
ಸೋಮವಾರಪೇಟೆ ಜು.24 NEWS DESK : ಸೋಮವಾರಪೇಟೆ ತಾಲ್ಲೂಕು ಹೋಂಸ್ಟೇ ಮತ್ತು ಟೂರಿಸಂ ಅಸೋಸಿಯೇಷನ್ ವತಿಯಿಂದ ಸುಂಟಿಕೊಪ್ಪ ಸರ್ಕಾರಿ ಶಾಲಾ ಮುಂಭಾಗ ರಸ್ತೆಯಲ್ಲಿ “ಶಾಲಾ ಆವರಣ ನಿಧಾನವಾಗಿ ಚಲಿಸಿ” ಎಂಬ ಎರಡು ಸೂಚನಾ ಫಲಕವನ್ನು ಅಲವಡಿಸಲಾಯಿತು. ಈ ಸಂದರ್ಭ ಅಸೋಸಿಯೇಷನ್ ಅಧ್ಯಕ್ಷರಾದ ಸಿ.ಕೆ.ರೋಹಿತ್, ದಾನಿಗಳಾದ ಸಿ.ಎಂ.ಧರ್ಮಪ್ಪ ಮತ್ತು ಅವರ ಪತ್ನಿ, ಸುಂಟಿಕೊಪ್ಪ ಪೊಲೀಸ್ ಠಾಣಾ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಕೆ.ಹೆಚ್.ಭಾರತಿ, ಎ.ಎಸ್.ಐ ಸೈಮನ್ ದಿಕ್ಕುನ್ನ, ಅಭಿನಂದ್ ಹಾಗೂ ಪ್ರತೀಕ್ ಉಪಸ್ಥಿತರಿದ್ದರು.









