Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಪತ್ರಕರ್ತ ಐತಿಚಂಡ ರಮೇಶ್‌ ಉತ್ತಪ್ಪ ಅವರ 3 ಕೃತಿಗಳ ಬಿಡುಗಡೆ : ಮೊದಲ ಬಾರಿಗೆ ಮೈಸೂರಿನ ಗಲ್ಲಿ, ವೃತ್ತಗಳ ಕುರಿತು ದಾಖಲೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಪತ್ರಕರ್ತ ಐತಿಚಂಡ ರಮೇಶ್‌ ಉತ್ತಪ್ಪ ಅವರ 3 ಕೃತಿಗಳ ಬಿಡುಗಡೆ : ಮೊದಲ ಬಾರಿಗೆ ಮೈಸೂರಿನ ಗಲ್ಲಿ, ವೃತ್ತಗಳ ಕುರಿತು ದಾಖಲೆ

ಜುಲೈ 24, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಜು.24 NEWS DESK : ಪತ್ರಕರ್ತ ಐತಿಚಂಡ ರಮೇಶ್‌ ಉತ್ತಪ್ಪ ಅವರು ಮೈಸೂರಿನ ಗಲ್ಲಿಗಳು ಹಾಗೂ ವೃತ್ತಗಳ ಇತಿಹಾಸದ ಕುರಿತು ಬರೆದ ಎರಡು ಪುಸ್ತಕ, ವೀರ ಸೇನಾನಿಗಳ ಸಾಸಹಗಾಥೆಯನ್ನು ಒಳಗೊಂಡ ಮತ್ತೊಂದು ಕೃತಿ ಸೇರಿದಂತೆ ಒಟ್ಟು ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಜು.25 ರಂದು ನಗರದಲ್ಲಿ ನಡೆಯಲಿದೆ. ಮೈಸೂರಿನ ಗಲ್ಲಿ ಗಲ್ಲಿಗೂ ಒಂದೊಂದು ಕಥೆ ಇದೆ. ಇಲ್ಲಿನ ರಸ್ತೆಗಳು ಕೇವಲ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲ. ಅವುಗಳ ಹಿಂದೆ ಬಹುದೊಡ್ಡ ಇತಿಹಾಸ, ತ್ಯಾಗ, ಬಲಿದಾನ, ಸಾಧನೆ, ಆದರ್ಶ ಇದೆ. ಪ್ರತಿಯೊಂದಕ್ಕೆ ಅದರದ್ದೇ ಆದ ಹೆಸರಿದೆ. ಆದರೆ, ಆ ಹೆಸರು ಯಾರದ್ದು ಎನ್ನುವುದು ಹಲವರಿಗೆ ತಿಳಿದಿಲ್ಲ. ಕೆಲವು ರಸ್ತೆ ಹಾಗೂ ವೃತ್ತಗಳ ಹೆಸರುಗಳೇ ಮರೆತು ಹೋಗಿವೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಮೈಸೂರಿನ ರಸ್ತೆ, ವೃತ್ತಗಳ ಕುರಿತು ಐತಿಚಂಡ ರಮೇಶ್‌ ಉತ್ತಪ್ಪ ಅವರು ಅಧ್ಯಯನ ನಡೆಸಿ ‘‘ಮೈಸೂರಿನ ಗಲ್ಲಿಕಥೆಗಳು’’ ಹಾಗೂ ‘‘ಮೈಸೂರು ವೃತ್ತಗಳ ವೃತ್ತಾಂತ’’ ಕೃತಿಗಳನ್ನು ರಚಿಸಿದ್ದಾರೆ. ಈ ಎರಡೂ ಕೃತಿಗಳು ಮೈಸೂರಿನ ಇತಿಹಾಸದೊಂದಿಗೆ ಸ್ವಾರಸ್ಯಕರ ಮಾಹಿತಿ ಹೊಂದಿವೆ. ಒಂದೊಂದು ಹೆಸರಿನ ಹಿಂದಿನ ವಿಶೇಷತೆಯನ್ನು ದಾಖಲು ಮಾಡಲಾಗಿದೆ. ಮರೆತು ಹೋದವರನ್ನು ಯುವ ಪೀಳಿಗೆಗೆ ಪರಿಚಯ ಮಾಡುವ ಪ್ರಯತ್ನ ಇದಾಗಿದೆ. ಮಹಾರಾಜರ ಕಾಲದಿಂದಲೂ ಮೈಸೂರಿನ ರಸ್ತೆಗಳಿಗೆ, ಗಲ್ಲಿಗಳಿಗೆ, ವೃತ್ತಗಳಿಗೆ ಹೆಸರಿಡುವ ಸಂಪ್ರದಾಯ ಬೆಳೆದುಬಂದಿದೆ. ಈ ಹಿನ್ನೆಲೆಯಲ್ಲಿ ನಗರದ ಬಹುತೇಕ ರಸ್ತೆಗಳಿಗೆ ಹೆಸರುಗಳಿವೆ. ಅದರಲ್ಲಿಯೂ ಕೋಟೆ, ಮೊಹಲ್ಲಾಗಳಲ್ಲಿ ಹೆಸರನ್ನು ನೂರು ವರ್ಷಗಳ ಹಿಂದೆಯೇ ನಾಮಕರಣ ಮಾಡಿರುವುದು ವಿಶೇಷ. ಆ ಹೆಸರುಗಳ ವ್ಯಕ್ತಿಗಳ ಸಾಧನೆ, ತ್ಯಾಗ, ಬಲಿದಾನಗಳನ್ನು ಪರಿಚಯ ಮಾಡಿಕೊಡುವ ಪ್ರಯತ್ನ ಇದಾಗಿದೆ. ಮೈಸೂರಿನ ರಸ್ತೆಗಳ ಆರಂಭ, ಉದ್ದ, ವಿಸ್ತೀರ್ಣ ಮುಂತಾದ ಅಂಕಿ ಅಂಶಗಳನ್ನು ದಾಖಲು ಮಾಡುವ ಪ್ರಯತ್ನ ಇದಲ್ಲ. ಅದರ ಬದಲಿಗೆ ರಸ್ತೆಗಳ ಕಥೆ ಹೇಳುವ ಪ್ರಯತ್ನ. ಇತ್ತೀಚಿನ ಯುವ ಪೀಳಿಗೆಗೆ ಮೈಸೂರಿನ ಬಗ್ಗೆ ಆಸಕ್ತಿ, ಅಭಿಮಾನ ಮೂಡಿಸುವ ಪ್ರಯತ್ನ. ಇಡೀ ದೇಶದಲ್ಲಿಯೇ ಗಲ್ಲಿಗಳ ಹಾಗೂ ವೃತ್ತಗಳ ಕುರಿತು ಅಧ್ಯಯನ ನಡೆಸಿ ಬರೆದು ಮೊದಲ ಕೃತಿಗಳು ಎನ್ನುವ ಹೆಗ್ಗಳಿಕೆ ಅದನ್ನು ಪರಿಶೀಲಿಸಿದವರಿಂದ ಬಂದಿದೆ. ಇದೊಂದಿಗೆ ಮತ್ತೊಂದು ಕೃತಿಯೂ ಪ್ರಕಟವಾಗುತ್ತಿದೆ. ‘‘ಸಿಂದೂರ, ಬ್ರೇವ್‌ ಹಾರ್ಟ್ಸ್ ಆಫ್‌ ಇಂಡಿಯನ್‌ ಆರ್ಮಿ’’. ಇದರಲ್ಲಿ ಆಪರೇಷನ್‌ ಸಿಂದೂರ ವಿವರಗಳಿಲ್ಲ. ಬದಲಿಗೆ ಸೇನೆಯ ಸಿಂದೂರದಂತೆ ಇದ್ದ, ಇರುವ ವೀರ ಸೇನಾನಿಗಳ ಹೋರಾಟದ ರೋಚಕ ಕಥೆಗಳಿವೆ. ಮಹಾವೀರ ಚಕ್ರ ಪಡೆದ ವೀರ ಕನ್ನಡಿಗ ಸೇನಾನಿಗಳ ಸಂದರ್ಶನ, ಅವರ ಸಾಹಸಗಾಥೆಗಳಿವೆ. ಇದು ಇಂದಿನ ಯುವ ಪೀಳಿಗೆಗೆ ಭಾರತೀಯ ಸೇನೆಯ ಕುರಿತು ಗೌರವ, ಹೆಮ್ಮೆ ಮೂಡಿಸುತ್ತದೆ ಎನ್ನುವ ನಂಬಿಕೆ ನಮ್ಮದು. ಈ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮ ಮೈಸೂರು ಕಲ್ಚರಲ್‌ ಅಸೋಸಿಯೇಷನ್‌, ವಿಸ್ಮಯ ಪ್ರಕಾಶನ ಹಾಗೂ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಆಶ್ರಯದಲ್ಲಿ 2025ರ ಜುಲೈ 25 ಶುಕ್ರವಾರ ನಡೆಯಲಿದೆ. ಮೈಸೂರಿನ ಅಶೋಕ ವೃತ್ತದ ಬಳಿ ಇರುವ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯಲ್ಲಿ ಅಂದು ಬೆಳಗ್ಗೆ 10.15ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಹಾವೀರ ಚಕ್ರ ಪುರಸ್ಕೃತ ವೀರ ಸೇನಾನಿ ಲೆ.ಕ. ಪಿ.ಎಸ್‌. ಗಣಪತಿ (ಎಂವಿಸಿ) ಅವರೂ ಬರುತ್ತಿದ್ದಾರೆ. ಸುತ್ತೂರುಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ.ನಾಗೇಶ್‌ ವಿ. ಬೆಟ್ಟಕೋಟೆ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ಪೊಲೀಸ್‌ ಅಕಾಡೆಮಿ ಸಹಾಯಕ ನಿರ್ದೇಶಕ ಸಂದೇಶ್‌ ಕುಮಾರ್‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಮೈಸೂರು ಕಲ್ಚರಲ್‌ ಅಸೋಸಿಯೇಶನ್‌ ಅಧ್ಯಕ್ಷ ಎ.ಪಿ.ನಾಗೇಶ್‌, ಮೂರು ಕೃತಿಗಳ ಲೇಖಕಕ ಐತಿಚಂಡ ರಮೇಶ್‌ ಉತ್ತಪ್ಪ, ವಿಸ್ಮಯ ಪ್ರಕಾಶನದ ಪ್ರಕಾಶ್‌ ಚಿಕ್ಕಪಾಳ್ಯ ಉಪಸ್ಥಿತರಿರುತ್ತಾರೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ವಿರಾಜಪೇಟೆಯಿಂದ ತಲಕಾವೇರಿವರೆಗೆ 58 ಕಿ.ಮೀ. ಪಾದಯಾತ್ರೆ; 6ನೇ ವರ್ಷದ ಯಾತ್ರೆಯಲ್ಲಿ 15 ಮಂದಿ ಭಾಗಿ – 58 ಕಿ.ಮೀ. ಭಕ್ತಿಯ ನಡಿಗೆ

ಅಕ್ಟೋಬರ್ 19, 2026

ರಗ್ಬಿ ಇಂಡಿಯಾ ಮಂಡಳಿಗೆ ಕೊಡಗಿನ ತಿಮ್ಮಯ್ಯ ಮಾದಂಡ ಆಯ್ಕೆ; SOM ಚುನಾವಣೆಯಲ್ಲಿ ಮಹತ್ವದ ಗೆಲುವು; ಭಾರತೀಯ ರಗ್ಬಿ ಕ್ರೀಡೆಯ ಅಭಿವೃದ್ಧಿಗೆ ಹೊಸ ಜವಾಬ್ದಾರಿ

ಅಕ್ಟೋಬರ್ 19, 2026

ಶ್ರೀ ಕಾವೇರಿ ಭಕ್ತ ಮಂಡಳಿಯಿಂದ 72ನೇ ವರ್ಷದ ಕಾವೇರಿ ತೀರ್ಥ ವಿತರಣೆ

ಅಕ್ಟೋಬರ್ 19, 2026

ರಗ್ಬಿ ಇಂಡಿಯಾ ಮಂಡಳಿಗೆ ಕೊಡಗಿನ ತಿಮ್ಮಯ್ಯ ಮಾದಂಡ ಆಯ್ಕೆ; SOM ಚುನಾವಣೆಯಲ್ಲಿ ಮಹತ್ವದ ಗೆಲುವು; ಭಾರತೀಯ ರಗ್ಬಿ ಕ್ರೀಡೆಯ ಅಭಿವೃದ್ಧಿಗೆ ಹೊಸ ಜವಾಬ್ದಾರಿ

ಅಕ್ಟೋಬರ್ 19, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಅ.19: ಕೊಡಗು ಜಿಲ್ಲೆಯ ಮಾಜಿ ಅಂತರರಾಷ್ಟ್ರೀಯ ರಗ್ಬಿ ಆಟಗಾರ ತಿಮ್ಮಯ್ಯ ಮಾದಂಡ ಅವರು ರಗ್ಬಿ ಇಂಡಿಯಾದ…

ಶ್ರೀ ಕಾವೇರಿ ಭಕ್ತ ಮಂಡಳಿಯಿಂದ 72ನೇ ವರ್ಷದ ಕಾವೇರಿ ತೀರ್ಥ ವಿತರಣೆ

ಅಕ್ಟೋಬರ್ 19, 2026

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹಾನಿಗೊಳಗಾದ ಮನೆಗೆ ಶಾಸಕ ಪೊನ್ನಣ್ಣ ಭೇಟಿ; ಸಂತ್ರಸ್ತ ಕುಟುಂಬಕ್ಕೆ ಅಗತ್ಯ ಸಾಮಗ್ರಿಗಳ ಕಿಟ್ ವಿತರಣೆ; ಸೂಕ್ತ ಪರಿಹಾರದ ಭರವಸೆ

ಅಕ್ಟೋಬರ್ 19, 2026

ಮಡಿಕೇರಿಯಲ್ಲಿ ಜಾನಪದ ದಸರಾ ಸಂಭ್ರಮ: ಜಾನಪದ ಕಲಾಪ್ರಕಾರಗಳ ಪ್ರದರ್ಶನಕ್ಕೆ ಮನಸೋತ ಜನತೆ; ಜಾನಪದ ಸಂಸ್ಕೃತಿಯ ಉಳಿವಿಗೆ ಹೆಚ್ಚಿನ ಕಾಳಜಿ ಅಗತ್ಯ: ಶಾಸಕ ಎ.ಎಸ್.ಪೊನ್ನಣ್ಣ ಕರೆ; ಕಲಾವಿದರು ಹಾಗೂ ಜಾನಪದ ವಸ್ತು ಸಂಗ್ರಹಕಾರರಿಗೆ ಸನ್ಮಾನ

ಅಕ್ಟೋಬರ್ 18, 2026

ಕಾವೇರಿ ತೀರ್ಥೋದ್ಭವದಂದು ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅಭಿಮಾನಿ ಬಳಗದಿಂದ ಸೇವಾ ಕಾರ್ಯ : 3 ಸಾವಿರಕ್ಕೂ ಅಧಿಕ ಭಕ್ತರಿಗೆ ಹಣ್ಣು, ತಂಪು ಪಾನೀಯ, ಕಾಫಿ ವಿತರಣೆ

ಅಕ್ಟೋಬರ್ 18, 2026

ಬಲಮುರಿಯಲ್ಲಿ ಇಂದು ಕಾವೇರಿ ಜಾತ್ರಾ ಮಹೋತ್ಸವ: ಸಕಲ ಸಿದ್ಧತೆ ಪೂರ್ಣ; ವಿಶೇಷ ಪೂಜೆ, ಕಾವೇರಿ ಮಹಾ ಆರತಿ ಹಾಗೂ ಅನ್ನಸಂತರ್ಪಣೆ ಆಯೋಜನೆ

ಅಕ್ಟೋಬರ್ 18, 2026

ಕ್ಲೀನ್ ಕಕ್ಕಬ್ಬೆ ಅಭಿಯಾನ ಯಶಸ್ವಿ: 3,670 ಕೆ.ಜಿ. ತ್ಯಾಜ್ಯ ತೆರವು; ನಾಲಡಿ ಕಸಮುಕ್ತ; ಮರಂದೋಡು ಗ್ರಾಮವೂ ಬಹುತೇಕ ಸ್ವಚ್ಛ

ಅಕ್ಟೋಬರ್ 18, 2026

ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿ: 118 ಕವಿಗಳ ಮಹಾಸಂಗಮ; ಜೆನ್-ಜಿ ಹಾಗೂ ಬಾಲಕವಿಗಳಿಂದ ಕವನ ವಾಚನ; ವಿವಿಧ ಭಾಷೆ, ಸಂಸ್ಕೃತಿಗಳ ಸಾಹಿತ್ಯ ಅಭಿವ್ಯಕ್ತಿಗೆ ವೇದಿಕೆ

ಅಕ್ಟೋಬರ್ 18, 2026

ರಾಜ್ಯಮಟ್ಟದ ಯೋಗ ದಸರಾ ಸ್ಪರ್ಧೆಯಲ್ಲಿ ಸುಮೇಶ್ ಕೆ.ಪಿ.ಗೆ ದ್ವಿತೀಯ ಸ್ಥಾನ; ಪಾಲಿಬೆಟ್ಟದ ಚೆಶೈರ್ ಹೋಮ್ ವಿಶೇಷ ಶಾಲೆಯ ವಿದ್ಯಾರ್ಥಿಗೆ ಬೆಳ್ಳಿ ಪದಕ, ನಗದು ಬಹುಮಾನ

ಅಕ್ಟೋಬರ್ 18, 2026

ತಲಕಾವೇರಿಯಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ತೀರ್ಥೋದ್ಭವ

ಅಕ್ಟೋಬರ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.