
ಮಡಿಕೇರಿ ಜು.2 NEWS DESK : ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‍ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.9 ರಂದು ನಡೆಯಲಿದೆ. ನಗರದ ಕೊಡವ ಸಮಾಜದಲ್ಲಿ ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿಂದಿನ ಜಿಲ್ಲಾ ಗವರ್ನರ್ ರೋಟರಿಯನ್ ಹೆಚ್.ಆರ್.ಕೇಶವ್, ಅತಿಥಿಗಳಾಗಿ ವಲಯ 6ರ ಸಹಾಯಕ ಗವರ್ನರ್ ಧಿಲ್ಲನ್ ಚೆಂಗಪ್ಪ ಹಾಗೂ ಝೋನಲ್ ಲೆಫ್ಟಿನೆಂಟ್ ರೋಟರಿಯನ್ ಕೆ.ಸಿ.ಕಾರ್ಯಪ್ಪ ಪಾಲ್ಗೊಳ್ಳಲಿದ್ದಾರೆ. 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ರೋಟರಿಯನ್ ಬಿ.ಎನ್.ರತ್ನಾಕರ್ ರೈ ಹಾಗೂ ಕಾರ್ಯದರ್ಶಿಯಾಗಿ ರೋಟರಿಯನ್ ಬಿ.ಕೆ.ಕಾರ್ಯಪ್ಪ ಅಧಿಕಾರ ಸ್ವೀಕರಿಸಲಿದ್ದಾರೆ.








