

ವಿರಾಜಪೇಟೆ ಜು.9 NEWS DESK : ಅರಮೇರಿಯ ಎಸ್.ಎಂ.ಎಸ್ ವಿದ್ಯಾಸಂಸ್ಥೆಯಲ್ಲಿ 2025-26ನೇ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭವು ಜರುಗಿತು. ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಕುಸುಮ್ ಟಿಟೋ ನೂತನ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞೆಯನ್ನು ಭೋದಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರುಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶೈಕ್ಷಣಿಕ ವರ್ಷಕ್ಕೆ ಚುನಾವಣೆಯ ಮೂಲಕ ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಲಾಯಿತು. ಶಾಲಾ ನಾಯಕಿಯಾಗಿ ಕಟ್ಟೆರ ತನಿಶ್ ಪೂಣಚ್ಚ ಹಾಗೂ ಉಪನಾಯಕಿಯಾಗಿ ಎಂ.ಯು.ದೇಷ್ಣ ದೇಚಮ್ಮ ಆಯ್ಕೆಗೊಂಡರು.









