ್ರಕರ್ತರಾಗಿದ್ದ ದಿ.ಕೆ.ಬಿ. ಮಹಂತೇಶ್ ಸ್ಮರಣಾರ್ಥ ಅವರ ಪತ್ನಿ ಭಾಗೀರಥಿ ಅವರು ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟಗೊಂಡ ಕುಡೆಕಲ್ ಸಂತೋಷ್ ಅವರ ಇರುವುದೊಂದೇ ಕ್ರೀಡಾಂಗಣ ಅದಕ್ಕೂ ಗ್ರಹಣ ಎಂಬ ವರದಿ ಆಯ್ಕೆಯಾಗಿದೆ. ಕೊಡಗು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮತ್ತು ಪುತ್ರ ಬಿ.ಎನ್. ಅಂಜನ್ ಅವರು ದಿವಂಗತ ಬಿ.ಆರ್.ಶಶಿರಮ್ಮ ಮತ್ತು ದಿವಂಗತ ಬಿ.ಟಿ. ರಾಮದಾಸ ಶೆಟ್ಟಿ ಅವರ ಜ್ಞಾಪಕಾರ್ಥ ಸ್ಥಾಪಿಸಿರುವ ಅತ್ಯುತ್ತಮ ಗ್ರಾಮೀಣ ವರದಿಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಗಿರೀಶ್ ಪಗಡಿಗತ್ತಲ ಅವರ ವರದಿ ಕಾಡಿಗಿಂತ ನಾಡಿನಲ್ಲೇ ಆನೆ ಹೆಚ್ಚಳ ಮತ್ತು , ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಗೊಂಡ ಮೋಹನ್ ರಾಜ್ ಅವರ ರಸ್ತೆಗಳಿಗೆ ಟಿಂಬರ್ ಲೋಡ್ ಕಂಟಕ ಸೇರಿದಂತೆ ಎರಡು ವರದಿಗಳು ಆಯ್ಕೆಯಾಗಿದೆ. ಸಂಘದ ನಿರ್ದೇಶಕ ಗುಡ್ಡೆಮನೆ ವಿಶುಕುಮಾರ್ ನೀಡಿರುವ ಅತ್ಯುತ್ತಮ ಪರಿಣಾಮಕಾರಿ ವರದಿಗೆ ಮೈಸೂರು ಮಿತ್ರ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಸಾದ್ ಸಂಪಿಗೆ ಕಟ್ಟೆ ಅವರ ಪ್ರಕೃತಿ ವಿಕೋಪ : ಅನಾಥವಾದ ಯುವತಿಯ ಯಶೋಗಾಥೆ ವರದಿ ಆಯ್ಕೆಯಾಗಿದೆ. ನಾಪಂಡ ಮುತ್ತಪ್ಪ ಅವರ ತಾಯಿ ನಾಪಂಡ ಬೋಜಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ರಾಜಕೀಯ ವರದಿಗೆ ಕನ್ನಡಪ್ರಭದಲ್ಲಿ ಪ್ರಕಟಗೊಂಡ ವಿಘ್ನೇಶ್ ಭೂತನಕಾಡು ಅವರ ಒಡೆಯರ್ ಗೆ ಕೊಡಗಿನಿಂದ 73 ಸಾವಿರ ಮತಗಳ ಲೀಡ್ ವರದಿ ಆಯ್ಕೆಯಾಗಿದೆ. ಕೊಡಗು ಪತ್ರಕರ್ತರ ಸಂಘದ ಹಿರಿಯ ಸಲಹೆಗಾರರಾದ ಶಕ್ತಿ ದಿನ ಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ.ಅನಂತಶಯನ ಅವರು ತಮ್ಮ ತಾಯಿ ರಾಜಲಕ್ಷ್ಮಿ ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿಗೆ ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುನಿಲ್ ಪೂಜಾರಿ ಅವರ ಬರೆ ಬಂಡೆ ಕುಸಿಯುವ ಭೀತಿ ವರದಿ ಆಯ್ಕೆಯಾಗಿದೆ. ಶ್ರೀ ಮಂಡಿಬೆಲೆ ರಾಜಣ್ಣ ಅವರು ತಮ್ಮ ಪೋಷಕರಾದ ಮಂಡಿಬೆಲೆ ದ್ಯಾವಮ್ಮ – ಶಾಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಕೊಡಗಿನ ಆದಿವಾಸಿ ಜನಾಂಗದ ಜೀವನ ಕುರಿತ ಮಾನವೀಯ ವರದಿಗಾಗಿ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಡಿ.ಪಿ. ಲೋಕೇಶ್ ಅವರ ಇವರಿಗೆ ಆಧಾರವಿಲ್ಲ ಸೂರು ಇಲ್ಲ ವರದಿ ಆಯ್ಕೆಯಾಗಿದೆ. ಶ್ರೀಮತಿ ಕಾಂತಿ ಸತೀಶ್ ಅವರು ಸ್ಥಾಪಿಸಿರುವ ಅತ್ಯುತ್ತಮ ಕೃಷಿ ವರದಿ ದತ್ತಿ ಪ್ರಶಸ್ತಿಗೆ ವಿಜಯವಾಣಿಯಲ್ಲಿ ಪ್ರಕಟಗೊಂಡ ವಿನೋದ್ ಮೂಡಗದ್ದೆ ಅವರ ಮಿಶ್ರ ಬೇಸಾಯದಲ್ಲಿ ರೈತನ ಹೊಸ ಪ್ರಯೋಗ ವರದಿ ಪ್ರಶಸ್ತಿಗೆ ಭಾಜನವಾಗಿದೆ. ಕೊಡಗು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರು ದಿ.ಮೀರಾ ಕಾಮತ್ ಮತ್ತು ಎಂ.ಜಿ. ಪದ್ಮನಾಭ ಕಾಮತ್ ಸ್ಮರಣಾರ್ಥ ಸ್ಪಾಪಿಸಿರುವ ದೃಶ್ಯ ವಾಹಿನಿಯಲ್ಲಿ ಪ್ರಸಾರವಾದ ಮಾನವೀಯ ವರದಿಗೆ ಟಿವಿ ಒನ್ ವಾಹಿನಿಯಲ್ಲಿ ಪ್ರಸಾರಗೊಂಡ ಮನೆ ಬೀಳುವ ಆತಂಕದಲ್ಲಿ ವೃದ್ಧ ದಂಪತಿಗಳ ಬವಣೆ ವರದಿ ಆಯ್ಕೆಗೊಂಡಿದೆ. ನಾಪಂಡ ಮುದ್ದಪ್ಪ ಅವರ ತಂದೆ ದಿವಂಗತ ನಾಪಂಡ ಮುತ್ತಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ದೃಶ್ಯ ವಾಹಿನಿಯಲ್ಲಿ ಪ್ರಸಾರವಾದ ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉತ್ತಮ ವರದಿಗಾಗಿ ಕೊಡಗು ಚಾನೆಲ್ ನಲ್ಲಿ ಪ್ರಸಾರಗೊಂಡ ಟಿ.ಜೆ. ಪ್ರವೀಣ್ ಕುಮಾರ್ ಅವರ ಸೌಲಭ್ಯ ವಂಚಿತ ಜಂಬೂರು ಬಾಣೆ ನಿವಾಸಿಗಳು ವರದಿ ಆಯ್ಕೆಯಾಗಿದೆ. ಪತ್ರಿಕಾದಿನಾಚರಣೆಯಲ್ಲಿ ಪ್ರಧಾನ :: ಜುಲೈ 1 ರಂದು ಮಂಗಳವಾರ ಮಡಿಕೇರಿಯ ಪತ್ರಿಕಾಭವನ ಸಭಾಂಗಣದಲ್ಲಿ ಆಯೋಜಿತ ಪತ್ರಿಕಾದಿನಾಚರಣೆಯಲ್ಲಿ ಸಮಾಜಸೇವಕ ತೇಲಪಂಡ ಶಿವಕುಮಾರ್ ನಾಣಯ್ಯ ವಿವಿಧ ದತ್ತಿ ದಾನಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿಗಳನ್ನು ಪ್ರಧಾನ ಮಾಡಲಿದ್ದಾರೆ. ಹೊಸದಿಗಂತ ಪತ್ರಿಕೆಯ ಜಿಲ್ಲಾ ವರದಿಗಾರ ಕೆ. ತಿಮ್ಮಪ್ಪ, ಸಂಘದ ಸ್ಥಾಪಕಾಧ್ಯಕ್ಷ ಎಸ್.ಎ. ಮುರಳೀಧರ್, ಕ್ಷೇಮನಿಧಿ ಸಮಿತಿ ಅಧ್ಯಕ್ಷ ಜಿ.ವಿ. ರವಿಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕಾನಡ್ಕ ಕುಟುಂಬದಿoದ 12ನೇ ವರ್ಷದ ಯುಗಾದಿ ಕ್ರೀಡಾಕೂಟದ ಸಂಭ್ರಮ : ಕ್ರೀಡೆಗಳಿಂದ ಹಬ್ಬದ ಮೆರುಗು ಇಮ್ಮಡಿ*

ಮಾರ್ಚ್ 22, 2026

*ಸಮೀರ್ ಗೆ “ರತ್ನ ಶ್ರೀ” ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ*

ಮಾರ್ಚ್ 22, 2026

*ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಕಾಡಾನೆ ಸೆರೆ*

ಮಾರ್ಚ್ 22, 2026

*ಸಮೀರ್ ಗೆ “ರತ್ನ ಶ್ರೀ” ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ*

ಮಾರ್ಚ್ 22, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.22 : ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಸಮೀರ್ ಎಂ. ಮಡಿಕೇರಿ…

*ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಕಾಡಾನೆ ಸೆರೆ*

ಮಾರ್ಚ್ 22, 2026

*ಹಾಕತ್ತೂರಿನ “ಯುವ ಸ್ಪಂದನ ಯೂತ್ ಫೌಂಡೇಶನ್” ಗೆ ನೂತನ ಪದಾಧಿಕಾರಿಗಳ ಆಯ್ಕೆ*

ಮಾರ್ಚ್ 22, 2026

*ಕಾಡಾನೆ ಮಾನವ ಸಂಘರ್ಷ ತಡೆಗೆ ಕೇಂದ್ರ ಸರಕಾರ ಏನು ಕ್ರಮ ಕೈಗೊಂಡಿದೆ*

ಮಾರ್ಚ್ 21, 2026

*ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಸಿಎನ್‌ಸಿ ವಿಚಾರಣ ಸಂಕಿರಣ : ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲು ಕೊಡವರು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿಲ್ಲ : ಕೆ.ಪಿ.ಬಾಲಸುಬ್ರಹ್ಮಣ್ಯ ಅಭಿಮತ*

ಮಾರ್ಚ್ 21, 2026

*ಕಾರು ಮತ್ತು ಬೈಕ್ ಗಳ ನಡುವೆ ಡಿಕ್ಕಿ : ಇಬ್ಬರ ಸಾವು*

ಮಾರ್ಚ್ 21, 2026

*ವಿರಾಜಪೇಟೆ : ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಮುತ್ತಪ್ಪ ತೆರೆ ಮಹೋತ್ಸವ*

ಮಾರ್ಚ್ 21, 2026

*ಕೂಡಿಗೆ : ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ : ಶಿಕ್ಷಕರ ಸೇವೆ ಅನನ್ಯ : ಎಸ್.ಎ.ಯೋಗೇಶ್*

ಮಾರ್ಚ್ 21, 2026

*ಭಾಗಮಂಡಲದಲ್ಲಿ ಜನಸ್ಪಂದನ ಸಭೆ : ಸಾರ್ವಜನಿಕರಿಂದ 85 ಅರ್ಜಿ ಸಲ್ಲಿಕೆ*

ಮಾರ್ಚ್ 21, 2026

*ಕಳೆದ ಮೂರು ವರ್ಷದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಡಗು ಜಿಲ್ಲೆಗೆ ಹೆಚ್ಚಿನ‌ ಪ್ರಾಧಾನ್ಯತೆ ನೀಡಿದೆ : ಶಾಸಕ ಎ.ಎಸ್.ಪೊನ್ನಣ್ಣ*

ಮಾರ್ಚ್ 21, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.