
ಮಡಿಕೇರಿ ಜು.16 NEWS DESK : ಓಂ ಯುವಶಕ್ತಿ ಹೆರವನಾಡು ಬೆಟ್ಟಗೇರಿ ಕ್ರೀಡಾ ಸಮಿತಿ ವತಿಯಿಂದ ಜು.20 ರಂದು 4ನೇ ವರ್ಷದ ಹಿಂದು ಕಪ್ ಕೆಸರು ಗದ್ದೆ ಕ್ರೀಡಾಕೂಟ ನಡೆಯಲಿದೆ. ಅಂದು ಬೆಳಿಗ್ಗೆ 8.30 ರಿಂದ ಸಂಜೆ 6.30ರ ವರೆಗೆ ಹೆರವನಾಡು ಅರೆಯಂಡ ಕುಟುಂಬದವರ ಗದ್ದೆ ಮತ್ತು ಪೊನ್ನಟಿಯಂಡ ಗದ್ದೆಯಲ್ಲಿ ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ಸಾರ್ವಜನಿಕ ವಯೋಮಿತಿಯ ಓಟಗಳು ನಡೆಯಲಿದೆ. ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರೀಡಾಕೂಟದ ಆಯೋಜಕರು ತಿಳಿಸಿದ್ದಾರೆ.








