
ವಿರಾಜಪೇಟೆ ಜು.7 NEWS DESK : ಕೊಡಗು ವಿಶ್ವವಿದ್ಯಾಲಯದ ಸ್ನಾತಕೋತ್ತರ ತರಗತಿಗಳ ಸೆಮಿಸ್ಟರ್ ಪರೀಕ್ಷಾ ಫಲಿತಾಂಶಗಳು ಪ್ರಕಟವಾಗಿದ್ದು, ವಿರಾಜಪೇಟೆಯ ಪ್ರತಿಷ್ಠಿತ ಸೆಂಟ್ ಆನ್ಸ್ ಎಂ.ಕಾಂ.ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಪ್ರಥಮ ಎಂ.ಕಾಂ.ಪ್ರಥಮ ಸೆಮಿಸ್ಟರ್ ನ ಒಟ್ಟು 18 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ರಷ್ಟು ಫಲಿತಾಂಶ ದಾಖಲಾಗಿದೆ. ವಿದ್ಯಾರ್ಥಿಗಳಾದ ಪಿ.ಆರ್.ರೇಷ್ಮಾ ಶೇ.87 ಅಂಕಗಳನ್ನು ಪಡೆದುಕೊಂಡು ಪ್ರಥಮ ಸ್ಥಾನ ಹಾಗೂ ದಿಯಾ ದೇಚಮ್ಮ ಶೇ.85 ಅಂಕಗಳನ್ನು ಪಡೆದುಕೊಂಡು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪ್ರಥಮ ಎಂ.ಕಾಂ. ನಲ್ಲಿ 16 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ದ್ವಿತೀಯ ಎಂ.ಕಾಂ.ತೃತೀಯ ಸೆಮಿಸ್ಟರ್ ನಲ್ಲಿ ಒಟ್ಟು 11 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, ಎಲ್ಲಾ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ್ದಾರೆ. ದ್ವಿತೀಯ ಎಂ.ಕಾಂ. ನಲ್ಲಿ ವಿದ್ಯಾರ್ಥಿನಿ ತಂಶೀರ ಓ.ಎ. ಶೇ.86 ಅಂಕಗಳನ್ನು ಪಡೆದುಕೊಂಡು ತರಗತಿಗೆ ಪ್ರಥಮ ಸ್ಥಾನ ಹಾಗೂ ತಮ್ಮಯ್ಯ ಎ.ಪಿ.ಶೇ.84 ಅಂಕಗಳನ್ನು ಪಡೆದುಕೊಂಡು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ ಎಂದು ಕಾಲೇಜಿನ ವ್ಯವಸ್ಥಾಪಕರಾದ ರೆ. ಫಾ. ಮದಲೈ ಮುತ್ತು ಹಾಗೂ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಪತ್ರಿಕಾ ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.









